Udayavni Special

ಕೊರೊನಾ ಸೋಂಕಿತರ ನೆರವಿಗೆ ಸಹಾಯವಾಣಿ


Team Udayavani, May 6, 2021, 9:50 PM IST

6-10

ಹೊನ್ನಾಳಿ: ಕೊರೊನಾ ಬಗ್ಗೆ ಅವಳಿ ತಾಲೂಕಿನ ಜನರು ತಾತ್ಸಾರ ಮಾಡುತ್ತಿದ್ದಾರೆ. ಜನರನ್ನು ಎಚ್ಚರಗೊಳಿಸಲು ಅಧಿ ಕಾರಿಗಳು ಕರ್ತವ್ಯ ನಿಷ್ಠೆ ತೋರಿಸಿ ಕೆಲಸ ಮಾಡುವುದು ಅನಿವಾರ್ಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು. ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕೋವಿಡ್‌ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ತಾಲೂಕಿನ ಹಾಗೂ ಇತರ ಜಿಲ್ಲೆಗಳ ಜನರು ಸಂಕಷ್ಟದಲ್ಲಿರುವುದನ್ನು ಮನಗಂಡು ರಾಜ್ಯದ 6 ವಿಭಾಗದಲ್ಲಿ ಸಹಾಯವಾಣಿ ಆರಂಭಿಸಿದ್ದು, ಆರು ಜನರನ್ನು ನೇಮಕ ಮಾಡಿದ್ದೇನೆ. ಅವರು ಕೊರೊನಾ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಅವರಿಗೂ ಮೀರಿದರೆ ನನಗೆ ದೂರವಾಣಿ ಕರೆ ಮಾಡುತ್ತಾರೆ. ನಾನು ತಕ್ಷಣ ಕಾರ್ಯಪ್ರವೃತ್ತನಾಗಿ ಕೆಲಸ ಮಾಡಿಕೊಡುತ್ತೇನೆ. ಆದರೆ ಅಧಿಕಾರಿಗಳು ಮಾತ್ರ ತಾತ್ಸಾರ ಮನೋಭಾವದಿಂದ ಇದ್ದಾರೆ. ನಾನು ತಾಲೂಕಿಗೆ ಬಂದಾಗ ಮಾತ್ರ ಕೆಲಸ ಮಾಡಿದಂತೆ ನಾಟಕವಾಡುತ್ತಿದ್ದಾರೆ. ಇದು ಸಲ್ಲದು ಎಂದು ತಾಕೀತು ಮಾಡಿದರು.

ಸ್ಥಳೀಯವಾಗಿ ವಾಸ ಮಾಡಿ: ತಾಲೂಕು ಮಟ್ಟದ ಹಲವಾರು ಅಧಿ ಕಾರಿಗಳು ತಾಲೂಕು ಕೇಂದ್ರದಲ್ಲಿ ವಾಸ ಮಾಡದೆ ದಾವಣಗೆರೆ, ಶಿವಮೊಗ್ಗ ಜಿಲ್ಲಾ ಕೇಂದ್ರಗಳಲ್ಲಿ ವಾಸ ಮಾಡುತ್ತಿದ್ದಾರೆ. ನೌಕರಿಗೆ ಮಾತ್ರ ತಾಲೂಕಿಗೆ ಬಂದು ಹೋಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿಇದು ಮುಂದುವರಿದರೆ ಅಂತಹ ಅ ಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಕೊರೊನಾ ಮೊದಲ ಅಲೆ ಅಪ್ಪಳಿಸಿದಾಗ ನಾನು ಬಡವರಿಗೆ ಫುಡ್‌ ಕಿಟ್‌, ಮಧ್ಯಾಹ್ನದ ಊಟ, ಮಾಸ್ಕ್ ಹಾಗೂ ಔಷ ಧಗಳನ್ನು ವಿತರಿಸುವ ಕಾರ್ಯ ಹಮ್ಮಿಕೊಂಡಿದ್ದೆ. ಈಗಲೂ ಬಡವರಿಗೆ ಔಷಧೋಪಚಾರಗಳನ್ನು ನನ್ನ ಸ್ವಂತ ಖರ್ಚಿನಲ್ಲಿ ವಿತರಿಸುತ್ತೇನೆ. ಆದರೆ ಇದು ದುರುಪಯೋಗವಾಗಬಾರದು ಎಂದರು.

ತಹಶೀಲ್ದಾರ್‌ ಬಸನಗೌಡ ಕೋಟೂರ ಮಾತನಾಡಿ, ತಾಲೂಕು ಕೇಂದ್ರಗಳಲ್ಲಿ ವಾಸಿಸದ ಅ ಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಗುರುವಾರದಿಂದ ಎಲ್ಲಾ ಅ ಧಿಕಾರಿಗಳು ತಮ್ಮ ನಿವಾಸದ ಬಗ್ಗೆ ಭಾವಚಿತ್ರದೊಂದಿಗೆ ಸಂಪೂರ್ಣ ಮಾಹಿತಿ ನೀಡಬೇಕು. ತಾಲೂಕು ಕಚೇರಿಯಲ್ಲಿ ಕೊರೊನಾ ಸಂಬಂಧ ಸಹಾಯವಾಣಿ ತೆರೆದು ಒಬ್ಬ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸಮಸ್ಯೆಗೊಳಗಾದವರು ದೂರವಾಣಿ: 08188251025ಗೆ ಕರೆ ಮಾಡಿ ತಿಳಿಸಬಹುದು ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ಶ್ರೀಧರ್‌, ನ್ಯಾಮತಿ ತಹಶೀಲ್ದಾರ್‌ ತನುಜಾ ಸೌದತ್ತಿ ಇತರರು ಇದ್ದರು.

ಟಾಪ್ ನ್ಯೂಸ್

leopard

ಭೀಮಾ ತೀರದಲ್ಲಿ ಚಿರತೆ ಹಾವಳಿ: ರೈತರು ಹೊಲದಲ್ಲಿ ಕಟ್ಟಿದ್ದ ಆಕಳು ಕೊಂದು ಭಕ್ಷಣೆ

arun-singh

‘ಅಜ್ಜಿಗೆ ಅರಿವೆ ಚಿಂತೆ,ಮೊಮ್ಮಗಳಿಗೆ ಡಾಬಿನ ಚಿಂತೆ’:ಅರುಣ್ ಸಿಂಗ್ ಭೇಟಿಗೆ ಕಾಂಗ್ರೆಸ್ ಲೇವಡಿ

ವಿಶಾಖಪಟ್ಟಣಂ: ಪೊಲೀಸ್ ಎನ್ ಕೌಂಟರ್ ಗೆ ಆರು ಮಂದಿ ನಕ್ಸಲೀಯರು ಸಾವು, ಶಸ್ತ್ರಾಸ್ತ್ರ ವಶಕ್ಕೆ

ವಿಶಾಖಪಟ್ಟಣಂ: ಪೊಲೀಸ್ ಎನ್ ಕೌಂಟರ್ ಗೆ ಆರು ಮಂದಿ ನಕ್ಸಲೀಯರು ಸಾವು, ಶಸ್ತ್ರಾಸ್ತ್ರ ವಶಕ್ಕೆ

England Women won the toss against India Women

ಮಹಿಳಾ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್; ಮಿಥಾಲಿ ರಾಜ್ ಪಡೆಯಲ್ಲಿ ಐವರು ಪದಾರ್ಪಣೆ

ಅಯೋಧ್ಯೆ ಭೂ ಖರೀದಿ ಭ್ರಷ್ಟಾಚಾರ ಆರೋಪ ಸುಪ್ರೀಂ ನೇತೃತ್ವದಲ್ಲಿ ತನಿಖೆ ನಡೆಯಲಿ: ಪ್ರಿಯಾಂಕಾ

ಅಯೋಧ್ಯೆ ಭೂ ಖರೀದಿ ಭ್ರಷ್ಟಾಚಾರ ಆರೋಪ ಸುಪ್ರೀಂ ನೇತೃತ್ವದಲ್ಲಿ ತನಿಖೆ ನಡೆಯಲಿ: ಪ್ರಿಯಾಂಕಾ

ಪಕ್ಷದ ಒಟ್ಟಾರೆ ವ್ಯವಸ್ಥೆ ಸರಿಪಡಿಸಲು ಅರುಣ್ ಸಿಂಗ್ ಬರುತ್ತಿದ್ದಾರೆ: ಸಚಿವ ಕೋಟ

ಪಕ್ಷದ ಒಟ್ಟಾರೆ ವ್ಯವಸ್ಥೆ ಸರಿಪಡಿಸಲು ಅರುಣ್ ಸಿಂಗ್ ಬರುತ್ತಿದ್ದಾರೆ: ಸಚಿವ ಕೋಟ

ಬನ್ನೂರು : ಬೈಕ್ – ಓಮ್ನಿ ಢಿಕ್ಕಿ; ಬೈಕ್ ಸವಾರ ಗಂಭೀರ

ಬನ್ನೂರು : ಬೈಕ್ – ಓಮ್ನಿ ಢಿಕ್ಕಿ; ಬೈಕ್ ಸವಾರ ಗಂಭೀರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-11

ಸ್ವಯಂ ಜಾಗೃತಿಯಿಂದ ಕೊರೊನಾ ನಿಯಂತ್ರಣ: ಸ್ವಾಮೀಜಿ

15-10

ಸರ್ವೋನ್ನತ ಏಳಿಗೆಗೆ ಯೋಗ ಸಹಕಾರಿ: ಡಾ| ಶಂಕರ ಗೌಡ

15-9

ಜಿಲ್ಲೆಯ 3.81 ಲಕ್ಷ ಜನರಿಗೆ ಕೊರೊನಾ ಲಸಿಕೆ

WhatsApp Image 2021-06-15 at 8.18.32 PM

ಕೇರ್ ಸೆಂಟರ್ ಗೆ ಕಳುಹಿಸಿದರೆ ವಿಷ ಕುಡಿಯುವುದಾಗಿ ಬೆದರಿಸಿದ ಕೋವಿಡ್ ಸೋಂಕಿತ

ದಾವಣಗೆರೆ ಜಿಲ್ಲೆಯಲ್ಲಿ 789 ಮಂದಿ ಗುಣಮುಖ : 183 ಹೊಸ ಪ್ರಕರಣ ಪತ್ತೆ

ದಾವಣಗೆರೆ ಜಿಲ್ಲೆಯಲ್ಲಿ 789 ಮಂದಿ ಗುಣಮುಖ : 183 ಹೊಸ ಪ್ರಕರಣ ಪತ್ತೆ

MUST WATCH

udayavani youtube

ಹೈನುಗಾರಿಕೆಯಲ್ಲಿ ಖುಷಿ ಕಂಡ ರಾಜಕಾರಣಿ

udayavani youtube

ಮಾವಿನ ಬೆಳೆಯಲ್ಲಿ ಸಿಹಿಕಂಡ ನಿವೃತ ಅಧ್ಯಾಪಕ

udayavani youtube

ಮಲೆನಾಡಲ್ಲಿ ಮುಂದುವರೆದ ಮಳೆಯ ಅಬ್ಬರ, ಜನಜೀವನ ಅಸ್ತವ್ಯಸ್ತ

udayavani youtube

ಕಷಾಯ ಸೇವಿಸುವ ಸರಿಯಾದ ವಿಧಾನ ನಿಮಗೆ ಗೊತ್ತಿತ್ತಾ?

udayavani youtube

ಕೇರ್ ಸೆಂಟರ್ ಗೆ ಕಳುಹಿಸಿದರೆ ವಿಷ ಕುಡಿಯುವುದಾಗಿ ಬೆದರಿಸಿದ ಕೋವಿಡ್ ಸೋಂಕಿತ

ಹೊಸ ಸೇರ್ಪಡೆ

ಕಾಪು ಬಿಲ್ಲವರ ಸಹಾಯಕ ಸಂಘದ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ ಅವರಿಂದ ಪಡಿತರ ಕಿಟ್ ವಿತರಣೆ

ಕಾಪು ಬಿಲ್ಲವರ ಸಹಾಯಕ ಸಂಘದ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ ಅವರಿಂದ ಪಡಿತರ ಕಿಟ್ ವಿತರಣೆ

leopard

ಭೀಮಾ ತೀರದಲ್ಲಿ ಚಿರತೆ ಹಾವಳಿ: ರೈತರು ಹೊಲದಲ್ಲಿ ಕಟ್ಟಿದ್ದ ಆಕಳು ಕೊಂದು ಭಕ್ಷಣೆ

ದ್ಗಹಜಹಗ್ದ್ಗಹಜ

ಲಸಿಕೆಯೊಂದಿಗೆ ಹಳ್ಳಿ ಗೆ ಸಾರಿಗೆ ಬಸ್‌

arun-singh

‘ಅಜ್ಜಿಗೆ ಅರಿವೆ ಚಿಂತೆ,ಮೊಮ್ಮಗಳಿಗೆ ಡಾಬಿನ ಚಿಂತೆ’:ಅರುಣ್ ಸಿಂಗ್ ಭೇಟಿಗೆ ಕಾಂಗ್ರೆಸ್ ಲೇವಡಿ

ಸದ್ಗಹಜಹಗ್ದರತಯು

ಮೂಗಿನಿಂದ ಮೆದುಳಿಗೆ ಹೊಕ್ಕಿದ್ದ ಗಡ್ಡೆ ಹೊರಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.