ಮರು ಮತದಾರರ ಪಟ್ಟಿಗೆ ಸೇರಿಸಲು ನಾಗರಿಕರ ಒತ್ತಾಯ
Team Udayavani, Jan 23, 2022, 8:13 PM IST
ದಾವಣಗೆರೆ: ವಿನೋಬ ನಗರದ 16ನೇ ವಾಡ್ìನಲ್ಲಿ ವಾಸವಿರುವ ಸಾವಿರಾರು ಅರ್ಹಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದತೆಗೆಯಲಾಗಿದ್ದು ಸಂಬಂಧಪಟ್ಟ ಅಧಿಕಾರಿಗಳುಈ ಕುರಿತು ಪರಿಶೀಲಿಸಿ, ಅರ್ಹ ಮತದಾರರನ್ನುಮರು ಮತದಾರರ ಪಟ್ಟಿಗೆ ಸೇರಿಸಬೇಕು ಎಂದುಆ ಭಾಗದ ಮತದಾರರು ಆಗ್ರಹಿಸಿದ್ದಾರೆ.ವಿನೋಬ ನಗರ 16ನೇ ವಾರ್ಡ್‌ನನಿವಾಸಿಗರು ಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದರು.
ಮೃತಪಟ್ಟರೆ, ಬೇರೆಡೆಹೋದಂತ ಪ್ರಕರಣಗಳಲ್ಲಿ 8-10 ಮತದಾರರನ್ನುಪಟ್ಟಿಯಿಂದ ತೆಗೆದರೆ ಸುಮ್ಮನಿರಬಹುದಿತ್ತು.ಆದರೆ, ಇಲ್ಲಿ ಸಾಮೂಹಿಕವಾಗಿ ಏಕಾಏಕಿ, ಯಾರಗಮನಕ್ಕೂ ತಾರದೆ ಸಾವಿರಾರು ಜನರ ಹೆಸರನ್ನುಮತದಾರರ ಪಟ್ಟಿಯಿಂದ ತೆಗೆದು ಹಾಕಿರುವುದುಸಂಶಯಾಸ್ಪದವಾಗಿದೆ. ಇದರಿಂದ ವಾರ್ಡ್‌ನಸಾವಿರಾರು ಅರ್ಹ ಮತದಾರರ ಮತದಾನದಹಕ್ಕನ್ನು ಕಿತ್ತುಕೊಂಡಂತಾಗಿದೆ ಎಂದರು.
ವಾರ್ಡ್‌ನಲ್ಲಿ 20-30 ವರ್ಷಗಳಿಂದವಾಸವಿದ್ದವರು, ಬಾಡಿಗೆ ಮನೆಯನ್ನು ಅಕ್ಕಪಕ್ಕದ ರಸ್ತೆಗೆ ಸ್ಥಳಾಂತರಗೊಂಡವರ ಹೆಸರನ್ನೂಮತದಾರರ ಪಟ್ಟಿಯಿಂದ ತೆಗೆಯಲಾಗಿದೆ.ಜಿಲ್ಲಾಧಿಕಾರಿಯವರು ಕೂಡಲೇ ಇದನ್ನುಪರಿಶೀಲಿಸಿ, ಅರ್ಹ ಮತದಾರರಿಗೆ ನ್ಯಾಯಒದಗಿಸಬೇಕು ಎಂದರು.