ಸತ್ಯವಂತರೇ ಆಗಿದ್ದಲ್ಲಿ ಚರ್ಚೆಗೆ ಬರಲಿ


Team Udayavani, Oct 21, 2018, 5:02 PM IST

dvg-1.jpg

ದಾವಣಗೆರೆ: ನಾವು ಕೇಳಿದ ಪ್ರಶ್ನೆಗಳಿಗೆ ಒಂದಕ್ಕೂ ಉತ್ತರಿಸದ ಶಾಸಕ ಶಾಮನೂರು ಶಿವಶಂಕರಪ್ಪನವರ ಬಗ್ಗೆ ಮಾತನಾಡುವುದೇ ವೇಸ್ಟ್‌ ಎಂದೇಳಿರುವ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌, ನನ್ನ ವಿರುದ್ಧ ಯಾವುದಾದರೂ ಆರೋಪ ಸಾಬೀತಾದಲ್ಲಿ ನಾನೂ ಸಹ ರಾಜಕೀಯ ನಿವೃತ್ತಿ ಹೊಂದುವೆ ಎಂದು ಸವಾಲು ಹಾಕಿದ್ದಾರೆ.

ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂಬುದಾಗಿ ಶಾಸಕ ಶಾಮನೂರು ಶಿವಶಂಕರಪ್ಪನವರು ಟೀಕಿಸಿರುವ ಬಗ್ಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಶಿವಶಂಕರಪ್ಪ ಸುಮ್ಮನೆ ವಯಸ್ಸು ಕಳೆದಿದ್ದಾರೆ. ಅವರ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು ಎಂದರು.
 
ನಾವೇನು ಅವರಂತೆ ಯಾರದೋ ಆಸ್ತಿ ಕಬಳಿಸಿದವರಲ್ಲ. ಗಾಂಜಿವೀರಪ್ಪನವರ ಸಮಾಧಿ ಜಾಗದ ಕಬಳಿಕೆ ಬಗ್ಗೆ ನಾನೇ ದಾಖಲೆ ಸಮೇತ ಚರ್ಚೆ ಬರುವಂತೆ ಆಹ್ವಾನಿಸಿದ್ದೆ. ಆ ಜಾಗ ಯಾರದ್ದೆಂದು ದಾಖಲೆ ಇದೆ. ಆ ದಾಖಲೆ ನಾವು ಸೃಷ್ಟಿ ಮಾಡಿದ್ದಲ್ಲ. ಎಲ್ಲವನ್ನೂ ಆರ್‌ ಟಿಐ ಮುಖಾಂತರ ಪಡೆದದ್ದು. ಸಾರ್ವಜನಿಕವಾಗಿ ಆ ದಾಖಲೆಗಳ ಚರ್ಚೆಗೆ ಬರಲು ಸವಾಲು ಹಾಕಿದ್ದೆ. ಈವರೆಗೂ ಅದಕ್ಕೆ ಅವರಿಂದ ಉತ್ತರವಿಲ್ಲ.

ಶಾಮನೂರು ಶಿವಶಂಕರಪ್ಪ 2ನೇ ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಾರೆ. ಅವರು ಸತ್ಯವಂತರೇ ಆಗಿದ್ದಲ್ಲಿ ಸಾರ್ವಜನಿಕ ಚರ್ಚೆಗೆ ಬರಲಿ. ನಾನು ಈಗಲೂ ಅದಕ್ಕೆ ಸಿದ್ಧ ಎಂದು ಹೇಳಿದರು. 

ಕುಂದುವಾಡ ಕೆರೆ ಬಳಿ ನಿರ್ಮಿಸಿರುವ ಗಾಜಿನಮನೆಗೆ ಜೀವಂತ ಇರುವ ಯಾವುದೇ ವ್ಯಕ್ತಿ ಹೆಸರಿಡುವುದು ಸಮಂಜಸವಲ್ಲ. ಮೇಲಾಗಿ ಬದುಕಿರುವ ವ್ಯಕ್ತಿಗಳ ಹೆಸರಿಡಕೂಡದೆಂದು ನ್ಯಾಯಾಲಯ ಸಹ ಆದೇಶಿಸಿದೆ. ಹಾಗಾಗಿ ಚನ್ನಗಿರಿಯಲ್ಲಿ ಕ್ರೀಡಾಂಗಣಕ್ಕೆ ನಮ್ಮ ಪಕ್ಷದ ಶಾಸಕ ಮಾಡಾಳು ವಿರುಪಾಕ್ಷಪ್ಪರ ಹೆಸರಿಟ್ಟದ್ದನ್ನು ತೆರವುಗೊಳಿಸಲಾಯಿತು. ಹಾಗಾಗಿ ಗಾಜಿನಮನೆಗೂ ಸಹ ಜೀವಂತವಾಗಿರುವ ಯಾವುದೇ ವ್ಯಕ್ತಿಗಳ ಹೆಸರಿಡಕೂಡದೆಂದು ಆಗ್ರಹಿಸಿದ ಜಾಧವ್‌, ದಾವಣಗೆರೆ ನಗರ ಹಾಗೂ ಜಿಲ್ಲೆ ಅಭಿವೃದ್ಧಿಗೆ ಶ್ರಮಿಸಿದ ಯಾವುದೇ ಪಕ್ಷದ ವ್ಯಕ್ತಿ ಹೆಸರಿಡಲಿ. ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌, ಜಿ. ಮಲ್ಲಿಕಾರ್ಜುನಪ್ಪ, ಪಂಪಾಪತಿ, ಕೆ.ಟಿ. ಜಂಬಣ್ಣ, ಚೆನ್ನಯ ಒಡೆಯರ್‌, ದಾನಿಗಳಾದ ರಾಜನಹಳ್ಳಿ ಹಾಗೂ ಚಿಗಟೇರಿ ಮನೆತನದ ಹೆಸರಿಡಲಿ. ಒಟ್ಟಾರೆ ಜೀವಂತ ಇರುವವರ ನಾಮಕರಣಕ್ಕೆ ನಮ್ಮ ವಿರೋಧ ಇದೆ ಎಂದು ಹೇಳಿದರು.

ಈಗಾಗಲೇ ದಾವಣಗೆರೆ ನಗರದ ಪ್ರಮುಖ ರಸ್ತೆ, ಉದ್ಯಾನವನ, ವೃತ್ತಕ್ಕೆ ಜೀವಂತವಾಗಿರುವ ಕೆಲವರ ಹೆಸರಿಡಲಾಗಿದೆ. ನಗರದ ಯಾವ್ಯಾವ ಸಾರ್ವಜನಿಕ ರಸ್ತೆ, ವೃತ್ತ, ಪಾರ್ಕ್‌ಗಳಿಗೆ ಯಾರ್ಯಾರ ಹೆಸರಿಡಲಾಗಿದೆ ಎಂಬ ವಿವರ ಸಂಗ್ರಹಿಸುತ್ತಿದ್ದೇವೆ. ಜೀವಂತವಾಗಿರುವ ವ್ಯಕ್ತಿಗಳ ಹೆಸರಿರುವ ಎಲ್ಲವನ್ನೂ ತೆರವುಗೊಳಿಸಲು ನಾವು ನ್ಯಾಯಾಲಯದ ಮೊರೆ ಹೋಗಲಿದ್ದೇವೆ ಎಂದು ತಿಳಿಸಿದರು. ಬರಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಕಾರ್ಯಕ್ಕೆ ಸಜ್ಜಾಗುತ್ತಿದ್ದು, ದೇಶದ ಎಲ್ಲಾ ರಾಜಕೀಯ ಪಕ್ಷಗಳು ಒಂದಾದರೂ ದಾವಣಗೆರೆ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ತಪ್ಪಿಸಲು ಸಾಧ್ಯವಿಲ್ಲ. ಹಿಂದೆಯೂ ಗೆದ್ದು ತೋರಿಸಿದ್ದೇವೆ. ಮುಂದೆಯೂ ಜಯ ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಮುಖಂಡರಾದ ರಮೇಶನಾಯ್ಕ, ಎ. ಸಿ. ರಾಘವೇಂದ್ರ, ಹೇಮಂತಕುಮಾರ್‌, ಎಲ್‌.ಡಿ.ಗೋಣೆಪ್ಪ, ಅಕ್ಕಿ ಚಂದ್ರು, ಟಿಂಕರ್‌ ಮಂಜಣ್ಣ, ಪ್ರವೀಣ್‌ ಜಾಧವ್‌ ಪತ್ರಿಕಾಗೋಷ್ಠಿಯಲ್ಲಿದ್ದರು.  

ಟಾಪ್ ನ್ಯೂಸ್

3 ತಿಂಗಳಲ್ಲ; 3 ದಿನಕ್ಕೊಮ್ಮೆ ಬಿಡುಗಡೆ!ಪರಿಹಾರ ವ್ಯವಸ್ಥೆಯಲ್ಲಿ ಬದಲಾವಣೆ; ಸಚಿವ ಅಶೋಕ್‌

3 ತಿಂಗಳಲ್ಲ; 3 ದಿನಕ್ಕೊಮ್ಮೆ ಬಿಡುಗಡೆ!ಪರಿಹಾರ ವ್ಯವಸ್ಥೆಯಲ್ಲಿ ಬದಲಾವಣೆ; ಸಚಿವ ಅಶೋಕ್‌

ಪ್ರಥಮ ಪ್ರಾಶಸ್ತ್ಯ ಮತಕ್ಕಷ್ಟೆ ತಂತ್ರ; ಬಿಜೆಪಿ, ಕಾಂಗ್ರೆಸ್‌ನಿಂದ ತಂತ್ರಗಾರಿಕೆ

ಪ್ರಥಮ ಪ್ರಾಶಸ್ತ್ಯ ಮತಕ್ಕಷ್ಟೆ ತಂತ್ರ; ಬಿಜೆಪಿ, ಕಾಂಗ್ರೆಸ್‌ನಿಂದ ತಂತ್ರಗಾರಿಕೆ

ಚಾರ್‌ಧಾಮ್‌ ದೇವಸ್ಥಾನಂ ಕಾಯ್ದೆ ರದ್ದು

ಚಾರ್‌ಧಾಮ್‌ ದೇವಸ್ಥಾನಂ ಕಾಯ್ದೆ ರದ್ದು

ಇಂದಿನಿಂದ ಚಂಪಾಷಷ್ಠಿ ಮಹೋತ್ಸವ

ಇಂದಿನಿಂದ ಚಂಪಾಷಷ್ಠಿ ಮಹೋತ್ಸವ

ಸೋಂಕಿತರ ಪತ್ತೆಗೆ ಎಚ್ಚರಿಕೆ ಕ್ರಮ: ಜಿಲ್ಲಾಧಿಕಾರಿ

ಸೋಂಕಿತರ ಪತ್ತೆಗೆ ಎಚ್ಚರಿಕೆ ಕ್ರಮ: ಜಿಲ್ಲಾಧಿಕಾರಿ

SAಭಾರತೀಯ ಕ್ರಿಕೆಟಿಗರ ಸುರಕ್ಷೆಗೆ ನಾವು ಬದ್ಧ: ದಕ್ಷಿಣ ಆಫ್ರಿಕಾ

ಭಾರತೀಯ ಕ್ರಿಕೆಟಿಗರ ಸುರಕ್ಷೆಗೆ ನಾವು ಬದ್ಧ: ದಕ್ಷಿಣ ಆಫ್ರಿಕಾ

ಟೆಸ್ಟ್‌ : ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ 8 ವಿಕೆಟ್‌ ಜಯ

ಟೆಸ್ಟ್‌ : ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ 8 ವಿಕೆಟ್‌ ಜಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ನಿಶ್ಚಿತ: ರೇವಣ್ಣ

ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ನಿಶ್ಚಿತ: ರೇವಣ್ಣ

ಈ ಬಾರಿಯೂ ಕಾಂಗ್ರೆಸ್‌ ಗೆಲುವು ನಿಶ್ಚಿತ

ಈ ಬಾರಿಯೂ ಕಾಂಗ್ರೆಸ್‌ ಗೆಲುವು ನಿಶ್ಚಿತ

yaddi

‘ತಮಾಷೆಗಾಗಿ ಹೇಳಿದ್ದು’ ಎಂದು ಈಶ್ವರಪ್ಪ ಹೇಳಿದ್ದಾರಲ್ಲ : ಯಡಿಯೂರಪ್ಪ ಸ್ಪಷ್ಟನೆ

cm-b-bommai

ಒಮಿಕ್ರಾನ್ ಬಗ್ಗೆ ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಳ್ಳುತ್ತಿದೆ: ಸಿಎಂ ಬೊಮ್ಮಾಯಿ

26bjp

ಬಿಜೆಪಿಯದ್ದು ಕಮಿಷನ್ ಸರ್ಕಾರ, ಎಚ್ಚರ ವಹಿಸಿ: ವಡ್ನಾಳ್ ರಾಜಣ್ಣ

MUST WATCH

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

ಹೊಸ ಸೇರ್ಪಡೆ

3 ತಿಂಗಳಲ್ಲ; 3 ದಿನಕ್ಕೊಮ್ಮೆ ಬಿಡುಗಡೆ!ಪರಿಹಾರ ವ್ಯವಸ್ಥೆಯಲ್ಲಿ ಬದಲಾವಣೆ; ಸಚಿವ ಅಶೋಕ್‌

3 ತಿಂಗಳಲ್ಲ; 3 ದಿನಕ್ಕೊಮ್ಮೆ ಬಿಡುಗಡೆ!ಪರಿಹಾರ ವ್ಯವಸ್ಥೆಯಲ್ಲಿ ಬದಲಾವಣೆ; ಸಚಿವ ಅಶೋಕ್‌

ಪ್ರಥಮ ಪ್ರಾಶಸ್ತ್ಯ ಮತಕ್ಕಷ್ಟೆ ತಂತ್ರ; ಬಿಜೆಪಿ, ಕಾಂಗ್ರೆಸ್‌ನಿಂದ ತಂತ್ರಗಾರಿಕೆ

ಪ್ರಥಮ ಪ್ರಾಶಸ್ತ್ಯ ಮತಕ್ಕಷ್ಟೆ ತಂತ್ರ; ಬಿಜೆಪಿ, ಕಾಂಗ್ರೆಸ್‌ನಿಂದ ತಂತ್ರಗಾರಿಕೆ

ಚಾರ್‌ಧಾಮ್‌ ದೇವಸ್ಥಾನಂ ಕಾಯ್ದೆ ರದ್ದು

ಚಾರ್‌ಧಾಮ್‌ ದೇವಸ್ಥಾನಂ ಕಾಯ್ದೆ ರದ್ದು

ಇಂದಿನಿಂದ ಚಂಪಾಷಷ್ಠಿ ಮಹೋತ್ಸವ

ಇಂದಿನಿಂದ ಚಂಪಾಷಷ್ಠಿ ಮಹೋತ್ಸವ

ಸೋಂಕಿತರ ಪತ್ತೆಗೆ ಎಚ್ಚರಿಕೆ ಕ್ರಮ: ಜಿಲ್ಲಾಧಿಕಾರಿ

ಸೋಂಕಿತರ ಪತ್ತೆಗೆ ಎಚ್ಚರಿಕೆ ಕ್ರಮ: ಜಿಲ್ಲಾಧಿಕಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.