ಅನ್ನದಾತನ ಕೈ ಹಿಡಿದ ಕಡಲೆ ಬೆಳೆ


Team Udayavani, Dec 17, 2019, 12:22 PM IST

dg-tdy-3

ಜಗಳೂರು: ತಾಲೂಕಿನ ಜಮೀನುಗಳಲ್ಲಿ ಈ ವರ್ಷ ಕಡಲೆ ಬೆಳೆ ನಳನಳಿಸುತ್ತಿದೆ. ಮುಂಗಾರು ಕೈಕೊಟ್ಟಿದ್ದರಿಂದ ರೈತರು ಆತಂಕಕ್ಕೆ ಒಳಗಾಗಿದ್ದರು. ಸದ್ಯ ಕಡಲೆ ಬೆಳೆ ಆಸರೆ ಆಗುವ ಲಕ್ಷಣ ಗೋಚರಿಸಿದ್ದು, ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಹಿಂಗಾರು ಮಳೆ ಉತ್ತಮವಾಗಿ ಸುರಿದ್ದರಿಂದ ಭೂಮಿ ತೇವಾಂಶ ಅಧಿಕಗೊಂಡು ಕಡಲೆ ಬೆಳೆ ಸಮೃದ್ಧಿಯಾಗಿ ಬೆಳೆದು ನಿಂತಿದೆ. ತಾಲೂಕಿನದ್ಯಾಂತ ಕಡಲೆ ಯಾವುದೇ ರೋಗದ ಕಾಟವಿಲ್ಲದೇ ಬೆಳೆದು ನಿಂತಿದ್ದು, ಉತ್ತಮ ಫಸಲು ದೊರೆಯುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಮುಂಗಾರು ಮಳೆ ಸಕಾಲಕ್ಕೆ ಬೀಳದೇ ರೈತರನ್ನು ಚಿಂತೆಗೇಡು ಮಾಡಿತ್ತು. ಅಲ್ಲದೇ ಮೆಕ್ಕೆಜೋಳ, ಶೇಂಗಾ, ರಾಗಿ, ಸಜ್ಜೆ ಬೆಳೆಗಳು ಕಾಳು ಕಟ್ಟುವ ಸಂದರ್ಭದಲ್ಲಿ ಮಳೆ ಕೊರತೆ ಆಗಿದ್ದರಿಂದ ರೈತರು ನಿರೀಕ್ಷಿಸಿದಷ್ಟು ಇಳುವರಿ ಬಾರದೇ ನಷ್ಟ ಅನುಭವಿಸುವಂತೆ ಮಾಡಿತ್ತು. ಸದ್ಯ ಹಿಂಗಾರು ಮಳೆ ಕೈ ಹಿಡಿದಿರುವುದರಿಂದ ಕಡಲೆ ಬೆಳೆ ತಾಲೂಕಿನಲ್ಲಿ ನಳನಳಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಸತತ ಬರ ಅನುಭವಿಸಿದ್ದ ಕಾರಣ ಕಡಲೆ ಇಳುವರಿ ತಾಲೂಕಿನಲ್ಲಿ ಕುಂಠಿತಗೊಂಡಿತ್ತು. ಆದರೆ ಆಕ್ಟೋಬರ್‌ ಮಾಹೆಯಲ್ಲಿ ಸುರಿದ ಮಳೆಯಿಂದ ತೇವಾಂಶ ಹೆಚ್ಚಳ ಆಗಿದ್ದರಿಂದ ಕಡಲೆ ಬೆಳೆಗೆ ಪೂರಕವಾಗಿ ಪರಿಣಮಿಸಿದೆ.

ಈಗಾಗಿ ರೈತರುಡಿ ಹಿಂಗಾರು ಬೆಳೆ ಕಡಲೆ ಬೆಳೆಗೆ ಒತ್ತು ನೀಡಿ ಬಿತ್ತನೆ ಮಾಡಿದ್ದರು. ತಾಲೂಕಿನಲ್ಲಿ 5850 ಹೆಕ್ಟೇರ್‌ ಬಿತ್ತನೆ ಪ್ರದೇಶವಿದ್ದು, ಬಹುತೇಕ ಬಿತ್ತನೆಯಾಗಿದೆ. ಕಸಬಾ ಹೋಬಳಿ ವ್ಯಾಪ್ತಿಯ ದೋಣೆಹಳ್ಳಿ, ಮುಸ್ಟೂರು, ಹಿರೆಮಲ್ಲನಹೊಳೆ, ಮೂಡಲ ಮಾಚಿಕೆರೆ, ಸಿದ್ದಿಹಳ್ಳಿ, ಚಿಕ್ಕಮಲ್ಲನಹೊಳೆ ಸೇರಿದಂತೆ ಇತರ ಗ್ರಾಮಗಳಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ. ಗ್ರಾಮಗಳು ಕಪ್ಪು ಮಣ್ಣು ಪ್ರದೇಶ ಆಗಿರುವುದರಿಂದ ತೇವಾಂಶ ಹಿಡಿದಿಟ್ಟುಕೊಂಡಿದ್ದು, ಇಲ್ಲಿ ಶೇ.70ರಷ್ಟು ಬಿತ್ತನೆ ಆಗಿದೆ.

ಸೊಕ್ಕೆ ಹೋಬಳಿ ಹೊಸಕೆರೆ, ಕೆಚ್ಚೆನಹಳ್ಳಿ ಕಪ್ಪು ಮಣ್ಣು ಪ್ರದೇಶ ಹೊಂದಿದೆ. ಸೊಕ್ಕೆ, ಗಡಿಮಾಕುಂಟೆ, ಲಕ್ಕಂಪುರ ಗ್ರಾಮಗಳಲ್ಲಿ ಕೆಂಪು ಮಣ್ಣು ಇರುವುದರಿಂದ ಶೇ.20ರಷ್ಟು ಬಿತ್ತನೆ ಆಗಿದೆ. ಬಿಳಿಚೋಡು ಹೋಬಳಿಯಲ್ಲಿ ಶೇ.5ರಷ್ಟು ಕಡಲೆ ಬಿತ್ತನೆಯಾಗಿದೆ ಎಂಬುದು ಕೃಷಿ ಇಲಾಖೆ ಮಾಹಿತಿ. ಕೃಷಿ ಇಲಾಖೆಯಿಂದ 5250 ಕ್ವಿಂಟಲ್‌ ಕಡಲೆ ಬೀಜ ವಿತರಿಸಲಾಗಿದೆ. ಬಿತ್ತನೆಯಾದ ಎಲ್ಲ ಗ್ರಾಮಗಳಲ್ಲಿ ಸಮೃದ್ಧವಾಗಿ ಬೆಳೆ ಬಂದಿದ್ದು, ಇಲ್ಲಿಯವರೆಗೂ ಯಾವುದೇ ರೋಗ ಬಾಧೆ ಲಕ್ಷಣಗಳು ಕಂಡುಬಂದಿಲ್ಲ. ಕಳೆದ ಮೂರು ವರ್ಷದಿಂದ ವರುಣ ಅವಕೃಪೆ ಒಳಗಾಗಿದ್ದ ತಾಲೂಕಿನ ರೈತರಿಗೆ ಈ ಬಾರಿ ಕಡಲೆ ಬೆಳೆ ಕೈ ಹಿಡಿಯುವ ಎಲ್ಲ ಲಕ್ಷಣಗಳು ಕಂಡುಬಂದಿವೆ.

 

-ರವಿಕುಮಾರ ತಾಳಿಕೆರೆ

ಟಾಪ್ ನ್ಯೂಸ್

bomb

ಲಾಹೋರ್ : ಬಾಂಬ್ ಸ್ಫೋಟದಲ್ಲಿ ಇಬ್ಬರ ಸಾವು, 23 ಮಂದಿಗೆ ಗಾಯ

Minister Sunil kumar

ಟಿಪ್ಪು ಆದರ್ಶ ಪ್ರತಿಪಾದಕರಿಂದ ನಾರಾಯಣ ಗುರುಗಳಿಗೆ ಅವಮಾನ: ಸಿದ್ದು ವಿರುದ್ಧ ಸುನಿಲ್ ಆಕ್ರೋಶ

cm-bomm

ನೈಟ್ ಕರ್ಫ್ಯೂ ಸಡಿಲಿಕೆ : ಇಕ್ಕಟ್ಟಿನಲ್ಲಿ ಸಿಎಂ,ಬೆಂಬಲಕ್ಕೆ ಅಶೋಕ್

ಗೋರಖ್ ಪುರ್ ಕ್ಷೇತ್ರ: ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಚಂದ್ರಶೇಖರ್ ಆಜಾದ್ ಕಣಕ್ಕೆ

ಗೋರಖ್ ಪುರ್ ಕ್ಷೇತ್ರ: ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಚಂದ್ರಶೇಖರ್ ಆಜಾದ್ ಕಣಕ್ಕೆ

ಎಸ್ಎಸ್ಎಲ್ ಸಿ ಪ್ರಿಪರೇಟರಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ

ಎಸ್ಎಸ್ಎಲ್ ಸಿ ಪ್ರಿಪರೇಟರಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ

renukaacharya

ಯತ್ನಾಳ್ ಭೇಟಿಯಾದ ರೇಣುಕಾಚಾರ್ಯ: ಕಾಲ ಬಂದರೆ ವರಿಷ್ಠರ ಭೇಟಿ

babar azam

ವರ್ಷದ ಏಕದಿನ ತಂಡ ಪ್ರಕಟಿಸಿದ ಐಸಿಸಿ: ಭಾರತೀಯರಿಗೆ ಸ್ಥಾನವಿಲ್ಲ! ಬಾಬರ್ ಗೆ ನಾಯಕತ್ವಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

davanagere news

ಜಯದೇವ ಆಸ್ಪತ್ರೆ ಸ್ಥಾಪನೆ ಪ್ರಕ್ರಿಯೆ ಶುರು

davanagere news

ವಸತಿ ಸೌಲಭ್ಯ: ಮರು ಭೂಸ್ವಾಧೀನ ಪ್ರಸ್ತಾವನೆ ಸಲ್ಲಿಸಿ

davanagere news

ವೇಮನ ಜಯಂತಿ ಸರಳ ಆಚರಣೆ

honnali news

ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ನಲ್ಲಿಸಂಪರ್ಕ: ರೇಣು

davanagere news

979 ಸೋಂಕಿತರಿಗೆ ಹೋಂ ಐಸೋಲೇಷನ್‌

MUST WATCH

udayavani youtube

ಚಿಂಚೋಳಿ ಜನರ ನಿದ್ದೆಗೆಡಿಸಿದ ಕಳ್ಳರು : ಮತ್ತೆ ಎರಡು ಅಂಗಡಿಗೆ ನುಗ್ಗಿ ಕಳ್ಳತನ

udayavani youtube

ನಲಪಾಡ್ ಹಲ್ಲೆ ವಿಚಾರ, ಸಿದ್ದು ಹಳ್ಳೇಗೌಡ ಹೇಳಿದ್ದೇನು ?

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

ಹೊಸ ಸೇರ್ಪಡೆ

ಹೊಲದಲ್ಲೇ ಬೆಲೆ ಸಿಗುವಾಗ, ಖರೀದಿ ಕೇಂದ್ರ ಏಕೆ ?

ಹೊಲದಲ್ಲೇ ಬೆಲೆ ಸಿಗುವಾಗ, ಖರೀದಿ ಕೇಂದ್ರ ಏಕೆ ?

bomb

ಲಾಹೋರ್ : ಬಾಂಬ್ ಸ್ಫೋಟದಲ್ಲಿ ಇಬ್ಬರ ಸಾವು, 23 ಮಂದಿಗೆ ಗಾಯ

Minister Sunil kumar

ಟಿಪ್ಪು ಆದರ್ಶ ಪ್ರತಿಪಾದಕರಿಂದ ನಾರಾಯಣ ಗುರುಗಳಿಗೆ ಅವಮಾನ: ಸಿದ್ದು ವಿರುದ್ಧ ಸುನಿಲ್ ಆಕ್ರೋಶ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣ :  ಶಾಲೆಗೆ ರಜೆ ಘೋಷಿಸಲು ಪೋಷಕರ ಒತ್ತಾಯ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣ :  ಶಾಲೆಗೆ ರಜೆ ಘೋಷಿಸಲು ಪೋಷಕರ ಒತ್ತಾಯ

ಜಿಲೆಯಲ್ಲಿ 4 ಸಾವಿರ ಗಡಿದಾಟಿದ ಸಕ್ರೀಯ ಪ್ರಕರಣ : ಜನರಲ್ಲಿ ಆತಂಕ

ಜಿಲೆಯಲ್ಲಿ 4 ಸಾವಿರ ಗಡಿದಾಟಿದ ಸಕ್ರೀಯ ಪ್ರಕರಣ : ಜನರಲ್ಲಿ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.