Udayavni Special

ಮನಸೂರೆಗೊಂಡ ಜಾನಪದ ಸಿರಿ ಸಂಭ್ರಮ


Team Udayavani, Sep 4, 2017, 3:55 PM IST

04-DV-5.jpg

ದಾವಣಗೆರೆ: ಆಯಾಯ ಗ್ರಾಮ ಶಕ್ತಿದೇವತೆಗಳ ವಿವಿಧ ಪ್ರಕಾರದಲ್ಲಿ ಆರಾಧನೆ ಮಾಡುವ ಪೂಜಾ ಕುಣಿತ, ಕಾಡನ್ನೇ ದೇವರು ಎಂದು ಪೂಜಿಸುವ ಸೋಲಿಗರು ವರ್ಷಕ್ಕೊಮ್ಮೆ ಆಚರಿಸುವ ರೊಟ್ಟಿ ಹಬ್ಬದ ಸಂದರ್ಭದಲ್ಲಿ ಗೋರು…ಗೋರುಕ… ಗೋರುಕ… ಎಂಬ ಹಾಡಿಗೆ ಹಾಕುವ ಹೆಜ್ಜೆ, ಉಡುಪಿ ಜಿಲ್ಲೆಯಹ ಕುಡುಬಿ.. ಜನಾಂಗದವರು ಹೋಳಿ ಹುಣ್ಣಿಮೆಯಂದು ಹೂವಿನಿಂದ ಅಲಂಕರಿಸಿದ ಕರಗವನ್ನ ತಲೆಯ ಮೇಲೆ ಹೊತ್ತು ಕುಣಿಯುವ ಕರಗ ಕೋಲಾಟ, ವಿಜಯೋತ್ಸವದ ಸಂಕೇತದ ಕಲೆ ಪಟಾ ಕುಣಿತ, ಪೌರಾಣಿಕ ಕಥಾ ಹಿನ್ನೆಲೆಯ ಡೊಳ್ಳು ಕುಣಿತ… ಹೀಗೆ 15ಕ್ಕೂ ಹೆಚ್ಚು ಜಾನಪದ ಕಲೆಗಳ ಅತ್ಯಾಕರ್ಷಕ, ಮನ ಸೂರಗೊಳಿಸುವ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದು ಸಿರಿಗೆರೆಯ ತರಳಬಾಳು ಕಲಾಸಂಘ, ದಾವಣಗೆರೆಯ ಶಿವಸೈನ್ಯ ಸಂಘದ ಸಂಯುಕ್ತಾಶ್ರಯದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಜಾನಪದ ಸಿರಿ ಸಂಭ್ರಮ-2017. ಗ್ರಾಮೀಣ ಪ್ರದೇಶದ ಜನರು ದೈನಂದಿನ ಹೊಲ, ಕಣ, ಮನೆಯ ಕೆಲಸದ ಆಯಾಸ, ಬದುಕಿನ ಏಕತಾನತೆ, ಬೇಸರಿಕೆ ದೂರ ಮಾಡಲೆಂದು ಗ್ರಾಮೀಣರು ರೂಢಿಸಿಕೊಂಡ ನೆಲದ ಜಾನಪದ ಕಲೆಯು ಕ್ರಮೇಣ ಕ್ಷೀಣಿಸುತ್ತಿದ್ದು, ಅದನ್ನು ಉಳಿಸಿ, ಬೆಳೆಸುವ ಮಹತ್ತರ ಉದ್ದೇಶದಿಂದ ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಮಾರ್ಗದರ್ಶನ, ರಂಗಭೂಮಿಯ ದಿಗ್ಗಜರಲ್ಲೊಬ್ಬರಾದ ಶ್ರೀನಿವಾಸ ಜಿ. ಕಪ್ಪಣ್ಣ ಸಂಯೋಜನೆಯಲ್ಲಿ ಮೂಡಿ ಬಂದ ಜಾನಪದ ಸಿರಿ ಸಂಭ್ರಮ ನೋಡುಗರ ಮನಸೂರುಗೊಂಡಿತು.

ಸಿರಿಗೆರೆ ವಿದ್ಯಾಸಂಸ್ಥೆಯ ವಿವಿಧ ಶಾಲಾ-ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ನರ್ಸರಿಯಿಂದ ಹಿಡಿದು ಪದವಿ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಜಾನಪದ ಕಲೆಗಳ ರಸದೌತಣ ಉಣ ಬಡಿಸಿದರು. ನೋಡುಗರು ಮಂತ್ರಮುಗ್ಧರಾಗುವಂತೆ ನೃತ್ಯ ಪ್ರದರ್ಶಿಸಿದರು. ಬಹು ದಿನಗಳ ನಂತರ ಒಂದೊಳ್ಳೆಯ ಜಾನಪದದ ಸಿರಿಯ ಸಂಭ್ರಮ ಅನುಭವಿಸುವ ಅವಕಾಶ ಮಾಡಿಕೊಟ್ಟರು. ಮೈಸೂರು ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಬೀಸು ಕಂಸಾಳೆ, ಗಂಡುಮೆಟ್ಟಿನ ಕಲೆ ಎಂದೇ ಪರಿಗಣಿಸುವ ಡೊಳ್ಳು ಕುಣಿತ, ತುಳುನಾಡಿನ ಬುಡಕಟ್ಟು ಜನರ ಕಂಗೀಲು ನೃತ್ಯ, ಕೊಡಗಿನ ಪ್ರಮುಖ ಜನಪದ ನೃತ್ಯ ಉಮ್ಮತ್ತಾಟ್‌, ಶೈವ ಸಂಪ್ರದಾಯದ ವೀರರಸ ಪ್ರಧಾನದ ವೀರಗಾಸೆ, ಪ್ರಾಚೀನ ಸಾಂಪ್ರದಾಯಿಕ ಕ್ರೀಡೆ ಮಲ್ಲಕಂಬ, ಲಂಬಾಣಿ ಜನಾಂಗದ ಸಂಪ್ರದಾಯ ನೃತ್ಯ… ಹೀಗೆ ಪ್ರತಿಯೊಂದನ್ನು ವಿದ್ಯಾರ್ಥಿಗಳು ಚಿತ್ತಾಕರ್ಷಕವಾಗಿ ಪ್ರದರ್ಶಿಸಿದರು.

ಸಮಾಳ ಬಾರಿಸುವ ಮೂಲಕ ಜಾನಪದ ಸಿರಿ-2017 ಉದ್ಘಾಟಿಸಿದ ಶಾಸಕ ಶಾಮನೂರು ಶಿವಶಂಕರಪ್ಪ, ದೃಶ್ಯ, ಸಿನಿಮಾ ಮಾಧ್ಯಮದ ಪ್ರಭಾವದಲ್ಲಿ ನಗರ ಪ್ರದೇಶದಲ್ಲಿ ಜಾನಪದ ಕಲೆಯ ಮರೆಯ ಲಾಗುತ್ತಿದೆ. ನೆಪ ಮಾತ್ರಕ್ಕೆ ಜಾನಪದ ಕಲೆಗಳನ್ನು ಸ್ಮರಿಸಲಾಗುತ್ತಿದೆ. ಮದುವೆ,
ಮಗಳನ್ನ ಗಂಡ ಮನೆಗೆ ಕಳಿಸುವಾಗ, ಇತರೆ ಶುಭ ಸಂದರ್ಭದಲ್ಲಿ ಹಾಡುವ ಸೋಬಾನೆ… ಎಲ್ಲವೂ ಕಾಣೆಯಾಗುತ್ತಿವೆ. ಇಂತಹ ವಾತಾವರಣದಲ್ಲಿ
ಜಾನಪದ ಕಲೆಯ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸಿರಿಗೆರೆ ಕಲಾಸಂಘದ ಜಾನಪದ ಸಿರಿ ಸಂಭ್ರಮ ಕಾರ್ಯಕ್ರಮವನ್ನ ದಾವಣಗೆರೆಯಲ್ಲಿ ಏರ್ಪಡಿಸಿರುವುದು ಸಂತೋಷದ ವಿಚಾರ. ಜಾನಪದ ಕಲೆಯ ಸವಿಯುವ ಜೊತೆಗೆ ಉಳಿಸಿ,  ಬೆಳೆಸುವಂತಾಗಬೇಕು ಎಂದು ಆಶಿಸಿದರು.

ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ಹಿಂದಿನ ಚಲನಚಿತ್ರಗಳಲ್ಲಿ ಜಾನಪದ ಹಾಡು, ನೃತ್ಯ  ಇರುತ್ತಿದ್ದವು. ಈಗಿನ ಚಲನಚಿತ್ರಗಳಲ್ಲಿ ಹಾಡು, ಕುಣಿತ ನೋಡಿದರೆ ಯಾವುದೇ ತಿರುಳೇ ಇರುವುದಿಲ್ಲ. ಸಿರಿಗೆರೆ ವಿದ್ಯಾಸಂಸ್ಥೆಯ ಮಕ್ಕಳು ದಾವಣಗೆರೆಯಲ್ಲೂ ಜಾನಪದ ಕಲೆಯ ಪ್ರದರ್ಶನ ನೀಡುತ್ತಿರುವುದು ಸಂತೋಷದ ವಿಚಾರ ಎಂದರು. ಸಾನ್ನಿಧ್ಯ ವಹಿಸಿದ್ದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇಶದ ಸಂಸ್ಕೃತಿಯ ಪ್ರತೀಕವಾಗಿರುವ ಕಲಾ ಸಂಪತ್ತು ಅನೇಕ ಕಾರಣದಿಂದ ಕೀಣಿಸುತ್ತಿದೆ. ನದಿ, ನೀರು, ಕೆರೆಗಳು ಬತ್ತಿ  ಗಿತ್ತಿರುವಂತೆಯೇ ಕಲಾ ಸಂಪತ್ತು ಬತ್ತಿ ಹೋಗುತ್ತಿದೆ. ತಾನಾಗಿಯೇ ಪ್ರವರ್ಧಮಾನಕ್ಕೆ ಬಂದಿರುವ ಗ್ರಾಮೀಣ ಜನರ ನೋವು, ನಲಿವು, ಸಂತೋಷ. ಸಂಭ್ರಮದ ಪ್ರತೀಕವಾಗಿರುವ
ಜಾನಪದ ಕಲೆಯ ಉಳಿಸಿ, ಬೆಳಸುವ ನಿಟ್ಟಿನಲ್ಲಿ ಸಿರಿಗೆರೆ ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವ ಗ್ರಾಮೀಣ ಭಾಗದ 350ಕ್ಕೂ ವಿದ್ಯಾರ್ಥಿಗಳು ತರಬೇತಿ ಪಡೆದು, ಪ್ರದರ್ಶನ ನೀಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಸಾದು ಸದ್ಧರ್ಮ ಸಂಘದ ಅಧ್ಯಕ್ಷ ಕೆ.ಆರ್‌. ಜಯದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಮುದೇಗೌಡ್ರು ಗಿರೀಶ್‌, ಜಿಲ್ಲಾ ಪಂಚಾಯತಿ ಸದಸ್ಯ ಕೆ.ಎಸ್‌. ಬಸವಂತಪ್ಪ, ಮಾಜಿ ಸದಸ್ಯ ಕೆ.ಜಿ. ಬಸವನಗೌಡ, ಹೋಟೆಲ್‌ ಉದ್ಯಮಿ ಅಣಬೇರು ರಾಜಣ್ಣ, ಅಗಸನಕಟ್ಟೆ ಶಿವಮೂರ್ತಿ, ಕೆಎಸ್ಸೆಸ್‌ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್‌. ಕೆ. ಬಸವರಾಜ್‌, ಶಿವಸೈನ್ಯದ ಗೌರವ ಅಧ್ಯಕ್ಷ ಶಶಿಧರ್‌ ಹೆಮ್ಮನಬೇತೂರು, ಅಧ್ಯಕ್ಷ ಅಗಸನಕಟ್ಟೆ ಲಿಂಗರಾಜ್‌ ಇತರರು ಇದ್ದರು. 

ಹಾವು ಬಿಡಲಿಲ್ಲ…
ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ಯಾವುದೇ ಸಭೆ, ಸಮಾರಂಭದಲ್ಲಾಗಲಿ ಹಾವು ಬಿಡುವುದು ಸಾಮಾನ್ಯ. ಅದೇ ರೀತಿ ಶಾಸಕ ಶಾಮನೂರು ಶಿವಶಂಕರಪ್ಪ ಸಭೆ, ಸಮಾರಂಭಕ್ಕೆ ತಡವಾಗಿ ಬರುವುದು ಸಾಮಾನ್ಯ. ರವೀಂದ್ರನಾಥ್‌ ಹಾವು ಬಿಡದೇ ಇರುವುದು, ಶಾಮನೂರು
ಶಿವಶಂಕರಪ್ಪ ಮೊದಲೇ ಆಗಮಿಸಿದ್ದು ಇಂದಿನ ಕಾರ್ಯಕ್ರಮದ ವಿಶೇಷ ಎಂದು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿಶ್ಲೇಷಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರು ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರ ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ!

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ

ಫೋರ್ಬ್ಸ್ ಪಟ್ಟಿಯಲ್ಲಿ ಅಂಬಾನಿ, ದಮನಿ

ಫೋರ್ಬ್ಸ್ ಪಟ್ಟಿಯಲ್ಲಿ ಅಂಬಾನಿ, ದಮನಿ

24ಗಂಟೆಯಲ್ಲಿ 549 ಕೋವಿಡ್ ಪ್ರಕರಣ ಪತ್ತೆ, 49 ಸಾವಿರ ವೆಂಟಿಲೇಟರ್ಸ್ ಗೆ ಬೇಡಿಕೆ

24ಗಂಟೆಯಲ್ಲಿ 549 ಕೋವಿಡ್ ಪ್ರಕರಣ ಪತ್ತೆ, 49 ಸಾವಿರ ವೆಂಟಿಲೇಟರ್ಸ್ ಗೆ ಬೇಡಿಕೆ: ಸಚಿವಾಲಯ

ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ನೀಡಲಿ:ಸಿದ್ದರಾಮಯ್ಯ

ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ನೀಡಲಿ:ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

09-April-4

ವಾಹನ ಸೀಜ್‌ ಆದ್ರೆ ಕಷ್ಟ ಕಷ್ಟ

09-April-3

ಮಲ್ಲಾಪುರ ಕೆರೆಯಲ್ಲಿ ಮೀನುಗಳ ಸಾವು

08-April-4

ಹಳ್ಳಿಗಳಿಗೆ ಭೇಟಿ ನೀಡಿ ಕೊರೊನಾ ಜಾಗೃತಿ

08-April-3

ಲಾಕ್‌ಡೌನ್‌ ಉಲ್ಲಂಘಿಸಿದ್ರೆ ಕಠಿಣ ಕ್ರಮ

ಎಲ್ಲಾ ಅಲ್ಪಸಂಖ್ಯಾತರು ದೇಶದ್ರೋಹಿಗಳಲ್ಲ, ಭಯೋತ್ಪಾದಕರೂ ಅಲ್ಲ: ರೇಣುಕಾಚಾರ್ಯ

ಎಲ್ಲಾ ಅಲ್ಪಸಂಖ್ಯಾತರು ದೇಶದ್ರೋಹಿಗಳಲ್ಲ, ಭಯೋತ್ಪಾದಕರೂ ಅಲ್ಲ: ರೇಣುಕಾಚಾರ್ಯ

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರು ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರ ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ಮಹಾರಾಷ್ಟ್ರ: ಎಲ್ಲಾ ಶಾಸಕರು, ಸಚಿವರ ಸಂಬಳದಲ್ಲಿ ಶೇ.30ರಷ್ಟು ಕಡಿತ: ಸಂಪುಟ ಒಪ್ಪಿಗೆ

ಮಹಾರಾಷ್ಟ್ರ: ಎಲ್ಲಾ ಶಾಸಕರು, ಸಚಿವರ ಸಂಬಳದಲ್ಲಿ ಶೇ.30ರಷ್ಟು ಕಡಿತ: ಸಂಪುಟ ಒಪ್ಪಿಗೆ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ!

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ