ಬಿಜೆಪಿ ತಂಡ ಬಾಗಲಕೋಟೆಗೆ

•ನೆರೆ ಸಂತ್ರಸ್ತರಿಗಾಗಿ ಸಂಗ್ರಹಿಸಿದ ಅಗತ್ಯ ಸಾಮಗ್ರಿ ವಿತರಿಸುವ ಉದ್ದೇಶ

Team Udayavani, Aug 22, 2019, 10:14 AM IST

ದಾವಣಗೆರೆ: ನೆರೆ ಸಂತ್ರಸ್ತರ ಪರಿಹಾರ ಸಾಮಗ್ರಿಗಳೊಂದಿಗೆ ಬಿಜೆಪಿ ಯುವ ಮೋರ್ಚಾ ಮುಖಂಡರು.

ದಾವಣಗೆರೆ: ಮಳೆ, ಪ್ರವಾಹದಿಂದ ನಲುಗಿರುವ ಸಂತ್ರಸ್ತರಿಗೆ ವಿತರಣೆಗೆ 20 ಲಕ್ಷ ರೂ. ಮೌಲ್ಯದ ದಿನಸಿ, ಬಿಸ್ಕತ್‌, ನೀರಿನ ಬಾಟಲಿ, ಮಹಿಳೆ ಮತ್ತು ಮಕ್ಕಳ ಬಟ್ಟೆ, ಬ್ಲ್ಯಾಂಕೆಟ್, ಫಿನಾಯಿಲ್, ಔಷಧಿ, ಜಾನುವಾರುಗಳಿಗೆ ಅಗತ್ಯ ವಸ್ತುಗಳೊಂದಿಗೆ ಬುಧವಾರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬಾಗಲಕೋಟೆ ಜಿಲ್ಲೆಯ ತೇರದಾಳ್‌, ಜಮಖಂಡಿ ಇತರೆ ಭಾಗಕ್ಕೆ ತೆರಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ್‌, ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌, ವಿಧಾನ ಪರಿಷತ್ತು ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್. ಶಿವಯೋಗಿಸ್ವಾಮಿ, ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಎಚ್.ಸಿ. ಜಯಮ್ಮ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಸಂಗ್ರಹಿಸಿದ ಅಗತ್ಯ ಸಾಮಗ್ರಿ ವಿತರಣೆಗೆ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್‌ ಭಟ್ ನೇತೃತ್ವದ 15 ಜನರ ತಂಡ ಪ್ರಯಾಣ ಬೆಳೆಸಿತು.

ತಂಡವನ್ನ ಬೀಳ್ಕೊಟ್ಟು ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಮಾತನಾಡಿ, ಉತ್ತರ ಕರ್ನಾಟಕದಲ್ಲಿನ ನೆರೆಯಿಂದ ಸಂತ್ರಸ್ತಗೊಂಡವರ ಪರಿಹಾರಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ್‌, ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ನೇತೃತ್ವದಲ್ಲಿ ದಾವಣಗೆರೆ ವಿವಿಧ ಭಾಗದಲ್ಲಿ ದೇಣಿಗೆ ಸಂಗ್ರಹಿಸಲಾಯಿತು. ದಾನಿಗಳ ಊರೆಂಬ ಖ್ಯಾತಿಯ ದಾವಣಗೆರೆಯಲ್ಲಿ 20 ಲಕ್ಷ ಮೌಲ್ಯದ ದಿನಸಿ, ಬಿಸ್ಕತ್‌, ನೀರಿನ ಬಾಟಲಿ, ಮಹಿಳೆ ಮತ್ತು ಮಕ್ಕಳ ಬಟ್ಟೆ, ಬ್ಯಾಂಕೆಂಟ್, ಫಿನಾಯಿಲ್, ಔಷಧಿ, ಜಾನುವಾರುಗಳಿಗೆ ಅಗತ್ಯ ವಸ್ತುಗಳ ಜೊತೆಗೆ 5 ಲಕ್ಷ ನಗದು (2.75 ಲಕ್ಷದ ಚೆಕ್‌ ಒಳಗೊಂಡಂತೆ) ಸಂಗ್ರಹವಾಗಿದೆ. ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳಿಸಿಕೊಡಲಾಗುವುದು ಎಂದು ತಿಳಿಸಿದರು. ದಾನಿಗಳಿಂದ ಸಂಗ್ರಹಿಸಿದಂತಹ ಅಗತ್ಯ ವಸ್ತುಗಳನ್ನು ನೇರವಾಗಿ ಸಂತ್ರಸ್ತರಿಗೆ ತಲುಪಿಸುವ ಉದ್ದೇಶದಿಂದ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್‌ ನೇತೃತ್ವದಲ್ಲಿ 15 ಜನರ ತಂಡ ಜಮುಖಂಡಿ, ತೇರದಾಳ್‌ ಇತರೆ ಭಾಗಕ್ಕೆ ತೆರಳಲಿದೆ. ಬಹಳ ಅಚ್ಚುಕಟ್ಟಾಗಿ ಪ್ರತಿಯೊಬ್ಬ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನ ನೀಡಿದಂತಹ ದಾವಣಗೆರೆಯ ಪ್ರತಿಯೊಬ್ಬರು, ವ್ಯಾಪಾರಸ್ಥರು, ಸಂಘ- ಸಂಸ್ಥೆಗಳವರಿಗೆ ಜಿಲ್ಲಾ ಬಿಜೆಪಿ ಕೃತಜ್ಞತೆ ಸಲ್ಲಿಸುತ್ತದೆ. ದಾನಿಗಳ ಹೃದಯ ವಿಶಾಲತೆಗೆ ಸದಾ ಆಭಾರಿ ಎಂದು ಹೇಳಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಲೋಕಿಕೆರೆ ನಾಗರಾಜ್‌, ಟಿಂಕರ್‌ ಮಂಜಣ್ಣ, ಶಿವನಗೌಡ ಪಾಟೀಲ್, ಗುರು ಇತರರು ಇದ್ದರು.

ಗೌತಮ್‌ ಜೈನ್‌, ಶಾಮನೂರು ಹರೀಶ್‌, ಗುತ್ತೂರು ಮಂಜುನಾಥ್‌, ಎಂ.ಬಿ. ಪ್ರಕಾಶ್‌, ಜಗದೀಶ್‌, ಸನ್ನಿ ಜೈನ್‌, ಕಿರಣ್‌ ಜೈನ್‌, ರಾಜು ನೀಲಾನಹಳ್ಳಿ ಇತರರು ಜಮಖಂಡಿ, ತೇರದಾಳಕ್ಕೆ ತೆರಳಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಹೂವಿನಹಿಪ್ಪರಗಿ: ಸರಕಾರ ಸಾಮಾಜಿಕ ಭದ್ರತೆಯಡಿ ಬಡ ಮತ್ತು ನಿರ್ಗತಿಕರ ಕಲ್ಯಾಣಕ್ಕಾಗಿ ಪಿಂಚಣಿ ಯೋಜನೆ ಮೂಲಕ ಆಸರೆ ಕಲ್ಪಿಸುವ ನಿಟ್ಟಿನಲ್ಲಿ ಸಂಧ್ಯಾ ಸುರಕ್ಷ,...

  • ಮಂಗಳೂರು: ನಗರದ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಕೃಷ್ಣ ಮೃಗದ ಚರ್ಮ ಮತ್ತು ಕೊಂಬು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ವಿಶೇಷ...

  • ತುಮಕೂರು: ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳಿಂದ ಅವಾಂತರಗಳು ಸೃಷ್ಟಿಯಾಗುತ್ತಿದ್ದು, ಇದರಿಂದ ನಾಗರಿಕರಿಗೆ ತೀವ್ರ ಸಮಸ್ಯೆಗಳು...

  • ಹುಳಿಯಾರು: ಹುಳಿಯಾರು ಹೋಬಳಿಯ ಕುರಿಹಟ್ಟಿ ಪ್ರದೇಶದಲ್ಲಿ ರಾಗಿ ಪೈರು ತಿನ್ನುವ ಹುಳುಗಳ ಕಾಟ ಆರಂಭವಾಗಿದ್ದು, ಉತ್ತಮ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರನ್ನು...

  • ಮಾಗಡಿ: ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಗೆ ಬಿದಿರು ಮೆಳೆ ಬೆಳೆಯುವುದು ಅವಶ್ಯವಿದೆ ಎಂದು ಕೃಷಿಕ ಸಮಾಜದನವದೆಹಲಿ ಪ್ರತಿನಿಧಿ ಬೆಳಗವಾಡಿ ಸತೀಶ್‌ ಸಲಹೆ ನೀಡಿದರು. ಬೆಂಗಳೂರಿನ...

ಹೊಸ ಸೇರ್ಪಡೆ