ನಿಲ್ಲದ ಹಿಜಾಬ್‌ ವಿವಾದ: ಪ್ರತಿಭಟನೆ


Team Udayavani, Feb 18, 2022, 2:34 PM IST

ballari news

ಬಳ್ಳಾರಿ: ನಗರದ ಸರಳಾದೇವಿ ಸರ್ಕಾರಿ ಪ್ರಥಮದರ್ಜೆ ಪದವಿ ಕಾಲೇಜಿನಲ್ಲಿ ಬುಧವಾರಆರಂಭವಾಗಿದ್ದ ಹಿಜಾಬ್‌ ವಿವಾದ ಗುರುವಾರವೂಮುಂದುವರೆದಿದ್ದು, ಇಲ್ಲಿನ ಎಎಸ್‌ಎಂ ಕಾಲೇಜಿಗೂಕಾಲಿಟ್ಟಿತು. ಕಾಲೇಜಿನ ಪ್ರಾಚಾರ್ಯರು, ಪೊಲೀಸರು,ಮುಸ್ಲಿಂ ಮುಖಂಡರು ಮಧ್ಯಪ್ರವೇಶಿಸುವ ಮೂಲಕಪರಿಸ್ಥಿತಿಯನ್ನು ತಿಳಿಗೊಳಿಸಿ, ಪ್ರತಿಭಟನೆ ನಡೆಸುತ್ತಿದ್ದವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಚದುರಿಸಿದರು.

ನಗರದ ಸರಳಾದೇವಿ ಸರ್ಕಾರಿ ಪ್ರಥಮದರ್ಜೆ ಪದವಿ ಕಾಲೇಜಿನಲ್ಲಿ ಆಂತರಿಕ ಪರೀಕ್ಷೆಗಳುನಡೆಯುತ್ತಿರುವ ಹಿನ್ನೆಲೆಯಲ್ಲಿ ಗುರುವಾರವೂಹಿಜಾಬ್‌ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಲ್ಲಿಕೆಲವರು ಹಿಜಾಬ್‌ ತೆಗೆಯಲು ಒಪ್ಪಿ ಪರೀಕ್ಷೆಬರೆಯಲು ಒಳಗೆ ತೆರಳಿದರೆ, ಕೆಲವರು ನಿರಾಕರಿಸಿದಕೆಲ ವಿದ್ಯಾರ್ಥಿನಿಯರನ್ನು ಗೇಟ್‌ ಹೊರಗೆತಡೆಯಲಾಯಿತು. ಕಾಲೇಜು ಹೊರಗುಳಿದಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆಪೋಷಕರು, ವಿವಿಧ ಸಂಘಟನೆಗಳ ಯುವಕರುಸಾಥ್‌ ನೀಡಿದ ಹಿನ್ನೆಲೆಯಲ್ಲಿ ದಿಢೀರ್‌ ಪ್ರತಿಭಟನೆನಡೆಸಿ, ಕಾಲೇಜು ಪ್ರಾಚಾರ್ಯರ ವಿರುದ್ಧ ವಿವಿಧಘೋಷಣೆಗಳನ್ನು ಕೂಗಿದರು. ಹೈಕೋರ್ಟ್‌ನೀಡಿರುವ ಮಧ್ಯಂತರ ಆದೇಶದ ಪ್ರತಿಯನ್ನುತೋರಿಸುವಂತೆ ಪಟ್ಟು ಹಿಡಿದರು.ಈ ವೇಳೆ ಮಧ್ಯ ಪ್ರವೇಶಿಸಿ ಪೊಲೀಸರುಮತ್ತು ಪ್ರತಿಭಟನಾಕಾರರ ನಡುವೆ ಕೆಲಹೊತ್ತುವಾಗ್ವಾದ ನಡೆಯಿತು.

ವಿಕೋಪಕ್ಕೆ ತಿರುಗುವಪರಿಸ್ಥಿತಿ ನಿರ್ಮಾಣವಾಯಿತು. ಯುವಕರನ್ನುಬಂಧಿ ಸಲು ಪೊಲೀಸರು ಸಜ್ಜಾಗುತ್ತಿದ್ದಂತೆ ಮುಸ್ಲಿಂಸಮುದಾಯದ ಮುಖಂಡರು, ವಕೀಲರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈನಡುವೆ ಪ್ರಾಚಾರ್ಯ ಹೇಮಣ್ಣ ಅವರು, ಹೈಕೋರ್ಟ್‌ಆದೇಶದ ಪ್ರತಿಯನ್ನು ತಂದು ವಿದ್ಯಾರ್ಥಿನಿಯರುಅವರ ಬೆಂಬಲಿತ ಪೋಷಕರು, ಪ್ರತಿಭಟನಾಕಾರರಿಗೆವಿವರಿಸಿ ಮನವರಿಕೆ ಮಾಡಿಕೊಟ್ಟರು. ಮುಸ್ಲಿಂಮುಖಂಡರು ಸಹ ಕಾನೂನು ಎಲ್ಲರಿಗೂ ಒಂದೆ.ನಾವು ಈ ರೀತಿ ಮಾಡುವುದು ತಪ್ಪು. ನಾವು ಸಹಕಾನೂನಾತ್ಮಕವಾಗಿ ಹೋರಾಟ ಮಾಡೋಣ ಎಂದುಮನವರಿಕೆ ಮಾಡಿಕೊಟ್ಟರು.

ಇದರಿಂದ ಪರಿಸ್ಥಿತಿತಿಳಿಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲರನ್ನೂಚದುರಿಸಿ ವಾಪಸ್‌ ಕಳುಹಿಸಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದಮುಸ್ಲಿಂ ಮುಖಂಡರು, ವಕೀಲರಾದ ಮಹ್ಮದ್‌ಯೂಸೂಫ್‌, ಮಹ್ಮದ್‌ ಅಲಿ ಮುಲ್ಕಿ, ರೋಷನ್‌ಬಾಷಾ ಅವರು, ಹಿಜಾಬ್‌ ಸಂಬಂಧ ಹೈಕೋರ್ಟ್‌ಮಧ್ಯಂತರ ಆದೇಶ ಹೊರಡಿಸಿದೆ. ಕಾನೂನುಎಲ್ಲರಿಗೂ ಒಂದೇ. ನಾವು ಕಾನೂನು ಹೊರತಾಗಿಲ್ಲ. ಯಾರಿಗೂ ಅನ್ಯಾಯ ಆಗಬಾರದು.

ಪರೀಕ್ಷೆಯಿಂದಹೊರಗುಳಿದ ವಿದ್ಯಾರ್ಥಿನಿಯರಿಗೆ ಪರ್ಯಾಯವ್ಯವಸ್ಥೆ ಮಾಡುವುದಾಗಿ ಪ್ರಾಚಾರ್ಯರುಭರವಸೆ ನೀಡಿದ್ದಾರೆ. ಬಳ್ಳಾರಿ ಶಾಂತವಾಗಿದೆ. ಎಲ್ಲಧರ್ಮದವರು ಸೌಹಾರ್ದಯುತವಾಗಿದ್ದಾರೆ. ಹಾಗೆಇರಬೇಕು ಎಂದು ಕೋರುತ್ತೇವೆ. ಬಳ್ಳಾರಿಯಲ್ಲಿಈವರೆಗೂ ಕೋಮುಗಲಭೆ ನಡೆದಿಲ್ಲ. ನಾವೆಲ್ಲರೂಚೆನ್ನಾಗಿದ್ದೇವೆ. ಹಿಜಾಬ್‌ ಒಂದು ರಾಜಕೀಯಅಜೆಂಡಾ ಎಂಬುದು ಎಲ್ಲರಿಗೂ ಗೊತ್ತು. ಈವಿವಾದರಿಂದ ಸಾಮಾನ್ಯ ವರ್ಗದ ಜನರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ತಿಳಿಸಿದರು.

ಕಾಲೇಜು ಪ್ರಾಚಾರ್ಯ ಪ್ರೊ| ಹೇಮಣ್ಣಮಾತನಾಡಿ, ಆಂತರಿಕ ಪರೀಕ್ಷೆ ಬರೆಯಲು ಎಲ್ಲರಂಗೆಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದಿದ್ದರು.ಈ ಪೈಕಿ 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರುಹಿಜಾಬ್‌ ತೆಗೆಯಲು ಒಪ್ಪಿ ಒಳಬಂದು ಪರೀಕ್ಷೆಗೆಹಾಜರಾಗಿದ್ದಾರೆ. ನಿರಾಕರಿಸಿದ 20ಕ್ಕೂ ಹೆಚ್ಚುವಿದ್ಯಾರ್ಥಿನಿಯರು ಹೊರಗೆ ಉಳಿದಿದ್ದಾರೆ. ಅವರಿಗೆಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದುತಿಳಿಸಿದರು.

ಟಾಪ್ ನ್ಯೂಸ್

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.