ನೀರುಳಿಸಲು ವೀಕೆಂಡ್‌ ವಿಥ್‌ ರೈನ್‌ ಹಾರ್ವೆಸ್ಟಿಂಗ್‌


Team Udayavani, Jul 4, 2017, 3:50 AM IST

harvesting.jpg

ಮಹಾನಗರ: ರಾಜ್ಯಾದ್ಯಂತ 100ಕ್ಕೂ ಹೆಚ್ಚು ಕಲ್ಯಾಣಿಗಳನ್ನು ಸ್ವತ್ಛ ಗೊಳಿಸುವ ಮೂಲಕ ಜಲಕ್ರಾಂತಿ ಮಾಡಿದ ಯುವಾ ಬ್ರಿಗೇಡ್‌ ಈಗ “ಜಲ ಜನ ಸಂಪರ್ಕ ಸೇತು’ ಎಂಬ ವಿನೂತನ ಜಲ ಸಾಕ್ಷರ ಅಭಿಯಾನವನ್ನು ಆರಂಭಿಸಿದೆ. ಮುಂದಿನ ಬೇಸಗೆಯಲ್ಲಿ ನೀರಿನ ಕೊರತೆ ಉಂಟಾಗದಂತೆ ಜನರನ್ನು ಈಗಿಂದಲೇ ನೀರಿನ ಉಳಿತಾಯಕ್ಕೆ ಅಣಿಗೊಳಿಸುವುದು ಇದರ ಉದ್ದೇಶ.

ಈ ಸಂಬಂಧ ಜಿಲ್ಲೆಯಲ್ಲಿ 5 ಸಾವಿರ ಮನೆಗಳನ್ನು ತಲುಪುವ ಗುರಿ ಹೊಂದಲಾಗಿದೆ. ಈಗಾಗಲೇ ಕೆಲವು ಪ್ಲಂಬರುಗಳನ್ನು ಸಂಪರ್ಕಿಸಿ “ಮಳೆ ನೀರು ಸಂರಕ್ಷಣೆಯೊಂದಿಗೆ ಈ ವಾರಾಂತ್ಯ’ ಎಂಬ ಘೋಷವಾಕ್ಯದೊಂದಿಗೆ ಮಳೆ ಕೊಯ್ಲು ಕಾರ್ಯಕ್ರಮ ನಡೆಸಲು ಯೋಜಿಸಲಾಗಿದೆ.                                                                              

ಮಳೆ ಬಿದ್ದ ಮಾತ್ರಕ್ಕೆ ಮುಂದಿನ ಬೇಸಗೆ ಯಲ್ಲಿ ನೀರಿನ ಕೊರತೆ ತಪ್ಪದು. ಅದಕ್ಕಾಗಿ ಪ್ರತಿಯೊಬ್ಬರೂ ಜಲಸಾಕ್ಷರರಾಗಬೇಕು. ಈ ಹಿನ್ನೆಲೆಯಲ್ಲೇ “ಜಲ ಜನ ಸಂಪರ್ಕ ಸೇತು’ ಅಭಿಯಾನ ಆರಂಭಗೊಂಡಿದೆ.

“ಇರುವ ನೀರನ್ನು ವ್ಯರ್ಥ ಮಾಡದೇ ಉಪಾಯದಿಂದ ಬಳಸಲು ಪ್ರೇರೇ ಪಿಸಲು ಈ ಅಭಿಯಾನ. ವಾರದ ಕೊನೆಯ ದಿನದಂದು ಮನೆ ಮನೆಗಳಿಗೆ ತೆರಳಿ ಕರಪತ್ರ ಹಂಚಿ ಕಾರ್ಯಕರ್ತರು ನೀರು ಸಂರಕ್ಷಿಸಲು ಅರಿವು ಮೂಡಿಸುತ್ತಿದ್ದಾರೆ. ಸಾರ್ವಜನಿಕರೂ ಇದರಲ್ಲಿ ಪಾಲ್ಗೊಳ್ಳಬಹುದು’ ಎನ್ನುತ್ತಾರೆ ಯುವಾ ಬ್ರಿಗೇಡ್‌ನ‌ ನಿತ್ಯಾನಂದ ವಿವೇಕವಂಶಿ.

ಕರಪತ್ರದಲ್ಲೇನಿದೆ?
ಸ್ನಾನ ಮಾಡಲು ನೀರನ್ನು ವ್ಯರ್ಥ ಮಾಡದೇ ಒಂದು ಬಕೆಟ್‌ಗೆ ಸೀಮಿತ ಗೊಳಿಸೋಣ. ವಾಟರ್‌ ಪ್ಯೂರಿಫಯರ್‌ ನಿಂದ ಹೊರ ಬರುವ ನೀರನ್ನು ಸಿಂಕ್‌ಗೆ ಬಿಡದೇ ಪಾತ್ರೆ ತೊಳೆಯಲು ಬಳ ಸೋಣ. ಸೋರುತ್ತಿರುವ ನಲ್ಲಿಗಳನ್ನು ಮತ್ತು ಫÉಶ್‌ ಟ್ಯಾಂಕ್‌ಗಳನ್ನು ತತ್‌ಕ್ಷಣ ದುರಸ್ತಿ ಮಾಡಿಸೋಣ. ಶೌಚಾಲಯದ ಬಳಕೆಗೆ ಕಮೋಡ್‌ಗಿಂತ ಇಂಡಿಯನ್‌ ಟಾಯ್ಲೆಟ್‌ ಬಳಸೋಣ. ಸಂಪ್‌ ಅಥವಾ ಕೊಳವೆ ಬಾವಿಯಿಂದ ನೀರನ್ನು ಓವರ್‌ ಹೆಡ್‌ ಟ್ಯಾಂಕ್‌ಗೆ ಪಂಪ್‌ ಮಾಡುವಾಗ ಟ್ಯಾಂಕ್‌ ತುಂಬಿ ಸುರಿಯದಂತೆ ಎಚ್ಚರ ವಹಿಸೋಣ-ಇತ್ಯಾದಿ ಸಲಹೆಗಳಿವೆ.

ಪ್ರಧಾನಿ ಗಮನ ಸೆಳೆದ ಕಲ್ಯಾಣಿ ಸ್ವತ್ಛತೆ
ಯುವಾ ಬ್ರಿಗೇಡ್‌ ಎರಡೂವರೆ ವರ್ಷಗಳಿಂದ ರಾಯಚೂರು, ಗದಗ, ಮೈಸೂರು ಸೇರಿದಂತೆ ಒಟ್ಟು 100ಕ್ಕೂ ಹೆಚ್ಚು ಕಲ್ಯಾಣಿಗಳನ್ನು ಪುನರುಜ್ಜೀವನಗೊಳಿಸಿದೆ. ಇಂತಹ ಕಲ್ಯಾಣಿಗಳಲ್ಲಿ ಜೀವಜಲ ತುಂಬಿ ಅಲ್ಲಿನ ಜನಜೀವನಕ್ಕೆ ಸಹಾಯವಾಗಿದೆ. ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲೂ  ಉಲ್ಲೇಖೀಸಿ ಶ್ಲಾ ಸಿದ್ದರು.

ತಮಿಳು- ಕನ್ನಡಿಗರ ಬೆಸೆಯಲು “ಮೈಟ್ರೀ’
ಕಾವೇರಿ ಜಲಾನಯನದಲ್ಲಿ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳಲ್ಲಿ ಜಲ ಕದನ ನಡೆಯದಂತೆ ಜಾಗೃತಿ ಮೂಡಿಸಿ ತಮಿಳುನಾಡಿನ ಯುವ ಜನರನ್ನೂ ಸೇರಿಸಿಕೊಂಡು ಕುಶಾಲನಗರದಲ್ಲಿ ಈ ಹಿಂದೆ “ಮೈಟ್ರೀ’ ಕಾವೇರಿ ಸ್ವತ್ಛತೆ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ತಮಿಳು-ಕನ್ನಡಿಗರ ಮತ್ತು ಭೂಮಿ-ಆಕಾಶಗಳ ನಡುವಣ ಮರದ ಸಂಬಂಧ ಎಂಬ ಧ್ಯೇಯೋದ್ದೇಶದೊಂದಿಗೆ ಕಾವೇರಿ ಸ್ವತ್ಛತೆ ನಡೆಸಿತ್ತು.

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.