ದ.ಕ. ಲೋಕಸಭಾ ಕ್ಷೇತ್ರದಲ್ಲಿ ಮತ ಎಣಿಕೆಗೆ ಸರ್ವ ಸಿದ್ಧತೆ: ಡಿಸಿ

Team Udayavani, May 22, 2019, 11:44 AM IST

ಮಂಗಳೂರು: ಸುರತ್ಕಲ್‌ ಎನ್‌ಐಟಿಕೆ ಮತ ಎಣಿಕೆ ಕೇಂದ್ರದಲ್ಲಿ ಮೇ 23ರಂದು ನಡೆಯುವ ದ. ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯ ಮತಗಳ ಎಣಿಕೆಗೆ ಚುನಾವಣಾ ಆಯೋಗದಿಂದ ಸರ್ವ ಸಿದ್ಧತೆಗಳನ್ನು ಮಾಡ ಲಾಗಿದೆ. ಮತಗಳ ಎಣಿಕೆ 15ರಿಂದ 18 ಸುತ್ತುಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಶಶಿಕಾಂತ ಸೆಂಥಿಲ್‌ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ 7 ಗಂಟೆಗೆ ಮತಯಂತ್ರಗಳನ್ನು ಇರಿಸಿರುವ ಸ್ಟ್ರಾಂಗ್‌ ರೂಂಗಳನ್ನು ಚುನಾವಣಾ ವೀಕ್ಷಕರು, ಅಭ್ಯರ್ಥಿಗಳು, ಏಜೆಂಟರ ಸಮ್ಮುಖದಲ್ಲಿ ತೆರೆಯಲಾಗುವುದು. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಳ್ಳಲಿದ್ದು, ಪ್ರಥಮವಾಗಿ ಅಂಚೆ ಮತಗಳನ್ನು ಎಣಿಕೆ ಮಾಡಲಾಗುವುದು ಎಂದರು.

15ರಿಂದ 18 ಸುತ್ತು
ಬೆಳ್ತಂಗಡಿ, ಮಂಗಳೂರು ದಕ್ಷಿಣ, ಬಂಟ್ವಾಳ ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ತಲಾ 18 ಸುತ್ತುಗಳಲ್ಲಿ ಹಾಗೂ ಮಂಗಳೂರು – 15, ಪುತ್ತೂರು-16 ಸುತ್ತುಗಳಲ್ಲಿ ನಡೆಯಲಿದೆ. ಪ್ರತೀ ವಿಧಾನಸಭಾ ಕ್ಷೇತ್ರದ ಮತಎಣಿಕೆಗೆ ತಲಾ 14 ಟೇಬಲ್‌ಗ‌ಳಂತೆ ಒಟ್ಟು 112 ಟೇಬಲ್‌ಗ‌ಳಿರುತ್ತವೆ. ಮತ ಎಣಿಕೆ ಉಸ್ತುವಾರಿಗಳು, ಎಣಿಕೆ ಸಹಾಯಕರು, ಮೈಕ್ರೊ ವೀಕ್ಷಕರು ಸೇರಿದಂತೆ 560 ಸಿಬಂದಿಯನ್ನು ನಿಯೋಜಿಸಲಾಗಿದೆ. ಅಂಚೆ ಮತಗಳ ಎಣಿಕೆ 4 ಟೇಬಲ್‌ಗ‌ಳಲ್ಲಿ ನಡೆಯಲಿದೆ. ಮತ ಎಣಿಕೆ ಕೇಂದ್ರದ ಒಳಗೆ ಮೊಬೈಲ್‌, ಐಪ್ಯಾಡ್‌, ಲ್ಯಾಪ್‌ಟಾಪ್‌ ಇತ್ಯಾದಿ ಒಯ್ಯುವಂತಿಲ್ಲ. ಮತ ಎಣಿಕೆ ಟ್ರೆಂಡ್‌ಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಧ್ವನಿವರ್ಧಕಗಳನ್ನು ಅಳವಡಿಸಲಾಗುತ್ತಿದೆ ಎಂದವರು ವಿವರಿಸಿದರು.

ಬಿಗು ಭದ್ರತೆ
ಮತ ಎಣಿಕೆ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡಲು ವ್ಯಾಪಕ ಭದ್ರತೆ ಮಾಡಲಾಗಿದೆ. ಸಿಎಪಿಎಫ್‌ ತುಕಡಿ, 5 ಕೆಎಸ್‌ಆರ್‌ಪಿ, 12 ಸಿಆರ್‌ಆರ್‌ ತುಕಡಿ, 2 ಡಿಸಿಪಿ, 6 ಎಸಿಪಿ, 17 ಪಿಐ, 48 ಪಿಎಸ್‌ಐ, 66 ಎಎಸ್‌ಐ, 112 ಎಚ್‌ಸಿ, 224 ಪಿಸಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ವಾಹನ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ 1 ಎಸಿಪಿ, 4 ಪಿಐ, 2 ಪಿಎಸ್‌ಐ, 31 ಎಎಸ್‌ಐ, 61 ಎಚ್‌ಸಿ, 99 ಪಿಸಿಗಳನ್ನು ನಿಯೋಜಿಸಲಾಗಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ವಿವರಿಸಿದರು.

3 ಹಂತಗಳ ಬಂದೋಬಸ್ತು
ಮತ ಎಣಿಕೆ ಕೇಂದ್ರ ಆವರಣ ಪ್ರದೇಶಕ್ಕೆ ಸಂಬಂಧಿಸಿ 3 ಹಂತಗಳ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಪಾಸ್‌ ಹೊಂದಿರುವ ಅಧಿಕಾರಿ, ಸಿಬಂದಿ, ಮತ ಎಣಿಕೆ ಏಜೆಂಟ್‌, ಅಭ್ಯರ್ಥಿ, ಮಾಧ್ಯಮ ವೃಂದದವರಿಗೆ ಈ ಮೂರು ಹಂತಗಳ ಭದ್ರತೆ ತಪಾಸಣೆಗೆ ಒಳಪಟ್ಟು ಆವರಣ ಪ್ರದೇಶಕ್ಕೆ ಅವಕಾಶ ಇದೆ ಎಂದವರು ವಿವರಿಸಿದರು.

ವಿಜಯೋತ್ಸವ, ಮದ್ಯ ನಿಷೇಧ
ಮೇ 22ರ ಸಂಜೆ 6 ಗಂಟೆಯಿಂದ ಮೇ 24ರ ಸಂಜೆ 6 ಗಂಟೆಯವರೆಗೆ ಸೆಕ್ಷನ್‌ 144ರ ಅನ್ವಯ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ವಿಧಿಸಲಾಗಿದೆ. ಮೇ 22ರ ಸಂಜೆ 6 ಗಂಟೆಯಿಂದ ಮೇ 23ರ ಮಧ್ಯರಾತ್ರಿ ತನಕ ಮದ್ಯ ಮಾರಾಟವನ್ನು ಕೂಡ ನಿಷೇಧಿಸಲಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಆರ್‌. ವೆಂಕಟಾಚಲಪತಿ, ಜಿಲ್ಲಾ ಪೊಲೀಸ್‌ ಅಧೀಕ್ಷಕ ಲಕ್ಷ್ಮೀಪ್ರಸಾದ್‌, ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್‌ ಕೆ. ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ