ವಿಟ್ಲ: ಅಂಗಡಿ ಬಳಿ ವ್ಯಕ್ತಿಯ ಮೃತದೇಹ ಪತ್ತೆ: ವಿದ್ಯುತ್ ಶಾಕ್ ಶಂಕೆ
Team Udayavani, Nov 7, 2021, 11:37 AM IST
ವಿಟ್ಲ: ಕಾರ್ಮಿಕರೊಬ್ಬರು ವಿಟ್ಲ ಕಾಸರಗೋಡು ರಸ್ತೆಯಲ್ಲಿರುವ ಖಾಸಗಿ ಅಂಗಡಿಯೊಂದರ ಬಳಿ ಕುಸಿದು ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.
ಮೃತ ವ್ಯಕ್ತಿ ಮಾರಪ್ಪ ಎಂದು ಗುರುತಿಸಲಾಗಿದೆ. ಕುಡಿತದ ಚಟ ಹೊಂದಿರುವ ಇವರ ಶವ ವಿದ್ಯುತ್ ಮೈನ್ ಸ್ವಿಚ್ ಬಳಿ ಇತ್ತು. ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರಬಹುದೆಂದು ಪ್ರಾಥಮಿಕ ಮೂಲಗಳು ತಿಳಿಸಿದೆ.
ಘಟನಾ ಸ್ಥಳಕ್ಕೆ ವಿಟ್ಲ ಮೆಸ್ಕಾಂ ಸಿಬ್ಬಂದಿ ಹಾಗೂ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.