ಸ್ಪಚ್ಛ ಸರ್ವೇಕ್ಷಣೆ ಸಮೀಕ್ಷೆಯಲ್ಲಿ ಬೆಣ್ಣೆ ನಗರಿ ಉತ್ತಮ ಸಾಧನೆ
Team Udayavani, Nov 22, 2021, 4:15 PM IST
ದಾವಣಗೆರೆ: ಕೇಂದ್ರ ಸರ್ಕಾರದ ಸ್ವತ್ಛಸರ್ವೇಕ್ಷಣೆ-2021 ಸಮೀಕ್ಷೆಯಲ್ಲಿ ದಾವಣಗೆರೆಮಹಾನಗರವು ದೇಶದಲ್ಲಿ 118ನೇ ಸ್ಥಾನ ಹಾಗೂರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದು, ಸ್ವತ್ಛತೆಯಲ್ಲಿಪಾಲಿಕೆ ಮಹತ್ವದ ಗುರಿ ಸಾಧಿಸಿದಂತಾಗಿದೆ ಎಂದು ಮಹಾಪೌರ ಎಸ್.ಟಿ. ವೀರೇಶ್ ಹರ್ಷವ್ಯಕ್ತಪಡಿಸಿದರು.
ಭಾನುವಾರ ಮಹಾನಗರ ಪಾಲಿಕೆ ಕಚೇರಿಯಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020ನೇಸಾಲಿನ ಸಮೀಕ್ಷೆಯಲ್ಲಿ ನಗರವು ದೇಶದಲ್ಲಿ 364ನೇಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ 21ನೇ ಸ್ಥಾನಪಡೆದಿತ್ತು ಎಂದರು.ತಾವು ಅಧಿಕಾರ ವಹಿಸಿಕೊಂಡಾಗ ಸ್ವತ್ಛತೆಯಲ್ಲಿಸಾಕಷ್ಟು ಪ್ರಗತಿ ಸಾಧಿಸಬೇಕು ಎಂಬ ಗುರಿಇಟ್ಟುಕೊಳ್ಳಲಾಗಿತ್ತು. ಆ ಪ್ರಕಾರ ಸಮೀಕ್ಷೆಯಲ್ಲಿದೇಶದಲ್ಲಿ 100 ಸ್ಥಾನದೊಳಗೆ ಹಾಗೂ ರಾಜ್ಯದಲ್ಲಿ10-12ನೇ ಸ್ಥಾನ ತಲುಪಬೇಕು ಎಂಬ ಗುರಿಹೊಂದಲಾಗಿತ್ತು.
ರಾಷ್ಟ್ರ ಮಟ್ಟದಲ್ಲಿ 100ನೇ ಸ್ಥಾನದಸಮೀಪ ಬಂದಿದ್ದು, ರಾಜ್ಯ ಮಟ್ಟದಲ್ಲಿ ನಿರೀಕ್ಷೆಮೀರಿ ಪ್ರಗತಿ ಸಾಧಿಸಿ ನಾಲ್ಕನೇ ಸ್ಥಾನ ಪಡೆದಿದ್ದೇವೆ.ಮುಂದಿನ ವರ್ಷ ದೇಶ ಮಟ್ಟದಲ್ಲಿ 50-60ನೇ ಸ್ಥಾನಹಾಗೂ ರಾಜ್ಯದಲ್ಲಿ ಮೊದಲೆರಡು ಸ್ಥಾನ ತಲುಪುವಗುರಿ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.ಸಮೀಕ್ಷೆಯನ್ನು ನಗರದಾದ್ಯಂತ ಜನವರಿ2021ರಿಂದ ಮಾರ್ಚ್ 2021ವರೆಗೆ ಕೇಂದ್ರ ಸರ್ಕಾರ ನಡೆಸಿದೆ.
ಇದರಲ್ಲಿ ಮುಖ್ಯವಾಗಿ ತ್ಯಾಜ್ಯ ಸಂಗ್ರಹಣೆ,ವಿಲೇವಾರಿ ಮತ್ತು ಸಂಸ್ಕರಣೆ, ಸಾರ್ವಜನಿಕಶೌಚಾಲಯಗಳ ನಿರ್ವಹಣೆ, ತ್ಯಾಜ್ಯ ನೀರು ಸಂಸ್ಕರಣೆಅಳವಡಿಸಿಕೊಂಡ ಮಾದರಿ, ರಸ್ತೆ ವಿಭಜಕಗಳಲ್ಲಿರುವಗಿಡಗಳ ನಿರ್ವಹಣೆ, ನಗರ ಸೌಂದಯಿìಕರಣಕುರಿತು ಸಾರ್ವಜನಿಕರಿಂದ ಅಭಿಪ್ರಾಯಸಂಗ್ರಹಿಸಲಾಗಿದೆ. ಮಹಾನಗರ ಪಾಲಿಕೆಯಲ್ಲಿ ಕಳೆದಒಂದೂವರೆ ವರ್ಷಗಳಿಂದ ತೆಗೆದುಕೊಂಡ ದಿಟ್ಟಕ್ರಮಗಳಿಂದ ಈ ಬಾರಿ ರ್‍ಯಾಂಕಿಂಗ್‌ನಲ್ಲಿ ಉತ್ತಮಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದರು.