ಮಹಿಳೆಯ ಪೈಶಾಚಿಕ ಕೊಲೆ: ಮುಂದುವರಿದ ತನಿಖೆ

ನಾಲ್ವರ ವಶ; ಕಾಲಿನ ಭಾಗಗಳಿಗೆ ಶೋಧ

Team Udayavani, May 15, 2019, 6:10 AM IST

mahileya-kole

ಮಂಗಳೂರು: ನಗರದಲ್ಲಿ 35 ವರ್ಷದ ಮಹಿಳೆಯನ್ನು ಬರ್ಬರ ವಾಗಿ ಕೊಲೆಗೈದು ತಲೆ ಹಾಗೂ ದೇಹದ ಭಾಗಗಳನ್ನು ಕತ್ತರಿಸಿ ವಿವಿಧೆಡೆ ಎಸೆದು ಪರಾರಿಯಾಗಿರುವ ಪೈಶಾಚಿಕವಾದ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಮುಂದು ವರಿದಿದ್ದು, ತನಿಖಾ ತಂಡಗಳು ಮಂಗಳವಾರವೂ ಸಾಕಷ್ಟು ಮಾಹಿತಿ ಕಲೆಹಾಕುವಲ್ಲಿ ಯಶಸ್ವಿಯಾಗಿವೆ.

ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ‌ ಈ ಕೊಲೆಗೆ ಸಂಬಂಧಿಸಿ ಪೊಲೀಸರು, ನಾಲ್ವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಜತೆಗೆ ಈ ಕೊಲೆಯನ್ನು ಪೊಲೀಸರು ಕೂಡ ಅತ್ಯಂತ ಗಂಭೀರ ಹಾಗೂ ಮಹತ್ವದ ಪ್ರಕರಣವಾಗಿ ಪರಿಗಣಿಸಿದ್ದು, ಕೊಲೆ ಯನ್ನು ಭೇದಿಸುವಲ್ಲಿ ಸಾಕಷ್ಟು ತಾಂತ್ರಿಕ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಆ ಮೂಲಕ ಕೊಲೆ ರಹಸ್ಯ ಪತ್ತೆಗೆ ಬಹಳ ಆಳವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಹೀಗಾಗಿ ಈ ಕೊಲೆ ಪ್ರಕರಣದ ಹಿಂದಿರುವ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಸುಮಾರು 30 ಪೊಲೀಸ್‌ ಅಧಿಕಾರಿಗಳು-ಸಿಬಂದಿ ಕಾರ್ಯೋನ್ಮುಖರಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

ಇನ್ನೊಂದೆಡೆ ಕೊಲೆಯಾದ ಶ್ರೀಮತಿ ಶೆಟ್ಟಿ ಅವರ ದ್ವಿಚಕ್ರ ವಾಹನ ಅನಾಥವಾಗಿ ಪತ್ತೆಯಾಗಿದ್ದ ನಾಗುರಿಯ ಸುತ್ತ-ಮುತ್ತ ಮಂಗಳವಾರ ಕೂಡ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದರು. ಆ ಪ್ರಕಾರ, ಇಲ್ಲಿನ ಬಾವಿಯೊಂದರಲ್ಲಿ ಕೊಲೆಗೆ ಸಂಬಂಧಿಸಿದಂತೆ ಅವಶೇಷ ಅಥವಾ ಪುರಾವೆಗಳೇನಾದರೂ ಇರಬಹುದೇ ಎಂಬ ಬಗ್ಗೆ ತಪಾಸಣೆ ಕೂಡ ನಡೆಸಿದ್ದಾರೆ.

ಈ ನಡುವೆ ಕೊಲೆಗೆ ಸಂಬಂಧಿ ಸಿದಂತೆ ತನಿಖಾ ತಂಡಗಳು, ಶ್ರೀಮತಿ ಅವರ ಮೊಬೈಲ್‌ ಸಂಖ್ಯೆ ಆಧರಿಸಿ ಅದರ ಕರೆ ವಿವರಗಳನ್ನು ಕೂಡ ಸಂಗ್ರಹಿಸುವ ಕೆಲಸ ಮಾಡುತ್ತಿವೆ. ಮೂಲಗಳ ಪ್ರಕಾರ, ಆಕೆ ಬಳಸುತ್ತಿದ್ದ ಮೊಬೈಲ್‌ ಇನ್ನು ಕೂಡ ಎಲ್ಲಿದೆ ಎನ್ನುವುದು ಗೊತ್ತಾಗಿಲ್ಲ. ಒಂದುವೇಳೆ ಆಕೆಯ ಮೊಬೈಲ್‌ ಪತ್ತೆಯಾದರೆ ಪ್ರಕರಣವನ್ನು ಭೇದಿಸುವುದು ಪೊಲೀಸರಿಗೂ ಇನ್ನಷ್ಟು ಸುಲಭವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಶ್ರೀಮತಿ ಶೆಟ್ಟಿ ಅವರ ಮೊಬೈಲ್‌ಗೆ ಬಂದಿರುವ ಕರೆಗಳ ವಿವರಗಳನ್ನು ಪಡೆಯುವ ದಿಕ್ಕಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ ಯಾವುದೇ ಒಂದು ಕೊಲೆ ಪ್ರಕರಣ ನಡೆದರೆ ಆ ವ್ಯಾಪ್ತಿಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ. ಆದರೆ ಶ್ರೀಮತಿ ಶೆಟ್ಟಿ ಕೊಲೆಯು ವಿಚಿತ್ರ ಸ್ವರೂಪದ ಕೊಲೆಯಾಗಿದ್ದು, ತಲೆಯ ಭಾಗ ಕದ್ರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದರೆ, ದೇಹದ ಒಂದು ಭಾಗವು ಪಾಂಡೇಶ್ವರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ಆದರೆ ಒಂದೇ ಠಾಣೆಯ ವ್ಯಾಪ್ತಿಯಲ್ಲಿ ತನಿಖೆ ನಡೆಸುವ ಉದ್ದೇಶದಿಂದ ಈ ಪ್ರಕರಣವನ್ನು ಕದ್ರಿಯಿಂದ ಪಾಂಡೇಶ್ವರ ಠಾಣೆಗೆ ಹಸ್ತಾಂತರಿಸುವುದು ಉತ್ತಮ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಇನ್ನು ಕೂಡ ಈ ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪೊಲೀಸರಿಗೇ ದಿಗ್ಭ್ರಮೆ
ಶ್ರೀಮತಿ ಶೆಟ್ಟಿ ಕೊಲೆಯು ಕೇವಲ ಜಿಲ್ಲೆಯ ಜನರನ್ನಷ್ಟೇ ಅಲ್ಲ ಇಡೀ ಪೊಲೀಸ್‌ ಇಲಾಖೆಯನ್ನೇ ದಿಗ್ಭ್ರಮೆಗೀಡು ಮಾಡಿದೆ. ಏಕೆಂದರೆ, ಹಲವು ಹಿರಿಯ-ಕಿರಿಯ ಪೊಲೀಸ್‌ ಅಧಿಕಾರಿಗಳು ಹೇಳುವ ಪ್ರಕಾರ, ತಮ್ಮ ಸೇವಾವಧಿಯಲ್ಲೇ ಈ ರೀತಿಯ ಪೈಶಾಚಿಕವಾದ ಕ್ರೂರತೆಯ ಕೊಲೆಯಾಗಿರುವುದನ್ನು ನೋಡಿಯೇ ಇಲ್ಲ ಎನ್ನುವ ಅಭಿಪ್ರಾಯ ಹಾಗೂ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಷ್ಟೊಂದು ಕ್ರೂರ ರೀತಿಯಲ್ಲಿ ಮಹಿಳೆಯೊಬ್ಬರನ್ನು ರುಂಡ-ಮುಂಡ ಪ್ರತ್ಯೇಕಿಸಿ, ಆ ದೇಹವನ್ನು ನಗರದೆಲ್ಲೆಡೆ ಸ್ಕೂಟರ್‌ನಲ್ಲಿ ಇಟ್ಟುಕೊಂಡು ಸುತ್ತಾಡಿ ವಿಕೃತಿ ಮೆರೆದಿರುವ ಈ ಕೊಲೆ ಪಾತಕಿಗಳನ್ನು ಆದಷ್ಟು ಬೇಗ ಬಂಧಿಸಿ ಹೆಡೆಮುರಿ ಕಟ್ಟಬೇಕೆಂಬ ಹಠದಲ್ಲಿ ಪೊಲೀಸರು ಇದ್ದಾರೆ ಎನ್ನಲಾಗಿದೆ.

ಸಾರ್ವಜನಿಕವಾಗಿಯೂ ಚರ್ಚೆ
ಈ ನಡುವೆ ಏನೇ ಕಾರಣಗಳಿದ್ದರು ಕೂಡ ಮಹಿಳೆಯನ್ನು ಈ ರೀತಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿ ಅನಂತರ ಅದನ್ನು ಪ್ರತೀಕಾರ ತೀರಿಸುವ ರೀತಿಯಲ್ಲಿ ಅಟ್ಟಹಾಸ ತೋರಿಸಿರುವ ಆ ಕೊಲೆಗಡುಕರ ಮನಃಸ್ಥಿತಿಗೆ ಸಾರ್ವಜನಿಕ ವಲಯದಲ್ಲಿಯೂ ಸಾಕಷ್ಟು ಆಕ್ರೋಶ-ದಿಗ½Åಮೆ ವ್ಯಕ್ತವಾಗುತ್ತಿದೆ.

ಅದರಲ್ಲಿಯೂ ಇಷ್ಟೊಂದು ಹೇಯ ರೀತಿಯಲ್ಲಿ ಕೊಲೆ ಮಾಡಿರುವ ಆ ವ್ಯಕ್ತಿಗಳು ಯಾರು ಎಂಬ ಬಗ್ಗೆ ತಿಳಿಯಲು ಜನರು ಕೂಡ ಅಷ್ಟೇ ಕುತೂಹಲದಲ್ಲಿ ಇದ್ದಾರೆ. ಆದರೆ, ಕೊಲೆ ನಡೆದು ನಾಲ್ಕು ದಿನ ಆಗಿದ್ದು, ಪೊಲೀಸರು ಈಗಾಗಲೇ ಸಾಕಷ್ಟು ಆಯಾಮಗಳಲ್ಲಿ ತನಿಖೆ ನಡೆಸಿ ಒಂದಷ್ಟು ಸಾಕ್ಷಾ éಧಾರಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಿರುವಾಗ ಶೀಘ್ರದಲ್ಲೇ ಕೊಲೆ ಪ್ರಕರಣವನ್ನು ಭೇದಿಸಬಹುದು ಎನ್ನುವ ವಿಶ್ವಾಸದಲ್ಲಿ ಪೊಲೀಸರು ಕೂಡ ಇದ್ದಾರೆ.

ಮಂಗಳಾದೇವಿ ಸಮೀಪದ ಅಮರ್‌ ಆಳ್ವ ರಸ್ತೆ ನಿವಾಸಿ ಶ್ರೀಮತಿ ಶೆಟ್ಟಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿ ದೇಹವನ್ನು ತುಂಡರಿಸಿ ನಗರ ದಲ್ಲಿ ಎಸೆದಿದ್ದರು. ತಲೆಯ ಭಾಗ ಕದ್ರಿ ಪಾರ್ಕ್‌ನ ಅಂಗಡಿ ಬಳಿಯಲ್ಲಿ ಹಾಗೂ ದೇಹದ ಅರ್ಧ ಭಾಗ ನಂದಿಗುಡ್ಡೆ ಬಳಿ ಪತ್ತೆಯಾಗಿತ್ತು. ಪಾದದ ಭಾಗಗಳನ್ನು ಇನ್ನೆಲ್ಲೂ ಎಸೆಯಲಾಗಿದ್ದು ಇದೀಗ ಅವುಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿದೆ.

ಯಂತ್ರ ಬಳಸಿ ದೇಹ ಕತ್ತರಿಸಲಾಗಿತ್ತೇ?
ಶ್ರೀಮತಿ ಶೆಟ್ಟಿ ಅವರ ದೇಹದ ಅಂಗಾಂಗಳನ್ನು ಕೊಲೆಗಡುಕರು ಕತ್ತರಿಸಿರುವುದು ನೋಡಿದರೆ, ಕತ್ತರಿಸುವ ಯಂತ್ರವೊಂದನ್ನು ಬಳಸಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಮಹಿಳೆಯ ತಲೆ, ದೇಹದ ಭಾಗ ಹಾಗೂ ಕೈಕಾಲುಗಳನ್ನು ಕತ್ತರಿಸಿರುವ ರೀತಿ ನೋಡಿದರೆ, ಮಾರಕಾಸ್ತ್ರದ ಬದಲು ಮರವನ್ನು ಕತ್ತರಿಸುವ ಮಾದರಿಯ ಅತ್ಯಂತ ಹರಿತವಾದ ಯಂತ್ರವನ್ನು ಬಳಸಿರಬಹುದು ಎನ್ನುವ ಸಂಶಯ ಮೂಡಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಶ್ರೀಮತಿಯ ಕೊಲೆ ಹೇಗೆ ಮಾಡಿರಬಹುದು ಹಾಗೂ ಆ ನಂತರ ದೇಹವನ್ನು ಹೇಗೆ ಕತ್ತರಿಸಿರಬಹುದು ಎಂಬಿತ್ಯಾದಿ ಆಯಾಮಗಳ ಬಗ್ಗೆಯೂ ಅತ್ಯಂತ ಆಳವಾದ ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.