“ಜಿಲ್ಲೆಡ್‌ ಏರ್‌ ಗೆಂದ್ಯೆರ್‌’ಗೆ? ಜನರ ಬಾಯಲ್ಲಿ ಒಂದೇ ಮಾತು

ಮತ ಎಣಿಕೆ ಹಿನ್ನೆಲೆ: ನಗರದಲ್ಲಿ ವ್ಯಾಪಾರ ಕುಂಠಿತ; ಜನ ಸಂಚಾರ ವಿರಳ

Team Udayavani, May 24, 2019, 6:00 AM IST

ಮಹಾನಗರ: ಬಸ್‌ಗಳಲ್ಲಿ,ಬಸ್‌ ನಿಲ್ದಾಣಗಳಲ್ಲಿ, ಮಾರುಕಟ್ಟೆಯಲ್ಲಿ,ಕಿರಾಣಿ ಅಂಗಡಿಗಳಲ್ಲಿ,ಹೊಟೇಲ್‌ಗ‌ಳಲ್ಲಿ ಎಲ್ಲರ ಬಾಯಲ್ಲೂ ಒಂದೇ ಮಾತು “ಜಿಲ್ಲೆಡ್‌ ಏರ್‌ ಗೆಂದ್ಯೆರ್‌ಗೆ?(ಜಿಲ್ಲೆಯಲ್ಲಿ ಯಾರು ಗೆದ್ದರು?)’.

ಹೌದು, ಸುಮಾರು ಒಂದು ತಿಂಗಳಿನಿಂದ ಕಾತುರದಿಂದ ಕಾಯುತ್ತಿದ್ದ ಲೋಕಸಭಾ ಚುನಾವಣೆ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಯಾರು ಗೆಲ್ಲಬಹುದು ಎಂಬ ಕುತೂಹಲಕ್ಕೀಗ ತೆರೆ ಬಿದ್ದಿದೆ. ಸುರತ್ಕಲ್‌ನ ಎನ್‌ಐಟಿಕೆ ಅವರ ಣದಲ್ಲಿ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಗಳ ಮತ ಎಣಿಕೆ ನಡೆಯುತ್ತಿದ್ದರೆ, ಇತ್ತ ನಗರದಲ್ಲಿ ಯಾರು ಗೆಲ್ಲಬಹುದು ಎನ್ನುವ ಕುತೂ ಹಲ-ಕಾತರದಿಂದ ಫಲಿತಾಂಶದ ಬಗ್ಗೆ ಪರಸ್ಪರ ಮಾತು ವಿನಿಮಯ ಮಾಡಿಕೊಳ್ಳುತ್ತಿದ್ದ ಸನ್ನಿವೇಶ ಕಂಡುಬಂತು.

ಮತ ಎಣಿಕೆ ದಿನ ಮತದಾರರು ಏನು ಮಾಡುತ್ತಿದ್ದಾರೆ? ನಗರ ಜನಜೀವನ ಹೇಗಿದೆ ಎನ್ನುವುದನ್ನು ತಿಳಿಯಲು “ಸುದಿನ’ವು ನಗರ ದಲ್ಲಿ ಸುತ್ತಾಟ ನಡೆಸಿದಾಗ ಬಸ್‌ ನಿಲ್ದಾಣ, ಅಂಗಡಿ – ಮುಂಗಟ್ಟು ಸಹಿತ ಎಲ್ಲೆಡೆಯೂ ಜನರು ಫಲಿತಾಂಶದ ವಿಶೇಷತೆಯ ಬಗ್ಗೆ ಮಾತನಾಡುತ್ತಿದ್ದರು. ಕೆಲವು ಮಂದಿ ಮನೆಯಲ್ಲೇ ಕೂತು ಟಿವಿಯಲ್ಲಿ ಫಲಿತಾಂಶವನ್ನು ವೀಕ್ಷಿ ಸುತ್ತಿದ್ದರು. ಮೀನುಗಾರಿಕಾ ಬಂದರಿನಲ್ಲಿ ಪ್ರತಿ ದಿನ ಸಾವಿರಾರು ಕಾರ್ಮಿಕರು ಕೆಲಸ ನಿರ್ವಹಿಸುತ್ತಾರೆ. ಅದರ ಲ್ಲಿಯೂ ಬಂದರಿನಲ್ಲಿ ವಿವಿಧ ರಾಜ್ಯಗಳ ಕಾರ್ಮಿಕರು ಇದ್ದು, ತಮ್ಮ ತಮ್ಮ ರಾಜ್ಯಗಳ ಚುನಾವಣೆಯ ಫಲಿತಾಂಶದ ಬಗ್ಗೆ ಮಾಹಿತಿ ಪಡೆಯುತ್ತಿದ್ದರು.

ಸ್ಟೇಟ್‌ಬ್ಯಾಂಕ್‌ ಬಳಿ ಇರುವ ಮೀನು ಮಾರು ಕಟ್ಟೆಯಲ್ಲಿ ವ್ಯಾಪಾರ ಕುಸಿತ ಕಂಡುಬಂದಿತ್ತು. ಮೀನುಗಾರ ಮಹಿಳೆಯೊಬ್ಬರು “ಸುದಿನ’ಕ್ಕೆ ಪ್ರತಿಕ್ರಿಯಿಸಿ, ಚುನಾವಣ ಫಲಿತಾಂಶ ಹಿನ್ನೆಲೆ ವ್ಯಾಪಾರ ವಹಿವಾಟು ಕುಗ್ಗಿದೆ. ಜನ ಸಂಚಾರ ವಿರಳವಾಗಿದೆ ಎಂದು ಹೇಳಿದರು.

ಚುನಾವಣ ಮತ ಎಣಿಕೆ ಹಿನ್ನೆಲೆಯಲ್ಲಿ ನಗರದ ಕಡೆಗೆ ಬರುವ ವಾಹನಗಳಿಗೆ ರಸ್ತೆಯನ್ನು ಮಾರ್ಪಾಡು ಮಾಡಲಾಗಿತ್ತು. ಈ ಕಿರಿಕಿರಿ ಬೇಡ ಎಂದು ಕೆಲವು ಮಂದಿ ಸಿಟಿಗೆ ಬರದೆ ಮನೆಯಲ್ಲೇ ಕೂತಿದ್ದರು. ಇದರಿಂದ ನಗರದಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ಇರಲಿಲ್ಲ. ಹಂಪನ ಕಟ್ಟೆಯಲ್ಲಿರುವ ಮಾರುಕಟ್ಟೆಯಲ್ಲಿ ಮತೆಣಿಕೆಯ ವಿಚಾರವೇ ಕೇಳಿಬರುತ್ತಿತ್ತು. ಹಲ ವಾರು ಅಂಗಡಿಗಳಲ್ಲಿ ಟಿ.ವಿ. ಚುನಾವಣ ಫಲಿ ತಾಂಶವನ್ನು ನೋಡುತ್ತಿದ್ದರು. ಗ್ರಾಹಕರು ಕೂಡ ಮಾಲಕರಲ್ಲಿ ಫಲಿತಾಂಶದ ಬಗ್ಗೆ ಮಾಹಿತಿ ಕೇಳುತ್ತಿದ್ದರು. ಇನ್ನು, ಯುವಜನತೆ ಹೆಚ್ಚಾಗಿ ಆನ್‌ಲೈನ್‌ ಮುಖೇನ ಲೈವ್‌ ಟಿವಿ, ವೀಕ್ಷಿ ಸುತ್ತಿದ್ದರು. ಅನೇಕರು ಫೇಸ್‌ಬುಕ್‌, ವಾಟ್ಸಪ್‌ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿದ್ದರು.

ಬಸ್‌ಗಳಲ್ಲಿ ಜನ ಸಂಚಾರ ಕಡಿಮೆ
ಸ್ಟೇಟ್‌ಬ್ಯಾಂಕ್‌ ಸಿಟಿ ಬಸ್‌ ನಿಲ್ದಾಣ, ಖಾಸಗಿ ಬಸ್‌ ನಿಲ್ದಾಣ ಸಹಿತ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಗಳಲ್ಲಿಯೂ ಹೆಚ್ಚಿನ ಜನಸಂಖ್ಯೆ ಇರಲಿಲ್ಲ. ಸಿಟಿ, ಕೆಎಸ್ಸಾರ್ಟಿಸಿ ಬಸ್‌ ಸಂಚಾರ ಎಂದಿನಂತೆ ಇದ್ದರೂ, ಮಾಮೂಲಿ ದಿನಕ್ಕೆ ಹೋಲಿಸಿದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿತ್ತು¤. ನಗರದ ಹೊಟೇ ಲ್‌ ಗಳಲ್ಲಿಯೂ ಜನ ಕಡಿಮೆ ಇತ್ತು. ಮಾಲ್‌ಗ‌ಳು, ಚಿತ್ರಮಂದಿರಗಳಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಜನ ಕಡಿಮೆ ಇದ್ದರು, ಸಂಜೆಯಾಗುತ್ತಿದ್ದಂತೆ ಎಂದಿನಂತೆ ವ್ಯಾಪಾರ ಇತ್ತು.

ಇಲ್ಲೂ ಮಂಡ್ಯದ್ದೇ ಮಾತು
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಫಲಿತಾಂಶ ಏನಾಗುತ್ತದೆ ಎನ್ನುವ ಕುತೂಹಲದ ಜತೆಗೆ ಹೈಟೆನ್ಶನ್‌ ಸೃಷ್ಟಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಯಾರು ಗೆದ್ದರು ? ಎಂಬ ಕುತೂಹಲ ನಗರದಲ್ಲಿ ಕಂಡುಬಂತು. ಬಸ್‌ಗಳಲ್ಲಿ ಓಡಾಡುವ ಮಂದಿ ಈ ವಿಚಾರಗಳನ್ನು ಮಾತನಾಡುತ್ತಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮೈಸೂರು: "ಸಾಲ ತಂದಾದರೂ ಸರ್ಕಾರ ರೈತರ ನೆರವಿಗೆ ಬರಲಿದೆ. ರೈತರ ಜೀವನದಲ್ಲಿ ಬದಲಾವಣೆ ತರಲು ಎಲ್ಲ ರೀತಿಯ ಯತ್ನ ಮಾಡಲಾಗುವುದು' ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ...

  • ಬೆಂಗಳೂರು: "ಪ್ರಯೋಜನಕ್ಕೆ ಬಾರದ ಕಲ್ಪನೆಗಳು ಮತ್ತು ಮೂಢನಂಬಿಕೆಗಳನ್ನು ತ್ಯಜಿಸಿ, ವೈಜ್ಞಾನಿಕ ಮನೋಭಾವದಿಂದ ದೇಶದ ಪ್ರಗತಿಗೆ ಶ್ರಮಿಸಬೇಕು' ಎಂದು ನಾಡಿನ ಜನತೆಗೆ...

  • ಮಂಡಲವಾಸ್‌(ರಾಜಸ್ಥಾನ): ಹನಿ ನೀರಿಗೂ ಪರದಾಡಿದ್ದೆವು, ಕಿಮೀಗಟ್ಟಲೇ ದೂರ ಸಾಗಿ ನೀರು ತರಲು ಹಲವು ತಾಸುಗಳನ್ನೇ ಮೀಸಲಿಡುತ್ತಿದ್ದೆವು, ಮಳೆ ಬಂದ ಎರಡೇ ತಾಸಿಗೆ...

  • ಬೆಂಗಳೂರು: ಬಿಜೆಪಿ ಹಾಗೂ ಸಂಘ ಪರಿವಾರದಿಂದ ಸಂವಿಧಾನ ರಕ್ಷಿಸುವ ಹೊಣೆಯನ್ನು ಕಾಂಗ್ರೆಸ್‌ ಮಾಡಬೇಕಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕರು ಶಪಥಗೈಯುವ ಮೂಲಕ 71ನೇ...

  • ವಿಜಯಪುರ: "ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಸಿ.ಸಿ. ಪಾಟೀಲ ಅವರನ್ನು ಬಲಿಕೊಟ್ಟು ಸಚಿವನಾಗುವ ದುರಾಸೆ ನನಗಿಲ್ಲ. ಒಂದೊಮ್ಮೆ ಪಕ್ಷ ನನಗೆ ಅಧಿಕಾರ ನೀಡಬಯಸಿದರೆ...