
ದಾವಣಗೆರೆ: ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದವನ ರಕ್ಷಿಸಿದ ಸ್ಥಳೀಯರು
Team Udayavani, Feb 8, 2023, 8:41 PM IST

ದಾವಣಗೆರೆ: ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಗೆ ಯತ್ನಿಸಿದ ಯುವಕನ ಸ್ಥಳೀಯರು ಜೀವದ ಹಂಗು ತೊರೆದು ರಕ್ಷಿಸಿದ ವಿಡಿಯೋ ವೈರಲ್ ಆಗಿದೆ.
ದಾವಣಗೆರೆಯ ಆಶೋಕ ಚಿತ್ರಮಂದಿರ ರೈಲ್ವೆ ಗೇಟ್ ಬಳಿ ಈ ಘಟನೆ ನಡೆದಿದೆ.
ಸಂಜೆ ವೇಳೆ ಭಾರೀ ವೇಗದಿಂದ ಬರುತ್ತಿದ್ದ ರೈಲಿಗೆ ತಲೆ ನೀಡಿ ಆತ್ಮಹತ್ಯೆಗೆ ಯುವಕನೋರ್ವ ಯತ್ನಿಸಿದ್ದನ್ನು ಕಂಡಂತಹ ಜನರು ಜೋರಾಗಿ ಕೂಗ ತೊಡಗಿದ್ದಾರೆ. ಯುವಕ ರೈಲಿನ ಕಡೆ ಧಾವಿಸುತ್ತಿರುವುದನ್ನ ನೋಡಿದ ಮೂವರು ಯುವಕರು ಜೀವದ ಹಂಗು ತೊರೆದು ಓಡಿ ಹೋಗಿ ರೈಲಿಗೆ ಬೀಳುತ್ತಿದ್ದ ಯುವಕನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ಯುವಕನ ಬಗ್ಗೆ ಮಾಹಿತಿ ಇಲ್ಲ. ದಾವಣಗೆರೆ ರೈಲ್ವೆ ನಿಲ್ದಾಣದಿಂದ ರೈಲು ಹೊರಡುತ್ತಿರುವುದನ್ನ ಗಮನಿಸುತ್ತಲೇ ಇದ್ದ ಯುವಕ ರೈಲು ಹತ್ತಿರವಾಗುತ್ತಿದ್ದಂತೆಯೇ ಹಳಿಗಳ ಮೇಲೆ ಮಲಗಿದ್ದಾನೆ. ಅದನ್ನು ಕಂಡಂತಹ ಕೆಲವರು ಕೂಗಿದ್ದಾರೆ. ಆದರೂ ಯುವಕ ಮೇಲೆ ಎದ್ದಿಲ್ಲ. ಅಲ್ಲೇ ಇದ್ದ ಮೂವರು ಯುವಕರು ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರಕ್ಷಿಸಿದ್ದಾರೆ. ನಂತರ ಆತ್ಮಹತ್ಯೆಗೆ ಯತ್ನಿಸಿದ ಯುವಕನಿಗೆ ಬುದ್ದಿವಾದ ಹೇಳಿ ಕಳಿಸಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಅಪ್ರಾಪ್ತೆಯ ವಿವಾಹಕ್ಕೆ ತಯಾರಿ… ಅಧಿಕಾರಿಗಳಿಂದ ವಿವಾಹಕ್ಕೆ ತಡೆ
ಟಾಪ್ ನ್ಯೂಸ್
