ಅಂಬಿಗೆ ದಾವಣಗೆರೆ ಎಂದ್ರೆ ಅಚ್ಚುಮೆಚ್ಚು

Team Udayavani, Nov 26, 2018, 2:59 PM IST

ದಾವಣಗೆರೆ: ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ, ಮಾಜಿ ಸಚಿವ ಅಂಬರೀಷ್‌ಗೆ ದಾವಣಗೆರೆ ಎಂದರೆ ಭಾರೀ ಅಚ್ಚುಮೆಚ್ಚು. ಸಕ್ಕರೆ ನಾಡು ಮಂಡ್ಯದ ಗಂಡು ಅಂಬರೀಷ್‌ ದಾವಣಗೆರೆಯಲ್ಲಿ ಅಪಾರ ಸ್ನೇಹಿತರ ಬಳಗ ಹೊಂದಿದ್ದರು. ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಕುಟುಂಬದೊಂದಿಗೆ ಅ ವಿನಾಭಾವ ಸಂಬಂಧ ಹೊಂದಿದ್ದ ಅಂಬರೀಷ್‌ ಶಾಸಕ ಶಾಮನೂರು ಶಿವಶಂಕರಪ್ಪನರವ ಜನ್ಮ ದಿನ(ಜೂ.16) ಸಮಾರಂಭಕ್ಕೆ ತಪ್ಪದೇ ಹಾಜರಾಗುತ್ತಿದ್ದರು. ಸಮಾರಂಭದ ದಿನ ಬರಲಿಕ್ಕೆ ಆಗದೇ ಇದ್ದರೂ ಬೇರೆ ದಿನಗಳಲ್ಲಿ ಬಂದು ಶಾಮನೂರು ಶಿವಶಂಕರಪ್ಪ ಅವರಿಗೆ ಶುಭ ಕೋರುವುದನ್ನು ತಪ್ಪಿಸುತ್ತಿರಲಿಲ್ಲ. 

ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರೊಂದಿಗೆ ಅತ್ಯಂತ ಆತ್ಮೀಯ ಗೆಳೆತನ ಹೊಂದಿದ್ದ ಅವರು ಮಲ್ಲಿಕಾರ್ಜುನ್‌ಗೆ ಪಕ್ಕಾ ಮಂಡ್ಯ ಶೈಲಿಯಲ್ಲಿ… ಮಲ್ಲಿಕಾರ್ಜುನ… ಎಂದೇ ಅಪ್ಯಾಯತೆ ಯಿಂದ ಕರೆಯುತ್ತಿದ್ದರು. ತೀರಾ ಒತ್ತಡ, ಬೇಸರವಾದಾಗಲೆಲ್ಲ ದಾವಣಗೆರೆಗೆ ದೌಡಾಯಿಸಿ ಬರುತ್ತಿದ್ದರು.

ಅಂಬರೀಷ್‌ರವರ 49ನೇ ಜನ್ಮದಿನ ಕಾರ್ಯಕ್ರಮ 2001ರಲ್ಲಿ ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿತ್ತು. ಅಂದಿನ ಕಾರ್ಯಕ್ರಮದಲ್ಲಿ ಅಂಬರೀಷ್‌ಗೆ ನಾಗರಿಕ ಸನ್ಮಾನದ ಜೊತೆಗೆ ವಜ್ರದ ಕಿರೀಟ ನೀಡಲಾಗಿತ್ತು. ಅಂಬರೀಷ್‌ರವರ ಕುಚುಕು ಗೆಳೆಯ ಡಾ| ವಿಷ್ಣುವರ್ಧನ್‌ ಸಹ ಆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಇಬ್ಬರು ಗೆಳೆಯರು ಕೆಲವಾರು ಹಾಡುಗಳಿಗೆ ಸಖತ್‌ ಸ್ಟೆಪ್‌ ಹಾಕಿದ್ದರು. ಆ ಕಾರ್ಯಕ್ರಮದ ಮಧ್ಯದಲ್ಲಿ ಕೊಂಚ ಗದ್ದಲದ ವಾತಾವರಣ ನಿರ್ಮಾಣವಾಗಿದ್ದಾಗ ಅಂಬರೀಶ್‌ ತಮ್ಮ ಎಂದಿನ ಶೈಲಿಯಲ್ಲಿ ಗದರಿಸುವ ಮೂಲಕ ಗದ್ದಲವನ್ನು ನಿಯಂತ್ರಿಸಿದ್ದರು.

ಶಾಸಕ ಶಾಮನೂರು ಶಿವಶಂಕರಪ್ಪರವರ 75ನೇ ಜನ್ಮದಿನದ ಅಂಗವಾಗಿ 2005ರ ಜೂ. 15 ರಂದು ನಗರಸಭೆಯಿಂದ ಹಮ್ಮಿಕೊಂಡಿದ್ದ ಅಮೂಲ್ಯರತ್ನಗಳು… ಕಾರ್ಯಕ್ರಮದಲ್ಲಿ ಅಂಬರೀಷ್‌ಗೆ ಅಮೂಲ್ಯ ರತ್ನ ಪ್ರಶಸ್ತಿ ಜೊತೆಗೆ ನಾಗರಿಕ ಸನ್ಮಾನ ನೀಡಲಾಗಿತ್ತು ಎಂದು ನಗರಸಭೆ ಮಾಜಿ ಅಧ್ಯಕ್ಷ ಡಿ. ಬಸವರಾಜ್‌ ಸ್ಮರಿಸುತ್ತಾರೆ.
 
ಅಂಬರೀಷ್‌ ದಾವಣಗೆರೆಯಲ್ಲಿ ಅತೀ ಹೆಚ್ಚಿನ ಒಡನಾಟ ಹೊಂದಿದ್ದು ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಕುಟುಂಬದೊಡನೆ. ಹಾಗಾಗಿ ಅನೇಕ ಸಭೆ, ಸಮಾರಂಭಗಳಲ್ಲಿ ಕುಟುಂಬ ಸದಸ್ಯರಂತೆ ಖಾಯಂ ಆಗಿ ಬರುತ್ತಿದ್ದರು.

ಮಲ್ಲಿಕಾರ್ಜುನ್‌ ಮತ್ತು ಶಾಮನೂರು ಶಿವಶಂಕರಪ್ಪ ಅವರ ಪರ ಚುನಾವಣಾ ಪ್ರಚಾರಕ್ಕೂ ಅಂಬರೀಷ್‌ ಬಂದಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ವಸತಿ ಖಾತೆ ಸಚಿವರಾಗಿದ್ದ ಅಂಬರೀಷ್‌ 2013ರ ಅ. 24 ರಂದು ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. 

ಮಳೆಯಿಂದ ಮನೆ ಕಳೆದುಕೊಂಡಿದ್ದ ಬೆಂಕಿ ನಗರದ ಜನರನ್ನು ಕರೆಸಿ, ಚರ್ಚಿಸಿದ್ದರು. ಇಲಾಖೆಯಿಂದ ಶಾಶ್ವತ ಸೂರು… ಒದಗಿಸುವ ಭರವಸೆ ನೀಡಿದ್ದರು. ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಮನೆಗೆ ಬಂದಿದ್ದು ಅಂಬರೀಷ್‌ರವರ ದಾವಣಗೆರೆ ಕೊನೆಯ ಭೇಟಿ. ಅನಾರೋಗ್ಯದ ಹಿನ್ನೆಲೆಯಲ್ಲಿ ಅಂಬರೀಶ್‌ ಸಿಂಗಾಪುರದ ಎಲಿಜಬೆತ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಎಸ್‌.ಎಸ್‌. ಮಲ್ಲಿಕಾರ್ಜುನ್‌ ನೆಚ್ಚಿನ ಗೆಳೆಯನ ನೋಡಲು ಹೋಗಿದ್ದರು. ಅವರಿಬ್ಬರ ನಡುವೆ ಅಷ್ಟೊಂದು ಆತ್ಮೀಯತೆ, ಗೆಳೆತನ ಇತ್ತು. ಅಂತಹ ಅಂಬರೀಷ್‌ ಈಗ ನೆನಪು ಮಾತ್ರ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಭರಮಸಾಗರ: ಚಿತ್ರದುರ್ಗ ತಾಲೂಕಿನ ಗಡಿ ಗ್ರಾಮ, ಜಗಳೂರು ತಾಲೂಕು ಸಮೀಪದ ಆಜಾದ್‌ ನಗರದಲ್ಲಿ ಭಾನುವಾರ ಮಧ್ಯಾಹ್ನ ಕರಡಿ ಕಾಣಿಸಿಕೊಂಡಿದ್ದು, ರೇಷ್ಮೆ ಜಮೀನಿನ ಬಳಿಯ...

  • ದಾವಣಗೆರೆ: ಜಾತ್ಯತೀತ ಮತ್ತು ಸಮ ಸಮಾಜದ ನಿರ್ಮಾಣ ಗಣರಾಜ್ಯ ಹಾಗೂ ಸಂವಿಧಾನದ ಮುಖ್ಯ ಆಶಯ ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಜಿ. ಬೀಳಗಿ ತಿಳಿಸಿದರು. ಭಾನುವಾರ...

  • ಸಾಗರ: ಸದಾ ಪಾಕಿಸ್ತಾನವನ್ನು ಬೆಂಬಲಿಸುವ ಕಾಂಗ್ರೆಸ್‌ ದೇಶದ ಹಿತಾಸಕ್ತಿಗೆ ವಿರುದ್ಧವಾದ ನಿಲುವುಗಳನ್ನೇ ತೆಗೆದುಕೊಳ್ಳುತ್ತದೆ. 370ನೇ ವಿಧಿ ರದ್ದತಿ, ಅಯೋಧ್ಯೆ...

  • ದಾವಣಗೆರೆ: ಪ್ರಜಾಪ್ರಭುತ್ವದ ಬುನಾದಿಯಾದ ಚುನಾವಣಾ ಪ್ರಕ್ರಿಯೆಯಲ್ಲಿ ನಾವು ಪಾಲ್ಗೊಂಡಾಗ ಮಾತ್ರ ವ್ಯವಸ್ಥೆ ಪ್ರಶ್ನಿಸುವಂತಹ ಹಕ್ಕು ನಮಗೆ ಲಭಿಸುತ್ತದೆ. ಆದ್ದರಿಂದ...

  • ಹೊನ್ನಾಳಿ: ನೂತನ ಆಧಾರ್‌ ಕಾರ್ಡ್‌ ಮಾಡಿಸಲು ಹಾಗೂ ತಿದ್ದುಪಡಿ ಮೊದಲಾದ ಕಾರ್ಯಗಳಿಗೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಪಟ್ಟಣದಲ್ಲಿ ನಿರ್ಮಾಣವಾಗಿದೆ. ಪಟ್ಟಣದಲ್ಲಿ...

ಹೊಸ ಸೇರ್ಪಡೆ