Udayavni Special

ಅಗತ್ಯ ವಸ್ತುಗಳಿಗೆ ಮುಗಿಬಿದ್ದ ಜನತೆ

Team Udayavani, May 10, 2021, 9:57 PM IST

10-11

ದಾವಣಗೆರೆ: ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೊನಾದ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಕೊರೊನಾ ಕರ್ಫ್ಯೂವಿನ ಎರಡನೇ ಹಂತ ಸೋಮವಾರದಿಂದ ಜಾರಿಗೆ ಬರಲಿದೆ. ಕೊರೊನಾ ಸೋಂಕಿನ ಸರಪಳಿ ತುಂಡರಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಹಿಂದೆ ಘೋಷಿಸಿದ್ದ ಕೊರೊನಾ ಕರ್ಫ್ಯೂ ಮೇ 12ರಂದು ಮುಕ್ತಾಯವಾಗುವ ಮುನ್ನವೇ ಮತ್ತೆ ಕಠಿಣ ನಿರ್ಬಂಧ ಜಾರಿಗೆ ತಂದಿದೆ. ಎರಡನೇ ಹಂತದ ಕೊರೊನಾ ಕರ್ಫ್ಯೂ ಕಠಿಣವಾಗಿ ಇರಬಹುದು ಎನ್ನುವ ಕಾರಣಕ್ಕಾಗಿಯೇ ಏನೋ ಜನರು ಅಗತ್ಯ ವಸ್ತುಗಳನ್ನು ಮುಗಿ ಬಿದ್ದು ಖರೀದಿಸಿದರು.

ಸೋಮವಾರದಿಂದ ಬಹಳ ಸ್ಟ್ರಿಕ್ಟ್ ಆಗಿ ಕೊರೊನಾ ಕರ್ಫ್ಯೂ ಮಾಡಲಾಗುವುದು. ಯಾರನ್ನೂ ಮನೆಯಿಂದ ಹೊರಗಡೆ ಕಾಲಿಡಲಿಕ್ಕೂ ಬಿಡುವುದಿಲ್ಲವಂತೆ ಎಂದು ತಮ್ಮ ತಮ್ಮಲೇ ಲೆಕ್ಕಾಚಾರದೊಂದಿಗೆ ಜನರು ಬೆಳಗ್ಗೆಯಿಂದಲೇ ಕೆ.ಆರ್‌. ಮಾರ್ಕೆಟ್‌, ಮಂಡಿಪೇಟೆ, ವಿಜಯಲಕ್ಷ್ಮಿ ರಸ್ತೆ, ಚೌಕಿಪೇಟೆ ಇತರೆಡೆ ಅಗತ್ಯ ವಸ್ತುಗಳು, ತರಕಾರಿ, ಹಣ್ಣು ಖರೀದಿಗೆ ದೌಡಾಯಿಸಿದ್ದರು.

ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಇರುವ ಸಮಯವನ್ನ ಭರಪೂರವಾಗಿ ಬಳಸಿಕೊಂಡರು. ಹಾಗಾಗಿ ಎಲ್ಲಿ ನೋಡಿದರೂ ಜನವೋ ಜನ. ಅನೇಕ ರಸ್ತೆಗಳಲ್ಲಿ ವ್ಯಾಪಾರಸ್ಥರು, ಖರೀದಿದಾರು ಅತೀ ಹೆಚ್ಚಿನ ಸಂಖ್ಯೆಯಲ್ಲಿ  ಜಾಮ್‌ ಸಾಮಾನ್ಯ ಎನ್ನುವಂತಾಗಿತ್ತು. ಕೆಲವು ರಸ್ತೆಗಳಲ್ಲಿ ಜನಸಂದಣಿಯ ಕಾರಣಕ್ಕೆ ವಾಹನ ಸವಾರರು, ಆಟೋರಿಕ್ಷಾದವರು ಮುಂದೆ ಸಾಗಲು ಪರದಾಡ ಬೇಕಾಗುತ್ತಿತ್ತು. ಕೊರೊನಾ ಅಬ್ಬರಿಸುತ್ತಿದ್ದರೂ ಸಾಮಾಜಿಕ ಅಂತರ ಎಂಬುದೇ ಅಕ್ಷರಶಃ ಕಾಣೆಯಾಗಿತ್ತು. ಎಲ್ಲರೂ ಖರೀದಿಯ ಧಾವಂತದಲ್ಲೇ ಇದ್ದರು.

ಜನರ ನಿಯಂತ್ರಿಸಬೇಕಾದ ಅಧಿಕಾರಿಗಳು ಕಂಡು ಬರಲೇ ಇಲ್ಲ. ದಾವಣಗೆರೆಯ ಪ್ರಮುಖ ಮಾರ್ಕೆಟ್‌, ವ್ಯಾಪಾರಿ ಸ್ಥಳಗಳಲ್ಲಿ ಮಾತ್ರವಲ್ಲ ಇತರೆ ಬಡಾವಣೆಗಳಲ್ಲೂ ಜನರು ತಂಡೋಪತಂಡವಾಗಿ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದು ಕಂಡು ಬಂದಿತು. ವಿನೋಬ ನಗರ ಎರಡನೇ ಮುಖ್ಯ ರಸ್ತೆ, ವಿದ್ಯಾನಗರ, ಆಂಜನೇಯ ಬಡಾವಣೆ, ತರಳಬಾಳು ಬಡಾವಣೆ, ಜಿಲ್ಲಾ ಕ್ರೀಡಾಂಗಣ ರಸ್ತೆ, ನಿಟುವಳ್ಳಿ.. ಹೀಗೆ ಅನೇಕ ಕಡೆ ಜನಸಂದಣಿ ಸಾಮಾನ್ಯವಾಗಿತ್ತು. ಅಗತ್ಯ ವಸ್ತುಗಳ ಖರೀದಿಗೆ ನೀಡಲಾಗಿದ್ದ ಸಮಯದ ನಂತರವೂ ಜನ, ವಾಹನ ಸಂಚಾರ ದಟ್ಟವಾಗಿತ್ತು. ಕೆಲವಾರು ಕಡೆ ಪೊಲೀಸರು ತಡೆದು, ವಿಚಾರಣೆ ನಡೆಸಿ, ದಂಡ ಹಾಕುವುದು ಕಂಡು ಬಂದಿತು. ಇನ್ನು ಸಂಡೇ ಸ್ಪೆಷಲ್‌ ಕಾರಣಕ್ಕೆ ಮಾಂಸ. ಮೀನು ಅಂಗಡಿಗಳ ಮುಂದೆ ಜನವೋ ಜನ. ಸಾಮಾಜಿಕ ಅಂತರವೇ ಇರಲಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಅಷ್ಟೊಂದು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಮೊದಲನಿಂದಲೇ ಬಹಳ ಸ್ಟ್ರಿಕ್ಟ್ ಆಗಿಯೇ ಕರ್ಫ್ಯೂ ಜಾರಿ ಮಾಡಿದ್ದರೆ ಎಷ್ಟೋ ಕಂಟ್ರೋಲ್‌ಗೆ ಬರುತ್ತಿತ್ತು. ಎಲ್ಲದಕ್ಕೂ ಅವಕಾಶ ಕೊಟ್ಟು, ಜನರು ಓಡಾಡುವುದಕ್ಕೆ ಬಿಟ್ಟು ಈಗ ಮತ್ತೆ 14 ದಿನ ಕರ್ಫ್ಯೂ ಎಂದು ಹೇಳುತ್ತಿದ್ದಾರೆ. ತಿಂಗಳುಗಟ್ಟಲೆ ಇದೇ ರೀತಿ ಆದರೆ ಜನರು ಜೀವನ ಮಾಡುವುದಾದರೂ ಹೇಗೆ. ಸರ್ಕಾರದವರೇನು ನಮಗೆ ಏನು ಕೊಡುತ್ತಾರೆ. ಪ್ರತಿ ವರ್ಷವೂ ಹಿಂಗೆ ಆದರೆ ಜೀವನ ನಡೆಸುವುದು ಬಹಳ ಕಷ್ಟ ಆಗುತ್ತದೆ. ಈಗಲಾದರೂ ಕೊರೊನಾ ಕರ್ಫ್ಯೂವನ್ನು ನಿಜವಾಗಿಯೂ ಕಠಿಣವಾಗಿ ಜಾರಿ ಮಾಡಬೇಕು ಎಂದು ಕೆಲವರು ತಿಳಿಸಿದರು.

ಟಾಪ್ ನ್ಯೂಸ್

ಸೇನಾ ಸಾಮರ್ಥ್ಯ ವೃದ್ಧಿಗೆ ಮುನ್ನುಡಿಯಾದ ಗಾಲ್ವಾನ್‌ ಸಂಘರ್ಷ

ಸೇನಾ ಸಾಮರ್ಥ್ಯ ವೃದ್ಧಿಗೆ ಮುನ್ನುಡಿಯಾದ ಗಾಲ್ವಾನ್‌ ಸಂಘರ್ಷ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಟೀಮ್‌ ಇಂಡಿಯಾದ ಶ್ರೀಲಂಕಾ ಪ್ರವಾಸ : ಮುಂಬಯಿಗೆ ಬಂದ ಧವನ್‌ ಪಡೆ

ಟೀಮ್‌ ಇಂಡಿಯಾದ ಶ್ರೀಲಂಕಾ ಪ್ರವಾಸ : ಮುಂಬಯಿಗೆ ಬಂದ ಧವನ್‌ ಪಡೆ

ಕೇರಳ ಅರಣ್ಯದಲ್ಲಿ ಸ್ಫೋಟಕ ಪತ್ತೆ: ಪಿಎಫ್ಐ ನಂಟು ಶಂಕೆ

ಕೇರಳ ಅರಣ್ಯದಲ್ಲಿ ಸ್ಫೋಟಕ ಪತ್ತೆ: ಪಿಎಫ್ಐ ನಂಟು ಶಂಕೆ

ಸಮುದ್ರ ವಿಮಾನ ಸಾರಿಗೆ ಮೂಲಸೌಕರ್ಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ: ಹರ್ದೀಪ್ ಸಿಂಗ್ ಪುರಿ

ಸಮುದ್ರ ವಿಮಾನ ಸಾರಿಗೆ ಮೂಲಸೌಕರ್ಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ: ಹರ್ದೀಪ್ ಸಿಂಗ್ ಪುರಿ

ಕೋವಿಡ್ ವಿರುದ್ಧ ಜಯ : ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !

ಕೋವಿಡ್ ವಿರುದ್ಧ ಜಯ : ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-11

ಸ್ವಯಂ ಜಾಗೃತಿಯಿಂದ ಕೊರೊನಾ ನಿಯಂತ್ರಣ: ಸ್ವಾಮೀಜಿ

15-10

ಸರ್ವೋನ್ನತ ಏಳಿಗೆಗೆ ಯೋಗ ಸಹಕಾರಿ: ಡಾ| ಶಂಕರ ಗೌಡ

15-9

ಜಿಲ್ಲೆಯ 3.81 ಲಕ್ಷ ಜನರಿಗೆ ಕೊರೊನಾ ಲಸಿಕೆ

WhatsApp Image 2021-06-15 at 8.18.32 PM

ಕೇರ್ ಸೆಂಟರ್ ಗೆ ಕಳುಹಿಸಿದರೆ ವಿಷ ಕುಡಿಯುವುದಾಗಿ ಬೆದರಿಸಿದ ಕೋವಿಡ್ ಸೋಂಕಿತ

ದಾವಣಗೆರೆ ಜಿಲ್ಲೆಯಲ್ಲಿ 789 ಮಂದಿ ಗುಣಮುಖ : 183 ಹೊಸ ಪ್ರಕರಣ ಪತ್ತೆ

ದಾವಣಗೆರೆ ಜಿಲ್ಲೆಯಲ್ಲಿ 789 ಮಂದಿ ಗುಣಮುಖ : 183 ಹೊಸ ಪ್ರಕರಣ ಪತ್ತೆ

MUST WATCH

udayavani youtube

ಆ ಒಂದು ವಿಶೇಷ ಕಾರಣಕ್ಕಾಗಿ ಸಂಚಾರಿ ವಿಜಯ್ ಉಡುಪಿಗೆ ಬಂದಿದ್ರು !

udayavani youtube

ಐಸಿಸಿ ಟೆಸ್ಟ್ ಫೈನಲ್ ಗೆ ಕಾದಿದೆ ಪೇಸ್ ಆ್ಯಂಡ್ ಬೌನ್ಸಿ ಪಿಚ್

udayavani youtube

ವಿಶಿಷ್ಟವಾಗಿ DRAGON FRUIT ಬೆಳೆದ ಕಾರ್ಕಳದ ರೈತನಿಗೆ ಭೇಷ್ ಎಂದ ಮಂಗಳೂರು ಕಮೀಷನರ್

udayavani youtube

ಬಿರುಕು ಬಿಟ್ಟ ಮರವೂರು ಸೇತುವೆ: ಸಂಚಾರ ನಿರ್ಬಂಧ; ಬದಲಿ ರಸ್ತೆ ವ್ಯವಸ್ಥೆ

udayavani youtube

ನಿಮ್ಮ ಮಾನಸಿಕ ಸ್ಥಿತಿ ಸರಿ ಮಾಡಿಕೊಳ್ಳಿ’:ನಟ ಚೇತನ್ ವಿರುದ್ಧ ಆಕ್ರೋಶಗೊಂಡ ರಕ್ಷಿತ್ ಶೆಟ್ಟಿ

ಹೊಸ ಸೇರ್ಪಡೆ

ಸೇನಾ ಸಾಮರ್ಥ್ಯ ವೃದ್ಧಿಗೆ ಮುನ್ನುಡಿಯಾದ ಗಾಲ್ವಾನ್‌ ಸಂಘರ್ಷ

ಸೇನಾ ಸಾಮರ್ಥ್ಯ ವೃದ್ಧಿಗೆ ಮುನ್ನುಡಿಯಾದ ಗಾಲ್ವಾನ್‌ ಸಂಘರ್ಷ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

15-21

ಗುತ್ತಿಗೆದಾರರ ವಿರುದ್ಧ ಕ್ರಮ : ಹಾಲಪ್ಪ

15-20

ಪರಿಹಾರ ಮಧ್ಯವರ್ತಿಗಳ ಪಾಲಾಗದಂತೆ ಕ್ರಮ ಕೈಗೊಳ್ಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.