ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ನಲ್ಲಿಸಂಪರ್ಕ: ರೇಣು
Team Udayavani, Jan 20, 2022, 2:36 PM IST
ಹೊನ್ನಾಳಿ: ಜಲಜೀವನ್ ಮಿಷನ್ ಯೋಜನೆಮೂಲಕ ಗ್ರಾಮೀಣ ಭಾಗದ ಪ್ರತಿ ಮನೆಗೆನಲ್ಲಿ ಸಂಪರ್ಕ ಕಲ್ಪಿಸಿ ಶುದ್ದ ಕುಡಿಯುವನೀರು ಒದಗಿಸಲಾಗುವುದು ಎಂದು ಸಿಎಂರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನ್ಯಾಮತಿ ತಾಲೂಕಿನ ಸುರಹೊನ್ನೆಗ್ರಾಮದಲ್ಲಿ 2.29 ಕೋಟಿ ರೂ. ವೆಚ್ಚದವಿವಿಧ ಕಾಮಗಾರಿಗಳಿಗೆ ಭೂಮಿಪೂಜೆಹಾಗೂ ಉದ್ಘಾಟನೆ ನೆರವೇರಿಸಿ ಅವರುಮಾತನಾಡಿದರು.
ಪ್ರಧಾನಮಂತ್ರಿನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿಯೋಜನೆಯಲ್ಲಿ ಜಲಜೀವನ್ ಮಿಷನ್‌ಕೂಡ ಒಂದು. ಗ್ರಾಮೀಣ ಭಾಗದಲ್ಲಿ ಶುದ್ಧಕುಡಿಯುವ ನೀರಿನ ಸಮಸ್ಯೆಯಿಂದ ಕಾಯಿಲೆಸೇರಿದಂತೆ ದೈಹಿಕ ನ್ಯೂನತೆಗೆ ತುತ್ತಾಗುವವರಸಂಖ್ಯೆ ಹೆಚ್ಚಾಗಿತ್ತು.
ಈ ನಿಟ್ಟಿನಲ್ಲಿ ಗ್ರಾಮೀಣಭಾಗದಲ್ಲಿ ಪ್ರತಿ ಮನೆಗೆ ನಲ್ಲಿ ಮೂಲಕನೀರು ಸರಬರಾಜು ಮಾಡುವ ಮೂಲಕಜನರ ಆರೋಗ್ಯ ಕಾಪಾಡುವ ಜವಾಬ್ದಾರಿನಮ್ಮದು. ಸುರಹೊನ್ನೆ ಗ್ರಾಮದಲ್ಲಿನ 1,400ಮನೆಗಳಿದ್ದು ಪ್ರತಿ ಮನೆಗೆ ನಲ್ಲಿ ನೀರು ಪೂರೈಕೆಮಾಡುವ ನಿಟ್ಟಿನಲ್ಲಿ 1.86 ಕೋಟಿ ರೂ.ವೆಚ್ಚದ ಕಾಮಗಾರಿ ಇದಾಗಿದೆ. ಸರ್ಕಾರದಎಲ್ಲಾ ಯೋಜನೆಗಳೂ ಸದ್ಬಳಕೆಯಾಗಬೇಕುಎಂದರು.