ತಾಪಂ ಸಭೆಯಲ್ಲಿ ಜಿಪಂ ಪ್ರತಿಧ್ವನಿ


Team Udayavani, Dec 20, 2018, 5:01 PM IST

dvg-2.jpg

ಹರಪನಹಳ್ಳಿ: ಪಟ್ಟಣದ ತಾ.ಪಂ ರಾಜೀವ ಗಾಂಧಿ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷೆ ಅನ್ನಪೂರ್ಣಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಿ.ಪಂ ಸಿಇಒ ಮತ್ತು ಡಿಎಸ್‌ ಪರವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸದಸ್ಯರು ಒತ್ತಾಯಿಸಿದರು.

ಉಪಾಧ್ಯಕ್ಷ ಎಲ್‌.ಮಂಜ್ಯನಾಯ್ಕ ಮಾತನಾಡಿ, ಜಿ.ಪಂ ಅಧ್ಯಕ್ಷೆ ಕೆ.ಆರ್‌. ಜಯಶೀಲಾ ಅವರು ಭ್ರಷ್ಟಚಾರದ ಆರೋಪದಡಿ ಜಿ.ಪಂ ಸಿಇಒ-ಡಿಎಸ್‌ ವಿರುದ್ಧ ಎಸಿಬಿಗೆ ದೂರು ನೀಡಿದ್ದಾರೆ. ಆರೋಪಿ ಅಧಿಕಾರಿಗಳ ಒಲೈಕೆಗೆ ಸ್ಥಳೀಯ ಎಡಿ ಚಂದ್ರನಾಯ್ಕ, ಪಿಡಿಒ ಸಂಗಪ್ಪ ಅವರು ಜಿ.ಪಂ ಅಧ್ಯಕ್ಷರ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಪಿಡಿಒಗಳಿಗೆ ಮೇಸೆಜ್‌ ಹಾಕಿ ಒತ್ತಾಯಿಸಿದ್ದಾರೆ. ಜನರ ಕೆಲಸ ಮಾಡುವುದನ್ನು ಬಿಟ್ಟು ಪ್ರತಿಭಟನೆಯಲ್ಲಿ ಭಾಗವಹಿಸಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕರ್ತವ್ಯಕ್ಕೆ ಹಾಜರಾಗದೇ ಇರುವುದರಿಂದ ಅವರ 3 ದಿನದ ಸಂಬಳ ಕಡಿತ ಮಾಡಿ ಅನಾಥಾಶ್ರಮಕ್ಕೆ ಕೊಡಬೇಕು. ಸಿಇಒ ಮತ್ತು ಡಿಎಸ್‌ ಕೂಡ ಸ್ಥಳೀಯವಾಗಿ ಕೆಲವರನ್ನು ಓಲೈಸಿ ಬೇಕಾಬಿಟ್ಟಿ ಕ್ರಮ ಜರುಗಿಸುತ್ತಿದ್ದಾರೆ. ಕೂಲಿ ಹಣ ಕೊಟ್ಟಿಲ್ಲವೆಂದು ಕೆಲವು ಪಿಡಿಒಗಳಿಗೆ ನೋಟಿಸ್‌ ಕೊಡುತ್ತಾರೆ. ಆದರೆ ಚಂದ್ರನಾಯ್ಕ ಕರ್ತವ್ಯ ನಿರ್ವಹಿಸುವ ಹಾರಕನಾಳು ಪಂಚಾಯ್ತಿಯಲ್ಲಿ ಒಂದು ವರ್ಷವಾದರೂ ಕೂಲಿ ಕೊಟ್ಟಿಲ್ಲ, ಅದರೂ ಪಿಡಿಒ ವಿರುದ್ಧ ಏಕೆ ಕ್ರಮ ಜರುಗಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಸದಸ್ಯ ಹುಲಿಕಟ್ಟಿ ಚಂದ್ರಪ್ಪ ಮಾತನಾಡಿ, ಜಿ.ಪಂ ವಿಷಯ ನಮಗೆ ಬೇಕಾಗಿಲ್ಲ ಎಂದರೆ, ನಮ್ಮ ತಟ್ಟೆಯಲ್ಲಿ ನೊಣ ಬಿದ್ದಿದೆ. ಅರಣ್ಯ ಇಲಾಖೆ ಅವ್ಯವಹಾರ ಬಗ್ಗೆ ತಾವೇಕೆ ಮೇಲಧಿಕಾರಿಗಳಿಗೆ ದೂರು ನೀಡಿಲ್ಲ ಎಂದು ಅಧ್ಯಕ್ಷರು, ಉಪಾಧ್ಯಕ್ಷರನ್ನು ಸದಸ್ಯ ಪ್ರಕಾಶ್‌ ಪ್ರಶ್ನಿಸಿದರು. ವಲಯ ಅರಣ್ಯ ಅಧಿಕಾರಿ ಶಂಕರನಾಯ್ಕ ಸಭೆಗೆ ಬರಬೇಕು. ಇಲ್ಲವೇ ಸಭೆ ರದ್ದುಗೊಳಿಸಿ ಎಂದು ಸದಸ್ಯರು ಒತ್ತಾಯಿಸಿದರು. ಅವರು ಮಧ್ಯಾಹ್ನ 2 ಗಂಟೆಗೆ ಸಭೆಗೆ ಆಗಮಿಸುವುದಾಗಿ ತಿಳಿಸಿದ ನಂತರ ಸಭೆ ಮುಂದುವರಿಸಲಾಯಿತು.

ಕುಡಿಯುವ ನೀರಿನ ಘಟಕದ ಎಇಇ ಜಯ್ಯಪ್ಪ ಅವರು, 4.28 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ ಸಿಕ್ಕಿದೆ. ಶಾಸಕರ ಅನುದಾನ 50ಲಕ್ಷ ರೂ., ಜಿಲ್ಲಾಧಿಕಾರಿಗಳ 50 ಲಕ್ಷ ರೂ. ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗೆ ಕಳುಹಿಸಲಾಗಿದೆ ಎಂದರು. ಎಲ್ಲಿ ಎಲ್ಲಿ ನೀರಿನ ಸಮಸ್ಯೆ ಇದೆಯೋ ಅದನ್ನು ಪಟ್ಟಿ ಮಾಡಿಕೊಂಡು ಎಇಇ ಜೊತೆಗೆ ತೆರಳಿ ಬಗೆಹರಿಸಲಾಗುವುದು ಎಂದು ಇಒ ಮಮತಾ ಹೊಸಗೌಡರ್‌ ತಿಳಿಸಿದರು. 

ತೆಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಗೆ ಚುಚ್ಚುಮದ್ದು ನೀಡಲು ಲಂಚ ಪಡೆದ ನರ್ಸ್‌ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸದಸ್ಯೆ ಸುಮಿತ್ರಾ ಒತ್ತಾಯಿಸಿದಾಗ ನರ್ಸ್‌ಗೆ ನೋಟಿಸ್‌ ನೀಡುವುದಾಗಿ ತಾಲೂಕು ವೈದ್ಯಾಧಿಕಾರಿ
ಮೆಣಸಿನಕಾಯಿ ಹೇಳಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ವೆಂಕಟೇಶರೆಡ್ಡಿ, ಯೋಜನಾಧಿಕಾರಿ ವಿಜಯಕುಮಾರ್‌ ಉಪಸ್ಥಿತರಿದ್ದರು. 

ಟಾಪ್ ನ್ಯೂಸ್

arya-khan

ಆರ್ಯನ್ ಖಾನ್ ಗೆ ಜಾಮೀನು ನೀಡಿದ ಹೈಕೋರ್ಟ್: ಇಂದೂ ಜೈಲಿನಲ್ಲಿರಬೇಕು

ಖಾಸಗಿ ಬಸ್ಸು – ರಿಕ್ಷಾ ನಡುವೆ ಅಪಘಾತ : ರಿಕ್ಷಾ ಚಾಲಕ ಸೇರಿ ಇಬ್ಬರಿಗೆ ಗಾಯ

ಖಾಸಗಿ ಬಸ್ಸು – ರಿಕ್ಷಾ ನಡುವೆ ಅಪಘಾತ : ರಿಕ್ಷಾ ಚಾಲಕ ಸೇರಿ ಇಬ್ಬರಿಗೆ ಗಾಯ

syska bolt sw200 smartwatch

ಸಿಸ್ಕಾ ಬೋಲ್ಟ್ ಎಸ್‍ ಡಬ್ಲೂ 200 ವಾಚ್‍: ಅಗ್ಗದ ದರದಲ್ಲಿ ಅಧಿಕ ಪ್ರಯೋಜನ!

26post

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಇ-ಬೈಕ್ ಮೂಲಕ ಅಂಚೆ ವಿತರಣೆ

s-t-somashekhar

ಬೆಂಗಳೂರು ಉಸ್ತುವಾರಿ ಸಿಎಂ ಬೊಮ್ಮಾಯಿ ಬಳಿಯೇ ಇರಲಿ: ಸಚಿವ ಸೋಮಶೇಖರ್

ಹೂಡಿಕೆದಾರರಿಗೆ ಲಕ್ಷಾಂತರ ರೂ. ನಷ್ಟ; ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 1,158 ಅಂಕ ಕುಸಿತ

ಹೂಡಿಕೆದಾರರಿಗೆ ಲಕ್ಷಾಂತರ ರೂ. ನಷ್ಟ; ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 1,158 ಅಂಕ ಕುಸಿತ

ನೆಟ್ಸ್ ನಲ್ಲಿ ಬೌಲಿಂಗ್ ಮಾಡಿದ ಹಾರ್ದಿಕ್: ಕಿವೀಸ್ ವಿರುದ್ಧ ಆಡುವುದು ಬಹುತೇಕ ಖಚಿತ

ನೆಟ್ಸ್ ನಲ್ಲಿ ಬೌಲಿಂಗ್ ಮಾಡಿದ ಹಾರ್ದಿಕ್: ಕಿವೀಸ್ ವಿರುದ್ಧ ಆಡುವುದು ಬಹುತೇಕ ಖಚಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿ.ಸಿ.ನಾಗೇಶ್

ಮುಂದಿನ ವರ್ಷದಿಂದ ಪ್ರಾಥಮಿಕ ಹಂತದಲ್ಲೂ ನೂತನ ಶಿಕ್ಷಣ ನೀತಿ ಅಳವಡಿಕೆ: ಬಿ.ಸಿ.ನಾಗೇಶ್

B-day

ಮಕ್ಕಳ ಪಾಲನಾ ಕೇಂದ್ರದಲ್ಲಿ ಗಣ್ಯರ ಜನ್ಮದಿನಾಚರಣೆಗೆ ಬ್ರೇಕ್‌

Building

ಸಿದ್ಧಗಂಗಾ ವಿದ್ಯಾಸಂಸ್ಥೆಯಿಂದ ವಿನೂತನ ತರಬೇತಿ

ಆಂಗ್ಲ ಭಾಷಾ ವ್ಯಾಮೋಹದಿಂದ ಹೊರ ಬನ್ನಿ; ಬೀಳಗಿ

ಆಂಗ್ಲ ಭಾಷಾ ವ್ಯಾಮೋಹದಿಂದ ಹೊರ ಬನ್ನಿ; ಬೀಳಗಿ

davanagere news

ಆಂಗ್ಲ ಭಾಷಾ ವ್ಯಾಮೋಹದಿಂದ ಹೊರ ಬನ್ನಿ

MUST WATCH

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

udayavani youtube

ಕಬಿನಿ ಹಿನ್ನೀರಿನಲ್ಲಿ ಈಜಿದ ಹುಲಿ

udayavani youtube

ಎತ್ತಿನಭುಜ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗರೇ ಎಚ್ಚರ

ಹೊಸ ಸೇರ್ಪಡೆ

tiger swimming

2 ನಿಮಿಷದಲ್ಲಿ ಅರ್ಧ ಕಿ.ಮೀ. ಈಜಿದ ಹುಲಿರಾಯ!

27kannada

ಜೋಗ ಜಲಪಾತದ ಎದುರು ನಾಡಗೀತೆ: ಕನ್ನಡ ಮಾಸ ಆಚರಣೆಗೆ ಮುನ್ನುಡಿ

arya-khan

ಆರ್ಯನ್ ಖಾನ್ ಗೆ ಜಾಮೀನು ನೀಡಿದ ಹೈಕೋರ್ಟ್: ಇಂದೂ ಜೈಲಿನಲ್ಲಿರಬೇಕು

ಖಾಸಗಿ ಬಸ್ಸು – ರಿಕ್ಷಾ ನಡುವೆ ಅಪಘಾತ : ರಿಕ್ಷಾ ಚಾಲಕ ಸೇರಿ ಇಬ್ಬರಿಗೆ ಗಾಯ

ಖಾಸಗಿ ಬಸ್ಸು – ರಿಕ್ಷಾ ನಡುವೆ ಅಪಘಾತ : ರಿಕ್ಷಾ ಚಾಲಕ ಸೇರಿ ಇಬ್ಬರಿಗೆ ಗಾಯ

syska bolt sw200 smartwatch

ಸಿಸ್ಕಾ ಬೋಲ್ಟ್ ಎಸ್‍ ಡಬ್ಲೂ 200 ವಾಚ್‍: ಅಗ್ಗದ ದರದಲ್ಲಿ ಅಧಿಕ ಪ್ರಯೋಜನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.