ಕೊರೊನಾ ಸೋಂಕಿನ ಕಾಟಕ್ಕೆ ಸೇತುಬಂಧ ಮಾರ್ಪಾಡು!


Team Udayavani, Jun 25, 2021, 4:33 PM IST

davanagere-news Special Content

ಎಚ್‌.ಕೆ.ನಟರಾಜ

ದಾವಣಗೆರೆ : ಕೋವಿಡ್‌ ಸಾಂಕ್ರಾಮಿಕ ಕಾಡುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ, ಸರ್ಕಾರಿ ಪ್ರಾಥಮಿಕ ಶಾಲೆಗಳ ಸೇತುಬಂಧ (ಬ್ರಿಡ್ಜ್ ಕೋರ್ಸ್‌) ಕಲಿಕಾ ಪದ್ಧತಿಯಲ್ಲಿಯೇ ಮಾರ್ಪಾಡು ತಂದು ಮಕ್ಕಳ ಸ್ವಕಲಿಕೆಗೆ ಉತ್ತೇಜನ ನೀಡಲು ಮುಂದಾಗಿದೆ. ಇದಕ್ಕಾಗಿ ಹೊಸ ವಿನ್ಯಾಸದ ಕ್ಯೂಆರ್‌ ಕೋಡ್‌ ಇರುವ ಅಭ್ಯಾಸ ಮತ್ತು ಚಟುವಟಿಕೆ ಹಾಳೆಗಳನ್ನು ಸಿದ್ಧಪಡಿಸಿದೆ. ಮಕ್ಕಳಿಗೆ ಅಗತ್ಯವಿರುವಂತೆ ಆನ್‌ಲೈನ್‌ ಮತ್ತು ಆಫ್‌ಲೈನ್‌ ಮಾದರಿ ಯಲ್ಲಿ ಈ ಅಭ್ಯಾಸ ಮತ್ತು ಚಟುವಟಿಕೆ ಹಾಳೆಗಳನ್ನು ಸಮಗ್ರ ಶಿಕ್ಷಣ ವತಿಯಿಂದ ಹೊಸದಾಗಿ ಸಿದ್ಧಗೊಳಿಸಲಾಗಿದೆ.

60 ದಿನಗಳ ನಲಿ-ಕಲಿ ಸೇತುಬಂಧ ಕಲಿಕಾ ಮಾದರಿಗೆ ಪೂರಕವಾಗಿ ವಿಷಯವಾರು, ತರಗತಿವಾರು ಅಗತ್ಯವಿರುವ ಸ್ವಕಲಿಕಾ ಆಧಾರಿತ ಚಟುವಟಿಕೆ ಮತ್ತು ಅಭ್ಯಾಸದ ಹಾಳೆಗಳನ್ನು ರಾಜ್ಯ ನಲಿ-ಕಲಿ ಸಂಪನ್ಮೂಲ ವ್ಯಕ್ತಿಗಳ ನೆರವಿನೊಂದಿಗೆ ಹೊಸದಾಗಿ ವಿನ್ಯಾಸಗೊಳಿಸಲಾಗಿದೆ. ಅಭ್ಯಾಸ ಮತ್ತು ಚಟುವಟಿಕೆಯ ಈ ಹೊಸ ವಿನ್ಯಾಸದ ಕೆಲವು ಹಾಳೆಗಳಲ್ಲಿ ಕ್ಯೂಆರ್‌ ಕೋಡ್‌ ಅಳವಡಿಸಿರುವುದು ವಿಶೇಷ. ವಿಡಿಯೋ ಮತ್ತು ಆಡಿಯೋಗಳನ್ನು ಉಪಯೋಗಿಸಿ ಮಕ್ಕಳು ಹೆಚ್ಚಿನ ಕಲಿಕಾ ಅನುಭವ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಹಾಗೆಯೇ ಇಲಾಖೆಯಿಂದ ಪ್ರಸಾರಕ್ಕೆ ಕ್ರಮ ವಹಿಸಿದ ರೇಡಿಯೋ, ದೂರದರ್ಶನ ಪಾಠ ಪ್ರಸಾರದ ಬಳಕೆಗೂ ಇದು ನೆರವು ನೀಡುವ ಸಾಧ್ಯತೆ ಇದೆ. ಈ ತಂತ್ರಜ್ಞಾನ ಮಕ್ಕಳ ಕಲಿಕೆಯನ್ನು ಸಾಧ್ಯವಾದಷ್ಟು ಪರಿಣಾಮಕಾರಿಗೊಳಿಸಲು ಹಾಗೂ ಏಕತಾನತೆಯನ್ನು ನೀಗಿಸಲು ಸಹಕಾರಿಯಾಗಬಲ್ಲದು ಎಂದು ಶಿಕ್ಷಣ ಇಲಾಖೆ ನಿರೀಕ್ಷಿಸಿದೆ.

ಅಭ್ಯಾಸ ಹಾಳೆ ಬಳಕೆ ಕಡ್ಡಾಯ: ಅಭ್ಯಾಸ ಹಾಳೆಗಳಲ್ಲಿರುವ ಕ್ಯೂಆರ್‌ ಕೋಡ್‌ ಸ್ಕಾನ್‌ ಮಾಡುವ ಬಗ್ಗೆ ಪೋಷಕರಿಗೆ ಅಥವಾ ಮಕ್ಕಳ ಮನೆಯಲ್ಲಿರುವ ಸುಗಮಕಾರರಿಗೆ ಆನ್‌ಲೈನ್‌ ಇಲ್ಲವೇ ದೂರವಾಣಿ ಮೂಲಕ ಮಾರ್ಗದರ್ಶನ ನೀಡಲು ಸಹ ಇಲಾಖೆ ಯೋಜನೆ ಹಾಕಿಕೊಂಡಿದೆ. ಈ ಹಾಳೆಗಳನ್ನು ಸೇತುಬಂಧ ಮಾದರಿಯೊಂದಿಗೆ ಎಲ್ಲ ಶಾಲೆಗಳ ಶಿಕ್ಷಕರಿಗೆ ತಲುಪಿಸಲಿದೆ.

ಪ್ರತಿ ಮಗುವೂ ವಿನ್ಯಾಸಗೊಳಿಸಿದ ಅಭ್ಯಾಸದ ಹಾಳೆಗಳನ್ನು (ವರ್ಕ್‌ಶೀಟ್‌) ಬಳಸುವುದನ್ನು ಕಡ್ಡಾಯ ಮಾಡಲಾಗಿದೆ. ಈ ಸೃಜನಾತ್ಮಕ ಹಾಳೆಗಳ ಅಗತ್ಯತೆ ಕಂಡು ಬಂದಲ್ಲಿ ವಿಷಯವಾರು ಶಿಕ್ಷಕರು ಸ್ಥಳೀಯ ಅವಶ್ಯಕತೆ ಹಾಗೂ ಲಭ್ಯ ಸಂಪನ್ಮೂಲ ಆಧರಿಸಿ ಕ್ರಿಯಾಶೀಲವಾಗಿ ರೂಪಿಸಿ ಬಳಸಿಕೊಳ್ಳಲು ಸಹ ಅವಕಾಶ ನೀಡಲಾಗಿದೆ. ಪ್ರತಿ ಶಾಲೆಯು ತಮ್ಮಲ್ಲಿ ಲಭ್ಯವಿರುವ ಶಾಲಾನುದಾನದಿಂದಲೇ ಅಭ್ಯಾಸ ಹಾಳೆಗಳನ್ನು ಝೆರಾಕ್ಸ್‌ ಮಾಡುವ ಮೂಲಕ ಮಕ್ಕಳಿಗೆ ಒದಗಿಸಬೇಕು.

ಆನ್‌ಲೈನ್‌ ಮಾಧ್ಯಮದ ಮೂಲಕ ಇಲ್ಲವೇ ಆಫ್‌ಲೈನ್‌ ಮಾಧ್ಯಮದ ಅಂದರೆ ನೇರವಾಗಿ ಮಕ್ಕಳಿಗೆ ಅಭ್ಯಾಸ ಹಾಳೆಗಳನ್ನು ತಲುಪಿಸಬಹುದಾಗಿದೆ. ಸೇತುಬಂಧ ಕಲಿಕೆಗೆ ಸಂಬಂಧಿಸಿ ಮೌಲ್ಯಮಾಪನಕ್ಕೆ ಕಲಿಕಾ ಅಭ್ಯಾಸದ ಹಾಳೆಗಳನ್ನೇ ಬಳಸಲು ಶಿಕ್ಷಕರಿಗೆ ಸೂಚಿಸಲಾಗಿದೆ. ಅಭ್ಯಾಸ ಪೂರ್ಣಗೊಳಿಸಿದ ಹಾಳೆಗಳನ್ನು ಮಕ್ಕಳಿಂದ ನೇರವಾಗಿ ಇಲ್ಲವೇ ಆನ್‌ಲೈನ್‌ ಮೂಲಕ ಮರಳಿ ಪಡೆದು ಮಕ್ಕಳ ಕಲಿಕೆಯ ಸಾಧನೆಯನ್ನು ಮೌಲ್ಯಮಾಪನಕ್ಕೆ ಒಳಪಡಿಸಬೇಕು. ಪೂರ್ಣ ಸರಿ ಉತ್ತರ ಇದ್ದರೆ “ಎ’ ಎಂದೂ, ತಪ್ಪಾದ ಉತ್ತರ ಇದ್ದರೆ “ಬಿ’ ಎಂದೂ ಶ್ರೇಣಿಗಳನ್ನು ನೀಡಬೇಕು.

“ಬಿ’ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸೂಕ್ತ ಹಿಮ್ಮಾಹಿತಿ ನೀಡುವ ಮೂಲಕ ಪೂರಕ ಚಟುವಟಿಕೆ ಮಾಡಿಸಿ ಕಲಿಕಾ ಕೊರತೆ ನೀಗಿಸಬೇಕು. ಮಕ್ಕಳ ಈ ಅಭ್ಯಾಸದ ಹಾಳೆಗಳನ್ನು ಮಕ್ಕಳ ಪೋರ್ಟ್‌ ಪೊಲಿಯೋದಲ್ಲಿ ಸಂಗ್ರಹಿಸಿಟ್ಟು ಕೊಳ್ಳಬೇಕು. ಸೇತುಬಂಧ ಕಲಿಕೆಗೆ ನಿರ್ದಿಷ್ಟಪಡಿಸಿದ ಕಲಿಕಾ ದಿನಗಳು ಪೂರ್ಣಗೊಂಡ ಬಳಿಕವೇ ಪ್ರತಿ ಮಗು ತರಗತಿವಾರು ಪ್ರಸಕ್ತ ಸಾಲಿನ ಕಲಿಕೆಗೆ ಪ್ರವೇಶ ಪಡೆದುಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ. ಶಿಕ್ಷಕರಿಗೆ ತರಬೇತಿ: ಅಭ್ಯಾಸ ಹಾಳೆಗಳ ಬಳಕೆಯ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ನೆರವು ನೀಡಲು ಅಗತ್ಯವಿರುವ ಸೂಚನೆ, ಮಾರ್ಗದರ್ಶನಗಳನ್ನು ಸಹ ಪೋಷಕರಿಗೂ ಸ್ಪಷ್ಟಪಡಿಸಬೇಕು. ಈ ಅಭ್ಯಾಸ ಹಾಳೆಗಳನ್ನು ಮಕ್ಕಳಿಗೆ ನೀಡಿರುವ ಮತ್ತು ಹಿಂಪಡೆದಿರುವ ಬಗ್ಗೆ ಸೂಕ್ತ ದಾಖಲೆಯನ್ನು ಶಿಕ್ಷಕರು ನಿರ್ವಹಿಸಬೇಕು.

ಅಭ್ಯಾಸ ಹಾಳೆಗಳ ಬಳಕೆಯ ಬಗ್ಗೆ ಶಿಕ್ಷಕರಿಗೆ ಕ್ಲಸ್ಟರ್‌ ಹಂತದಲ್ಲಿ ಗೂಗಲ್‌, ಝೂಮ್‌, ವಿಡಿಯೋ ಮಾಧ್ಯಮ ಆಧಾರಿತ ಸಭೆಗಳ ಮೂಲಕ ಮಾರ್ಗದರ್ಶನ ನೀಡಲಾಗುತ್ತಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.