Udayavni Special

ಹಿರೇಕಲ್ಮಠ ಮಹಾರಥೋತ್ಸವ


Team Udayavani, Sep 8, 2018, 4:42 PM IST

dvg-2.jpg

ಹೊನ್ನಾಳಿ: ಇಲ್ಲಿನ ಸುಕ್ಷೇತ್ರ ಹಿರೇಕಲ್ಮಠದ ಶ್ರೀ ಚನ್ನಪ್ಪಸ್ವಾಮಿಗಳ ಮಹಾ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು. ಶಹನಾಯಿ, ಭಜನೆ, ಡೊಳ್ಳು, ನಾಸಿಕ್‌ ಡೊಳ್ಳು, ಚಂಡಿ ವಾದ್ಯ, ಕೀಲು ಕುದುರೆ, ಪುರವಂತರ ಉರುವಣೆ, ಸಕಲ ಬಿರುದಾವಳಿಗಳು ಹಾಗೂ ವಿನೋದಾವಳಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದವು.

ರಥದಲ್ಲಿ ಡಾ| ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಆಸೀನರಾದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಹಾರಿಸುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. 

ಚನ್ನಪ್ಪ ಸ್ವಾಮಿಗಳಿಗೆ ಜಯವಾಗಲಿ, ಒಡೆಯರ್‌ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳಿಗೆ, ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರಿಗೆ ಜಯವಾಗಲಿ ಎನ್ನುವ ಘೋಷಣೆಗಳು ಮೆರವಣಿಗೆಯುದ್ದಕ್ಕೂ ಕೇಳಿ ಬಂದವು. ರಥೋತ್ಸವ ಶ್ರೀಮಠದಿಂದ ಪ್ರಾರಂಭವಾಗಿ ಖಾಸಗಿ ಬಸ್‌ ನಿಲ್ದಾಣದವರೆಗೆ ಸಾಗಿ ಪುನಃ ಶ್ರೀಮಠಕ್ಕೆ ಮರಳಿತು.

ರಥೋತ್ಸವಕ್ಕೂ ಮುನ್ನ ಧ್ವಜ, ಹೂವಿನ ಹಾರಗಳು ಸೇರಿದಂತೆ ಇತರ ಪ್ರಮುಖ ವಸ್ತುಗಳನ್ನು ಬಹಿರಂಗ 
ಹರಾಜು ಮಾಡಲಾಯಿತು. 

ಕೆಂಡದರ್ಚನೆ: ರಥೋತ್ಸವಕ್ಕೆ ಮುನ್ನ ಶ್ರೀಮಠದ ಮುಂಭಾಗದಲ್ಲಿ ವೀರಭದ್ರದೇವರ ಕೆಂಡದರ್ಚನೆ ಅಂಗವಾಗಿ ಸಾವಿರಾರು ಭಕ್ತರು ಕೆಂಡ ಹಾಯ್ದರು. ಮಕ್ಕಳು, ಹೆಣ್ಣುಮಕ್ಕಳು, ವಯೋವೃದ್ಧರು ಕೆಂಡ ಹಾಯುವ ಮೂಲಕ ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು.

ಸಾಮೂಹಿಕ ಭೋಜನ: ಆಗಮಿಸಿದ್ದ ಭಕ್ತಾದಿಗಳಿಗೆ ಶ್ರೀಮಠದ ಆವರಣದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 25 ಸಾವಿರಕ್ಕೂ ಹೆಚ್ಚಿನ ಭಕ್ತರು ಗೋಧಿಪಾಯಸ, ಅನ್ನ, ಸಾಂಬಾರು, ಪಲ್ಯ ಸ್ವೀಕರಿಸಿದರು.

ಚೌಡೇಶ್ವರಿದೇವಿಯ ಶಾಂತ್ಯರ್ಥವಾಗಿ ಹೋಮ ಮತ್ತು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿದವು. ಜಂಗಮ ವಟುಗಳಿಗೆ ಶಿವದೀಕ್ಷಾ ಕಾರ್ಯಕ್ರಮ ನಡೆಯಿತು. ಡಾ| ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಮಳೆ ಸಿಂಚನ: ರಥೋತ್ಸವ ಪ್ರಾರಂಭ ಸಮಯದಲ್ಲಿ 5 ನಿಮಿಷ ಮಳೆ ಸುರಿದರೂ ನಂತರ ಸ್ವತ್ಛ ಬಿಸಿಲು ಬಿತ್ತು. ರಥೋತ್ಸವಕ್ಕೆ ಯಾವುದೇ ತೊಂದರೆಯಾಗಲಿಲ್ಲ. ಶಾಸಕ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಡಿ.ಜಿ. ಶಾಂತನಗೌಡ ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಗಳ ಆಶೀರ್ವಾದ ಪಡೆದರು.  

ಟಾಪ್ ನ್ಯೂಸ್

ವಿಜಯ್‌ ಹಜಾರೆ ಏಕದಿನ: ಸೆಮಿಫೈನಲ್‌ಗೆ ಲಗ್ಗೆಯಿರಿಸಿದ ಕರ್ನಾಟಕ

ವಿಜಯ್‌ ಹಜಾರೆ ಏಕದಿನ: ಸೆಮಿಫೈನಲ್‌ಗೆ ಲಗ್ಗೆಯಿರಿಸಿದ ಕರ್ನಾಟಕ

ಜೆಇಇ ಮುಖ್ಯ‌ ಫ‌ಲಿತಾಂಶ ಪ್ರಕಟ

ಜೆಇಇ ಮುಖ್ಯ‌ ಫ‌ಲಿತಾಂಶ ಪ್ರಕಟ

ನಂಬರ್‌ ವನ್‌ ಸ್ಥಾನದಲ್ಲಿದ್ದ ಫೆಡರರ್‌ ದಾಖಲೆ ಜೊಕೋ ಪಾಲು

ನಂಬರ್‌ ವನ್‌ ಸ್ಥಾನದಲ್ಲಿದ್ದ ಫೆಡರರ್‌ ದಾಖಲೆ ಜೊಕೋ ಪಾಲು

IPL 2021 : ಚೆನ್ನೈ ಸೂಪರ್‌ ಕಿಂಗ್ಸ್‌ಗೆ ನೂತನ ಜೆರ್ಸಿ

IPL 2021 : ಚೆನ್ನೈ ಸೂಪರ್‌ ಕಿಂಗ್ಸ್‌ಗೆ ನೂತನ ಜೆರ್ಸಿ

ಸ್ಯಾಂಡಲ್‌ವುಡ್ ಡ್ರಗ್ಸ್‌ ಪ್ರಕರಣ : ನಿರ್ಮಾಪಕ ಶಂಕರ್‌ ಗೌಡ ಕಚೇರಿ ಮೇಲೆ ಪೊಲೀಸರ ದಾಳಿ

ಸ್ಯಾಂಡಲ್‌ವುಡ್ ಡ್ರಗ್ಸ್‌ ಪ್ರಕರಣ : ನಿರ್ಮಾಪಕ ಶಂಕರ್‌ ಗೌಡ ಕಚೇರಿ ಮೇಲೆ ಪೊಲೀಸರ ದಾಳಿ

ನ್ಯಾಯಪೀಠ ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡಲಾಗಿದೆ: ಸುಪ್ರೀಂ ಸ್ಪಷ್ಟನೆ

ನ್ಯಾಯಪೀಠ ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡಲಾಗಿದೆ: ಸುಪ್ರೀಂ ಸ್ಪಷ್ಟನೆ

ಭವಿಷ್ಯ ನಿಧಿ ಖಾತೆಯಲ್ಲಿ ರಿಲೀವಿಂಗ್‌ ದಿನಾಂಕ ಖುದ್ದಾಗಿ ಅಪ್‌ಡೇಟ್‌ ಮಾಡಿ!

ಭವಿಷ್ಯ ನಿಧಿ ಖಾತೆಯಲ್ಲಿ ರಿಲೀವಿಂಗ್‌ ದಿನಾಂಕ ಖುದ್ದಾಗಿ ಅಪ್‌ಡೇಟ್‌ ಮಾಡಿ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MP GM siddeswar

ಜನೌಷಧ ಕೇಂದ್ರಗಳಿಂದ ಕ್ರಾಂತಿ

udyog Katyri

ಗುಳೆ ತಡೆಗೆ ಉದ್ಯೋಗ ಖಾತ್ರಿ

Danavagere BJP

ದೇಶದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಬದ್ಧ

Davanagere Cpngress

ಸಿಡಿ ಪ್ರಕರಣ ನ್ಯಾಯಾಂಗ ತನಿಖೆಗೊಳಪಡಿಸಿ

Harihara

ವಿಷದ ಬಾಟಲಿ ಹಿಡಿದು ಪ್ರತಿಭಟನೆ  

MUST WATCH

udayavani youtube

ಇವಳು ಅಮ್ಮಚ್ಚಿ ಮಹಿಳಾ ದಿನಾಚರಣೆಯ ವಿಶೇಷ ಸಂದರ್ಶನ

udayavani youtube

ಮಹಿಳಾ ದಿನಾಚರಣೆಯಂದು ಜನರೊಂದಿಗೆ ಉದಯವಾಣಿ

udayavani youtube

ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021

udayavani youtube

ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ

udayavani youtube

ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21

ಹೊಸ ಸೇರ್ಪಡೆ

ಉತ್ತಮ ಯೋಜನೆ; ಅನುದಾನ ಕಡಿಮೆ

ಉತ್ತಮ ಯೋಜನೆ; ಅನುದಾನ ಕಡಿಮೆ

ಕೈಗಾರಿಕೆಗೆ ಆದ್ಯತೆಯ ಕೊರತೆ! ಗೌರವ ಹೆಗ್ಡೆ 

ಕೈಗಾರಿಕೆಗೆ ಆದ್ಯತೆಯ ಕೊರತೆ! ಗೌರವ ಹೆಗ್ಡೆ 

ವಿಜಯ್‌ ಹಜಾರೆ ಏಕದಿನ: ಸೆಮಿಫೈನಲ್‌ಗೆ ಲಗ್ಗೆಯಿರಿಸಿದ ಕರ್ನಾಟಕ

ವಿಜಯ್‌ ಹಜಾರೆ ಏಕದಿನ: ಸೆಮಿಫೈನಲ್‌ಗೆ ಲಗ್ಗೆಯಿರಿಸಿದ ಕರ್ನಾಟಕ

ಜೆಇಇ ಮುಖ್ಯ‌ ಫ‌ಲಿತಾಂಶ ಪ್ರಕಟ

ಜೆಇಇ ಮುಖ್ಯ‌ ಫ‌ಲಿತಾಂಶ ಪ್ರಕಟ

ನಂಬರ್‌ ವನ್‌ ಸ್ಥಾನದಲ್ಲಿದ್ದ ಫೆಡರರ್‌ ದಾಖಲೆ ಜೊಕೋ ಪಾಲು

ನಂಬರ್‌ ವನ್‌ ಸ್ಥಾನದಲ್ಲಿದ್ದ ಫೆಡರರ್‌ ದಾಖಲೆ ಜೊಕೋ ಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.