Udayavni Special

ಯಕ್ಷಗಾನಕ್ಕೂ ಸಿಗಲಿ ಪ್ರೋತ್ಸಾಹ

Team Udayavani, Mar 28, 2021, 6:45 PM IST

ಬನನವಚ

ದಾವಣಗೆರೆ : ನಾಟಕದಂತೆ ಯಕ್ಷಗಾನವೂ ರಂಗಭೂಮಿಯ ಒಂದು ಕಲಾ ಪ್ರಕಾರ. ಆದರೆ ರಾಜ್ಯ ಸರ್ಕಾರಗಳು ನಾಟಕಕ್ಕೆ ನೀಡಿದಷ್ಟು ಪ್ರೋತ್ಸಾಹ, ಮಾನ್ಯತೆಯನ್ನು ಬೇರೆ ಯಾವ ರಂಗಭೂಮಿ ಪ್ರಕಾರಕ್ಕೂ ನೀಡದೇ ಇರುವುದು ವಿಷಾದನೀಯ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ. ಹೆಗಡೆ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಡುಪಿಯ ಶ್ರೀ ಕಂದಾವರ ರಘುರಾಮ ಶೆಟ್ಟಿ ಪ್ರತಿಷ್ಠಾನದ ದಶಮಾನೋತ್ಸವ, ಕಂದಾವರ ಪ್ರಶಸ್ತಿ ಪ್ರದಾನ, ಯಕ್ಷಗಾನ, ತಾಳಮದ್ದಳೆ, ಯಕ್ಷಗಾನ ತರಬೇತಿ ಶಿಬಿರ ಹಾಗೂ ಯಕ್ಷೊàತ್ಸವ-2021′ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಬೇರೆ ಭಾಷೆಗಳ ಸೋಂಕಿಲ್ಲದ ಯಕ್ಷಗಾನ ಮಾತ್ರ ಕನ್ನಡ ಬೆಳೆಸುವ ಏಕೈಕ ಮಾಧ್ಯಮವಾಗಿದೆ. ಯಕ್ಷಗಾನ ಆರು ಸಾವಿರ ಪ್ರಸಂಗಳುಳ್ಳ ಏಕಮಾತ್ರ ಕಲೆಯಾಗಿದೆ.

ಆದರೆ ಸಾಹಿತ್ಯ ಸಮ್ಮೇಳನಗಳಲ್ಲಿ ಯಕ್ಷಗಾನದ ಮೇಲೆ ಒಂದು ಗೋಷ್ಠಿಯನ್ನೂ ನಡೆಸುವುದಿಲ್ಲ. ಈ ವಿಚಾರವಾಗಿ ಧ್ವನಿ ಎತ್ತಿದಾಗ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನ ಕುರಿತು ಗೋಷ್ಠಿ ಏರ್ಪಡಿಸಲು ಕಸಾಪ ಮುಂದಾಗಿದೆ. ಇಂಥ ಕಲೆಗೆ ರಾಜ್ಯ ಹಾಗೂ ಕೇಂದ್ರ ಎರಡೂ ಸರ್ಕಾರಗಳು ಗುರುತಿಸದೇ ಇರುವುದು ನೋವಿನ ಸಂಗತಿ ಎಂದರು.

ಯಕ್ಷರಂಗ ಸಂಸ್ಥೆ ಅಧ್ಯಕ್ಷ ಮಲ್ಯಾಡಿ ಪ್ರಭಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಸಂಸ್ಥಾಪಕ ಕಂದಾವರ ರಘುರಾಮ ಶೆಟ್ಟಿ, ಕರಾವಳಿ ಸೌಹಾರ್ದ ಕ್ರೆಡಿಟ್‌ ಸೊಸೈಟಿ ಅಧ್ಯಕ್ಷ ಸಿ.ಎ. ಉಮೇಶ್‌ ಶೆಟ್ಟಿ, ಕಸಾಪ ತಾಲೂಕು ಅಧ್ಯಕ್ಷ ಬಿ. ವಾಮದೇವಪ್ಪ, ಯಕ್ಷರಂಗ ಸಂಸ್ಥೆಯ ಗಣೇಶ್‌ ಶೆಣೈ, ಕಲಾಕುಂಚ ಅಧ್ಯಕ್ಷ ಕೆ.ಎಚ್‌. ಮಂಜುನಾಥ್‌, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಬೇಳೂರು ಸಂತೋಷಕುಮಾರ್‌ ಶೆಟ್ಟಿ ಮತ್ತಿತರರು ಇದ್ದರು.

ಇದೇ ಸಂದರ್ಭದಲ್ಲಿ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ “ಕಂದಾವರ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಂದಾವರ ರಘುರಾಮ ಶೆಟ್ಟಿ ವಿರಚಿತ “ಸೀತಾ ಪಾರಮ್ಯ’ ಪೌರಾಣಿಕ ಕಥಾನಕದ ಯಕ್ಷಗಾನ ತಾಳಮದ್ದಳೆ, ಮಧುಕುಮಾರ್‌ ಬೋಳೂರು ವಿರಚಿತ ಪೌರಾಣಿಕ ಕಥಾನಕ “ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನಗೊಂಡವು.

ಟಾಪ್ ನ್ಯೂಸ್

ಕೆಲಾ: ಮಣ್ಣಿನ ರಸ್ತೆಗೆ ಇನ್ನೂ ಒದಗಿ ಬರದ ಡಾಮರು ಭಾಗ್ಯ

ಕೆಲಾ: ಮಣ್ಣಿನ ರಸ್ತೆಗೆ ಇನ್ನೂ ಒದಗಿ ಬರದ ಡಾಮರು ಭಾಗ್ಯ

ದೊಡ್ಡಣಗುಡ್ಡೆ ಶಾಲೆ ವಿದ್ಯಾರ್ಥಿಗಳಿಗೆ ಸಾವಿರ ರೂ. ಬಾಂಡ್‌

ದೊಡ್ಡಣಗುಡ್ಡೆ ಶಾಲೆ ವಿದ್ಯಾರ್ಥಿಗಳಿಗೆ ಸಾವಿರ ರೂ. ಬಾಂಡ್‌

ಮೂರು ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ : ಮತಯಂತ್ರ ಸೇರಿದ ಭವಿಷ್ಯ

ಉಪಚುನಾವಣೆ : ಮೂರು ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ : ಮತಯಂತ್ರ ಸೇರಿದ ಭವಿಷ್ಯ

ಪಾಲಿಕೆ ನಿರ್ಲಕ್ಷವೇ ಅತ್ತಿಗೆ ಸಾವಿಗೆ ಕಾರಣ : ಹಿರಿಯ ನಟ ರಮೇಶ್‌ ಪಂಡಿತ್‌ ಆರೋಪ

ಪಾಲಿಕೆ ನಿರ್ಲಕ್ಷವೇ ಅತ್ತಿಗೆ ಸಾವಿಗೆ ಕಾರಣ : ಹಿರಿಯ ನಟ ರಮೇಶ್‌ ಪಂಡಿತ್‌ ಆರೋಪ

ಹ್ಯಾಟ್ರಿಕ್‌ ಸೋಲಿಗೆ ತುತ್ತಾದ ಹೈದರಾಬಾದ್‌ ; ಮುಂಬೈಗೆ ಸತತ ಎರಡನೇ ಗೆಲುವು

ಹ್ಯಾಟ್ರಿಕ್‌ ಸೋಲಿಗೆ ತುತ್ತಾದ ಹೈದರಾಬಾದ್‌ ; ಮುಂಬೈಗೆ ಸತತ ಎರಡನೇ ಗೆಲುವು

ಐದು ವರ್ಷದ ಹಿಂದೆ ನಡೆದ ಮನೆಗಳ್ಳತನ ಪ್ರಕರಣ ಭೇದಿಸಿದ ಬ್ಯಾಟರಾಯನಪುರ ಪೊಲೀಸರು

ಐದು ವರ್ಷದ ಹಿಂದೆ ನಡೆದ ಮನೆಗಳ್ಳತನ ಪ್ರಕರಣ ಭೇದಿಸಿದ ಬ್ಯಾಟರಾಯನಪುರ ಪೊಲೀಸರು

ಒಲಿಂಪಿಯನ್‌, ಭಾರತದ ಮಾಜಿ ಫುಟ್ಬಾಲಿಗ ಅಹ್ಮದ್‌ ಹುಸೇನ್‌ ನಿಧನ

ಒಲಿಂಪಿಯನ್‌, ಭಾರತದ ಮಾಜಿ ಫುಟ್ಬಾಲಿಗ ಅಹ್ಮದ್‌ ಹುಸೇನ್‌ ನಿಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jhgfdsrtgcs

ನಾಲೆ ನಿರ್ವಹಣಾ ಕೇಂದ್ರಕ್ಕೆ ಪವಿತ್ರ ರಾಮಯ್ಯ ಭೇಟಿ

vcbfgds

1249.60 ಲಕ್ಷ ರೂ. ಉಳಿತಾಯ ಬಜೆಟ್‌

16-6–actuval

ಸ್ವ ಇಚ್ಛೆಯಿಂದ ಲಸಿಕೆ ಹಾಕಿಸಕೊಳ್ಳಿ

ಹಗ್ಹಗಹಗಹ್ಗಹ

ಅಂಬೇಡ್ಕರ್‌-ಬಾಬೂಜಿ ಕೊಡುಗೆ ಅಪಾರ

Davanagere

15 ರಂದು ವೀರಭದ್ರೇಶ್ವರ ಶಿಲಾ ಮೂರ್ತಿ ಪುರ ಪ್ರವೇಶ

MUST WATCH

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

udayavani youtube

ಮನೆಯಂಗಳದಲ್ಲಿ ವೀಳ್ಯದೆಲೆ ಬೆಳೆದು ಯಶಸ್ಸು ಕಂಡ ನಿವೃತ ಅಧ್ಯಾಪಕ

udayavani youtube

ಕುದ್ರೋಳಿ ಗಣೇಶ್ ವಿಸ್ಮಯ ಜಾದೂ

ಹೊಸ ಸೇರ್ಪಡೆ

ಸರಕಾರದ ಹೋರಾಟದಲ್ಲಿ ಜನ ಭಾಗಿಯಾಗಲಿ : ಶಾಸಕ ಡಾ| ಭರತ್‌ ಶೆಟ್ಟಿ ವೈ

ಸರಕಾರದ ಹೋರಾಟದಲ್ಲಿ ಜನ ಭಾಗಿಯಾಗಲಿ : ಶಾಸಕ ಡಾ| ಭರತ್‌ ಶೆಟ್ಟಿ ವೈ

ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಯಾಗಲಿ : ಜೇವರ್ಗಿ ಶಾಸಕ ಡಾ| ಅಜಯ್‌ ಸಿಂಗ್‌

ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಯಾಗಲಿ : ಜೇವರ್ಗಿ ಶಾಸಕ ಡಾ| ಅಜಯ್‌ ಸಿಂಗ್‌

ಕೆಲಾ: ಮಣ್ಣಿನ ರಸ್ತೆಗೆ ಇನ್ನೂ ಒದಗಿ ಬರದ ಡಾಮರು ಭಾಗ್ಯ

ಕೆಲಾ: ಮಣ್ಣಿನ ರಸ್ತೆಗೆ ಇನ್ನೂ ಒದಗಿ ಬರದ ಡಾಮರು ಭಾಗ್ಯ

ಕೈ ಮೀರಿದರೆ ದೇವರು ಸಹ ಏನೂ ಮಾಡಲಾರ : ಶಾಸಕ ಡಾ| ಶಿವರಾಜ್‌ ಪಾಟೀಲ್‌

ಕೈ ಮೀರಿದರೆ ದೇವರು ಸಹ ಏನೂ ಮಾಡಲಾರ : ಶಾಸಕ ಡಾ| ಶಿವರಾಜ್‌ ಪಾಟೀಲ್‌

ದೊಡ್ಡಣಗುಡ್ಡೆ ಶಾಲೆ ವಿದ್ಯಾರ್ಥಿಗಳಿಗೆ ಸಾವಿರ ರೂ. ಬಾಂಡ್‌

ದೊಡ್ಡಣಗುಡ್ಡೆ ಶಾಲೆ ವಿದ್ಯಾರ್ಥಿಗಳಿಗೆ ಸಾವಿರ ರೂ. ಬಾಂಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.