
ಕೋವಿಡ್ ಗೆದ್ದು ಬಂದ ದಾಸನೂರ ಕುಟುಂಬದ ಹನ್ನೊಂದು ಸದಸ್ಯರು
Team Udayavani, Jun 10, 2021, 5:06 PM IST

ಹುಬ್ಬಳ್ಳಿ: ಇಲ್ಲಿನ ಅಮರಗೋಳದ ಒಂದೇ ಕುಟುಂಬದ 11 ಸದಸ್ಯರು ಕೋವಿಡ್ ಗೆದ್ದು ಬಂದಿದ್ದಾರೆ. ಧೈರ್ಯಗೆಡದೆ, ಭೀತಿಗೊಳಗಾಗದೆ ಸೂಕ್ತ ಚಿಕಿತ್ಸೆ ಪಡೆದರೆ ಕೊರೊನಾ ಗೆದ್ದು ಬರಬಹುದು ಎಂಬುದಕ್ಕೆ ಈ ಕುಟುಂಬ ಮಾದರಿಯಾಗಿದೆ.
ಇಲ್ಲಿನ ದಾಸನೂರ ಸಮೂಹ ಸಂಸ್ಥೆಯ ಪಾಲುದಾರ ಹಾಗೂ ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಉಳವಪ್ಪ ದಾಸನೂರ ಕುಟುಂಬದ 11 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಉಳವಪ್ಪ ದಾಸನೂರ(50) ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಇವರ ಪತ್ನಿ ರೂಪಾ ದಾಸನೂರ(45), ಮಕ್ಕಳಾದ ಮೇಘಾ (18), ಸ್ಪಂದನ(13), ಸುಯೋಗ(9) ಹಾಗೂ ಕುಟುಂಬದ ಸದಸ್ಯರಾದ ಹರೀಶ ದಾಸನೂರ(24), ವರ್ಷಾ ದಾಸನೂರ (20), ಶ್ವೇತಾ ದಾಸನೂರ(31),ರೇಖಾ ದಾಸನೂರ(52), ವಿದ್ಯಾ ದಾಸನೂರ (28), ಚೇತನ (25) ಅವರು ಕೊವೀಡ್ ಸೋಂಕಿಗೆ ಒಳಗಾಗಿದ್ದರೂ ಹೋಮ್ ಕ್ವಾರಂಟ್‌ನಲ್ಲಿದ್ದು, ಮಹಾಮಾರಿ ವಿರುದ್ಧ ಗೆಲುವು ಸಾಧಿ ಸಿದ್ದಾರೆ.
ಡಾ|ಸಂದೀಪ ವೈ.ಆರ್., ಡಾ| ರಾಘವೇಂದ್ರ ಬೆಳಗಾಂವಕರ ಅವರು ಚಿಕಿತ್ಸೆ ನೀಡಿದ್ದರು. ಸೋಂಕಿತರು ಮೇ 15ರಿಂದ 30ರವರೆಗೆ ಹೋಮ್ ಕ್ವಾರಂಟೈನ್‌ನಲ್ಲಿದ್ದರು. ಮೇ 31ರಂದು ಎಲ್ಲರಿಗೂ ಮರು ಪರೀಕ್ಷೆ ನಡೆಸಲಾಗಿದ್ದು, ಕೊವೀಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆ ಮೂಲಕ ಅಮರಗೋಳದ ಗ್ರಾಮಸ್ಥರಲ್ಲಿ ಕೋವಿಡ್ ಭಯ ಹೊಡೆದೋಡಿಸುವಲ್ಲಿ ಈ ಕುಟುಂಬದವರು ಮಾದರಿಯಾಗಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ: ನಾಗಬನದಲ್ಲಿ ಶ್ರೀಗಂಧ ಮರ ಕಳವು… ಆರೋಪಿ ಬಂಧನ, ಸೊತ್ತು ವಶ

ಬಾಗಲಕೋಟೆ: ತೋಟಗಾರಿಕೆ ವಿವಿಗೆ ನೀರಿನ ಸ್ವಾವಲಂಬನೆ

ಲಕ್ಕುಂಡಿ ಉತ್ಸವಕ್ಕೆ ಸಿಎಂ ಬೊಮ್ಮಾಯಿ ಅವರಿಂದ ₹1 ಕೋಟಿ ಅನುದಾನ ಬಿಡುಗಡೆ

ಕೊಡಗು ಜಿಲ್ಲಾಡಳಿತದ ಪ್ರಯತ್ನಕ್ಕೆ ಸಂದ ಜಯ: ಕುವೈತ್ ನಲ್ಲಿ ಸಿಲುಕಿದ್ದ ಮಹಿಳೆ ಸುರಕ್ಷಿತವಾಗಿ ತಾಯ್ನಾಡಿಗೆ

ಎಲ್ಲಿ ಬೇಕಾದಲ್ಲಿ ಸ್ಪರ್ಧೆ ಮಾಡಲು ನನ್ನದು ಟೂರಿಂಗ್ ಟಾಕೀಸ್ ಅಲ್ಲ: ಕುಮಾರಸ್ವಾಮಿ
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
