ಎಲ್ಲ ಆಶಯ ಈಡೇರಿಕೆ

Team Udayavani, May 8, 2018, 4:14 PM IST

ದಾವಣಗೆರೆ: ಜನತೆಯ ಆಶಯದಂತೆ ಕಾಂಗ್ರೆಸ್‌ ಸಿದ್ಧಪಡಿಸಿರುವ ಪ್ರಣಾಳಿಕೆಯಲ್ಲಿರುವಂತೆ ಎಲ್ಲಾ ಆಶಯಗಳನ್ನು ಸರ್ಕಾರ ಈಡೇರಿಸಲಿದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

ಸೋಮವಾರ ಮಹಾನಗರ ಪಾಲಿಕೆ 4, 12ನೇ ವಾರ್ಡ್‌ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಈ ಹಿಂದೆ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಗಿನ ಸರ್ಕಾರ ಈಡೇರಿಸಿದೆ. ಜನರ ಆಶಯದಂತೆ 2018ರ ಚುನಾವಣಾ ಪ್ರಣಾಳಿಕೆ ತಯಾರಿಸಲಾಗಿದೆ. ಈ ಪ್ರಣಾಳಿಕೆಯ ಎಲ್ಲಾ ಅಂಶಗಳನ್ನು ಈಡೇರಿಸಲಾಗುವುದು ಎಂದರು. 

ಮಹಾನಗರ ಪಾಲಿಕೆ ಸದಸ್ಯರಾದ ಎ.ಬಿ. ರಹೀಂ, ಅಲ್ತಾಫ್‌ ಹುಸೇನ್‌, ದಿನೇಶ್‌ ಕೆ.ಶೆಟ್ಟಿ, ಮಾಜಿ ಸದಸ್ಯ ಎನ್‌.ಕೆ.ಇಸ್ಮಾಯಿಲ್‌, ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್‌, ಉದ್ಯಮಿ ರವಿ ಇಳಂಗೋವ್‌, ಡಾ| ದೀಪಕ್‌ ಬೋಂದಾಡೆ, ನಗರಸಭೆ ಮಾಜಿ ಸದಸ್ಯ ಉಸ್ಮಾನ್‌, ತಿಮ್ಮರಾಜು, ಸಿಮೇಎಣ್ಣೆ ಪರಮೇಶ್‌, ರುದ್ರಮ್ಮ, ಅಲ್ಲಾವಲಿ ಘಾಜಿಖಾನ್‌, ಸೈಯದ್‌ ಚಾರ್ಲಿ ಇತರರು ಇದ್ದರು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ