ಕೃಷಿ ಕಾಯ್ದೆ ವಾಪಾಸ್‌: ದೇವನಗರಿಯಲ್ಲಿ ಸಂಭ್ರಮ


Team Udayavani, Nov 20, 2021, 9:54 AM IST

davanagere news

ದಾವಣಗೆರೆ: ಕೇಂದ್ರ ಸರ್ಕಾರ ಮೂರುಕೃಷಿ ಕಾಯ್ದೆಗಳನ್ನು ವಾಪಾಸ್‌ ಪಡೆದಿರುವಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯ ರೈತ ಸಂಘ,ಹಸಿರು ಸೇನೆ, ಸಂಯುಕ್ತ ಹೋರಾಟ ಕರ್ನಾಟಕ, ಜಿಲ್ಲಾ ಕಾಂಗ್ರೆಸ್‌ ಒಳಗೊಂಡಂತೆವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಜಯದೇವ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ಜಯಘೋಷಣೆ ಕೂಗುವ ಮೂಲಕ ವಿಜಯೋತ್ಸವ ಆಚರಿಸಿದರು.

ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ(ಹುಚ್ಚವ್ವನಹಳ್ಳಿ ಮಂಜುನಾಥ್‌ ಬಣ)ರಾಜ್ಯ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್‌ಮಾತನಾಡಿ, ಕೇಂದ್ರ ಸರ್ಕಾರ ಸುಗೀÅವಾಜ್ಞೆಮೂಲಕ ಜಾರಿಗೆ ತಂದಿದ್ದಂತಹ ಮೂರುಕರಾಳ ಕಾಯ್ದೆಗಳನ್ನ ಕೊನಗೆ ವಾಪಾಸ್‌ಪಡೆದಿರುವುದು ಇಡೀ ದೇಶದ ಅನ್ನದಾತರು,ವಿವಿಧ ಪ್ರಗತಿಪರ ಸಂಘಟನೆ ಗಳುನಿರಂತರವಾಗಿ ನಡೆಸಿದ ಹೋರಾಟದ ಫಲ. ಕೃಷಿಕರ ಹೋರಾಟಕ್ಕೆ ಮಣಿದಿರುವ ಕೇಂದ್ರಸರ್ಕಾರ ಕರಾಳ ಕೃಷಿ ಕಾಯ್ದೆ ವಾಪಾಸ್‌ಪಡೆದಿದೆ. ಆಷ್ಟಕ್ಕೆ ಮುಗಿಯುವುದಿಲ್ಲ. ಪ್ರಧಾನಿಗಳ ಆದೇಶ ಲೋಕಸಭೆಯಲ್ಲಿಮಸೂದೆಯಾಗಿ ಒಪ್ಪಿಗೆ ಪಡೆಯಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಅತ್ಯಂತ ತರಾತುರಿಯಲ್ಲಿಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳರದ್ಧತಿಗೆ ಒತ್ತಾಯಿಸಿ ದೆಹಲಿಯಲ್ಲಿ ರೈತರುನಿರಂತರವಾಗಿ ಹೋರಾಟ ನಡೆಸಿದರು.600ಕ್ಕೂ ಹೆಚ್ಚು ರೈತರು ಹುತಾತ್ಮರಾದರು.ಅಹಿರ್ನಿಶಿ ಹೋರಾಟದಿಂದ ಕೇಂದ್ರ ಸರ್ಕಾರಕ್ಕೆಕಡೆಗೂ ಜ್ಞಾನೋದಯವಾಗಿ ಕೃಷಿ ಕಾಯ್ದೆಗಳಹಿಂದಕ್ಕೆ ಪಡೆದಿದೆ. ಇದು ರೈತಾಪಿ ವರ್ಗದಸಂಘಟಿತ ಹೋರಾಟಕ್ಕೆ ಸಿಕ್ಕ ಜಯ ಎಂದು ಬಣ್ಣಿಸಿದರು.

ದಾವಣಗೆರೆಯಲ್ಲೂ ಕೃಷಿ ಕಾಯ್ದೆಗಳವಿರುದ್ಧ 16 ತಿಂಗಳಲ್ಲಿ ವಿವಿಧ ಹಂತದಲ್ಲಿಹೋರಾಟ ನಡೆಸಲಾಗಿದೆ. ದಾವಣಗೆರೆಬಂದ್‌, ರಸ್ತೆ ತಡೆ, ಹೆದ್ದಾರಿ ತಡೆ… ಹೀಗೆಹಲವಾರು ಹೋರಾಟ ನಡೆಸಲಾಗಿದ್ದು,ಈಚೆಗೆ ನಮ್ಮನ್ನು ಅಗಲಿದಂತಹ ಕಾರ್ಮಿಕಮುಖಂಡ ಎಚ್‌.ಕೆ. ರಾಮಚಂದ್ರಪ್ಪ ಅವರುಹೋರಾಟದಲ್ಲಿ ಭಾಗವಹಿಸಿದ್ದನ್ನು ಯಾರೂಸಹ ಮರೆಯುವಂತೆಯೇ ಇಲ್ಲ ಎಂದುಸ್ಮರಿಸಿದರು.ಕನಿಷ್ಠ ಬೆಂಬಲ ಬೆಲೆ ಯೋಜನೆಗೆ ಕಾಯ್ದೆರೂಪ ನೀಡಬೇಕು ಎಂದು ಒತ್ತಾಯಿಸಿಸಂಘಟನೆಯ ನೇತೃತ್ವದಲ್ಲಿ ಅನೇಕಹೋರಾಟ ನಡೆಸಲಾಗಿದೆ. ಕಾಯ್ದೆಯ ರೂಪನೀಡದೇ ಹೋದಲ್ಲಿ ಕನಿಷ್ಠ ಬೆಂಬಲ ಬೆಲೆಯೋಜನೆಗೆ ಮಾನ್ಯತೆಯೇ ದೊರಕುವುದಿಲ್ಲ.

ಕೇಂದ್ರ ಸರ್ಕಾರ ಈಗಲಾದರೂ ಕನಿಷ್ಠಬೆಂಬಲ ಬೆಲೆ ಯೋಜನೆಗೆ ಕಾಯ್ದೆ ರೂಪನೀಡಬೇಕು ಮತ್ತು ಡಾ| ಸ್ವಾಮಿನಾಥನ್‌ ಆಯೋಗದ ವರದಿಯನ್ನು ಯಥವತ್ತಾಗಿಜಾರಿಗೊಳಿಸಬೇಕು. ಅಲ್ಲಿಯವರೆಗೂಹೋರಾಟ ನಿರಂತರವಾಗಿರಲಿದೆ ಎಂದುತಿಳಿಸಿದರು.ಕೃಷಿ ಕಾಯ್ದೆ ರದ್ಧತಿಗೆ ಒತ್ತಾಯಿಸಿಹೋರಾಟ ನಡೆಸುತ್ತಿದ್ದ ಅನ್ನದಾತರನ್ನುದಲ್ಲಾಳಿಗಳು, ಖರೀದಿದಾರರ ಏಜೆಂಟರು,ದೊಡ್ಡ ಕಂಪನಿಗಳ ಪರ ಇರುವಂತಹರು…ಹೀಗೆ ಅನೇಕ ರೀತಿಯಲ್ಲಿ ವ್ಯವ ಸ್ಥಿತವಾಗಿ ಅಪಪ್ರಚಾರ ನಡೆಸಲಾಯಿತು. ಅದರ ಮಧ್ಯೆಯೂಹೋರಾಟ ಮುಂದುವರೆಸಿದಂತಹರೈತರು ಜಯ ಪಡೆಯುವಲ್ಲಿ ಅಕ್ಷರಶಃಸಹ ಯಶಸ್ವಿಯಾಗಿದ್ದಾರೆ ಎಂದು ಹರ್ಷವ್ಯಕ್ತಪಡಿಸಿದರು.ಕೇಂದ್ರ ಸರ್ಕಾರ ರೈತರ ವಿಚಾರದಲ್ಲಿವ್ಯತಿರಿಕ್ತವಾಗಿ ಯಾವುದೇ ತೀರ್ಮಾನತೆಗೆದುಕೊಂಡರೂ ರೈತರ ಹೋರಾಟ ಇದ್ದೇಇರುತ್ತದೆ.

ಈಗ ಕೇಂದ್ರ ಸರ್ಕಾರ ಕೃಷಿಕಾಯ್ದೆಗಳನ್ನ ವಾಪಾಸ್‌ ಪಡೆದಿರುವುದುರೈತರ ಹೋರಾಟಕ್ಕೆ ಸಿಕ್ಕಂತಹ ಮೊದಲಜಯ. ಲೋಕಸಭೆಯಲ್ಲಿ ಮಸೂದೆಯಾಗಿಆದೇಶ ಬರುವ ತನಕ ಹೋರಾಟ ಜಾರಿಯಲ್ಲಿಇರಲಿದೆ ಎಂದು ತಿಳಿಸಿದರು. ಗುಮ್ಮನೂರುಬಸವರಾಜ್‌, ನೀರ್ಥಡಿ ತಿಪ್ಪೇಶ್‌, ಭಗತ್‌ಸಿಂಹ, ಆಲೂರು ಪುಟ್ಟನಾಯ್ಕ, ದೇವರಾಜ್‌ತಳವಾರ, ಬೇವಿನಹಳ್ಳಿ ರವಿ, ಕೆಂಚಮ್ಮನಹಳ್ಳಿಹನುಮಂತ ಇತರರು ಇದ್ದರು.ಸಂಯುಕ್ತ ಹೋರಾಟ ಕರ್ನಾಟಕಪದಾಧಿಕಾರಿಗಳು ಕೇಂದ್ರ ಸರ್ಕಾರ ಮೂರುಕೃಷಿ ಕಾಯ್ದೆಗಳ ವಾಪಾಸ್‌ ಪಡೆದಿರುವುದುದೇಶದ ರೈತ ಸಂಕುಲಕ್ಕೆ ಸಂದ ಜಯ ಎಂದುಜಯದೇವ ವೃತ್ತದಲ್ಲಿ ಹರ್ಷ ವ್ಯಕ್ತಪಡಿಸಿ,ವಿಜಯೋತ್ಸವ ಆಚರಿಸಿದರು.

ಜಿಲ್ಲಾ ಕಾಂಗ್ರೆಸ್‌ ಕಚೇರಿ ಆವರಣದಲ್ಲಿಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರುಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕಸಂಭ್ರಮಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿದಿನೇಶ್‌ ಕೆ. ಶೆಟ್ಟಿ, ನಗರಪಾಲಿಕೆ ವಿಪಕ್ಷ ನಾಯಕಎ. ನಾಗರಾಜ್‌, ಕೆ.ಜಿ. ಶಿವಕುಮಾರ್‌,ಅನಿತಾಬಾಯಿ ಇತರರು ಇದ್ದರು.

ಟಾಪ್ ನ್ಯೂಸ್

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ

Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.