- Friday 06 Dec 2019
ಬೃಹತ್ ಶಕ್ತಿಯಾಗಿ ಬೆಳೆದಿದೆ ಸರ್ಕಾರಿ ನೌಕರರ ಸಂಘಟನೆ
•ನೌಕರರ ಸಮಸ್ಯೆ ಪರಿಹರಿಸುವುದಲ್ಲದೇ ಸಮಾಜಮುಖೀ ಕೆಲಸ
Team Udayavani, Jul 9, 2019, 2:55 PM IST
ಹೊನ್ನಾಳಿ: ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲಾಧ್ಯಕ್ಷ ಷಡಾಕ್ಷರಿ ಉದ್ಘಾಟಿಸಿದರು.
ಹೊನ್ನಾಳಿ: ಹಲವಾರು ದಶಕಗಳ ಹಿಂದೆ ಒಬ್ಬ ಧೀಮಂತ ಮಹಿಳೆಯಿಂದ ಆರಂಭಗೊಂಡ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇಂದು ಬೃಹತ್ ಶಕ್ತಿಯಾಗಿ ಬೆಳೆದು ನಿಂತಿದ್ದು, ಸರ್ಕಾರಿ ನೌಕರರ ಆಶಯಗಳನ್ನು ಸದಾ ಎತ್ತಿ ಹಿಡಿಯುವಲ್ಲಿ ಮುಂಚೂಣಿಯಲ್ಲಿದೆ ಎಂದು ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ ಸಂಘದ ನೂತನ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ನೌಕರರ ಸಂಘ ಕೇವಲ ತನ್ನ ನೌಕರರ ಹಿತಾಸಕ್ತಿ ಕಾಪಾಡದೇ ಜೊತೆಗೆ ರಕ್ತದಾನ, ಉನ್ನತ ಪರೀಕ್ಷೆಗಳಿಗೆ ತರಬೇತಿ, ಇಲಾಖೆ ತರಬೇತಿಗಳು, ನೌಕರರ ಆರೋಗ್ಯ ತಪಾಸಣೆ ಶಿಬಿರ ಹೀಗೆ ಹತ್ತು ಹಲವು ಸಮಾಜಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದು ಹೇಳಿದರು.
ಇಂದಿಗೂ ಎನ್.ಪಿ.ಎಸ್ ಸೇರಿದಂತೆ ನೌಕರರ ಹಲವಾರು ಸಮಸ್ಯೆಗಳಿವೆ. ಹಳೆಯ ಪಿಂಚಣಿ ಪದ್ಧತಿ ಜಾರಿಗೆ ಯಾವುದೇ ಹೋರಾಟಕ್ಕೂ ಸಂಘ ಸಿದ್ಧವಿದ್ದು, ನೌಕರರು ಕೂಡ ಸಹಕಾರ ನೀಡಬೇಕೆಂದು ಹೇಳಿದರು.
ತಹಶೀಲ್ದಾರ್ ತುಷಾರ್ ಬಿ. ಹೂಸೂರು ಮಾತನಾಡಿ, ತಾವು ಈ ಹಿಂದೆ ಸೇವೆ ಸಲ್ಲಿಸಿದ ಪ್ರದೇಶಗಳಲ್ಲಿ ಸಂಘದ ಅಧ್ಯಕ್ಷನಾಗಿ ಕೆಲಸ ಮಾಡಿದ್ದು, ಹೊನ್ನಾಳಿ ತಾಲೂಕಿನ ಸಂಘದ ಕೆಲಸಗಳಿಗೆ ಸ್ಪಂದಿಸುವುದಾಗಿ ಹೇಳಿದರು.
ದಾವಣಗೆರೆ ಜಿಲ್ಲಾಧ್ಯಕ್ಷ ್ಷಪರಶುರಾಮ್ ಮಾತನಾಡಿ, ರಾಜ್ಯದಲ್ಲಿ ಸುಮಾರು 5.20 ಲಕ್ಷ ಸರ್ಕಾರಿ ನೌಕರರಿದ್ದು, ಎಲ್ಲಾ ನೌಕರರ ಸಹಕಾರದಿಂದ ಎನ್.ಪಿ.ಎಸ್. ಸೇರಿದಂತೆ ಹಲವಾರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಈ ಹಿಂದಿನ ಅಧ್ಯಕ್ಷ ಜಿ.ಮಲ್ಲೇಶಪ್ಪ ನೂತನ ಅಧ್ಯಕ್ಷ ಬಸಣ್ಣ ಮಾದರ್‌ಗೆ ಅಧಿಕಾರ ಹಸ್ತಾಂತರಿಸಿದರು. ಹಿಂದಿನ ಕಾರ್ಯಕಾರಿ ಮಂಡಳಿಯ ಎಲ್ಲಾ ಸದಸ್ಯರು, ಶಿಕಾರಿಪುರ ತಾಲೂಕಿನ ಅಧ್ಯಕ್ಷರು, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ನೌಕರರ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ರಾಜ್ಯ ಪರಿಷತ್ ಸದಸ್ಯರಾಗಿ ಜಿ.ನಾಗೇಶ್, ಖಜಾಂಚಿಯಾಗಿ ಎಂ.ಎಚ್.ಕೊಟ್ಯಪ್ಪ, ಕಾರ್ಯದರ್ಶಿ ಕೆ.ಆರ್.ರಂಗಪ್ಪ ಪದಗ್ರಹಣ ಮಾಡಿದರು. ತಾ.ಪಂ ಸದಸ್ಯ ವಿಜಯಕುಮಾರ್, ನಿಕಟಪೂರ್ವ ಅಧ್ಯಕ್ಷ ಜಿ.ಮಲ್ಲೇಶಪ್ಪ, ಗೌರವಾಧ್ಯಕ್ಷ ನ್ಯಾಮತಿ ನಾಗರಾಜ್, ಸುರೇಶ್ ಮಾಳಗಿ, ರವಿಗಾಳಿ, ಡಾ| ವಿಶ್ವನಟೇಶ್, ಶಿವಪದ್ಮ, ಸಿದ್ದಪ್ಪ ಹೊಸಕೇರಿ, ವಿ.ಹರೀಶ್, ಎಚ್.ಕೆ. ರಮೇಶ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕರಿಬಸಯ್ಯ, ಎಚ್.ಕೆ. ಚಂದ್ರಶೇಖರ್, ಮಂಜುನಾಥ್ ಇಂಗಳಗೊಂದಿ ಇದ್ದರು.
ಈ ವಿಭಾಗದಿಂದ ಇನ್ನಷ್ಟು
-
ದಾವಣಗೆರೆ: ದಾವಣಗೆರೆಯಲ್ಲಿರುವ ಒಂದೇ ಕುಟುಂಬದ ರಾಜಕಾರಣಕ್ಕೆ ಅಂತ್ಯ ಹಾಡಬೇಕಿದೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಬಿಜೆಪಿ ಕಾರ್ಯಕರ್ತರಿಗೆ...
-
ದಾವಣಗೆರೆ: ರಾಣೆಬೆನ್ನೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಮನೆ ಮೇಲೆ ನಡೆದ ಐಟಿ ದಾಳಿ ದ್ವೇಷದ ರಾಜಕಾರಣ ಅಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ...
-
ದಾವಣಗೆರೆ: ದೇವರು ಎಲ್ಲ ಸೃಷ್ಟಿಯಲ್ಲೂ ಒಂದೊಂದು ವಿಶೇಷತೆ ನೀಡಿರುತ್ತಾನೆ. ಅಂತಹ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ...
-
ದಾವಣಗೆರೆ: ಆರೋಗ್ಯವೇ ಭಾಗ್ಯ. ಅದನ್ನು ಖರೀದಿಸಲು ಮತ್ತು ಯಾರಿಂದಲೂ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಯೌವನಾವಸ್ಥೆಯಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು...
-
ಜಗಳೂರು: ಮಕ್ಕಳಿಗೆ ಲಸಿಕೆಗಳನ್ನು ಹಾಕಿಸುವುದರಿಂದ ಮುಂಬರುವ ರೋಗಗಳನ್ನು ತಡೆಗಟ್ಟಬಹುದು ಎಂದು ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣಹೇಳಿದರು. ಸೋಮವಾರ ಪಟ್ಟಣದ...
ಹೊಸ ಸೇರ್ಪಡೆ
-
ಸುರತ್ಕಲ್: ಎಂಆರ್ಪಿಎಲ್ನಿಂದ ಮೊದಲ ಬಾರಿಗೆ 36 ಸಾವಿರ ಟನ್ ಪೆಟ್ ಕೋಕ್ ಅನ್ನು ರೈಲಿನ ಮೂಲಕ ಗುಲ್ಬರ್ಗಕ್ಕೆ ಸಾಗಿಸಲಾಗಿದೆ. ಈ ಮೂಲಕ ರೈಲ್ವೇ ಸಂಪರ್ಕ ಪಡೆದ...
-
ಸುಮಾರು ನಾಲ್ಕೈದು ದಶಕಗಳ ಹಿಂದೆ ವೇಷಗಳ ಹಿಂಭಾಗದಲ್ಲಿ ಪಾಕು ಸೀರೆಯನ್ನು ಕಟ್ಟುವ ಕ್ರಮ ಇದ್ದಂತಿಲ್ಲ. ಕಿರೀಟ ವೇಷಗಳಿಗೆ ಕಿರೀಟದ ಕೆಳಭಾಗಕ್ಕೆ ಕಟ್ಟಿದ ಚೌರಿ...
-
ದಿ ಲೀಡರ್ ಒಂದು ಅಸಂಗತ ನಾಟಕ . ರೊಮೇನಿಯಾದ ಲೇಖಕ ಯುಜಿನೊ ಐನೆಸ್ಕೊ ಈ ನಾಟಕದ ಕತೃ. 1953ರಲ್ಲಿ ಬರೆದ ನಾಟಕವಿದು. ದೇಶ , ಕಾಲದ ಹಂಗಿಲ್ಲದೆ ನಿರಂತರವಾಗಿ ಹರಿಯುವ ಸೆಳೆತವೇ...
-
ಕಲಾವಿದನಾಗಿ, ಸಂಘಟಕನಾಗಿ ಯಕ್ಷಗಾನದ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ಚಿರಪರಿಚಿತರಾಗಿದ್ದ ಕಜೆ ಈಶ್ವರ ಭಟ್ಟರು 89ರ ಹರೆಯದಲ್ಲಿ ನಮ್ಮನ್ನು ಅಗಲಿದ್ದಾರೆ....
-
ಸನ್ನಿಧಿ ಟಿ.ರೈ ಪೆರ್ಲ ರಚಿಸಿದ ಎರಡನೇ ಯಕ್ಷಗಾನ ಪ್ರಸಂಗ ಸೂರ್ಯಪ್ರಭೆ. ಕತೆಯೊಂದರ ಆಧಾರದಲ್ಲಿ ರಚಿತವಾದ ಪುಟ್ಟ ಯಕ್ಷಗಾನ ಕೃತಿ ಇದು. ಇದರಲ್ಲಿ ಬರುವ ಪಾತ್ರಗಳು...