Udayavni Special

ಗ್ರಾಮಸ್ಥರ ಸಮಸ್ಯೆಗೆ ಸಿಕ್ಕೀತೇ ಮುಕ್ತಿ? ­

ಮಾವಿನಹೊಳೆ-ಮರಳಹಟ್ಟಿಯಲ್ಲಿ ಡಿಸಿ ವಾಸ್ತವ್ಯ­! ಪರಿಹಾರ ನಿರೀಕ್ಷೆಯಲ್ಲಿ ಗ್ರಾಮಸ್ಥರು

Team Udayavani, Mar 18, 2021, 8:29 PM IST

fgsge

ಚನ್ನಗಿರಿ: ತಾಲೂಕಿನ ತಿಪ್ಪಗೊಂಡನಹಳ್ಳಿ ಮತ್ತು ರಾಜಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಮಾವಿನಹೊಳೆ ಗ್ರಾಮದಲ್ಲಿ ಮಾ.20 ರಂದು ಜಿಲ್ಲಾಡಳಿತದಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸರ್ಕಾರಿ ಸವಲತ್ತು ಹಾಗೂ ಕಂದಾಯ ಗ್ರಾಮ ಸೌಲಭ್ಯದಿಂದ ವಂಚಿತರಾದ ಮಾವಿನಹೊಳೆ ಮತ್ತು ಮರಳಹಟ್ಟಿ ಗ್ರಾಮಗಳ ಗ್ರಾಮಸ್ಥರು ತಮ್ಮ ಸಮಸ್ಯೆಗೆ ಜಿಲ್ಲಾಧಿಕಾರಿಗಳು ಪರಿಹಾರ ಸೂಚಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ರಾಜಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ಮಾವಿನಹೊಳೆ ಗ್ರಾಮದಲ್ಲಿ ಸುಮಾರು 56ಕ್ಕೂ ಹೆಚ್ಚು ಕುಟುಂಬಗಳಿದ್ದು,350ಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ.

ಮರಳಹಟ್ಟಿ ಗ್ರಾಮದಲ್ಲಿ 50ಕ್ಕೂ ಹೆಚ್ಚು ಕುಟುಂಬಗಳಿದ್ದು, 400ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಇ-ಸ್ವತ್ತು ಸಿಗದ ಕಾರಣ ಗ್ರಾಮಸ್ಥರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಕುರಿತು ಸಾಕಷ್ಟು ಬಾರಿ ಅ ಧಿಕಾರಿಗಳು, ಜನಪ್ರತಿನಿಧಿ ಗಳ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಐತಿಹಾಸಿಕ ಹಿನ್ನೆಲೆ ಹೊಂದಿರುವ ಮಾವಿನಹೊಳೆ ಗ್ರಾಮದಲ್ಲಿ ವೀರಭದ್ರೇಶ್ವರ ದೇವರು ನೆಲೆಸಿದ್ದಾನೆ. ರಾಜ್ಯದ ವಿವಿಧೆಡೆಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಲಕ್ಷಾಂತರ ಜನರು ಬಂದು ಹೋಗುವ ಸ್ಥಳವಾಗಿದ್ದರೂ ಮೂಲ ಸೌಲಭ್ಯಗಳಿಲ್ಲ. ಸರ್ಕಾರಿ ಶಾಲೆ ಇದ್ದರೂ ಇಲ್ಲದಂತಾಗಿದೆ. ದುರಸ್ತಿಗೊಂಡಿರುವ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸದ ಪೋಷಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿರುವುದು ವಿಪರ್ಯಾಸ.

ಮರಳಹಟ್ಟಿ ಮತ್ತು ಮಾವಿನಹೊಳೆ ಗ್ರಾಮಗಳಿಗೆ ಸ್ಮಶಾನಗಳಿದ್ದರೂ ಬಳಕೆಗೆ ಬಾರದಂತಾಗಿದೆ. ಅದ್ದರಿಂದ ಸ್ಮಶಾನಕ್ಕೆ ಯೋಗ್ಯವಾದ ಭೂಮಿಯನ್ನು ಮೀಸಲಿಡಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ. ಮಾವಿನಹೊಳೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಅದರೆ ಆರೋಗ್ಯ ಕೇಂದ್ರವಿಲ್ಲದೆ ಆರೋಗ್ಯ ಸೇವೆಗಾಗಿ ಇಲ್ಲಿನ ಜನರು ಪರದಾಡುವಂತಾಗಿದೆ. ಆದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತೆರೆಯಬೇಕು ಎಂಬುದು ಬಹು ಕಾಲದ ಬೇಡಿಕೆ. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲಿ ಈ ಬೇಡಿಕೆಗಳೆಲ್ಲ ಈಡೇರಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ.

ಶಶೀಂದ್ರ ಸಿ.ಎಸ್‌.

ಟಾಪ್ ನ್ಯೂಸ್

upendra

ಉಪ್ಪಿ ‘ಲಗಾಮ್‌’ಗೆ ಇಂದು ಮುಹೂರ್ತ

government-has-no-plan-to-impose-nationwide-lockdown-says-nirmala-sitharaman

ದೇಶದಾದ್ಯಂತ ಮತ್ತೆ ಲಾಕ್ ಡೌನ್ ಹೇರುವ ಮಾತೇ ಇಲ್ಲ : ನಿರ್ಮಲಾ ಸೀತಾರಾಮನ್

ಕೋವಿಡ್ ಆತಂಕ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1000 ಅಂಕ ಕುಸಿತ, ಹೂಡಿಕೆದಾರರಿಗೆ ನಷ್ಟ

ಕೋವಿಡ್ ಆತಂಕ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1000 ಅಂಕ ಕುಸಿತ, ಹೂಡಿಕೆದಾರರಿಗೆ ನಷ್ಟ

if-you-are-a-victim-of-a-online-fraud-you-can-call-on-this-number

ಸೈಬರ್ ವಂಚನೆಗೊಳಗಾದಲ್ಲಿ ಪರಿಹಾರ ಒದಗಿಸಲಿದೆ ಗೃಹ ಸಚಿವಾಲಯದ ಈ ಸಹಾಯವಾಣಿ  

ಬಜಪೆ ವ್ಯವಸಾಯ ಸಹಕಾರಿ ಬ್ಯಾಂಕ್ ನಲ್ಲಿ ಅಗ್ನಿ ಅವಘಡ

ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಅಗ್ನಿ ಅವಘಡ

ತುಂಡಾಗಿ ಬಿದ್ದಿದ್ದ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ರೈತ ಸಾವು: ಕರಕಲಾಗಿ ಬೇರ್ಪಟ್ಟ ರುಂಡ!

ತುಂಡಾಗಿ ಬಿದ್ದಿದ್ದ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ರೈತ ಸಾವು:ಕರಕಲಾಗಿ ಬೇರ್ಪಟ್ಟ ರುಂಡ!

ರಾಷ್ಟ್ರಪ್ರಶಸ್ತಿ ವಿಜೇತೆ, ಮರಾಠಿ ಚಿತ್ರರಂಗದ ಖ್ಯಾತ ನಿರ್ದೇಶಕಿ ಸುಮಿತ್ರಾ ಭಾವೆ ಇನ್ನಿಲ್ಲ

ರಾಷ್ಟ್ರಪ್ರಶಸ್ತಿ ವಿಜೇತೆ, ಮರಾಠಿ ಚಿತ್ರರಂಗದ ಖ್ಯಾತ ನಿರ್ದೇಶಕಿ ಸುಮಿತ್ರಾ ಭಾವೆ ಇನ್ನಿಲ್ಲ







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಜಪೆ ವ್ಯವಸಾಯ ಸಹಕಾರಿ ಬ್ಯಾಂಕ್ ನಲ್ಲಿ ಅಗ್ನಿ ಅವಘಡ

ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಅಗ್ನಿ ಅವಘಡ

ತುಂಡಾಗಿ ಬಿದ್ದಿದ್ದ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ರೈತ ಸಾವು: ಕರಕಲಾಗಿ ಬೇರ್ಪಟ್ಟ ರುಂಡ!

ತುಂಡಾಗಿ ಬಿದ್ದಿದ್ದ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ರೈತ ಸಾವು:ಕರಕಲಾಗಿ ಬೇರ್ಪಟ್ಟ ರುಂಡ!

ಕಠಿನ ನಿರ್ಬಂಧ: ನಾವೆಷ್ಟು ಸಿದ್ಧ? ಸರಕಾರ, ಜನರು ಈಗಲೇ ತಯಾರಾಗಲಿ

ಕಠಿನ ನಿರ್ಬಂಧ: ನಾವೆಷ್ಟು ಸಿದ್ಧ? ಸರಕಾರ, ಜನರು ಈಗಲೇ ತಯಾರಾಗಲಿ

ವನ ರಕ್ಷಕರ ಬದುಕು ಅಭದ್ರ : ವನ್ಯಧಾಮ ಹೊರಗುತ್ತಿಗೆ ದಿನಗೂಲಿಗಳ ಅರಣ್ಯರೋದನ

ವನ ರಕ್ಷಕರ ಬದುಕು ಅಭದ್ರ : ವನ್ಯಧಾಮ ಹೊರಗುತ್ತಿಗೆ ದಿನಗೂಲಿಗಳ ಅರಣ್ಯರೋದನ

ಸಾರಿಗೆ ನೌಕರರ ಮುಷ್ಕರ : ನಿಗಮ-ನೌಕರರ ರಾತ್ರಿ ಕಾರ್ಯಾಚರಣೆ!

ಸಾರಿಗೆ ನೌಕರರ ಮುಷ್ಕರ : ನಿಗಮ-ನೌಕರರ ರಾತ್ರಿ ಕಾರ್ಯಾಚರಣೆ!

MUST WATCH

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

ಹೊಸ ಸೇರ್ಪಡೆ

upendra

ಉಪ್ಪಿ ‘ಲಗಾಮ್‌’ಗೆ ಇಂದು ಮುಹೂರ್ತ

government-has-no-plan-to-impose-nationwide-lockdown-says-nirmala-sitharaman

ದೇಶದಾದ್ಯಂತ ಮತ್ತೆ ಲಾಕ್ ಡೌನ್ ಹೇರುವ ಮಾತೇ ಇಲ್ಲ : ನಿರ್ಮಲಾ ಸೀತಾರಾಮನ್

ಕೋವಿಡ್ ಆತಂಕ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1000 ಅಂಕ ಕುಸಿತ, ಹೂಡಿಕೆದಾರರಿಗೆ ನಷ್ಟ

ಕೋವಿಡ್ ಆತಂಕ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1000 ಅಂಕ ಕುಸಿತ, ಹೂಡಿಕೆದಾರರಿಗೆ ನಷ್ಟ

if-you-are-a-victim-of-a-online-fraud-you-can-call-on-this-number

ಸೈಬರ್ ವಂಚನೆಗೊಳಗಾದಲ್ಲಿ ಪರಿಹಾರ ಒದಗಿಸಲಿದೆ ಗೃಹ ಸಚಿವಾಲಯದ ಈ ಸಹಾಯವಾಣಿ  

ಬಜಪೆ ವ್ಯವಸಾಯ ಸಹಕಾರಿ ಬ್ಯಾಂಕ್ ನಲ್ಲಿ ಅಗ್ನಿ ಅವಘಡ

ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಅಗ್ನಿ ಅವಘಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.