ಶಾಶ್ವತ ಸ್ಥಳಾಂತರವೆಂಬ ಕನ್ನಡಿಯೊಳಗಿನ ಗಂಟು!

ಮುಳುಗಡೆ ಪ್ರದೇಶದ ಜನರಿಗೆ ಪ್ರತಿ ಮಳೆಗಾಲದಲ್ಲೂ ತಪ್ಪದ ಗೋಳು

Team Udayavani, May 25, 2022, 2:36 PM IST

drown

ದಾವಣಗೆರೆ: ಪ್ರತಿ ವರ್ಷ ಮಳೆಗಾಲದಲ್ಲಿನ ಪ್ರವಾಹ, ಮುಳುಗಡೆಯಿಂದ ಸಂಕಷ್ಟಕ್ಕೀಡಾಗುವ ಪ್ರದೇಶಗಳ ಶಾಶ್ವತ ಸ್ಥಳಾಂತರ ಎಂಬುದು ದಶಕಗಳೇ ಕಳೆದರೂ ಈ ಕ್ಷಣಕ್ಕೂ ಕೈಗೂಡಿಲ್ಲ.

ನಡು ಕರ್ನಾಟಕದ ಜೀವನದಿ ತುಂಗಭದ್ರೆಯಲ್ಲಿ ಪ್ರವಾಹ ಬಂದಾಗ ಹೊನ್ನಾಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ಬಾಲರಾಜ್‌ ಘಾಟ್‌, ಹರಿಹರದ ಕಾಳಿದಾಸ ನಗರ, ಬೆಂಕಿನಗರ ಮತ್ತು ಗಂಗಾನಗರ ಮುಳುಗಡೆಯಾಗುತ್ತವೆ. ಮಳೆಗಾಲ ಬಂದಿಂತೆಂದರೆ ಈ ಪ್ರದೇಶದ ಜನರಿಗೆ ತೊಂದರೆ ಕಟ್ಟಿಟ್ಟಿ ಬುತ್ತಿ. ಇನ್ನು ಭಾರೀ ಮಳೆಯಾದರೆ ಯಾವುದೇ ಕ್ಷಣದಲ್ಲಾದರೂ ತುಂಗಭದ್ರೆ ಉಕ್ಕಿ ಹರಿಯುವ ಆತಂಕದಿಂದ ಹಗಲು-ರಾತ್ರಿ ಮನೆ, ಮಕ್ಕಳು, ದವಸ-ಧಾನ್ಯ ಕಾಯುತ್ತಾ ಇರಬೇಕು. ಪ್ರತಿ ಕ್ಷಣ ಅನುಭವಿಸುವ ಸಮಸ್ಯೆಗೆ ಶಾಶ್ವತ ಪರಿಹಾರ ಸ್ಥಳಾಂತರವಾಗಿದ್ದು, ಇನ್ನೂ ಕನ್ನಡಿಯೊಳಗಿನ ಗಂಟಾಗಿಯೇ ಉಳಿದುಬಿಟ್ಟಿದೆ.

ತುಂಗಭದ್ರೆಯ ತಟದಲ್ಲಿರುವ ಹೊನ್ನಾಳಿ ಪಟ್ಟಣದ ಬಾಲರಾಜ್‌ ಘಾಟ್‌ ಶಾಶ್ವತ ಮುಳುಗಡೆ ಪ್ರದೇಶವಾಗಿದೆ. ತುಂಗಭದ್ರೆಯ ನೀರಿನ ಹರಿವು 10 ಮೀಟರ್‌ ದಾಟುತ್ತಿದ್ದಂತೆ ಬಾಲರಾಜ್‌ಘಾಟ್‌ ಮನೆಗಳ ಮುಳುಗಡೆ ಪ್ರಾರಂಭವಾಗತೊಡಗುತ್ತದೆ. ನದಿ ನೀರಿನ ಅಪಾಯ ಮಟ್ಟ ಏರಿದಂತೆ ಈ ಭಾಗದ ಜನರಿಗೆ ಅಪಾಯ ಹೆಚ್ಚಾಗುತ್ತಲೇ ಹೋಗುತ್ತದೆ. ನೀರು ನುಗ್ಗಿ ಬಂದ ತಕ್ಷಣ ಜನರನ್ನು ಒಂದರೆಡು ದಿನಗಳ ಕಾಲ ಗಂಜಿ ಕೇಂದ್ರಕ್ಕೆ ರವಾನಿಸಲಾಗುತ್ತದೆ. ನೆರೆ ಇಳಿದಾಕ್ಷಣ ಮತ್ತೆ ಮನೆಗಳಿಗೆ ಕಳಿಸಿಕೊಡಲಾಗುತ್ತದೆ. ಪ್ರತಿ ಬಾರಿ ಮಳೆಗಾಲದಲ್ಲೂ ಇದು ಪುನರಾವರ್ತನೆಯಾಗುತ್ತಲೇ ಇದೆ.

ಬಾಲರಾಜ್‌ ಘಾಟ್‌ ಜನರ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡುವ ಪ್ರಯತ್ನ ನಡೆದಿದೆಯಾದರೂ ಕಾರ್ಯಗತವಾಗಿಲ್ಲ. ತುಂಗಭದ್ರಾ ನದಿಗೆ ತಡೆಗೋಡೆ ನಿರ್ಮಾಣಕ್ಕೆ 15 ಕೋಟಿ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇದುವರೆಗೆ ಯೋಜನೆಗೆ ಹಸಿರು ನಿಶಾನೆ ದೊರೆತಿಲ್ಲ. ಸರ್ಕಾರ ಅನುಸರಿಸುತ್ತಿರುವ ವಿಳಂಬ ನೀತಿ ನೋಡಿದರೆ ಬಾಲರಾಜ್‌ಘಾಟ್‌ ಪ್ರದೇಶದ ಜನರ ಸಮಸ್ಯೆ ಸದ್ಯಕ್ಕಂತೂ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ.

ಹರಿಹರದ ಕಾಳಿದಾಸ ನಗರ, ಬೆಂಕಿನಗರ, ಗಂಗಾನಗರದ ಜನರು ಸಹ ಮಳೆಗಾಲದಲ್ಲಿ ಇನ್ನಿಲ್ಲದ ಸಮಸ್ಯೆಗೆ ತುತ್ತಾಗುವುದು ಸಾಮಾನ್ಯ ಎನ್ನುವಂತಾಗಿದೆ. ತುಂಗಭದ್ರಾ ನದಿ ನೀರಿನ ಜೊತೆಗೆ ದೇವರಬೆಳಕೆರೆ ಪಿಕಪ್‌ ಡ್ಯಾಂ ನಿಂದ ಹರಿಬಿಡುವ ನೀರಿನಿಂದ ಮೂರು ಪ್ರದೇಶಗಳು ಮುಳುಗಡೆಯಾಗುತ್ತವೆ. ತುಂಗಭದ್ರಾ ನದಿ ನೀರು ಮನೆಗಳಿಗೆ ನುಗ್ಗಿ ಜನರು ತೊಂದರೆ ಅನುಭವಿಸುವಂತಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳ ಭರವಸೆ ಕಾರ್ಯರೂಪಕ್ಕೆ ಬರದೆ ಅದೇ ಮುಳುಗಡೆ ಪ್ರದೇಶಗಳಲ್ಲಿ ಅನಿವಾರ್ಯವಾಗಿ ಜೀವನ ಸಾಗಿಸಬೇಕಿದೆ.

ಮಹಜೇನಹಳ್ಳಿ ವ್ಯಾಪ್ತಿಯ ಕಾಳಿದಾಸನಗರ, ಬೆಂಕಿನಗರ, ಗಂಗಾನಗರ ನಿವಾಸಿಗಳಿಗೆ ಒಂದರೆಡು ದಶಕಗಳ ಹಿಂದೆ ಆಶ್ರಯ ಯೋಜನೆಯಡಿ ಮನೆಗಳ ವಿತರಣೆ ಮಾಡಲಾಗಿದೆ. ಕೆಲವರು ಅಲ್ಲಿ ವಾಸಿಸುತ್ತಿದ್ದಾರೆ. ಕುಟುಂಬಗಳಲ್ಲಿನ ಸದಸ್ಯರ ಸಂಖ್ಯೆ ಹೆಚ್ಚಳದಿಂದ ಅನೇಕ ಕುಟುಂಬಗಳು ಮುಳುಗಡೆಯ ಸಮಸ್ಯೆಯ ಬಗ್ಗೆ ಗೊತ್ತಿದ್ದರೂ ಜೀವನ ಸಾಗಿಸಬೇಕಾದ ಅನಿವಾರ್ಯತೆಯಿಂದ ಕಾಳಿದಾಸನಗರ, ಬೆಂಕಿನಗರ, ಗಂಗಾನಗರಗಳಲ್ಲಿ ವಾಸ ಮಾಡುತ್ತಿವೆ. ಆಶ್ರಯ ಯೋಜನೆ ಹೊರತುಪಡಿಸಿದರೆ ಈವರೆಗೆ ಕಾಳಿದಾಸನಗರ, ಬೆಂಕಿನಗರ, ಗಂಗಾನಗರಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಾಳಾಂತರಿಸುವ ಶಾಶ್ವತ ಯೋಜನೆ ರೂಪುಗೊಂಡಿಲ್ಲ. ಹಾಗಾಗಿ ಸಮಸ್ಯೆ ತಪ್ಪಿಲ್ಲ. ಶಾಶ್ವತ ಪರಿಹಾರ ಕಾರ್ಯ ಕೈಗೊಳ್ಳದೇ ಹೋದಲ್ಲಿ ಸಮಸ್ಯೆ ಬಗೆಹರಿಯುವುದೂ ಇಲ್ಲ.

ಕಾಳಿದಾಸನಗರ, ಬೆಂಕಿನಗರ, ಗಂಗಾನಗರಗಳಿಗೆ ನುಗ್ಗುವ ದೇವರಬೆಳಕರೆಗೆ ಪಿಕಪ್‌ ಡ್ಯಾಂ ನೀರು ತಡೆಯಲು 8 ಕೋಟಿ ರೂ. ಅನುದಾನದಲ್ಲಿ ತಡೆಗೋಡೆ ನಿರ್ಮಾಣದ ಯೋಜನೆ ಇದೆ. ಮಳೆಗಾಲದಲ್ಲಿ ಮುಳುಗಡೆಯಾಗಬಹುದಾದ ಮನೆಗಳನ್ನು ಗುರುತಿಸಿ ಶಾಶ್ವತ ಪರಿಹಾರ ಒದಗಿಸುವ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸುವ ಹಂತದಲ್ಲಿದೆ. ತಡೆಗೋಡೆಗೆ ಅಗತ್ಯ ಅನುದಾನ, ಪ್ರಸ್ತಾವನೆಗೆ ಸರ್ಕಾರ ಒಪ್ಪಿದರೆ ಕಾಳಿದಾಸನಗರ, ಬೆಂಕಿನಗರ, ಗಂಗಾನಗರದ ಜನರ ಸಮಸ್ಯೆ ಬಗೆಹರಿಯಲಿದೆ. ಅಲ್ಲಿಯವರೆಗೆ ಸಮಸ್ಯೆ ಎದುರಿಸಲೇಬೇಕಾಗುತ್ತದೆ.

ಒಟ್ಟಿನಲ್ಲಿ ಮಳೆಗಾಲದಲ್ಲಿ ಮುಳುಗಡೆಯಾಗುವ ಗ್ರಾಮಗಳ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸುವುದು ತುರ್ತು ಅಗತ್ಯ.

ಪಾಳ್ಯ, ಗುತ್ತೂರು ಸೇಫ್‌

ಪ್ರತಿ ವರ್ಷ ಮಳೆಗಾಲದಲ್ಲಿನ ಪ್ರವಾಹ, ಮುಳುಗಡೆಯಿಂದ ತೊಂದರೆಗೊಳಗಾಗುತ್ತಿದ್ದ ಹರಿಹರ ಸಮೀಪದ ಗುತ್ತೂರಿನ ಕೆಲ ಭಾಗ, ತಾಲೂಕಿನ ಪಾಳ್ಯ ಗ್ರಾಮದ ಜನರು ಈಗ ಸುರಕ್ಷಿತ ಪ್ರದೇಶದಲ್ಲಿ ವಾಸ ಮಾಡುವಂತಾಗಿದೆ. ಬಿ.ಎಸ್. ಯಡಿಯೂರಪ್ಪ ಅವರ ಅಧಿಕಾರವಧಿಯಲ್ಲಿ ‘ಆಸರೆ’ ಯೋಜನೆಯಡಿ ಮಳೆಗಾಲದಲ್ಲಿನ ಪ್ರವಾಹ, ಮುಳುಗಡೆಯಾಗುವ ಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದರಿಂದ ಪಾಳ್ಯ, ಗುತ್ತೂರು ಜನರು ಮಳೆಗಾಲದಲ್ಲಿ ಎದುರಿಸುತ್ತಿದ್ದ ಸಮಸ್ಯೆಯಿಂದ ಮುಕ್ತಿ ಪಡೆದಿದ್ದಾರೆ. ಹೊನ್ನಾಳಿಯ ಬಾಲರಾಜ್‌ ಘಾಟ್‌, ಹರಿಹರದ ಕಾಳಿದಾಸನಗರ, ಬೆಂಕಿನಗರ, ಗಂಗಾನಗರ ಪ್ರದೇಶದ ಜನರು ಅದೇ ರೀತಿಯ ಶಾಶ್ವತ ಪರಿಹಾರ ದೊರಕುವ ನಿರೀಕ್ಷೆಯಲ್ಲಿದ್ದಾರೆ.

-ರಾ. ರವಿಬಾಬು

ಟಾಪ್ ನ್ಯೂಸ್

2sulya

ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ

ಅನ್ಯಪಕ್ಷ ಅಧಿಕಾರದಲ್ಲಿರುವುದು ಬಿಜೆಪಿಗೆ ಅಪಥ್ಯ: ವಾರ್ಡ್ ವಿಂಗಡಣೆ ವಿರುದ್ಧ ಎಚ್ ಡಿಕೆ ಗರಂ

ಅನ್ಯಪಕ್ಷ ಅಧಿಕಾರದಲ್ಲಿರುವುದು ಬಿಜೆಪಿಗೆ ಅಪಥ್ಯ: ವಾರ್ಡ್ ವಿಂಗಡಣೆ ವಿರುದ್ಧ ಎಚ್ ಡಿಕೆ ಗರಂ

26/11 ಮುಂಬೈ ದಾಳಿಯ ಪ್ರಾಜೆಕ್ಟ್ ಮ್ಯಾನೇಜರ್ ಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ಥಾನ

26/11 ಮುಂಬೈ ದಾಳಿಯ ಪ್ರಾಜೆಕ್ಟ್ ಮ್ಯಾನೇಜರ್ ಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ಥಾನ

‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರವಿಮರ್ಶೆ: ಸಿನಿ ಕನಸಿನ ಹುಡುಗರ ಜಾಲಿರೈಡ್‌

‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರವಿಮರ್ಶೆ: ಸಿನಿ ಕನಸಿನ ಹುಡುಗರ ಜಾಲಿರೈಡ್‌

ಹೋಗುವವರು ಹೋಗಿ.. ನಾನು ಹೊಸ ಶಿವಸೇನೆ ರಚಿಸುತ್ತೇನೆ: ಉದ್ಧವ್ ಠಾಕ್ರೆ

ಹೋಗುವವರು ಹೋಗಿ.. ನಾನು ಹೊಸ ಶಿವಸೇನೆ ರಚಿಸುತ್ತೇನೆ: ಉದ್ಧವ್ ಠಾಕ್ರೆ

ಕುಡುಪು ದೇಗುಲಕ್ಕೆ ಬಾಳೆಹಣ್ಣು ಪೂರೈಕೆ ವಿಚಾರದಲ್ಲಿ ವಿವಾದ

ಕುಡುಪು ದೇಗುಲಕ್ಕೆ ಬಾಳೆಹಣ್ಣು ಪೂರೈಕೆ ವಿಚಾರದಲ್ಲಿ ವಿವಾದ

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

davanagere news

ವರ್ಗಾವಣೆಗೊಂಡ ಪ್ರಾಧ್ಯಾಪಕರಿಗೆ ಬೀಳ್ಕೊಡುಗೆ

bsdfbdf

ಅಗ್ನಿಪಥ ಯೋಜನೆ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

ಚನ್ನಗಿರಿ : ಹದಗೆಟ್ಟ ಸರಕಾರಿ ಆಸ್ಪತ್ರೆಯ ಡಯಾಲಿಸಿಸ್ ಘಟಕ : ಚಿಕಿತ್ಸೆಗಾಗಿ ರೋಗಿಗಳ ಪರದಾಟ

ಚನ್ನಗಿರಿ : ಹದಗೆಟ್ಟ ಸರಕಾರಿ ಆಸ್ಪತ್ರೆಯ ಡಯಾಲಿಸಿಸ್ ಘಟಕ : ಚಿಕಿತ್ಸೆಗಾಗಿ ರೋಗಿಗಳ ಪರದಾಟ

davanagere news

ಭಾವೈಕ್ಯತೆಯೇ ನಿಜ ಯೋಗ: ಬಸವಪ್ರಭು ಶ್ರೀ

vSDVSDV

ಜನಮನ ಸೆಳೆದ ಜಲ ಯೋಗ ಝಲಕ್‌

MUST WATCH

udayavani youtube

ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ

udayavani youtube

ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ

udayavani youtube

ನೀವು ಬಿಜೆಪಿಗೆ ಸೇರಿ, ನಾವು ಶಿವಸೇನೆಯನ್ನು ಮತ್ತೆ ಕಟ್ಟುತ್ತೇವೆ : ರಾವತ್

udayavani youtube

13,940 ಮೊಳೆಗಳಲ್ಲಿ ಕಲಾಕೃತಿ : India Book of Records ಗೆ ದಾಖಲಾದ ಕಾಪುವಿನ ಶಶಾಂಕ್

udayavani youtube

ಮನುಷ್ಯನ ಮನಸ್ಸು ಒಂದೇ ರೀತಿ ಇರುವುದಿಲ್ಲ.. ಯಾಕೆ ?

ಹೊಸ ಸೇರ್ಪಡೆ

ಟಗರು ಹಾಡಿಗೆ ಸ್ಟೆಪ್ ಹಾಕಿದ ಹುಬ್ಬಳ್ಳಿ-ಧಾರವಾಡ ಪಾಲಿಕೆ ಕಮಿಷನರ್

ಟಗರು ಹಾಡಿಗೆ ಸ್ಟೆಪ್ ಹಾಕಿದ ಹುಬ್ಬಳ್ಳಿ-ಧಾರವಾಡ ಪಾಲಿಕೆ ಕಮಿಷನರ್

2sulya

ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ

ಸಾಲುಮರದ ತಿಮ್ಮಕ್ಕಗೆ ಬಿಡಿಎ ನಿವೇಶನ ಮಂಜೂರು ಮಾಡಿದ ಸಿಎಂ ಬೊಮ್ಮಾಯಿ

ಸಾಲುಮರದ ತಿಮ್ಮಕ್ಕಗೆ ಬಿಡಿಎ ನಿವೇಶನ ಮಂಜೂರು ಮಾಡಿದ ಸಿಎಂ ಬೊಮ್ಮಾಯಿ

1law

ಕಿಡಿಗೇಡಿಗಳ ಬಂಧನಕ್ಕೆ ಯುವ ವೇದಿಕೆ ಆಗ್ರಹ

ಅನ್ಯಪಕ್ಷ ಅಧಿಕಾರದಲ್ಲಿರುವುದು ಬಿಜೆಪಿಗೆ ಅಪಥ್ಯ: ವಾರ್ಡ್ ವಿಂಗಡಣೆ ವಿರುದ್ಧ ಎಚ್ ಡಿಕೆ ಗರಂ

ಅನ್ಯಪಕ್ಷ ಅಧಿಕಾರದಲ್ಲಿರುವುದು ಬಿಜೆಪಿಗೆ ಅಪಥ್ಯ: ವಾರ್ಡ್ ವಿಂಗಡಣೆ ವಿರುದ್ಧ ಎಚ್ ಡಿಕೆ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.