Udayavni Special

ಕೋವಿಡ್ 19 ಭೀತಿಯಲ್ಲೇ ಪಾಲಿಕೆ ಬಜೆಟ್‌


Team Udayavani, Mar 29, 2020, 1:07 PM IST

ಕೋವಿಡ್ 19 ಭೀತಿಯಲ್ಲೇ ಪಾಲಿಕೆ ಬಜೆಟ್‌

ದಾವಣಗೆರೆ: ದಾವಣಗೆರೆ ಮಹಾನಗರಪಾಲಿಕೆಯ 2020-21ನೇ ಸಾಲಿನಲ್ಲಿ ಒಟ್ಟು 284.89 ಲಕ್ಷ ರೂ. ಗಳ ಉಳಿತಾಯ ಆಯ-ವ್ಯಯ ಮಂಡಿಸಲಾಗಿದೆ.

ಶನಿವಾರ, ಪಾಲಿಕೆ ಸಭಾಂಗಣದಲ್ಲಿ ಮೇಯರ್‌ ಬಿ.ಜಿ.ಅಜಯಕುಮಾರ್‌ ಮಂಡಿಸಿದ ನೂತನ ಸಾಲಿನ ಆಯ-ವ್ಯಯದ ಅಂದಾಜು ಪಟ್ಟಿಯಲ್ಲಿ 40,191.13 ಲಕ್ಷ ರೂ. ಸ್ವೀಕೃತಿ ನಿರೀಕ್ಷಿಸಲಾಗಿದ್ದು, ಒಟ್ಟು 39,906.23 ಲಕ್ಷ ರೂ. ಒಟ್ಟು ಪಾವತಿಗಳಿದ್ದು. 284.89 ಲಕ್ಷ ರೂ. ಉಳಿತಾಯ ಅಂದಾಜಿಸಲಾಗಿದೆ. ಹೊಸ ಆರ್ಥಿಕ ಸಾಲಿನಲ್ಲಿ ಪ್ರಾರಂಭಿಕ ಶಿಲ್ಕು 3030.47 ಲಕ್ಷ ರೂ. ಸೇರಿ ರಾಜಸ್ವ ಸ್ವೀಕೃತಿಗಳು 11140.15, ಬಂಡವಾಳ ಸ್ವೀಕೃತಿಗಳು 11140.00 ಹಾಗೂ ಅಸಾಮಾನ್ಯ ಸ್ವೀಕೃತಿಗಳು 14880.50 ರೂ. ಒಳಗೊಂಡಂತೆ 40,191.13 ಜಮೆ ಅಂದಾಜಿಸಲಾಗಿದೆ.

ಹಾಗೆಯೇ ಈ ಸಾಲಿನಲ್ಲಿ ರಾಜಸ್ವ ಪಾವತಿ 11005.23, ಬಂಡವಾಳ ಪಾವತಿ 13,890.00 ಹಾಗೂ ಅಸಾಮಾನ್ಯ ಪಾವತಿಗಳು  5011.00 ಲಕ್ಷ ರೂ. ಸೇರಿದಂತೆ ಒಟ್ಟು 39906.23 ಲಕ್ಷ ರೂ. ವೆಚ್ಚ ಅಂದಾಜಿಸಿ, ಒಟ್ಟು 284.89 ಲಕ್ಷ ರೂ ಉಳಿತಾಯ ನಿರೀಕ್ಷಿಸಲಾಗಿದೆ ಎಂದು ಅವರು ಹೊಸ ಸಾಲಿನ ಲೆಕ್ಕಾಚಾರ ಮಂಡಿಸಿದರು.

ನಗರದ ಸರ್ವಾಂಗೀಣ ಅಭಿವೃದ್ಧಿ ಮಾತ್ರವೇ ಮಾನದಂಡವಾಗಿಸಿಕೊಂಡು ಈ ಸಾಲಿನ ಆಯ-ವ್ಯಯ ಸಿದ್ಧಪಡಿಸಲಾಗಿದೆ. ಪಕ್ಷಾತೀತವಾಗಿ ಎಲ್ಲಾ ಸದಸ್ಯರ ಸಲಹೆ, ಆಶೋತ್ತರ, ನಗರದ ನಾಗರಿಕರು ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ನಡೆಸಿದ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ವ್ಯಕ್ತವಾದ ಸಲಹೆ-ಸೂಚನೆ ಜತೆಗೆ, ನಗರದಅಭಿವೃದ್ಧಿಗೆ ಹೊಂದಿರುವ ನನ್ನದೇ ಆದ ಕೆಲವು ಕನಸು ನನಸು ಮಾಡುವ ನಿಟ್ಟಿನಲ್ಲಿ ಸೀಮಿತ ಸಂಪನ್ಮೂಲಗಳಲ್ಲೇ ಸಾಧ್ಯವಾದಷ್ಟು ಉತ್ತಮ ಆಯ-ವ್ಯಯ ಸಿದ್ಧಪಡಿಸಲು ಪ್ರಯತ್ನಿಸಿದ್ದೇನೆ ಎಂದು ಮೇಯರ್‌ ಬಜೆಟ್‌ ಮಂಡಿಸುವ ವೇಳೆ ಪ್ರಸ್ತಾಪಿಸಿದರು.

ಕಳೆದ ನವೆಂಬರ್‌ನಲ್ಲಿ ಪಾಲಿಕೆಗೆ ಚುನಾವಣೆ ನಡೆದು, ಹೊಸದಾಗಿ ರಚನೆಗೊಂಡ ಕೌನ್ಸಿಲ್‌ ಬಗ್ಗೆ ನಗರದ ಜನತೆಗೆ ಹಲವು ನಿರೀಕ್ಷೆಗಳಿರುವುದು ಸಹಜ. ಆ ನಿರೀಕ್ಷೆ ನೆರವೇರಿಸುವ ನಿಟ್ಟಿನಲ್ಲಿ ತಮ್ಮ ನೇತೃತ್ವದ ಆಡಳಿತ ಕಟಿಬದ್ಧವಾಗಿದೆ. ಸರ್ಕಾರದ ಹಳೇ ಯೋಜನೆಗಳು ಮುಂದುವರಿಯಲಿದ್ದು, ನಗರಗಳ ಮೂಲ ಸೌಕರ್ಯ ಅಭಿವೃದ್ಧಿ ಗುರಿ ಹೊಂದಿದ ರಾಜ್ಯ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ವಿವಿಧ ಕಾಮಗಾರಿಗಳು ಈ ಸಾಲಿನಲ್ಲಿ ಅನುಷ್ಟಾನಗೊಳ್ಳಲಿವೆ. ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್‌.ಎ.ರವೀಂದ್ರನಾಥ್‌ ಅವರ ವಿಶೇಷ ಆಸಕ್ತಿಯಿಂದ ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಯಾಗಲಿದ್ದು, ಹಲವಾರು ಕಾಮಗಾರಿಗಳು ಅನುಷ್ಟಾನಗೊಳ್ಳಲಿವೆ ಎಂದು ಅವರು ಹೇಳಿದರು.

ಪಾಲಿಕೆಗೆ ಸ್ವಂತ ಆದಾಯ ಸಂಪನ್ಮೂಲಗಳು ಸೀಮಿತವಾಗಿದ್ದು, ಇರುವ ಮೂಲಗಳನ್ನೇ ಬಲಪಡಿಸಿ, ಆದಾಯ ವೃದ್ಧಿಗೆ ಶ್ರಮಿಸಲಾಗುವುದು. ಈಗಾಗಲೇ ಜಾರಿಯಲ್ಲಿರುವ ಆಸ್ತಿ, ನೀರಿನ ಸಂಪರ್ಕಗಳ ದಾಖಲೆ ಗಣಕೀಕರಣ ಕಾರ್ಯ ಮುಂದಿನ ಸಾಲಿನಲ್ಲಿ ಪೂರ್ಣಗೊಳ್ಳಲಿದ್ದು, ಆಸ್ತಿ ಹಾಗೂ ನೀರಿನ ತೆರಿಗೆ ಸಂಗ್ರಹದಲ್ಲಿ ಗಣನೀಯ ಪ್ರಗತಿ ಸಾಧಿಸಲಾಗುವುದು ಎಂದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಷ್ಟ್ರಮಟ್ಟದಲ್ಲಿ ಸಾಧಿಸಿದ ಹಳ್ಳಿ ಪ್ರತಿಭೆ ಬೇಬಿ

ರಾಷ್ಟ್ರಮಟ್ಟದಲ್ಲಿ ಸಾಧಿಸಿದ ಹಳ್ಳಿ ಪ್ರತಿಭೆ ಬೇಬಿ

ರಾಜ್ಯದಲ್ಲಿ ಒಂದೇ ದಿನ 248 ಮಂದಿಯಲ್ಲಿ ದೃಢಪಟ್ಟ ಕೋವಿಡ್-19 ಸೋಂಕು

ರಾಜ್ಯದಲ್ಲಿ ಒಂದೇ ದಿನ 248 ಮಂದಿಯಲ್ಲಿ ದೃಢಪಟ್ಟ ಕೋವಿಡ್-19 ಸೋಂಕು

DREAMS – ಈ ಕನಸುಗಳನ್ನೂ ಒಮ್ಮೆ ನೋಡಿಬಿಡಿ

DREAMS – ಈ ಕನಸುಗಳನ್ನೂ ಒಮ್ಮೆ ನೋಡಿಬಿಡಿ

ಬಿಜೆಪಿ ಹೈಕಮಾಂಡ್ ಬಯಸಿದರೆ 5 ಕೈ ಶಾಸಕರ ರಾಜೀನಾಮೆ ಕೊಡಿಸುತ್ತೇನೆ: ರಮೇಶ್ ಜಾರಕಿಹೊಳಿ

ಬಿಜೆಪಿ ಹೈಕಮಾಂಡ್ ಬಯಸಿದರೆ 5 ಕೈ ಶಾಸಕರ ರಾಜೀನಾಮೆ ಕೊಡಿಸುತ್ತೇನೆ: ರಮೇಶ್ ಜಾರಕಿಹೊಳಿ

ಪಾಕ್ ನಲ್ಲಿ ಹಿಜ್ಬುಲ್ ಉಗ್ರಗಾಮಿ ಮುಖ್ಯಸ್ಥ ಸೈಯದ್ ಮೇಲೆ ದಾಳಿ; ಐಎಸ್ ಐ ಕೈವಾಡ

ಪಾಕ್ ನಲ್ಲಿ ಹಿಜ್ಬುಲ್ ಉಗ್ರಗಾಮಿ ಮುಖ್ಯಸ್ಥ ಸೈಯದ್ ಮೇಲೆ ದಾಳಿ; ಐಎಸ್ ಐ ಕೈವಾಡ

ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ ಅಮೇಜ್ಹ್ ಫಿಟ್‌ ಟಿ ರೆಕ್ಸ್‌ ಸ್ಮಾರ್ಟ್‌ ವಾಚ್‌

ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ ಅಮೇಜ್ಹ್ ಫಿಟ್‌ ಟಿ ರೆಕ್ಸ್‌ ಸ್ಮಾರ್ಟ್‌ ವಾಚ್‌

ಎನ್‌ 95 ಮಾಸ್ಕ್ ಗಳನ್ನು ಸ್ವಚ್ಛಗೊಳಿಸಬಹುದೇ? ಇಲ್ಲಿದೆ ಮಾಹಿತಿ

ಎನ್‌ 95 ಮಾಸ್ಕ್ ಗಳನ್ನು ಸ್ವಚ್ಛಗೊಳಿಸಬಹುದೇ? ಇಲ್ಲಿದೆ ಮಾಹಿತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

29-May-20

ಬಿತ್ತನೆ ಬೀಜ-ಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳಿ

29-May-19

ನೀರಿನ ದರ ಏರಿಕೆಗೆ ಆಕ್ಷೇಪ

29-May-04

7 ಸಾಂಸ್ಥಿಕ ಕ್ವಾರಂಟೈನ್‌ ಸೆಂಟರ್‌ ಆರಂಭ: ಡಾ| ಪಾಲಾಕ್ಷ

29-May-03

ಭತ್ತ ಬೆಳೆಗಾರರಿಗೆ ಮರೀಚಿಕೆಯಾದ ಬೆಂಬಲ ಬೆಲೆ

dG-TDY-1

ವಿದ್ಯುತ್‌ ನೀತಿ ಜಾರಿಗೆ ವಿರೋಧ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

29-May-28

ವಲಸೆ ಕಾರ್ಮಿಕರ ಸುರಕ್ಷತೆಗೆ ಒತ್ತು ಕೊಡಿ

29-May-26

ಕೋವಿಡ್ ಜಾಗೃತಿಗಾಗಿ “ಹಿತ್ಲಮನೆ’ ಕಿರುಚಿತ್ರ

29-May-25

ಪಿಯು ಮೌಲ್ಯಮಾಪನಕ್ಕೆ ಆತುರ ಬೇಡ

ರಾಷ್ಟ್ರಮಟ್ಟದಲ್ಲಿ ಸಾಧಿಸಿದ ಹಳ್ಳಿ ಪ್ರತಿಭೆ ಬೇಬಿ

ರಾಷ್ಟ್ರಮಟ್ಟದಲ್ಲಿ ಸಾಧಿಸಿದ ಹಳ್ಳಿ ಪ್ರತಿಭೆ ಬೇಬಿ

ಚತ್ತೀಸ್ ಗಢದ ಮೊದಲ ಸಿಎಂ, ಹಿರಿಯ ರಾಜಕಾರಣಿ ಅಜಿತ್ ಜೋಗಿ ವಿಧಿವಶ

ಚತ್ತೀಸ್ ಗಢದ ಮೊದಲ ಸಿಎಂ, ಹಿರಿಯ ರಾಜಕಾರಣಿ ಅಜಿತ್ ಜೋಗಿ ವಿಧಿವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.