ದಾವಣಗೆರೆ ಪಾಲಿಕೆ ಉಪಚುನಾವಣೆ: ಕೈ ತೆಕ್ಕೆಯಲ್ಲಿದ್ದ ಎರಡೂ ಕ್ಷೇತ್ರಗಳನ್ನು ಗೆದ್ದ ಬಿಜೆಪಿ
Team Udayavani, May 22, 2022, 11:16 AM IST
ದಾವಣಗೆರೆ: ಮಹಾನಗರ ಪಾಲಿಕೆಯ 24 ಮತ್ತು 37ನೇ ವಾರ್ಡ್‌ಗಳ ಉಪ ಚುನಾವಣೆಯಲ್ಲಿ ಬಿಜೆಪಿಯ ಜೆ.ಎನ್. ಶ್ರೀನಿವಾಸ್, ಶ್ವೇತಾ ಶ್ರೀನಿವಾಸ್ ಜಯಭೇರಿ ಬಾರಿಸಿದ್ದಾರೆ.
ಭಾರೀ ಕುತೂಹಲ, ಬಿಜೆಪಿ ಮತ್ತು ಕಾಂಗ್ರೆಸಿನ ಪಾಲಿಗೆ ಅತ್ಯಂತ ಮಹತ್ವ ಮತ್ತು ಪ್ರತಿಷ್ಠೆಯ ವಿಷಯವಾಗಿದ್ದ ಉಪ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳಿಬ್ಬರೂ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಎರಡು ವಾರ್ಡ್‌ಗಳನ್ನು ಆಡಳಿತಾರೂಢ ಬಿಜೆಪಿ ತನ್ನ ಬುಟ್ಟಿಗೆ ಹಾಕಿಕೊಂಡಿದೆ.
28ನೇ ವಾರ್ಡ್‌ನ ಭಗತ್‌ಸಿಂಗ್ ನಗರದಲ್ಲಿ ಬಿಜೆಪಿಯ ಜೆ.ಎನ್. ಶ್ರೀನಿವಾಸ್ ಕಾಂಗ್ರೆಸ್‌ನ ಹುಲ್ಮನಿ ಗಣೇಶ್ ವಿರುದ್ಧ 681 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಜೆ.ಎನ್. ಶ್ರೀನಿವಾಸ್ 2565 ಮತಗಳ ಪಡೆದರೆ, ಕಾಂಗ್ರೆಸ್‌ನ ಹುಲ್ಮನೆ ಗಣೇಶ್ 1884 ಮತಗಳ ಗಳಿಸುವ ಮೂಲಕ ಸೋಲು ಅನುಭವಿಸಿದ್ದಾರೆ.
ಇದನ್ನೂ ಓದಿ:ಪುತ್ತೂರು: ಬಲ್ನಾಡು ಗ್ರಾ.ಪಂ.ಉಪಚುನಾವಣೆ ಫಲಿತಾಂಶ;ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಗೆಲುವು
ಕಾಂಗ್ರೆಸ್ ಭಾರೀ ನಿರೀಕ್ಷೆ ಹೊಂದಿದ್ದ 37ನೇ ವಾರ್ಡ್‌ನಲ್ಲಿ ಸೋತಿದೆ. ಇಲ್ಲಿ ನಡೆದ ನೇರ ಪೈಪೋಟಿಯಲ್ಲಿ ಬಿಜೆಪಿಯ ಶ್ವೇತಾ ಶ್ರೀನಿವಾಸ್ ಕಾಂಗ್ರೆಸ್‌ನ ರೇಖಾರಾಣಿ ವಿರುದ್ಧ 793 ಮತಗಳಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಶ್ವೇತಾ ಶ್ರೀನಿವಾಸ್ 2096 ಮತಗಳು ಪಡೆದಿದ್ದಾರೆ. ರೇಖಾರಾಣಿ 1303 ಮತಗಳ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಜೆ.ಎನ್. ಶ್ರೀನಿವಾಸ್, ಶ್ವೇತಾ ಶ್ರೀನಿವಾಸ್ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗುವ ಮೂಲಕ ಸತತ ಎರಡನೇ ಬಾರಿಗೆ ನಗರಪಾಲಿಕೆ ಪ್ರವೇಶಿಸುವಲ್ಲಿ ದಂಪತಿ ಯಶಸ್ವಿಯಾಗಿದ್ದಾರೆ.
ಜೆ.ಎನ್. ಶ್ರೀನಿವಾಸ್ ಸತತ ಮೂರನೇ ಬಾರಿಗೆ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಶ್ವೇತಾ ಶ್ರೀನಿವಾಸ್ ಸತತ ಎರಡನೇ ಬಾರಿಗೆ ಮಹಾನಗರ ಪಾಲಿಕೆ ಸದಸ್ಯೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು
ಸಕಲೇಶಪುರ : ರಸ್ತೆ ಅಪಘಾತಕ್ಕೆ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು: ವಿದ್ಯಾರ್ಥಿಗಳ ಕಣ್ಣೀರು…
ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ
ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ
ಹೊಸ ಸೇರ್ಪಡೆ
ರೈಲ್ನಲ್ಲಿ ಕಾಸರಗೋಡಿನ ಮಹಿಳೆಯ ಬ್ಯಾಗ್ ಕಸಿದು ಪರಾರಿ; ದೂರು
ರಾಜ್ಯದಲ್ಲಿ 67 ಕೋಟಿ ರೂ. ಮೌಲ್ಯದ ಮಾದಕವಸ್ತು ನಾಶ
ಟಿ20 ಪಂದ್ಯ: ಟಾಸ್ ಗೆದ್ದ ಭಾರತ ಫೀಲ್ಡಿಂಗ್, ಮಳೆ ಅಡಚಣೆ, ಉಮ್ರಾನ್ ಮಲಿಕ್ ಪದಾರ್ಪಣೆ
ವಿಂಬಲ್ಡನ್ ಗ್ರ್ಯಾನ್ಸ್ಲಾಂ ಟೆನಿಸ್ ಟೂರ್ನಿ: ವೀನಸ್ ದಾಖಲೆ ಮುರಿಯುವತ್ತ ಸ್ವಿಯಾಟೆಕ್
ಮಾರುತಿ ಸುಜುಕಿ ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದ ಡಾ| ವೆಂಕಟರಾಮನ್ ಇನ್ನಿಲ್ಲ