ನಿರ್ಮಾಣ ಹಂತದ ಕಾಂಕ್ರೀಟ್‌ ರಸ್ತೆಗೆ ವಿಶ್ವಬ್ಯಾಂಕ್‌ ತಂಡ ಭೇಟಿ

Team Udayavani, Jun 6, 2018, 3:55 AM IST

concrete-5-6.jpg

ಸಸಿಹಿತ್ಲು: ಸಸಿಹಿತ್ಲು ಭಗವತೀ ದೇವಸ್ಥಾನದ ದ್ವಾರದಿಂದ ಮುಂಡ ಬೀಚ್‌ ನ ಬಸ್‌ನಿಲ್ದಾಣದವರೆಗೆ ವಿಶ್ವಬ್ಯಾಂಕ್‌ ನ ನೆರವಿನಿಂದ ರಾಷ್ಟ್ರೀಯ ಬಿರುಗಾಳಿ ವಿಪತ್ತು ಕುಗ್ಗಿಸುವ ಯೋಜನೆ (ಎನ್‌.ಸಿ.ಆರ್‌.ಎಂ.ಪಿ.) 4.5 ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಂಕ್ರೀಟ್‌ ರಸ್ತೆಯನ್ನು ವೀಕ್ಷಿಸಲು ಜೂ.5ರಂದು ದೆಹಲಿಯ ವಿಶ್ವ ಬ್ಯಾಂಕ್‌ ಪ್ರತಿನಿಧಿಗಳ ತಂಡವು ವಿವಿಧ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿತು. ಕಾಮಗಾರಿಯು ಆರಂಭವಾಗಿ ಎರಡು ತಿಂಗಳು ಕಳೆದಿದ್ದರೂ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಸ್ಥಳೀಯ ಮುಂಡ ಪ್ರದೇಶ ಹಾಗೂ ಬೀಚ್‌ಗೆ ತೆರಳುವ ಪ್ರವಾಸಿಗರಿಗೂ ಸುಮಾರು 2 ಕಿ.ಮೀ. ನಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದನ್ನು ಮೇ.25ರ ಉದಯವಾಣಿಯ ಸುದಿನಲ್ಲಿ ವಿಶೇಷ ವರದಿಯೊಂದು ಪ್ರಕಟಗೊಂಡಿತ್ತು.

ವಿಶ್ವ ಬ್ಯಾಂಕ್‌ನ ದೆಹಲಿಯ ಅನುಪ್‌ ಕಾರಂತ್‌ ಅವರ ನೇತೃತ್ವದಲ್ಲಿ ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಇಲಾಖೆಗಳ ಅಧಿಕಾರಿಗಳ ಸಹಿತ ಸುಮಾರು 30 ಮಂದಿಯ ತಂಡವು ಭೇಟಿ ನೀಡಿ ಕಾಮಗಾರಿಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿ ಗುತ್ತಿಗೆದಾರರಿಗೆ ಹಾಗೂ ಯೋಜನೆಯ ತಾಂತ್ರಿಕ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಮಂಗಳೂರು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳಿಗೆ ಸ್ಥಳದಲ್ಲಿಯೇ ಸೂಚನೆಗಳನ್ನು ನೀಡಿದರು.

ಸ್ಥಳೀಯರಾದ ಅನಿಲ್‌ ಕುಂದರ್‌, ಆನಂದ, ಕಿಶೋರ್‌, ಸಚಿನ್‌ ಹಾಗೂ ಪಂಚಾಯತ್‌ ಸದಸ್ಯರಾದ ಚಿತ್ರಾ ಸುಕೇಶ್‌ ಮತ್ತು ಚಂದ್ರಕುಮಾರ್‌ ಅವರಲ್ಲಿ ಮಾಹಿತಿ ಹಾಗೂ ಅಭಿಪ್ರಾಯವನ್ನು ಪಡೆದುಕೊಂಡರು. ಮಂಗಳೂರು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳಾದ ಗೋಪಾಲ ನಾಯಕ್‌, ರವಿಕುಮಾರ್‌, ಬೆಂಗಳೂರಿನ ಡಾ| ರಾಜ್‌ಕುಮಾರ್‌ ಪೂಜಾರಿ, ಗುತ್ತಿಗೆದಾರ ಫಿಲಿಪ್‌ ಡಿ’ಕೋಸ್ತ ಮತ್ತಿತರರು ಉಪಸ್ಥಿತರಿದ್ದರು.

ಗುತ್ತಿಗೆದಾರರಿಗೆ ಸೂಚನೆ
ರಸ್ತೆ ಕಾಮಗಾರಿಯಿಂದ ಸಂಚರಿಸಲು ಅಸಾಧ್ಯವಾಗಿರುವುದರಿಂದ ಆದಷ್ಟು ಶೀಘ್ರದಲ್ಲಿ ಒಂದು ಭಾಗದಲ್ಲಿ ರಸ್ತೆ ತೆರವು, ಮುಂದಿನ ಕಾಮಗಾರಿಯ ಸಂದರ್ಭದಲ್ಲಿ ಸಂಚಾರ ಸಂಪೂರ್ಣ ಬಂದ್‌ ಮಾಡುವ ಬದಲು ಒಂದು ಭಾಗ ಮಾತ್ರ ಕಾಂಕ್ರೀಟ್‌ ನಡೆಸಿ ಉಳಿದ ಭಾಗ ಸಂಚರಿಸಲು ಅನುವು, ಆಸುಪಾಸಿನ ಮನೆಗಳ ನಿವಾಸಿಗಳಿಗೆ ಧೂಳಿನಿಂದ ರಕ್ಷಣೆ, ಕಾಮಗಾರಿ ನಡೆಸುವ ಕಾರ್ಮಿಕರು ಸಹ ರಕ್ಷಣಾ ಧಿರಿಸು ಧರಿಸಬೇಕು, ಅವರಿಗೆ ವಿಮಾ ಸೌಲಭ್ಯ ಹಾಗೂ ರಿಫ್ಲೆಕ್ಟರ್‌ ಜಾಕೆಟ್‌ ನೀಡಬೇಕು, ಬಳಸುವ ವಾಹನಗಳ ಬಗ್ಗೆಯೂ ಜಾಗೃತಿ ವಹಿಸಬೇಕು, ಪ್ರತೀ ಸ್ಲಾಬ್‌ ಕಾಂಕ್ರೀಟ್‌ ಮಾಡುವಾಗ ಅದರ ಸ್ಯಾಂಪಲ್‌ ಎಂಜಿನಿಯರ್‌ಗಳನ್ನು ಪರಿಶೀಲಿಸಬೇಕು.

ಟಾಪ್ ನ್ಯೂಸ್

ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣದಲ್ಲಿ ದಾಖಲೆ: ಪಾಟೀಲ್‌

ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣದಲ್ಲಿ ದಾಖಲೆ: ಪಾಟೀಲ್‌

ಪಾರ್ಟಿಗಳಿಗೆ ಡ್ರಗ್ಸ್‌ ಮಾರಾಟ-ಕೇರಳ ಮೂಲದ ಆರೋಪಿ ಬಂಧನ

ಪಾರ್ಟಿಗಳಿಗೆ ಡ್ರಗ್ಸ್‌ ಮಾರಾಟ-ಕೇರಳ ಮೂಲದ ಆರೋಪಿ ಬಂಧನ

ತಿರುವನಂತಪುರಂ-ಕಾಸರಗೋಡು ರೈಲ್ವೆ ಮಾರ್ಗಕ್ಕೆ ಅನುಮೋದನೆ ನೀಡಿ : ಪಿಣರಾಯಿ ವಿಜಯನ್‌

ತಿರುವನಂತಪುರಂ-ಕಾಸರಗೋಡು ರೈಲ್ವೆ ಮಾರ್ಗಕ್ಕೆ ಅನುಮೋದನೆ ನೀಡಿ : ಪಿಣರಾಯಿ ವಿಜಯನ್‌

ಆನ್‌ ಲೈನ್‌ ಗೇಮಿಂಗ್‌ ಕಂಪನಿ ಬ್ಯಾಂಕ್‌ ಖಾತೆ ಜಪ್ತಿ ಆದೇಶಕ್ಕೆ ಹೈಕೋರ್ಟ್‌ ತಡೆ

ಆನ್‌ ಲೈನ್‌ ಗೇಮಿಂಗ್‌ ಕಂಪನಿ ಬ್ಯಾಂಕ್‌ ಖಾತೆ ಜಪ್ತಿ ಆದೇಶಕ್ಕೆ ಹೈಕೋರ್ಟ್‌ ತಡೆ

ಸಂಚಾರ ವಿಭಾಗದ ಜಂಟಿ ಆಯುಕ್ತರ ಮನೆಯಲ್ಲೆ ಹಣ, ಮೊಬೈಲ್ ಕಳವು

ಸಂಚಾರ ವಿಭಾಗದ ಜಂಟಿ ಆಯುಕ್ತರ ಮನೆಯಲ್ಲೆ ಹಣ, ಮೊಬೈಲ್ ಕಳವು

ಟೆಸ್ಟ್‌ ಸರಣಿ: ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ ಇನ್ನಿಂಗ್ಸ್‌ ಗೆಲುವು

ಟೆಸ್ಟ್‌ ಸರಣಿ: ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ ಇನ್ನಿಂಗ್ಸ್‌ ಗೆಲುವು

ಪ್ರಧಾನಮಂತ್ರಿ ಆವಾಜ್‌ ಯೋಜನೆ : ಗ್ರಾಮೀಣ 3 ವರ್ಷಗಳಿಗೆ ವಿಸ್ತರಣೆ

ಪ್ರಧಾನಮಂತ್ರಿ ಆವಾಜ್‌ ಯೋಜನೆ : ಗ್ರಾಮೀಣ 3 ವರ್ಷಗಳಿಗೆ ವಿಸ್ತರಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮನೆ ಮನೆಗೆ ಸಿಟಿ ಗ್ಯಾಸ್‌; ವರ್ಷದೊಳಗೆ ಪೂರೈಕೆ ಸಾಧ್ಯತೆ

ಮನೆ ಮನೆಗೆ ಸಿಟಿ ಗ್ಯಾಸ್‌; ವರ್ಷದೊಳಗೆ ಪೂರೈಕೆ ಸಾಧ್ಯತೆ

ಮುಂದೆ ಬನ್ನಿ..ಇನ್ನಾದರೂ ಲಸಿಕೆ ಪಡೆಯಲು ಮುಂದೆ ಬನ್ನಿ

ಮುಂದೆ ಬನ್ನಿ..ಇನ್ನಾದರೂ ಲಸಿಕೆ ಪಡೆಯಲು ಮುಂದೆ ಬನ್ನಿ

1-ffdsf-aa

ಮಂಗಳೂರು: ಮತಾಂತರ ಯತ್ನ ನಾಲ್ವರ ಸಾವಿಗೆ ಕಾರಣವಾಯ್ತೇ?; ಮಹಿಳೆ ವಶಕ್ಕೆ

1-mang-1

ಮಂಗಳೂರು : ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

1-asds-a

ಮಂಗಳೂರು: ವಿದ್ಯುತ್ ಕಂಬಕ್ಕೆ ಬೈಕ್‌ ಢಿಕ್ಕಿ; 18 ರ ತರುಣ ಸಾವು

MUST WATCH

udayavani youtube

ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

udayavani youtube

ಮಲ್ಲಿಗೆ ಕೃಷಿಯಲ್ಲಿ ಯಶಸ್ಸನ್ನು ಕಂಡ ಕರಂಬಳ್ಳಿಯ ಕೃಷಿಕ

udayavani youtube

ಶಿರಸಿ : ಪೂಜೆಗೆಂದು ಕೊರಳಿಗೆ ಹಾಕಿದ ಬಂಗಾರದ ಸರವನ್ನೇ‌ ನುಂಗಿದ ಆಕಳು

udayavani youtube

ಕುಮಾರಸ್ವಾಮಿಯನ್ನ ಸಿಎಂ ಸ್ಥಾನದಲ್ಲಿ ಕೂರಿಸಿ ಕಾಲೆಳೆದದ್ದು ಕಾಂಗ್ರೆಸ್ ನವರೆ : ಸಿಟಿ ರವಿ

udayavani youtube

ಮಂಗಳೂರು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆ

ಹೊಸ ಸೇರ್ಪಡೆ

ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣದಲ್ಲಿ ದಾಖಲೆ: ಪಾಟೀಲ್‌

ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣದಲ್ಲಿ ದಾಖಲೆ: ಪಾಟೀಲ್‌

ಪಾರ್ಟಿಗಳಿಗೆ ಡ್ರಗ್ಸ್‌ ಮಾರಾಟ-ಕೇರಳ ಮೂಲದ ಆರೋಪಿ ಬಂಧನ

ಪಾರ್ಟಿಗಳಿಗೆ ಡ್ರಗ್ಸ್‌ ಮಾರಾಟ-ಕೇರಳ ಮೂಲದ ಆರೋಪಿ ಬಂಧನ

ತಿರುವನಂತಪುರಂ-ಕಾಸರಗೋಡು ರೈಲ್ವೆ ಮಾರ್ಗಕ್ಕೆ ಅನುಮೋದನೆ ನೀಡಿ : ಪಿಣರಾಯಿ ವಿಜಯನ್‌

ತಿರುವನಂತಪುರಂ-ಕಾಸರಗೋಡು ರೈಲ್ವೆ ಮಾರ್ಗಕ್ಕೆ ಅನುಮೋದನೆ ನೀಡಿ : ಪಿಣರಾಯಿ ವಿಜಯನ್‌

ಆನ್‌ ಲೈನ್‌ ಗೇಮಿಂಗ್‌ ಕಂಪನಿ ಬ್ಯಾಂಕ್‌ ಖಾತೆ ಜಪ್ತಿ ಆದೇಶಕ್ಕೆ ಹೈಕೋರ್ಟ್‌ ತಡೆ

ಆನ್‌ ಲೈನ್‌ ಗೇಮಿಂಗ್‌ ಕಂಪನಿ ಬ್ಯಾಂಕ್‌ ಖಾತೆ ಜಪ್ತಿ ಆದೇಶಕ್ಕೆ ಹೈಕೋರ್ಟ್‌ ತಡೆ

ಸಂಚಾರ ವಿಭಾಗದ ಜಂಟಿ ಆಯುಕ್ತರ ಮನೆಯಲ್ಲೆ ಹಣ, ಮೊಬೈಲ್ ಕಳವು

ಸಂಚಾರ ವಿಭಾಗದ ಜಂಟಿ ಆಯುಕ್ತರ ಮನೆಯಲ್ಲೆ ಹಣ, ಮೊಬೈಲ್ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.