ದಾವಣಗೆರೆ ಮಹಾನಗರಪಾಲಿಕೆ ಚುನಾವಣೆ: ಸ್ಪಷ್ಟ ಬಹುಮತ ಪಡೆಯಲು ವಿಫಲವಾದ ಕಾಂಗ್ರೆಸ್, ಬಿಜೆಪಿ

Team Udayavani, Nov 14, 2019, 9:29 AM IST

ದಾವಣಗೆರೆ: ಮಹಾನಗರಪಾಲಿಕೆ 45 ವಾರ್ಡ್ ಗಳಿಗೆ ಮಂಗಳವಾರ ನಡೆದ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದ್ದು, ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಲಭ್ಯವಾಗಿಲ್ಲ. ಅಧಿಕಾರ ಚುಕ್ಕಾಣಿ ಹಿಡಿಯಲು ಮ್ಯಾಜಿಕ್ ನಂಬರ್  23. ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ 22, ಜಿಜೆಪಿ 17, ಬಂಡಾಯ ಅಭ್ಯರ್ಥಿಗಳು 5, ಜೆಡಿಎಸ್ 1 ಸ್ಥಾನದಲ್ಲಿ ಜಯ ಗಳಿಸಿದ್ದಾರೆ.

17 ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಬಿ.ಜಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಸತತ ಮೂರು ಬಾರಿ ಗೆಲುವು ಕಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಶೆಟ್ಟಿ ಈ ಬಾರಿ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಇವರು ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಆಪ್ತರಾಗಿದ್ದರು.

ದಾವಣಗೆರೆ-ವಾರ್ಡ್ ನಂ 19 ರಲ್ಲಿ ಪಕ್ಷೇತರ ಅಭ್ಯರ್ಥಿ ಶಿವಪ್ರಕಾಶ್ ಜಯಸಾಧಸಿದ್ದಾರೆ.

ವಾರ್ಡ್ ನಂ. 16 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ನಾಗರಾಜ್ ಗೆಲುವು ಪಡೆದರೆ ಬಿಜೆಪಿಯ ಎಚ್.ದಿವಾಕರ್ ಗೆ ಸೋಲುಂಟಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ