BJP vs BJP; ವಿಜಯೇಂದ್ರ ವಿರುದ್ಧ ಕಿಡಿ ಕಾರಿದ ಹರಿಹರ ಶಾಸಕ ಬಿ.ಪಿ.ಹರೀಶ್

ರೇಣುಕಾಚಾರ್ಯ ಮತ್ತು ಲಗಾನ್ ತಂಡ ಬೆಳೆಸಿದ್ದೇ ಅವರು...

Team Udayavani, Jun 24, 2024, 8:27 PM IST

1-BP

ದಾವಣಗೆರೆ: ದಾವಣಗೆರೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ & ಲಗಾನ್ ಟೀಂ ಅನ್ನು ಸಿದ್ಧ ಪಡಿಸಿದ್ದೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಮತ್ತೊಮ್ಮೆ ಹರಿಹಾಯ್ದಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಚಾರ್ಯ ಮತ್ತು ತಂಡವನ್ನು ಬೆಳೆಸಿ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ವಿರುದ್ಧ ಎತ್ತಿ ಕಟ್ಟಿದ್ದೇ ಬಿ.ವೈ. ವಿಜಯೇಂದ್ರ ಎಂದು ಗಂಭೀರ ಆರೋಪ ಮಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷರು ಬಹಿರಂಗ ಹೇಳಿಕೆ ನೀಡಬಾರದು ಎಂದು ಹೇಳಿದ್ದಾರೆ. ಆದರೆ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ನಿಮ್ಮ ಲಗಾನ್ ಟೀಂ ಮಾಡಿದ್ದು ಏನು ಎಂದು ಪ್ರಶ್ನಿಸಿದರು.

ದೆಹಲಿ, ಬೆಂಗಳೂರು, ದಾವಣಗೆರೆಯಲ್ಲಿ ಸುದ್ದಿಗೋಷ್ಠಿಗಳ ಮೂಲಕ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿರುದ್ಧ ರೇಣುಕಾಚಾರ್ಯ ಮತ್ತು ತಂಡದವರೇ ಮಾತನಾಡಿದ್ದರು. ಆಗ ಲಗಾನ್ ಟೀಂ ಬಾಯಿಗೆ ಯಾಕೆ ಲಗಾಮು ಹಾಕಲಿಲ್ಲ ಎಂದು ಪ್ರಶ್ನಿಸಿದರು.

ಚುನಾವಣೆಗೆ ಮುನ್ನವೇ ರಾಜ್ಯಾಧ್ಯಕ್ಷ ವಿಜಯೇಂದ್ರರವರು ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಂಡಿದ್ದರೆ ದಾವಣಗೆರೆ ಲೋಕಸಭಾ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿರುತ್ತಿತ್ತು. ರಾಜ್ಯಾಧ್ಯಕ್ಷರು ಮಾಡಿದ ತಪ್ಪಿನಿಂದಾಗಿ ಕ್ಷೇತ್ರವನ್ನೇ ಕಳೆದುಕೊಂಡೆವು ಎಂದು ತೀವ್ರ ಅಸಮಾಧಾನ ಹೊರ ಹಾಕಿದರು.

ನನಗೆ ಯಾರೂ ಸಹ ಕರೆ ಮಾಡಿ ಮಾತನಾಡಿಲ್ಲ. ಯಾರೇ ಕರೆ ಮಾಡಿದರೂ ಉತ್ತರ ಕೊಡುತ್ತೇನೆ. ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ವಿರುದ್ಧ ಮಾತನಾಡಿದರೂ ಯಾಕೆ ರಾಜ್ಯ ನಾಯಕರು ರೇಣುಕಾಚಾರ್ಯ ಇತರರಿಗೆ ಎಚ್ಚರಿಕೆ ನೀಡಲಿಲ್ಲ .ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲವೇಕೆ ಎಂದು ಪ್ರಶ್ನಿಸಿದರು.

ಹರೀಶ್ ಸತ್ಯವನ್ನು ಮಾತನಾಡಿದ ತತ್ ಕ್ಷಣ ನಾಲ್ಕು ಗೋಡೆ ಮಧ್ಯೆ ಮಾತನಾಡಿ ಎಂಬ ಮಾತುಗಳು ನೆನಪಾಗುತ್ತವೆ ಅವರೇ ಬೆಳೆಸಿದ ರೇಣುಕಾಚಾರ್ಯ ಮತ್ತು ಲಗಾನ್ ತಂಡದವರು ಏನು ಬೇಕಾದರೂ ಮಾತನಾಡಬಹುದಾ ಎಂದು ಪ್ರಶ್ನಿಸಿದರು.

ಟಾಪ್ ನ್ಯೂಸ್

Hubli; ಆರ್ ಎಸ್ಎಸ್ ನಾಯಕ ಪ.ರಾ.ನಾಗರಾಜ ಭಟ್ಟ ನಿಧನ

Hubli; ಆರ್ ಎಸ್ಎಸ್ ನಾಯಕ ಪ.ರಾ.ನಾಗರಾಜ ಭಟ್ಟ ನಿಧನ

#Shivanna131: ಕಾರ್ತಿಕ್‌ ಅದ್ವೈತ್‌ – ಶಿವಣ್ಣನ ಚಿತ್ರದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್

#Shivanna131: ಕಾರ್ತಿಕ್‌ ಅದ್ವೈತ್‌ – ಶಿವಣ್ಣನ ಚಿತ್ರದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್

INDvsSL; ಭಾರತ ಸರಣಿಗೆ ಲಂಕಾ ತಂಡ ಪ್ರಕಟ; ಸಿಂಹಳೀಯ ತಂಡಕ್ಕೂ ನೂತನ ನಾಯಕ

INDvsSL; ಭಾರತ ಸರಣಿಗೆ ಲಂಕಾ ತಂಡ ಪ್ರಕಟ; ಸಿಂಹಳೀಯ ತಂಡಕ್ಕೂ ನೂತನ ನಾಯಕ

US Presidential Election: ಕಮಲಾ ಹ್ಯಾರಿಸ್ ಗೆಲುವಿಗಾಗಿ ತಮಿಳುನಾಡಿನಲ್ಲಿ ಪ್ರಾರ್ಥನೆ

US Presidential Election: ಕಮಲಾ ಹ್ಯಾರಿಸ್ ಗೆಲುವಿಗೆ ತಮಿಳುನಾಡಿನಲ್ಲಿ ವಿಶೇಷ ಪ್ರಾರ್ಥನೆ

5-punjalkatte

ಕ್ರೀಡಾಕೂಟದ ಕೆಸರುಗದ್ದೆಗೆ ಬಿದ್ದ ವಿದ್ಯುತ್‌ ತಂತಿ; ದೈವಗಳ ಕಾರಣಿಕದಿಂದ ತಪ್ಪಿದ ಅಪಾಯ

1-modi-badjet

Budget ಅಭಿವೃದ್ಧಿಗೆ ಹೊಸ ದಾರಿ ತೋರಲಿದೆ: ಪ್ರಧಾನಿ ಮೋದಿ

Union Budget 2024: ಕೇಂದ್ರ ಬಜೆಟ್‌ ನಲ್ಲಿ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ…

Union Budget 2024: ಕೇಂದ್ರ ಬಜೆಟ್‌ ನಲ್ಲಿ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkaballapura: ಇದು ರಾಜಕೀಯ ಬಜೆಟ್‌ ಅಲ್ಲ, ರಾಷ್ಟ್ರೀಯ ಬಜೆಟ್‌: ಸಂಸದ ಡಾ.ಕೆ.ಸುಧಾಕರ್‌

Chikkaballapura: ಇದು ರಾಜಕೀಯ ಬಜೆಟ್‌ ಅಲ್ಲ, ರಾಷ್ಟ್ರೀಯ ಬಜೆಟ್‌: ಸಂಸದ ಡಾ.ಕೆ.ಸುಧಾಕರ್‌

Hubballi: ದೇವಸ್ಥಾನದ ಧರ್ಮದರ್ಶಿ ಹತ್ಯೆ ಪ್ರಕರಣ: 24 ಗಂಟೆಯೊಳಗೆ ಹಂತಕನ ಬಂಧನ

Hubballi: ದೇವಸ್ಥಾನದ ಧರ್ಮದರ್ಶಿ ಹತ್ಯೆ ಪ್ರಕರಣ: 24 ಗಂಟೆಯೊಳಗೆ ಹಂತಕನ ಬಂಧನ

1-siddu-a

Valmiki ನಿಗಮದ ಹಗರಣ; ಇ ಡಿ ನನ್ನನ್ನು ಅಕ್ರಮವಾಗಿ ಸಿಲುಕಿಸಲು ಬಯಸಿದೆ: ಸಿದ್ದರಾಮಯ್ಯ

ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋಗಿ ನಾಪತ್ತೆಯಾಗಿದ್ದ ಮಹಿಳೆಯ ಶವ ನದಿಯಲ್ಲಿ ಪತ್ತೆ

ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋಗಿ ನಾಪತ್ತೆಯಾಗಿದ್ದ ಮಹಿಳೆಯ ಶವ ನದಿಯಲ್ಲಿ ಪತ್ತೆ

ಕುಡಚಿ ಕೃಷ್ಣಾ ನದಿ ಮೇಲ್ ಸೇತುವೆ ಜಲಾವೃತ ಸಾರ್ವಜನಿಕರ ಸಂಚಾರ ಬಂದ್

ಕುಡಚಿ ಕೃಷ್ಣಾ ನದಿ ಮೇಲ್ ಸೇತುವೆ ಜಲಾವೃತ… ಸಾರ್ವಜನಿಕ ಸಂಚಾರ ಬಂದ್

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Union Budget 2024; ಸಮತೋಲಿತ-ಅಭಿವೃದ್ಧಿ ಪರ ಆಯ-ವ್ಯಯ: ಜಗದೀಶ ಶೆಟ್ಟರ್

Union Budget 2024; ಸಮತೋಲಿತ-ಅಭಿವೃದ್ಧಿ ಪರ ಆಯ-ವ್ಯಯ: ಜಗದೀಶ ಶೆಟ್ಟರ್

Hubli; ಆರ್ ಎಸ್ಎಸ್ ನಾಯಕ ಪ.ರಾ.ನಾಗರಾಜ ಭಟ್ಟ ನಿಧನ

Hubli; ಆರ್ ಎಸ್ಎಸ್ ನಾಯಕ ಪ.ರಾ.ನಾಗರಾಜ ಭಟ್ಟ ನಿಧನ

#Shivanna131: ಕಾರ್ತಿಕ್‌ ಅದ್ವೈತ್‌ – ಶಿವಣ್ಣನ ಚಿತ್ರದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್

#Shivanna131: ಕಾರ್ತಿಕ್‌ ಅದ್ವೈತ್‌ – ಶಿವಣ್ಣನ ಚಿತ್ರದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್

INDvsSL; ಭಾರತ ಸರಣಿಗೆ ಲಂಕಾ ತಂಡ ಪ್ರಕಟ; ಸಿಂಹಳೀಯ ತಂಡಕ್ಕೂ ನೂತನ ನಾಯಕ

INDvsSL; ಭಾರತ ಸರಣಿಗೆ ಲಂಕಾ ತಂಡ ಪ್ರಕಟ; ಸಿಂಹಳೀಯ ತಂಡಕ್ಕೂ ನೂತನ ನಾಯಕ

US Presidential Election: ಕಮಲಾ ಹ್ಯಾರಿಸ್ ಗೆಲುವಿಗಾಗಿ ತಮಿಳುನಾಡಿನಲ್ಲಿ ಪ್ರಾರ್ಥನೆ

US Presidential Election: ಕಮಲಾ ಹ್ಯಾರಿಸ್ ಗೆಲುವಿಗೆ ತಮಿಳುನಾಡಿನಲ್ಲಿ ವಿಶೇಷ ಪ್ರಾರ್ಥನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.