ರಾಷ್ಟ್ರ ನಿರ್ಮಾಣದೆಡೆಗೆ ಯುವಶಕ್ತಿ ಉದ್ದೀಪನ: ಸಚಿವ ಕೋಟ

ಬಳಂಜದಲ್ಲಿ ಜಿಲ್ಲಾ ಯುವಜನ ಮೇಳ

Team Udayavani, Jan 19, 2020, 5:55 AM IST

ಬೆಳ್ತಂಗಡಿ: ಸಮಾಜವನ್ನು ಕಟ್ಟುವಾಗ ಅನೇಕ ಸವಾಲುಗಳು ಸಹಜ. ಆದರೆ ವ್ಯಕ್ತಿಗಿಂತ ಮೊದಲು ರಾಷ್ಟ್ರ ಎಂಬ ಭಾವನೆಯನ್ನು ಯುವಸಮುದಾಯದಲ್ಲಿ ಬಿತ್ತುವ ಕಾರ್ಯ ಯುವಜನ ಮೇಳದಿಂದ ಸಾಕಾರಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ದ.ಕ. ಜಿಲ್ಲಾಡಳಿತ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ. ಜಿ.ಪಂ., ಬೆಳ್ತಂಗಡಿ ತಾ.ಪಂ., ಗ್ರಾ.ಪಂ. ಬಳಂಜ, ಜಿಲ್ಲಾ ಯುವ ಜನ ಒಕ್ಕೂಟ, ತಾಲೂಕು ಯುವಜನ ಒಕ್ಕೂಟ, ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ವತಿಯಿಂದ ಬಳಂಜ ಶ್ರೀ ಉಮಾಮಹೇಶ್ವರ ಯುವಕ ಮಂಡಲದ ಆಶ್ರಯದಲ್ಲಿ ಶನಿವಾರ ಬಳಂಜ ಉ.ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಷ್ಟ್ರಭಕ್ತಿ ಮೂಡಿಸಲಿ
ಯುವಜನ ಮೇಳ ರಾಷ್ಟ್ರಭಕ್ತಿ ಮೂಡಿಸುವ ಸಮ್ಮೇಳನವಾಗಬೇಕಿದೆ. ಯುವಸಬಲೀಕರಣ ಅಧಿಕಾರಿಗಳ ಹುದ್ದೆ ತಾಲೂಕು ಮಟ್ಟದಲ್ಲಿ ಕೊರತೆಬಂದಿದ್ದು ಇದನ್ನು ಭರ್ತಿಗೊಳಿಸಬೇಕು ಎಂಬ ಬೇಡಿಕೆಯೂ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಸಂಸ್ಕೃತಿ ಸಂದೇಶ ಮತ್ತಷ್ಟು ಜನರನ್ನು ತಲುಪಲು ಮುಂದಿನ ದಿನಗಳಲ್ಲಿ ಯುವಜನ ಮೇಳ ತಾಲೂಕು ಮಟ್ಟದಲ್ಲಿ ನಡೆಯಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್‌ ಪೂಂಜ ಮಾತನಾಡಿ, ತಾಲೂಕಿಗೆ ಸಿಕ್ಕ ಅವಕಾಶವನ್ನು ಬಳಂಜ, ತೆಂಕಕಾರಂದೂರು, ನಾಲ್ಕೂರು ಗ್ರಾಮಸ್ಥರು ಹಾಗೂ ಸ್ತ್ರೀಶಕ್ತಿ ಯಶಸ್ವಿಯಾಗಿಸಿದೆ ಎಂದರು. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ ಶುಭ ಹಾರೈಸಿದರು.

ಗಣ್ಯರಾದ ಕೊರಗಪ್ಪ ನಾಯ್ಕ, ತುಂಗಪ್ಪ ಬಂಗೇರ, ನಮಿತಾ, ಸೌಮ್ಯಲತಾ, ಮಮತಾ ಎಂ. ಶೆಟ್ಟಿ, ವಿನೂಷಾ ಪ್ರಕಾಶ್‌, ಕೇಶವತಿ, ವಸಂತಿ, ಅಮಿತಾ, ದೇವಕಿ ಕೊರಗಪ್ಪ ನಾಯ್ಕ, ಯಶೋಧರ ಶೆಟ್ಟಿ, ರೇವತಿ, ಮಂಜುಳಾ, ಕೇಶವ ಗೌಡ ಬೆಳಾಲು, ಸುರೇಶ್‌ ರೈ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ವಿನು ಬಳಂಜ, ಯೋಗೀಶ್‌ ಆರ್‌. ಉಪಸ್ಥಿತರಿದ್ದರು.

ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್‌ ಕುಮಾರ್‌ ಕಾಪಿನಡ್ಕ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್‌ ಡಿ’ಸೋಜಾ ಪ್ರಸ್ತಾವನೆಗೈದರು. ಶಿಕ್ಷಕ ಅಜಿತ್‌ ಕುಮಾರ್‌ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿ ಪ್ರಭಾಕರ ನಾರಾವಿ ವಂದಿಸಿದರು.

3 ಲಕ್ಷ ರೂ. ನೆರವು
ಕರಾವಳಿ ನಿವೃತ್ತ ವಾಯುಸೇನಾ ಅಧಿಕಾರಿಗಳಿಂದ ಬೆಳ್ತಂಗಡಿ ಕಾಳಜಿ ರಿಲೀಫ್‌ ಫಂಡ್‌ಗೆ 3 ಲಕ್ಷ ರೂ.ಗಳನ್ನು ಉಸ್ತುವಾರಿ ಸಚಿವರ ಮೂಲಕ ಶಾಸಕ ಹರೀಶ್‌ ಪೂಂಜ ಅವರಿಗೆ ಹಸ್ತಾಂತರಿಸಲಾಯಿತು.

ಪೌರತ್ವ ಕಾಯಿದೆ ತಿದ್ದುಪಡಿಯಿಂದ ದೇಶದ ಅಥವಾ ರಾಜ್ಯದ ಯಾವುದೇ ಪ್ರಜೆಗೆ ಅನ್ಯಾಯವಾಗುವುದಿಲ್ಲ. ಅದರ ಸೂಕ್ಷ್ಮತೆಯನ್ನು ಪ್ರತಿಯೊಬ್ಬ ಪ್ರಜೆ ಅರ್ಥೈಸಿಕೊಂಡು ಸಹಕಾರ ನೀಡಬೇಕು ಎಂದು ಸರಕಾರದ ಸಚಿವನಾಗಿ ವಿನಂತಿಸುತ್ತಿದ್ದೇನೆ.
– ಕೋಟ ಶ್ರೀನಿವಾಸ ಪೂಜಾರಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ