ಪರವಾನಗಿಗೆ 20 ವರ್ಷದಿಂದ ಪರದಾಟ

Team Udayavani, Jul 10, 2018, 3:36 PM IST

dvg-1.jpg

ದಾವಣಗೆರೆ: ಮನೆಯ ಯಜಮಾನ ಹುಟ್ಟು ಕುರುಡ, ಹೆಂಡತಿ ವಿಕಲಚೇತನೆ, ಮಗ ಸಹ ಹುಟ್ಟು ಕುರುಡ, ಮೊಮ್ಮಕ್ಕಳಿಬ್ಬರೂ ಕುರುಡರು… ಇಂತಹ ಕುಟುಂಬ ತಮ್ಮ ಜಾಗದಲ್ಲೇ ಸಂಗೀತ ಮಂದಿರ ಕಟ್ಟಿಕೊಳ್ಳಲಿಕ್ಕೆ ಗ್ರಾಮ ಪಂಚಾಯತಿಯ ಪರವಾನಗಿಗಾಗಿ 20 ವರ್ಷದಿಂದ ಪರಿತಪಿಸುತ್ತಿದೆ!.

ಗ್ರಾಮ ಪಂಚಾಯತ್‌ ನಿಂದ ಪರವಾನಗಿಗಾಗಿಯೇ 20 ವರ್ಷದಿಂದ ಪ್ರತಿನಿತ್ಯ ತಮ್ಮ ಸಂಬಂಧಿಕರಿಂದಲೇ ಕಿರುಕುಳದ ನಡುವೆಯೂ ಇಡೀ ಕುಟುಂಬ ಅಲೆದಾಡುತ್ತಿರುವುದು ಅಚ್ಚರಿ ಮೂಡಿಸಿದರೂ ಸತ್ಯ!.

ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದ ಸಂಗೀತ ಶಿಕ್ಷಕ ಕೆ.ಎನ್‌. ಮಂಜಪ್ಪ ನಾಟಕದ ಸಂಗೀತದ ಮೇಷ್ಟ್ರು. ಅವರ ಮಗ ನರೇಂದ್ರಕುಮಾರ್‌ ಸಹಕುರುಡರು. ರೇಂದ್ರಕುಮಾರ್‌ ಮಕ್ಕಳಾದ ಚಿನ್ಮಯ್‌ ಮತ್ತು ತ್ರಿವೇಣಿ ಸಹ ಕುರುಡರು.

ಗದಗಿನ ಪುಟ್ಟರಾಜ ಗವಾಯಿಗಳ ಸಂಗೀತ ಶಾಲೆಯಲ್ಲಿ ಅಭ್ಯಾಸ ಮಾಡಿದ್ದ ನರೇಂದ್ರಕುಮಾರ್‌ ಅನೇಕ ಕಡೆ ಕೆಲಸಕ್ಕಾಗಿ ಅಲೆದಾಡಿ, ಎಲ್ಲಿಯೂ ಕೆಲಸ ಸಿಗದಿದ್ದರಿಂದ ತಮ್ಮ ಮನೆಯ ಪಕ್ಕದ 14*12 ಅಡಿ ಅಳತೆಯ ಜಾಗದಲ್ಲಿ ಸಂಗೀತ ಮಂದಿರ ಕಟ್ಟಿಸಿ, ನಾಲ್ಕಾರು ಜನರಿಗೆ ಸಂಗೀತ ಕಲಿಸಿ, ಜೀವನ ನಿರ್ವಹಣೆಗೆ ಸಂಗೀತ ಮಂದಿರ ನಿರ್ಮಾಣಕ್ಕೆ ಮುಂದಾಗುತ್ತಿದ್ದಂತೆಯೇ ಗ್ರಾಮ ಪಂಚಾಯತಿ ತಕರಾರು ಎತ್ತಿತು. ಜಾಗ ಗ್ರಾಮ ಪಂಚಾಯತಿಯದ್ದು ಹಾಗಾಗಿ ಸಂಗೀತ ಮಂದಿರ ಕಟ್ಟುವಂತಿಲ್ಲ ಎಂದು ಮೌಖೀಕ ಸೂಚನೆ ನೀಡಿತು.

ಏಕಾಏಕಿ ಎದುರಾದ ತಕರಾರಿನಿಂದ ಅವಕ್ಕಾದ ಕುಟುಂಬದ ಸದಸ್ಯರು 1968ರಲ್ಲಿ ಕೆ.ಎನ್‌. ಮಂಜಪ್ಪ ಅವರ ತಂದೆ ಕೌದಿ ನಿರ್ವಾಣಪ್ಪ ಜಾಗ ವರ್ಗಾಯಿಸಿದ ಮೂಲ ದಾಖಲೆ ಪತ್ತೆ ಹಚ್ಚಿ, ಗ್ರಾಮ ಪಂಚಾಯತಿಗೆ ಸಲ್ಲಿಸಿದರು. ಆದರೂ, ಗ್ರಾಮ ಪಂಚಾಯತಿಯಿಂದ ಪರವಾನಗಿ ದೊರೆಯಲಿಲ್ಲ.

ತಮ್ಮದೇ ಜಾಗದಲ್ಲಿ ಸಂಗೀತ ಮಂದಿರ ಕಟ್ಟಿಸಲು ಪರವಾನಗಿ ಕೋರಿ ನರೇಂದ್ರಕುಮಾರ್‌ ಇಡೀ
ಕುಟುಂಬದೊಂದಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ 14*12 ಅಡಿ ಸುತ್ತಳತೆಯ ಜಾಗವನ್ನು ಭಗೀರಥ ಭವನ ಇಲ್ಲವೇ ಸ್ತ್ರೀಶಕ್ತಿ ಭವನಕ್ಕೆ ಬಿಟ್ಟುಕೊಡುವಂತೆ ಒತ್ತಾಯಿಸುತ್ತಿದ್ದಾರೆ. 

20 ವರ್ಷದಿಂದ ಪರಿತಪಿಸುತ್ತಿರುವ ಕುಟುಂಬ ಸೋಮವಾರ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸದ ಜಿ.ಎಂ. ಸಿದ್ದೇಶ್ವರ್‌ರನ್ನು ಭೇಟಿಯಾಗಿ ಅಳಲು ತೋಡಿಕೊಂಡಿತು. ಕುಟುಂಬಕ್ಕೆ ಅಗತ್ಯ ನೆರವು ನೀಡುವಂತೆ ಸಂಸದರು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌, ಸಿಇಒ ಎಸ್‌. ಅಶ್ವತಿಗೆ ಸೂಚಿಸಿದರು 

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.