ಡಾಟಾ ಎಂಟ್ರಿ ಆಪರೇಟರ್ಗೆ ಬಡ್ತಿನೀಡಿ: ಪಾಟೀಲ
Team Udayavani, Jan 23, 2022, 8:09 PM IST
ದಾವಣಗೆರೆ: ಗ್ರಾಮ ಪಂಚಾಯಿತಿಗಳಲ್ಲಿಕಾರ್ಯನಿರ್ವಹಿಸುವ ಕ್ಲರ್ಕ್ ಕಂ ಡಿಇಒ (ಡಾಟಾಎಂಟ್ರಿ ಆಪರೇಟರ್)ಗಳಿಗೆ ಬಡ್ತಿ ನೀಡುವಪ್ರಕ್ರಿಯೆಯನ್ನು ಎಲ್ಲ ಜಿಲ್ಲಾ ಪಂಚಾಯಿತಿಗಳುಶೀಘ್ರ ಪೂರ್ಣಗೊಳಿಸಬೇಕು ಎಂದು ರಾಜ್ಯಗ್ರಾಮ ಪಂಚಾಯಿತಿ ಕ್ಲರ್ಕ್ ಕಂ ಡಿಇಒ ನೌಕರರಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಭೀಮರೆಡ್ಡಿ ಪಾಟೀಲಕೋರಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, 1993ರಿಂದಲೂ ಗ್ರಾಪಂಗಳಲ್ಲಿ ಕರವಸೂಲಿಮಾಡುವವರಿಗೆ ಮಾತ್ರ ಗ್ರೇಡ್-2 ಕಾರ್ಯದರ್ಶಿಹಾಗೂ ದ್ವಿತೀಯದರ್ಜೆ ಲೆಕ್ಕ ಸಹಾಯಕ ಹುದ್ದೆಗಳಿಗೆಬಡ್ತಿ ನೀಡಲಾಗುತ್ತಿತ್ತು. 15ವರ್ಷಗಳ ಅವಿರತಹೋರಾಟದ ಫಲವಾಗಿ ಸರ್ಕಾರ 7-9-2021ರಿಂದಅನ್ವಯಿಸುವಂತೆ ಕ್ಲರ್ಕ್ ಕಂ ಡಿಇಒಗಳಿಗೂ ಬಡ್ತಿಗೆಅವಕಾಶ ಮಾಡಿಕೊಟ್ಟಿದೆ. ಇದರಿಂದ ರಾಜ್ಯದ ಆರುಸಾವಿರ ಕ್ಲರ್ಕ್ ಕಂ ಡಿಇಒಗಳಿಗೆ ಅನುಕೂಲವಾಗಿದೆ.
ಆದರೆ, ಈ ಆದೇಶ ಅನುಷ್ಠಾನಕ್ಕಾಗಿ ಜಿಲ್ಲಾಪಂಚಾಯಿತಿಗಳಿಗೆ ಜೇಷ್ಠತಾ ಪಟ್ಟಿ ತಯಾರಿಸಲುಸೂಚಿಸಲಾಗಿದ್ದು ಜೇಷ್ಠತಾ ಪಟ್ಟಿ ಸಿದ್ಧಪಡಿಸುವಪ್ರಕ್ರಿಯೆ ತೀರಾ ವಿಳಂಬವಾಗುತ್ತಿದೆ. ರಾಜ್ಯದ8-10ಜಿಲ್ಲೆಗಳಲ್ಲಿ ಮಾತ್ರ ಈ ಕಾರ್ಯ ನಡೆದಿದ್ದುಉಳಿದ ಜಿಪಂಗಳಲ್ಲಿ ವಿಳಂಬ ಮಾಡಲಾಗುತ್ತಿದೆ.ಈ ವಿಳಂಬ ನೀತಿಯಿಂದ ನಿವೃತ್ತಿ ಅಂಚಿನಲ್ಲಿರುವನೌಕರರಿಗೆ ತೊಂದರೆಯಾಗುತ್ತಿದ್ದು ಬಡ್ತಿ ನೀಡುವಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಬೇಕು ಎಂದುಅವರು ವಿನಂತಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರೆನ್ಯೂ ಪವರ್ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ
ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ
ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ
ಲಕ್ಷಾಂತರ ಭಕ್ತರ ಮಧ್ಯೆ ಸಾಂಘವಾಗಿ ನೆರವೇರಿದ ಹುಲಿಗೆಮ್ಮದೇವಿ ಮಹಾ ರಥೋತ್ಸವ
ಬಿಜೆಪಿ ಕ್ಯಾನ್ಸರ್ ಇದ್ದಂತೆ ಮನುಕುಲ ನಾಶ ಮಾಡಲಿದೆ : ಸಿದ್ದರಾಮಯ್ಯ ವಾಗ್ದಾಳಿ