ಕಳ್ಳರ ಬಂಧನ; 4 ಲಕ್ಷ ರೂ. ಮೌಲ್ಯದ 10 ಬೈಕ್‌ ವಶ


Team Udayavani, Apr 7, 2018, 4:25 PM IST

DAV-3.jpg

ದಾವಣಗೆರೆ: ಬೈಕ್‌ ಕಳ್ಳತನದ ಆರೋಪ ದಡಿ ಮೂವರನ್ನು ಬಂಧಿಸಿರುವ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು, ಆರೋಪಿಗಳಿಂದ 4 ಲಕ್ಷ ರೂ. ಬೆಲೆ ಬಾಳುವ 10 ಬೈಕ್‌ ವಶಪಡಿಸಿಕೊಂಡಿದ್ದಾರೆ. ಜಾಲಿ ನಗರ ಶಿವಾಲಿ ಬಾರ್‌ ಹಿಂಭಾ ಗದ ನಿವಾಸಿ ನವೀನ್‌ಕುಮಾರ್‌ (21), ಭಾರತ್‌ ಕಾಲೋನಿ 13ನೇ ತಿರುವಿನ ನಿವಾಸಿ ರಾಘು (20) ಬಂಧಿತರು. ಇನ್ನೋರ್ವ ಬಾಲಕನಾಗಿದ್ದಾನೆ.

ತಾಲೂಕಿನ ಆನಗೋಡು ಗ್ರಾಮದ ಮನೆಯೊಂದರ ಮುಂದಿದ್ದ ಬೈಕ್‌ ಬಳಿ ಅನುಮಾನಾಸ್ಪದವಾಗಿ ನಿಂತಿದ್ದವರನ್ನು ವಿಚಾರಿಸಿದಾಗ, ಅವರು ಪೆಟ್ರೋಲ್‌ ಕಳ್ಳತನ ಮಾಡಲು ಬಂದಿದ್ದಾಗಿ ಹೇಳಿದರು.

ಆದರೆ, ಠಾಣೆಗೆ ಕರೆತಂದು ಮತ್ತೂಮ್ಮೆ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಬೈಕ್‌ ಕಳ್ಳತನ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ದಾವಣಗೆರೆಯ ಕೆಟಿಜೆ ನಗರ, ವಿದ್ಯಾನಗರ, ಚಿತ್ರದುರ್ಗ, ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಕುಮಾರ ಪಟ್ಟಣಂ, ಶಿವಮೊಗ್ಗ ಮುಂತಾದ ಕಡೆ ಬೈಕ್‌ ಕಳ್ಳತನ ಮಾಡಿದ್ದನ್ನು ಮಾಹಿತಿ ನೀಡಿದ್ದಾರೆ.

ಗ್ರಾಮಾಂತರ ಉಪ-ವಿಭಾಗದ ಡಿಎಸ್‌ಪಿ ಮಂಜುನಾಥ್‌ ಗಂಗಲ್‌ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಎಚ್‌.ಗುರುಬಸವರಾಜ, ಗ್ರಾಮಾಂತರ ಪೊಲೀಸ್‌ ಠಾಣೆ ಪಿಎಸ್‌ಐ ಶಿವಕುಮಾರ್‌, ಎಎಸ್‌ಐ ಜೋವಿತ್‌ ರಾಜ್‌, ಸಿಬ್ಬಂದಿ ಚಂದ್ರಶೇಖರ್‌, ವಿಶ್ವನಾಥ, ಪ್ರಕಾಶ್‌, ಜಯ್ಯಪ್ಪ, ಅಣ್ಣಯ್ಯ, ಮಾರುತಿ ಕಾರ್ಯಾಚರಣೆಯಲ್ಲಿ ಭಾಗಿ ಯಾಗಿದ್ದರು ಎಂದು ಪ್ರಕಟಣೆ ತಿಳಿಸಿದೆ.

60 ಸಾವಿರ ನಗದು, ಬೆಳ್ಳಿ ವಸ್ತು ಕಳ್ಳತನ 
ದಾವಣಗೆರೆ: ರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು 60 ಸಾವಿರ ನಗದು, ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿದ ಘಟನೆ ನ್ಯಾಮತಿ ಪಟ್ಟಣದಲ್ಲಿ ನಡೆದಿದೆ. ಆಶಾ ರುದ್ರೇಶಪ್ಪ ಎಂಬುವರ ಮನೆಯಲ್ಲಿ ಈ ಕೃತ್ಯ ಎಸಗಲಾಗಿದೆ. ಪಟ್ಟಣ ನಂದಿ ಸಹಕಾರ ಸಂಘದಲ್ಲಿ ಕೆಲಸ ಆಶಾ ಪಿಗ್ಮಿ ಸಂಗ್ರಹಿಸಿದ್ದ 43 ಸಾವಿರ, ತಮ್ಮ ಸ್ವಂತ 17 ಸಾವಿರ ರೂ. ಬೀರುವಿನಲ್ಲಿಟ್ಟು ಕೆಲಸಕ್ಕೆ ಹೋಗಿದ್ದರು. ಇತ್ತ ಮಕ್ಕಳು ಸಹ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಮನೆಗೆ ನುಗ್ಗಿರುವ ಕಳ್ಳರು ಹಣದ ಜೊತೆಗೆ ಬೆಳ್ಳಿ ವಸ್ತುಗಳನ್ನು ದೋಚಿದ್ದಾರೆ. ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

Covid test

ಇಂದೂ ರಾಜ್ಯದಲ್ಲಿ 50  ಸಾವಿರದ ಸನಿಹದಲ್ಲಿ ಕೋವಿಡ್ ಕೇಸ್ : 22 ಸಾವು

1-fdsfsdf

35 ಯೂ ಟ್ಯೂಬ್ ಚಾನಲ್‌ಗಳನ್ನು ಬ್ಲಾಕ್ ಮಾಡಿದ ಭಾರತ ಸರಕಾರ

1-asfsd

ಬಂಡಾಯ ಅಭ್ಯರ್ಥಿಯಾದ ಪರ್ರಿಕರ್ ಪುತ್ರ : ನಾಚಿಕೆಗೇಡು ಎಂದ ಉತ್ಪಲ್

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ: ಸಚಿವ ಭಗವಂತ್ ಖೂಬಾ

congress

ವೀಕೆಂಡ್ ಕರ್ಫ್ಯೂ ವಾಪಸ್ : ಟ್ವೀಟ್ ಮೂಲಕ ಕಾಂಗ್ರೆಸ್ ಆಕ್ರೋಶ

nirani

ಹೌದು,ನಾನು ಸೂಟ್ ಹೊಲಿಸಿಕೊಂಡಿದ್ದೇನೆ:ಯತ್ನಾಳ್ ಗೆ ನಿರಾಣಿ ತಿರುಗೇಟು

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 427 ಅಂಕ ಇಳಿಕೆ; ನಿಫ್ಟಿ 17,600 ಅಂಕಗಳ ಮಟ್ಟಕ್ಕೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 427 ಅಂಕ ಇಳಿಕೆ; ನಿಫ್ಟಿ 17,600 ಅಂಕಗಳ ಮಟ್ಟಕ್ಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

davanagere news

ಜಯದೇವ ಆಸ್ಪತ್ರೆ ಸ್ಥಾಪನೆ ಪ್ರಕ್ರಿಯೆ ಶುರು

davanagere news

ವಸತಿ ಸೌಲಭ್ಯ: ಮರು ಭೂಸ್ವಾಧೀನ ಪ್ರಸ್ತಾವನೆ ಸಲ್ಲಿಸಿ

davanagere news

ವೇಮನ ಜಯಂತಿ ಸರಳ ಆಚರಣೆ

honnali news

ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ನಲ್ಲಿಸಂಪರ್ಕ: ರೇಣು

davanagere news

979 ಸೋಂಕಿತರಿಗೆ ಹೋಂ ಐಸೋಲೇಷನ್‌

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

Covid test

ಇಂದೂ ರಾಜ್ಯದಲ್ಲಿ 50  ಸಾವಿರದ ಸನಿಹದಲ್ಲಿ ಕೋವಿಡ್ ಕೇಸ್ : 22 ಸಾವು

1-fdsfsdf

35 ಯೂ ಟ್ಯೂಬ್ ಚಾನಲ್‌ಗಳನ್ನು ಬ್ಲಾಕ್ ಮಾಡಿದ ಭಾರತ ಸರಕಾರ

1-asfsd

ಬಂಡಾಯ ಅಭ್ಯರ್ಥಿಯಾದ ಪರ್ರಿಕರ್ ಪುತ್ರ : ನಾಚಿಕೆಗೇಡು ಎಂದ ಉತ್ಪಲ್

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ: ಸಚಿವ ಭಗವಂತ್ ಖೂಬಾ

ದ್ವೇಷ-ಅಸೂಯೆಯಿಂದ ಸಾಧನೆ ಅಸಾಧ್ಯ

ದ್ವೇಷ-ಅಸೂಯೆಯಿಂದ ಸಾಧನೆ ಅಸಾಧ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.