ಮತದಾರರು ಶ್ರದ್ಧೆಯಿಂದ ಜವಾಬ್ದಾರಿ ನಿಭಾಯಿಸಿ: ಕ್ಯಾ| ಕಾರ್ಣಿಕ್‌

Team Udayavani, Apr 16, 2019, 6:39 AM IST

ಉಳ್ಳಾಲ: 2019ರ ಐತಿಹಾಸಿಕ 17ನೇ ಮಹಾ ಚುನಾವಣೆಯು ನಮ್ಮ ದೇಶ, ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ನಿರ್ಮಿಸುವ ಚುನಾವಣೆಯಾಗಿದ್ದು, ಮತದಾರರು ಅತ್ಯಂತ ಶ್ರದ್ಧೆಯಿಂದ ತಮ್ಮ ಜವಾಬ್ದಾರಿ ನಿಭಾಯಿಸಬೇಕೆಂದು ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌ ಹೇಳಿದರು.

ತೊಕ್ಕೊಟ್ಟು ಕಾಪಿಕಾಡಿನ ಬಿಜೆಪಿ ಚುನಾವಣೆ ಕಾರ್ಯಾಲಯದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ, ಐತಿಹಾಸಿಕ ಚುನಾವಣೆಯಲ್ಲಿ ಚೌಕಿದಾರ್‌ ಹೆಸರಲ್ಲಿ ಸ್ವಯಂ ಸ್ಫೂರ್ತಿಯಿಂದ ಕಾರ್ಯಕರ್ತರು ತೊಡಗಿಸಿದ್ದಾರೆ ಎಂದರು.
ಕ್ಷೇತ್ರಾಧ್ಯಕ್ಷ ಸಂತೋಷ್‌ ಕುಮಾರ್‌ ಬೋಳಿಯಾರ್‌, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಸತೀಶ್‌ ಕುಂಪಲ, ನಮಿತಾ ಶ್ಯಾಂ, ಸಂಜೀವ ಶೆಟ್ಟಿ ಅಂಬ್ಲಿಮೊಗರು, ಹರಿ ಯಪ್ಪ ಸಾಲಿಯಾನ್‌, ಜೀವನ್‌ ತೊಕ್ಕೊಟ್ಟು, ಚರಣ್‌, ಪ್ರಕಾಶ್‌ ಸಿಂಪೋನಿ ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ