Udayavni Special

ಲಾಕ್‌ಡೌನ್‌ ಆತಂಕ: ಖರೀದಿಯ ಧಾವಂತ

Team Udayavani, May 9, 2021, 9:49 PM IST

9-17

ದಾವಣಗೆರೆ: ರಾಜ್ಯ ಸರ್ಕಾರ ಸೋಮವಾರದಿಂದ ಕರ್ಫ್ಯೂವನ್ನು ಇನ್ನಷ್ಟು ಬಿಗಿಗೊಳಿಸುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು, ಸೋಮವಾರದಿಂದ ಸಂಪೂರ್ಣ ಲಾಕ್‌ಡೌನ್‌ ಆಗಬಹುದೆಂಬ ಆತಂಕದೊಂದಿಗೆ ಶನಿವಾರ ಅವಶ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿರುವುದು ಕಂಡು ಬಂತು. ಅವಶ್ಯ ವಸ್ತುಗಳ ಖರೀದಿಗೆ ನಿಗದಿಪಡಿಸಿರುವ ಬೆಳಿಗ್ಗೆ 6ರಿಂದ 10ಗಂಟೆ ವರೆಗಿನ ಅವಧಿಯಲ್ಲಿ ಶನಿವಾರ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದು ದೊಡ್ಡ ಪ್ರಮಾಣದಲ್ಲಿ ಅವಶ್ಯಕ ವಸ್ತು ಖರೀದಿಯ ಧಾವಂತ ತೋರಿದರು.

ಹೀಗಾಗಿ ಬಹುತೇಕ ಎಲ್ಲ ದಿನಸಿ ಅಂಗಡಿಗಳ ಎದುರು ಗ್ರಾಹಕರ ಸಂಖ್ಯೆ ಅಧಿಕವಾಗಿರುವುದು ಗೋಚರಿಸಿತು. ಇನ್ನು ಈಗಾಗಲೇ ಮದುವೆ ದಿನಾಂಕ ನಿಗದಿ ಮಾಡಿಕೊಂಡವರು, ಸಣ್ಣ ವ್ಯಾಪಾರಸ್ಥರು ಹೋಲ್‌ಸೇಲ್‌ ಅಂಗಡಿಗಳಲ್ಲಿ ತಾಸುಗಟ್ಟಲೆ ನಿಂತು ದಿನಸಿ ಸಾಮಗ್ರಿಗಳನ್ನು ಖರೀದಿಸಿದರು. ಖರೀದಿ ಪ್ರಕ್ರಿಯ ಜೋರಾಗಿದ್ದರಿಂದ ಬೆಳಗಿನ ವೇಳೆ ಮಹಾನಗರದ ಬಹುತೇಕ ರಸ್ತೆಗಳು ಜನ, ವಾಹನ ಸಂಚಾರದಿಂದ ತುಂಬಿ ಹೋಗಿದ್ದವು. ಕೆಲವು ಪ್ರದೇಶಗಳಲ್ಲಿ ವಾಹನ ದಟ್ಟಣೆಯುಂಟಾಗಿ ಸುಗಮ ಸಂಚಾರಕ್ಕೂ ಅಡ್ಡಿಯಾಯಿತು. ಎಲ್ಲಿ ನೋಡಿದರೂ ಜನವೋ ಜನ, ಖರೀದಿಯೋ ಖರೀದಿ ಎನ್ನುವಂಥ ವಾತಾವರಣ ನಿರ್ಮಾಣವಾಗಿತ್ತು. ಬಹುತೇಕ ಯಾವ ಅಂಗಡಿಯಲ್ಲಿಯೂ ಅಂತರ ಕಾಯ್ದುಕೊಳ್ಳುವಿಕೆಯ ನಿಯಮ ಪಾಲನೆಯಾಗಿಲ್ಲ. ಇನ್ನು ಲಸಿಕಾ ಕೇಂದ್ರಗಳಲ್ಲಿಯೂ ಲಸಿಕೆ ಪಡೆಯಲು ಬಂದಿದ್ದ ನೂರಾರು ಜನ ಯಾವುದೇ ಅಂತರವಿಲ್ಲದೆ ಗುಂಪು ಗುಂಪಾಗಿ ನಿಂತಿದ್ದರು.

ಅಂಗಡಿ ಬಂದ್‌, ಬೈಕ್‌ ವಶ: ಮದುವೆ ಹಂಗಾಮು ಇದಾಗಿರುವುದರಿಂದ ನಗರದಲ್ಲಿ ಕೆಲವು ಜವಳಿ ವ್ಯಾಪಾರಸ್ಥರು ಮುಂಜಾನೆಯಿಂದಲೇ ಎದುರಿನ ಬಾಗಿಲು ಹಾಕಿ ಒಳಗೆ ವ್ಯಾಪಾರ ಮಾಡುತ್ತಿದ್ದರು. ಇನ್ನು ಕೆಲವರು ಅಂಗಡಿ ಮೇಲಿರುವ ತಮ್ಮ ಮನೆಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಚೌಕಿಪೇಟೆ, ಚಿಗಟೇರಿಗಲ್ಲಿ, ಕಾಯಿಪೇಟೆ, ವಿಜಯಲಕ್ಷ್ಮೀ ರಸ್ತೆ ಸೇರಿದಂತೆ ವಿವಿಧೆಡೆ ಭೇಟಿ ನೀಡಿದ ಪೊಲೀಸರು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ವ್ಯಾಪಾರ ಬಂದ್‌ ಮಾಡಿಸಿದರು.

ಅಂಗಡಿ ಮುಚ್ಚಿಸಿ ವರ್ತಕರಿಗೆ 25 ಸಾವಿರ ರೂ.ಗಳಿಗೂ ಅಧಿಕ ಮೊತ್ತದ ದಂಡದ ಬಿಸಿಯನ್ನೂ ಮುಟ್ಟಿಸಿದರು. ಅವಶ್ಯಕ ವಸ್ತುಗಳ ಖರೀದಿಗೆ ನಿಗದಿಪಡಿಸಿದ ಸಮಯದ ಬಳಿಕ ರಸ್ತೆಯಲ್ಲಿ ಅನಗತ್ಯವಾಗಿ ಬೈಕ್‌ನಲ್ಲಿ ಓಡಾಡುತ್ತಿದ್ದವರ ಬೈಕ್‌ಗಳನ್ನು ನಗರದ ಹದಡಿ ರಸ್ತೆ, ಅರುಣ ವೃತ್ತ, ಜಯದೇವ ವೃತ್ತ , ಐಟಿಐ ಕಾಲೇಜು ರಸ್ತೆ, ಗುಂಡಿ ಸರ್ಕಲ್‌, ಕೊಂಡಜ್ಜಿ ರಸ್ತೆ ಸೇರಿದಂತೆ ಕೆಲವೆಡೆ ಪೊಲೀಸರು ವಶಪಡಿಸಿಕೊಂಡರು. ಅವಶ್ಯಕ ವಸ್ತುಗಳ ಖರೀದಿಯ ಬೆಳಗಿನ ಅವಧಿ ಬಳಿಕ ಅಂಗಡಿ ಮುಂಗಟ್ಟುಗಳು ಬಂದ್‌ ಆದವು. ಜನ, ವಾಹನ ಸಂಚಾರ ಸ್ಥಗಿತಗೊಂಡವು.

ಟಾಪ್ ನ್ಯೂಸ್

bsy

ಸಿಎಂ ಯಡಿಯೂರಪ್ಪಗೆ ಬೆಂಬಲ ನೀಡಿದ ಅಖಿಲ ಭಾರತ ವೀರಶೈವ ಮಹಾಸಭಾ

ಜನಪ್ರಿಯ ಬಾಬಾ ಕಾ ಡಾಬಾ ಮಾಲೀಕ ಕಾಂತಾ ಪ್ರಸಾದ್ ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಗೆ ದಾಖಲು

ಜನಪ್ರಿಯ ಬಾಬಾ ಕಾ ಡಾಬಾ ಮಾಲೀಕ ಕಾಂತಾ ಪ್ರಸಾದ್ ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಗೆ ದಾಖಲು

ಐತಿಹಾಸಿಕ ಟೆಸ್ಟ್ ಫೈನಲ್ ಗೆ ವರುಣನ ಕಾಟ; ನಿಗದಿತ ಸಮಯಕ್ಕೆ ಆರಂಭವಾಗಲ್ಲ ಪಂದ್ಯ

ಐತಿಹಾಸಿಕ ಟೆಸ್ಟ್ ಫೈನಲ್ ಗೆ ವರುಣನ ಕಾಟ; ನಿಗದಿತ ಸಮಯಕ್ಕೆ ಆರಂಭವಾಗಲ್ಲ ಪಂದ್ಯ

ಟಿಎಂಸಿ ಶಾಸಕ ರಾಯ್ ಅನರ್ಹಗೊಳಿಸುವಂತೆ ಪಶ್ಚಿಮಬಂಗಾಳ ಸ್ಪೀಕರ್ ಗೆ ಬಿಜೆಪಿ ಮನವಿ

ಟಿಎಂಸಿ ಶಾಸಕ ರಾಯ್ ಅನರ್ಹಗೊಳಿಸುವಂತೆ ಪಶ್ಚಿಮಬಂಗಾಳ ಸ್ಪೀಕರ್ ಗೆ ಬಿಜೆಪಿ ಮನವಿ

ಬಹುದಿನಗಳ ದೈಹಿಕ ಶಿಕ್ಷಕರ ಬಡ್ತಿ ಬೇಡಿಕೆಗೆ ಅಸ್ತು: ಸುರೇಶ್ ಕುಮಾರ್

ಬಹುದಿನಗಳ ದೈಹಿಕ ಶಿಕ್ಷಕರ ಬಡ್ತಿ ಬೇಡಿಕೆಗೆ ಅಸ್ತು: ಸುರೇಶ್ ಕುಮಾರ್

ರಾಜ್ಯದ ಸ್ಥಿತಿಗತಿ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಸೋನಿಯಾ ಗಾಂಧಿ ಭೇಟಿ

ರಾಜ್ಯದ ಸ್ಥಿತಿಗತಿ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಸೋನಿಯಾ ಗಾಂಧಿ ಭೇಟಿ

kushee ravi

ಲಾಕ್‌ಡೌನ್‌ ‘ಖುಷಿ’ಯಾಗಿದೆ. ಆದರೆ.. ರಿಲೀಸ್‌ ಸಿನಿಮಾಗಳ ನಿರೀಕ್ಷೆಯಲ್ಲಿ ದಿಯಾ ನಟಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-12

ಬಿಎಸ್‌ವೈ ಹೋಂ ಪ್ರಾಡಕ್ಟ್ ಅಲ್ಲ : ರೇಣು

17-11

ಶಾಮನೂರು ಜನ್ಮದಿನಕ್ಕೆ ಶುಭಾಶಯಗಳ ಮಹಾಪೂರ

17-10

ಸವಾಲಾಗಲಿದೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ!

16-13

ಬಡವರ ಮರಳು ಜಪ್ತಿಗೆ ಅವಕಾಶ ಕೊಡಲ್ಲ

16-12

ನೈಜ ಫಲಾನುಭವಿಗಳಿಗೆ ಯೋಜನೆ ಲಾಭ ಸಿಗಲಿ

MUST WATCH

udayavani youtube

ಎರಡು ದಿನ ವಾರಾಂತ್ಯದ ಕರ್ಫ್ಯೂ: ಯಾವುದಕ್ಕೆಲ್ಲಾ ಅವಕಾಶವಿದೆ? ಯಾವುದಕ್ಕಿಲ್ಲ?

udayavani youtube

ಹೆಬ್ರಿ ಸುತ್ತಮುತ್ತ ಭಾರೀ ಗಾಳಿಮಳೆ, ಬೃಹತ್ ಮರಗಳು ಧರೆಗೆ ,ಅಪಾರ ಹಾನಿ

udayavani youtube

ಆರೋಗ್ಯದಲ್ಲಿ ಸ್ಥಿರ : ಐಸಿಯುನಿಂದ ಹೊರಬಂದ ಮಿಲ್ಕಾ ಸಿಂಗ್

udayavani youtube

ಮಳೆ ಕೊಯ್ಲು: 15 ನಿಮಿಷದ ಮಳೆಗೆ ಸಂಗ್ರಹವಾದ ನೀರು ಎಷ್ಟು ಗೊತ್ತಾ?

udayavani youtube

ಪೇರಳೆ ಕೃಷಿಯಲ್ಲಿ ಖುಷಿ ಕಾಣಲು, ಉಡುಪಿ ಕೃಷಿಕರಿಗೆ ಇಲ್ಲಿದೆ ಸುವರ್ಣವಕಾಶ ,

ಹೊಸ ಸೇರ್ಪಡೆ

bsy

ಸಿಎಂ ಯಡಿಯೂರಪ್ಪಗೆ ಬೆಂಬಲ ನೀಡಿದ ಅಖಿಲ ಭಾರತ ವೀರಶೈವ ಮಹಾಸಭಾ

ಜನಪ್ರಿಯ ಬಾಬಾ ಕಾ ಡಾಬಾ ಮಾಲೀಕ ಕಾಂತಾ ಪ್ರಸಾದ್ ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಗೆ ದಾಖಲು

ಜನಪ್ರಿಯ ಬಾಬಾ ಕಾ ಡಾಬಾ ಮಾಲೀಕ ಕಾಂತಾ ಪ್ರಸಾದ್ ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಗೆ ದಾಖಲು

ಐತಿಹಾಸಿಕ ಟೆಸ್ಟ್ ಫೈನಲ್ ಗೆ ವರುಣನ ಕಾಟ; ನಿಗದಿತ ಸಮಯಕ್ಕೆ ಆರಂಭವಾಗಲ್ಲ ಪಂದ್ಯ

ಐತಿಹಾಸಿಕ ಟೆಸ್ಟ್ ಫೈನಲ್ ಗೆ ವರುಣನ ಕಾಟ; ನಿಗದಿತ ಸಮಯಕ್ಕೆ ಆರಂಭವಾಗಲ್ಲ ಪಂದ್ಯ

ಟಿಎಂಸಿ ಶಾಸಕ ರಾಯ್ ಅನರ್ಹಗೊಳಿಸುವಂತೆ ಪಶ್ಚಿಮಬಂಗಾಳ ಸ್ಪೀಕರ್ ಗೆ ಬಿಜೆಪಿ ಮನವಿ

ಟಿಎಂಸಿ ಶಾಸಕ ರಾಯ್ ಅನರ್ಹಗೊಳಿಸುವಂತೆ ಪಶ್ಚಿಮಬಂಗಾಳ ಸ್ಪೀಕರ್ ಗೆ ಬಿಜೆಪಿ ಮನವಿ

dಎರತಹಜಕಜಹಗ್ದ

ಗಡಿಭಾಗದ ಮಕ್ಕಳಿಗಾಗಿ ಶಾಲೆ ನಿರ್ಮಾಣ ಮಾಡಲು ಒಂದು ಕೋಟಿ ಧನ ಸಹಾಯ ಮಾಡಿದ ಅಕ್ಷಯ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.