ಗುಡ್ಡೆಯ ನೀರನ್ನು ಇಂಗು ಗುಂಡಿಯಲ್ಲಿ ಇಂಗಿಸಿ ಗೆದ್ದರು !
Team Udayavani, Mar 27, 2017, 6:47 PM IST
ಬಜಪೆ: ಇವರು ಇಂಗು ಗುಂಡಿ ಮತ್ತು ಕೃಷಿ ಹೊಂಡ ಮಾಡಿ ಗೆದ್ದವರು. ಅಂದರೆ ಇರುವ ನೀರನ್ನು ಬೇಸಗೆಯಲ್ಲೂ ಗಿಡಗಳಿಗೆ ನೀಡುತ್ತಾ ನಿರ್ವಹಿಸುವ ಕೆಲಸ. ಸುಡು ಬೇಸಗೆಯಲ್ಲಿ ಕುಡಿಯಲೇ ನೀರಿಲ್ಲ ಎನ್ನುವಾಗ ಮೂಡು ಪೆರಾರ
ಈಶ್ವರ ಕಟ್ಟೆಯ ನಿವಾಸಿ ಜೂವಿತಾ ರೊಡ್ರಿಗಸ್ ತಣ್ಣಗೆ ಕುಳಿತಿರುತ್ತಾರೆ. ಕ್ಸೇವಿಯರ್ ರೋಡ್ರಿಗಸ್ ಅವರ ಪತ್ನಿ ಜೂವಿತಾ ರೊಡ್ರಿಗಸ್ ಅವರ 4 ಎಕ್ರೆಯ ಪೈಕಿ 2 ಎಕ್ರೆ ಅಡಿಕೆ ತೋಟ, ತೆಂಗು, ಕರಿಮೆಣಸು, ಕೋಕೋ, ಬಾಳೆಗಿಡ
ಬೆಳೆಸಿದ್ದಾರೆ. 33 ವರ್ಷದ ಕಾಡಿನಂತಿದ್ದ ಈ ಪರಿಸರ ಗಿಡಪೊದೆಗಳಿಂದ ತುಂಬಿತ್ತು. ಎತ್ತರ ಪದೇಶದಲ್ಲಿದ್ದ ಅವರ ಮನೆ
ಇಳಿಜಾರು ಪ್ರದೇಶದ ಕೆಳಗೆ ಒಂದು ಬಾವಿಯನ್ನು ತೋಡಿದ್ದರು.
ಈ ತೋಟಗಳಿಗೆ ಈ ಬಾವಿಯ ನೀರು ಸಾಕಾಗುತ್ತಿರಲಿಲ್ಲ. ಆರು ವರ್ಷಗಳ ಹಿಂದೆ ಮನಸ್ಸು ಗಟ್ಟಿ ಮಾಡಿದ ಇವರು, ತೋಟದ ಮಧ್ಯೆ 45 ಇಂಗು ಗುಂಡಿಗಳನ್ನು ಮಾಡಿದರು. ಗುಡ್ಡದಿಂದ ಬರುವ ಮಳೆಯ ನೀರು ಈ ಇಂಗು ಗುಂಡಿಗೆ
ಬಿದ್ದು ಅಲ್ಲೇ ಇಂಗುತ್ತಿತ್ತು.
ಕೃಷಿ ಹೊಂಡ: ತೋಟವಿಲ್ಲದ ಜಾಗದಲ್ಲಿ ದೊಡ್ಡದೊಂದು ಕೃಷಿ ಹೊಂಡವನ್ನೂ ಮಾಡಿದ ಇವರು, ಆ ಪರಿಸರದ
ಮಳೆಯ ನೀರು ಈ ಕೃಷಿ ಹೊಂಡಕ್ಕೆ ಬಂದು ಬೀಳುವಂತೆ ಮಾಡಿದರು. ಸಣ್ಣ ಕೆರೆಯಷ್ಟು ಗ್ರಾತದ ಈ ಹೊಂಡದಲ್ಲಿ ನೀರು ತುಂಬಿ ಕಾಲುವೆಗಳ ಮೂಲಕ ಹರಿಯುವಂತೆ ಮಾಡಲಾಯಿತು.
ದಿಶಾ ಟ್ರಸ್ಟ್ ಮಾರ್ಗದರ್ಶನ ಮಾಡಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋ ಜನೆಯವರು ಇಂಗು ಗುಂಡಿ ಕಂಡು ಸಹಾಯ ಧನ ನೀಡಿದರು. ಮನೆಯಲ್ಲಿ ಗೋಬರ್ ಗ್ಯಾಸ್, ಎರೆಹುಳ ಗೊಬ್ಬರವನ್ನೂ ಪ್ರಾರಂಭಿಸಿದರು.
ಒಟ್ಟೂ ಕೃಷಿ ಯಾವ ಸಮಯದಲ್ಲೂ ಕೈ ಕೊಡದಂತೆ ನೋಡಿಕೊಂಡರು. ಬಾವಿಯ ನೀರು ಎಪ್ರಿಲ್‌ನಲ್ಲಿ ಕಡಿಮೆಯಾಗುತ್ತಿತ್ತು.
ಆದರೆ ಇತ್ತೀಚಿನ 5 ವರ್ಷಗಳಿಂದ ಆ ಸಮಸ್ಯೆ ಇಲ್ಲ. ಸುತ್ತಲಿನ ಸುಮಾರು 10 ಮನೆಗಳು ನೀರಿಗಾಗಿ ಇಲ್ಲಿಗೆ ಬರುತ್ತಿದ್ದರು. ಕೆಲವರಿಗೆ ಈಗ ಧಾರಾಳ ನೀರಿದೆ. ಇನ್ನೂ ಕೆಲವರು ಬಾವಿ ಅಗೆದಿದ್ದು, ಅವರಿಗೂ ನೀರು ಸಿಕ್ಕಿದೆ.
ಒಂದುವೇಳೆ ನೀರು ಸಿಗದಿದ್ದರೆ ಕೊಳವೆ ಬಾವಿ ಕೊರೆಯಬೇಕೆಂದಿದ್ದರಂತೆ.
ನೀರು ಬಳಕೆ ಎಚ್ಚರ ಅಗತ್ಯ
ನೀರು ಭೂಮಿಯ ಪ್ರತಿಯೊಂದು ಜೀವರಾಶಿಗೆ ಬಹಳ ಅಗತ್ಯ. ಭೂಮಿಯಲ್ಲಿ ಕುಡಿಯಲು ಯೋಗ್ಯವಾದ ಶುದ್ಧ ನೀರು ಲಭ್ಯವಿರುವುದು ಶೇ. 3ರಷ್ಟು ಮಾತ್ರ. ಆದರೆ, ನಾವು ದಿನಬಳಕೆಗೆಂದು ಅಗತ್ಯಕ್ಕಿಂತ ಹೆಚ್ಚಾಗಿ ಬಳಸಿ ನೀರನ್ನು ಪೋಲು ಮಾಡುತ್ತಿದ್ದೇವೆ. ಹೀಗಾಗಿ ನೀರನ್ನು ಸಂರಕ್ಷಣೆ ಅಗತ್ಯವಾಗಿದೆ. ಇದಕ್ಕಾಗಿ ಕೆಲವೊಂದು ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸುವುದು ಅಗತ್ಯ.
ಅಗತ್ಯವಿದ್ದಷ್ಟೇ ನೀರನ್ನು ಬಳಸಿ, ಇಂಗು ಗುಂಡಿಗಳನ್ನು ತೋಡಿ ನೀರನ್ನು ಸಂಗ್ರಹಿಸಿ, ಬಳಸಿದ ನೀರನ್ನು ಮತ್ತೆ ದ್ವಿತೀಯ ಅಗತ್ಯತೆಗಳಿಗೆ ಬಳಸುವುದು. ಮಳೆಯ ಅಸಮರ್ಪಕತೆ ತಡೆಯಲು ಮರಗಳನ್ನು ಬೆಳೆಸುವುದು.ಮಳೆ
ನೀರನ್ನು ಸಂಗ್ರಹಿಸುವುದು. ನದಿ ನೀರು ಕಲುಷಿತವಾಗದಂತೆ ತಡೆಯುಧಿವುಧಿದು, ಹನಿ ನೀರಾವರಿ ಪದ್ಧತಿ ಅನುಸರಿಸಿ, ನೀರು ಹೆಚ್ಚು ವ್ಯಯವಾಗದಂತೆ ಎಚ್ಚರವಹಿಸುವುದು. ಕೊಳವೆ ಬಾವಿಧಿಗಳ ಬದಧಿಲು ತೆರೆದ ಬಾವಿಗಳನ್ನೇ ಬಳಸುವುದು. ಪೈಪ್ ಒಡೆದು ನೀರು ಪೋಲಾಗದಂತೆ ಎಚ್ಚರವಹಿಸುವುದು ಅಗತ್ಯವಾಗಿದೆ. ಅಮೂಲ್ಯವಾದ ನೀರನ್ನು ಮಿತವಾಗಿ ಬಳಸಿ, ಅನಗತ್ಯವಾಗಿ ಪೋಲಾಗದಂತೆ ತಡೆದರೆ, ಮುಂದೆಯೂ ಕೆಲಕಾಲ ನೀರಿನ ಅಭಾವದಿಂದ ದೂರ ಉಳಿಯಬಹುದು.
– ಹಕೀಂ ಪೇರಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜೂ. 5ರಂದು ಕರಾವಳಿಗೆ ಮುಂಗಾರು ಪ್ರವೇಶ ಸಾಧ್ಯತೆ
ಗುದನಾಳದಲ್ಲಿಟ್ಟು ಚಿನ್ನ ಕಳ್ಳಸಾಗಾಣಿಕೆ : ಮಂಗಳೂರು ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ
ಅತಿಕ್ರಮಣ ವಿರುದ್ಧ ಕಟ್ಟು ನಿಟ್ಟಿನ ಕ್ರಮ; ಅಧಿಕಾರಿಗಳಿಗೆ ಡಾ| ಕೆ.ವಿ. ರಾಜೇಂದ್ರ ಸೂಚನೆ
ತರಗತಿ, ಲೈಬ್ರೆರಿಗೆ ಹಿಜಾಬ್ ನಿಷಿದ್ಧ; ಮಂಗಳೂರು ವಿ.ವಿ. ಕಾಲೇಜಿನ ಸಮಿತಿಯಿಂದ ನಿರ್ಧಾರ
ಜೂ. 1: ಮೂಡುಬಿದಿರೆಗೆ ಮುಖ್ಯಮಂತ್ರಿ ಬೊಮ್ಮಾಯಿ; ವಿದ್ಯಾರ್ಥಿಗಳ ಜತೆಗೆ ಸಂವಾದ