ಯೇನಪೊಯ ನರ್ಸಿಂಗ್ ಕಾಲೇಜಿನಲ್ಲಿ ಕಾರ್ಯಾಗಾರ
Team Udayavani, May 5, 2019, 6:00 AM IST
ದೇರಳಕಟ್ಟೆ: ಯೇನಪೊಯ ನರ್ಸಿಂಗ್ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ಶುಶ್ರೂಷಕ ವಿಭಾಗ ಮತ್ತು ಆಕ್ಟ್$Õಯೆನ್ನ ಸಹಯೋಗದಿಂದ “ಮಿಡ್ ವೈಫರಿ ಸಿಮ್ಮುéಲೇಷನ್ ಆ್ಯಂಡ್ ಸ್ಕಿಲ್ಸ್ ಲೀಡಿಂಗ್ ದಿ ವೆ ವಿಥ್ ಕ್ವಾಲಿಟಿ ಕೇರ್ ಕುರಿತಾದ ಕಾರ್ಯಾಗಾರವು ಯೇನಪೊಯ ಆವರಣದಲ್ಲಿ ಜರಗಿತು.
ಯೇನಪೊಯ (ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾಲಯದ) ಕುಲಸಚಿವ ಡಾ.ಗಂಗಾಧರ ಸೋಮಯಾಜಿ ಕಾರ್ಯಾ ಗಾರವನ್ನು ಉದ್ಘಾಟಿಸಿದರು. ಮಣಿಪಾಲ ನರ್ಸಿಂಗ್ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀ ರೋಗ ಶುಶ್ರೂಷಕ ವಿಭಾಗದ ಪ್ರಾಧ್ಯಾಪಕಿ ಡಾಣ ಸೋನಿಯಾ ಆರ್.ಬಿ. ಡಿ’ಸೋಜಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಯೇನಪೊಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾಣ ಲೀನಾ ಕೆ.ಸಿ., ರಾಜ್ಯ ಶುಶ್ರೂಷಕ ಪರಿಷತ್ನ ಅಬ್ಸರ್ವರ್ ತಿಪ್ಪೇಸ್ವಾಮಿ ಡಿ.ಎಂ. ಉಪಸ್ಥಿತರಿದ್ದರು .
ಮಂಗಳೂರಿನ ವಿವಿಧ ನರ್ಸಿಂಗ್ ಕಾಲೇಜಿನ 87 ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ವಿಭಾಗದ ಮುಖ್ಯಸ್ಥೆ ಜಾನೆಟ್ ಪ್ರೀಮಾ ಮಿರಾಂದ ಸ್ವಾಗತಿಸಿದರು. ಕಾರ್ಯದರ್ಶಿ ಕುಮಾರಿ ವಿನಿತಾ ಡಿ’ಸೋಜಾ ವಂದಿಸಿದರು.