ಉಪಯೋಗವಿಲ್ಲದ ಕೊಳವೆ ಬಾವಿಗಳಿಗೆ ಜಲಮರುಪೂರಣ ಏಕೆ ಮಾಡಬಾರದು?

Team Udayavani, Apr 28, 2017, 3:09 PM IST

borwell1.jpg

ಬಜಪೆ: ದ.ಕ.ಜಿಲ್ಲೆಯಲ್ಲಿರುವ ತೆರೆದ ಕೊಳವೆ ಬಾವಿಗಳನ್ನು ಮುಚ್ಚಲು ಆದೇಶ ನೀಡಲಾಗಿದೆ. ಆದರೆ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸುಮಾರು 100ಕ್ಕಿಂತಲೂ ಹೆಚ್ಚು ಕೊಳವೆ ಬಾವಿಗಳು ಈಗಾಗಲೇ ತೆಗೆಯಲಾಗಿದ್ದು, ಈ ಪೈಕಿ ಹಲವು ಬಾವಿಗಳನ್ನು ಈಗಾಗಲೇ ಮುಚ್ಚಲಾಗಿದೆ. 

ಹಾಗಾದರೆ ಇವುಗಳನ್ನು ಮುಚ್ಚುವ ಬದಲು ಇಂಗು ಗುಂಡಿ ಯ ಮೂಲ ಕ ಜಲ ಮರು ಪೂರಣ ಮಾಡಿ ಮುಂದಿನ ದಿನಗಳಲ್ಲಿ ಬಳಸಬಾರದೇ ಎಂಬ ಪ್ರಶ್ನೆ ಮೂಡಿದೆ. 

ಹೆಚ್ಚಿನವು 6.5 ಇಂಚಿನವು
ಜಿಲ್ಲೆಯಲ್ಲಿ ಕೊರೆಯಲಾದ ಕೊಳವೆ ಬಾವಿಗಳು ಈ ಹಿಂದೆ 4 ಇಂಚು, ತದನಂತರ 6 ಇಂಚು ಆಗಿದ್ದು, ಈಗ ಸುಮಾರು 15 ವರ್ಷದಿಂದ 6.5 ಇಂಚು ವ್ಯಾಸ ಹೊಂದಿರುತ್ತವೆ. ಇದರಿಂದ ಇದರೊಳಗೆ ಮಗು ಬೀಳುವ ಸಾಧ್ಯತೆ ಕಡಿಮೆ. ಈ ಮಾದರಿಯನ್ನು  ಹೆಚ್ಚಿನ ರಾಜ್ಯದಲ್ಲಿ ಉಪ ಯೋಗಿ ಸಿದರೆ ಒಳ್ಳೆಯದು.

ಇಂಥ ನೀರು ಸಿಗದ ಕೊಳವೆ ಬಾವಿಗಳನ್ನು ಮುಚ್ಚಲಾ ಗುತ್ತಿದೆ. ಹಲವು ಕಡೆ ಕೃಷಿಕರು ತಮ್ಮ ಬತ್ತಿದ ಕೊಳವೆ ಬಾವಿಗಳಿಗೆ ಜಲ ಮರುಪೂರಣ ಮಾಡಿ ಗೆದ್ದ ಪ್ರಸಂಗಗಳಿವೆ. ಮಂಗಳೂರು ತಾಲೂಕು ಅಲ್ಲದೇ ಜಿಲ್ಲೆಯ ಹಲವೆಡೆ ಹಲವು ಕೃಷಿಕರು ಈ ಪ್ರಯೋಗದಲ್ಲಿ ನಿರತರಾಗಿದ್ದಾರೆ.  ಎರಡು ವರ್ಷ ನೀರಿಲ್ಲದೇ ಸೋತವರೂ ಕೊನೆಗೆ ಈ ಉಪಾಯಕ್ಕೆ ಮೊರೆ ಹೋದವರೂ ಇದ್ದಾರೆ. 

ಜಿ.ಪಂ. ಏಕೆ ಮಾಡಬಾರದು? 
ಈ ಪ್ರಸಂಗಗಳನ್ನೇ ಉದಾಹರಣೆಯಾಗಿಟ್ಟುಕೊಂಡು ಜಿ.ಪಂ. ಮತ್ತು ತಾ.ಪಂ. ಸ್ಥಳೀಯ ಕೆಟ್ಟು ಹೋದ ಬೋರ್‌ವೆಲ್‌ಗ‌ಳಿಗೆ ಜಲ ಮರುಪೂರಣ ಮಾಡಿದರೆ ಪರ್ಯಾಯ ಜಲಮೂಲಗಳಿಗೆ ವೆಚ್ಚ ಮಾಡುವ ಸಮಸ್ಯೆ ಬಗೆಹರಿಯಲಿದೆ. ಇದರೊಂದಿಗೆ ಸ್ಥಳೀಯವಾಗಿ ಜಲ ಸಂಪನ್ಮೂಲವನ್ನು ಹೊಂದಿಸುವಲ್ಲಿ ಯಶಸ್ವಿಯಾದಂತಾಗುತ್ತದೆ. ಇದರಿಂದ ಅಪಾಯವೂ ತಪ್ಪಲಿದೆ ಹಾಗೂ ಸಮರ್ಪಕ ನಿರ್ವಹಣೆಯೂ ಸಾಧ್ಯವಾಗಲಿದೆ. ಯಾಕೆಂದರೆ ಅಂತರ್ಜಲ ಕುಸಿತವೇ ಈ ಕೊಳವೆಬಾವಿಗಳು ಬತ್ತಲು ಕಾರಣ. ಹಾಗಾಗಿ ಸಮೀಪದಲ್ಲಿರುವ ಮನೆಯ ಛಾವಣಿಗೆ ಪೈಪ್‌ ಹಾಕಿ ಸೋಸುವ ಮೂಲಕ ನೇರ ಕೊಳವೆ ಬಾವಿಗೆ ಬಿಟ್ಟರೆ ಅಂತರ್ಜಲ ವೃದ್ಧಿಗೆ ಕಾರಣವಾಗಲಿದೆ. ಗ್ರಾಮ ಪಂಚಾಯತ್‌ ಹಾಗೂ ಖಾಸಗಿ ಕೊಳವೆ ಬಾವಿ ಕೊರೆದವರೂ ಇದರತ್ತ ಆಲೋಚಿಸುವುದು ಸೂಕ್ತ ಎನ್ನುತ್ತಾರೆ ಪರಿಣಿತರು. 

ನೀರಿನ ಗಣಿತ
ನಾವು ಜೀನ್ಸ್‌ ಪ್ಯಾಂಟ್‌ ಶರ್ಟ್‌ ಹಾಕಿಕೊಂಡು ಸಂಭ್ರಮಿಸುವುದು ಇದ್ದೇ ಇದೆ. ಆದರೆ, ಅವುಗಳು ಕಬಳಿಸುವ ನೀರಿನ ಪ್ರಮಾಣ ಎಷ್ಟು ಗೊತ್ತೇ? ಒಂದು ಅಂದಾಜಿನ ಪ್ರಕಾರ ಒಂದು ಜೊತೆ ಜೀನ್ಸ್‌ ತಯಾರಿಸಲು ಸುಮಾರು ಹತ್ತು ಸಾವಿರ ಲೀಟರ್‌ ನೀರು ಬೇಕು.

ಹೀಗೂ ಉಳಿಸಿ
ಮಕ್ಕಳು ನೀರಿನಲ್ಲಿ ಆಡುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಇದಕ್ಕೆ ಬೇಕಾದ ರೀತಿಯ ಆಟಿಕೆಗಳು ಮಾರುಕಟ್ಟೆಯಲ್ಲಿವೆ. ಮಕ್ಕಳು ಆಟವಾಡುವಾಗ ಹೆಚ್ಚಿನ ನೀರು ಪೋಲು ಮಾಡುತ್ತಾರೆ. ಹೀಗಾಗಿ ಮಕ್ಕಳಿಗೆ ನೀರು ತುಂಬಿಸಿ ಆಡಬಹುದಾದ ಆಟಿಕೆಗಳನ್ನು  ತಂದುಕೊಡಬೇಡಿ. ಇದರಿಂದ ಸಾಕಷ್ಟು ನೀರನ್ನು ಉಳಿಸಬಹುದು.

ಅರ್ಥ ಹನಿ
ಪ್ರತಿ ಬಾರಿ ಸೋತಾಗಲೂ ನೆರವಿಗೆ ಬರುವುದು ನೀರೇ. ಹಾಗಾಗಿ ನೀರನ್ನು ಸಂರಕ್ಷಿಸಿ. 

43%
ಕೀನ್ಯಾದಲ್ಲಿರುವ  44 ಮಿಲಿಯನ್‌ ಜನರಲ್ಲಿ ಸುಮಾರು 18 ಮಿಲಿಯನ್‌ ಅಂದರೆ ಶೇ. 43ರಷ್ಟು ಮಂದಿಗೆ ಪರಿಶುದ್ಧವಾದ  ಕುಡಿಯುವ ನೀರು ಸಿಗುತ್ತಿಲ್ಲ. 

2,110
ನಾವು ಹೆಚ್ಚಾಗಿ ಬಳಸುವ ಲೆದರ್‌ ಶೂ ನ ಒಂದು  ಜತೆ ತಯಾರಿಬೇಕಾದರೆ 2,110 ಗ್ಯಾಲನ್‌ ನೀರು ಬೇಕಾಗುತ್ತದೆ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.