ಮತದಾನಕ್ಕೆ ತೆರಳಿದ ಕಾರ್ಮಿಕರು; ಮೀನುಗಾರಿಕೆಗೆ ಅಡ್ಡಿ

Team Udayavani, Apr 11, 2019, 6:00 AM IST

ಮಂಗಳೂರು: ಮೀನುಗಾರಿಕಾ ಬಂದರಿನ ಕಾರ್ಮಿಕರಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ರಾಜ್ಯಗಳ ಮಂದಿಯೇ ಅಧಿಕ ಸಂಖ್ಯೆಯಲ್ಲಿದ್ದು, ಅವರೆಲ್ಲ ಮತದಾನಕ್ಕಾಗಿ ತಮ್ಮ ರಾಜ್ಯಗಳಿಗೆ ಮರಳಿದ್ದರಿಂದ ಹಲವಾರು ಬೋಟುಗಳು ಲಂಗರು ಹಾಕಿದ್ದು, ಮೀನುಗಾರಿಕೆ ಬಹುತೇಕ ಸ್ಥಗಿತಗೊಂಡಿದೆ.

ಹಳೆ ಬಂದರು ದಕ್ಕೆಯಲ್ಲಿ 400 ಆಳ ಸಮುದ್ರ ಮೀನುಗಾರಿಕೆ ಬೋಟುಗಳಲ್ಲಿ 4,000ದಷ್ಟು ಮೀನುಗಾರ ಕಾರ್ಮಿಕರು ಆಂಧ್ರ, ತಮಿಳುನಾಡು, ಒಡಿಶಾ ರಾಜ್ಯಗಳವರು. ಮೊದಲ ಹಂತದ ಚುನಾವಣೆ ಎ. 11ರಂದು ನಡೆಯಲಿದ್ದು, ಹೆಚ್ಚಿನವರು ರಜೆ ಹಾಕಿದ್ದಾರೆ.

ಚುನಾವಣೆ ಎ. 11ರಿಂದ ಮೇ 19ರ ವರೆಗೆ 7 ಹಂತಗಳಲ್ಲಿ ನಡೆಯಲಿದೆ. ಎ. 11ರಂದು ಮೊದಲ ಹಂತದಲ್ಲಿ ಆಂಧ್ರ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳಲ್ಲಿ, 2ನೇ ಹಂತದಲ್ಲಿ ಎ. 18ರಂದು ತಮಿಳುನಾಡು, ಒಡಿಶಾ, ಕರ್ನಾಟಕದಲ್ಲಿ ಮತದಾನವಿದೆ. ಎ. 23ಕ್ಕೆ 3ನೇ ಹಂತದ ಚುನಾವಣೆ. ಒಡಿಶಾ ರಾಜ್ಯದಲ್ಲಿ ಮೊದಲ ಮೂರೂ ಹಂತಗಳಲ್ಲಿ ಚುನಾವಣೆ ಇದೆ. ಮೀನುಗಾರ ಕಾರ್ಮಿಕರ ಕೊರತೆ ಎ. 25ರ ವರೆಗೂ ಇರಬಹುದು ಎಂದು ಮಂಗಳೂರಿನ ಟ್ರಾಲ್‌ಬೋಟ್‌ ಮೀನುಗಾರರ ಸಂಘದ ಮೂಲಗಳು ತಿಳಿಸಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ