ಕೋವಿಡ್‌ ಕಂಟ್ರೋಲ್‌ ರೂಂಗೆ ಚಾಲನೆ

Team Udayavani, Nov 21, 2020, 7:59 PM IST

ಕೋವಿಡ್‌ ಕಂಟ್ರೋಲ್‌ ರೂಂಗೆ ಚಾಲನೆ

ದಾವಣಗೆರೆ: ಕೋವಿಡ್‌- 19 ಸೋಂಕಿತರಿಗೆ ತ್ವರಿತ, ಪರಿಣಾಮಕಾರಿ ಚಿಕಿತ್ಸೆ, ಮೇಲ್ವಿಚಾರಣೆ, ನಿಯಂತ್ರಣ ಹಾಗೂ ನಿರ್ವಹಣೆಗಾಗಿ ರಾಜ್ಯದಲ್ಲೇ ವ್ಯವಸ್ಥಿತ ಮತ್ತಮಾದರಿಯಾದ ಜಿಲ್ಲಾ ಕೋವಿಡ್‌ ಕಂಟ್ರೋಲ್‌ ರೂಂ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಜಿ. ಬೀಳಗಿ ತಿಳಿಸಿದರು.

ಜಿಲ್ಲಾಡಳಿತ ಕಚೇರಿಯಲ್ಲಿ ಕೋವಿಡ್‌-19 ಕಂಟ್ರೋಲ್‌ ರೂಂಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಹಿಂದೆ ಕೋವಿಡ್‌ಫಲಿತಾಂಶಗಳನ್ನು ದೇಶಾದ್ಯಂತ ಐಸಿಎಂಆರ್‌ ಪೋರ್ಟಲ್‌ನಲ್ಲಿ ಅಪ್‌ ಲೋಡ್‌ ಮಾಡಲಾಗುತ್ತಿತ್ತು. ಈಗ ಎಲ್ಲಾ ಆ್ಯಪ್‌ ಗಳನ್ನು ವಿಲೀನಗೊಳಿಸಿ ಒಂದು ಲೈನ್‌ ಲಿಸ್ಟ್‌ ಆ್ಯಪ್‌ಅಭಿವೃದ್ಧಿಪಡಿಸಲಾಗಿರುವುದನ್ನು ಕಂಟ್ರೋಲ್‌ರೂಂನಿಂದ ಕಾರ್ಯ ನಿರ್ವಹಿಸಲಾಗುವುದು. ನೇರವಾಗಿ ರಾಜ್ಯ ವಾರ್‌ ರೂಂಗೆ ಸಂಪರ್ಕ ಹೊಂದಿ ಕೆಲಸ ನಿರ್ವಹಿಸಲಿರುವ ಕಂಟ್ರೋಲ್‌ ರೂಂನಲ್ಲಿ 8 ವಿಭಾಗಗಳಿದ್ದು (ಬಕೆಟ್ಸ್‌) ಕೋವಿಡ್‌ ಸೋಂಕಿತರ ಮೇಲ್ವಿಚಾರಣೆ ಮತ್ತು ನಿರ್ವಹಣೆ ಸೇರಿದಂತೆ ತ್ವರಿತ ಮತ್ತು ಶೀಘ್ರ ಚಿಕಿತ್ಸೆಗೆ ಸ್ಪಂದಿಸಲಿವೆ ಎಂದು ತಿಳಿಸಿದರು.

ರಾಜ್ಯ ವಾರ್‌ ರೂಂ ವಿಂಗಡಿಸಿದ ಪ್ರಕರಣಗಳನ್ನುಜಿಲ್ಲಾ ಕಂಟ್ರೋಲ್‌ ರೂಂನಿಂದ ಪ್ರತಿದಿನವೀಕ್ಷಿಸಲಾಗುವುದು. ಜಿಲ್ಲೆಗೆ ಸಂಬಂಧಿ ಸಿದ ಪ್ರಕರಣಗಳಬಗ್ಗೆ ಹೆಚ್ಚಿನ ಮಾಹಿತಿ ಸಹ ಪಡೆಯಲಾಗುವುದು. ನಿಯೋಜಿತ ವೈದ್ಯರು ಮತ್ತು ಸಿಬ್ಬಂದಿ ಪ್ರತಿ ದಿನ ರೋಗಿಗಳಿಗೆ ಕರೆ ಮಾಡಿ ಲಕ್ಷಣಗಳು, ಇತರೆವಿವರಗಳ ಮಾಹಿತಿ ಪಡೆದು ಕಂಟ್ರೋಲ್‌ ರೂಂನಎಂಟು ವಿಭಾಗಗಳಲ್ಲಿ ಸಿಗುವ ಸೌಲಭ್ಯ ಮತ್ತು ರೋಗ ನಿಯಂತ್ರಣದ ಕುರಿತು ಮಾಹಿತಿ ನೀಡುವರು ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆ ಸೇವೆ, ಕೋವಿಡ್‌ ಕೇರ್‌ ಸೆಂಟರ್‌, ಹೋಂ ಐಸೋಲೇಷನ್‌, ಖಾಸಗಿ ಆಸ್ಪತ್ರೆ, ಸರ್ಕಾರಿ ಆಂಬುಲೆನ್ಸ್‌, ಖಾಸಗಿ ಆಸ್ಪತ್ರೆ, ಈಗಾಗಲೇ ಆಸ್ಪತ್ರೆಯಲ್ಲಿರುವವರು, ಅನ್‌ರೆಸ್ಪಾನ್ಸಿವ್‌,ಐಸಿಎಂಆರ್‌ ಲಿಸ್ಟ್‌ ಪಡೆಯುವ ಕೆಲಸದೊಂದಿಗೆ

ಸೆಂಟ್ರಲ್‌ ಹಾಸ್ಪಿಟಲ್‌ ಬೆಡ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ ವಿಭಾಗ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ಬೆಡ್‌ ಗಳ ಲಭ್ಯತೆ ಮಾಹಿತಿ ಪಡೆಯಬಹುದು. ಶಿಫ್ಟಿಂಗ್‌ ಟೀಂ ವಿಭಾಗದಿಂದ ತಾಲೂಕುಗಳಿಂದ ಜಿಲ್ಲೆಗೆ ಹೀಗೆ ಉನ್ನತ ಆಸ್ಪತ್ರೆ, ಇತರೆಡೆಗಳಿಗೆ ಶಿಫ್ಟ್‌ ಮಾಡಲು ಸಹಕರಿಸುವ ಕಾರ್ಯವನ್ನ ಕೋವಿಡ್‌ ರೂಂ ನಿರ್ವಹಣೆ ಮಾಡಲಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಜಿ.ಡಿ. ರಾಘವನ್‌ ಮಾತನಾಡಿ, ವಿಶೇಷ ಭೂಸ್ವಾಧಿನಾಕಾರಿ ರೇಷ್ಮಾ ಹಾನಗಲ್‌ ಜಿಲ್ಲಾ ಕೋವಿಡ್‌ ಕಂಟ್ರೋಲ್‌ ರೂಂ ನೋಡಲ್‌ ಅಧಿಕಾರಿಯಾಗಿ ಹಾಗೂ ಕೋವಿಡ್‌ ಕಂಟ್ರೋಲ್‌ ರೂಂ ಮೇಲ್ವಿಚಾರಣೆಗಾಗಿ ಡಾ| ಎಸ್‌. ರುದ್ರೇಶ್‌, ಡಾ| ಕೆ. ಹೇಮಂತ್‌ಕುಮಾರ್‌, ಡಾ| ಕೆ. ನೇತಾಜಿ ಹಾಗೂ ಕಂಟೋಲ್‌ ರೂಂ ನಿರ್ವಹಣೆಗೆ ಇತರೆ ತಾಂತ್ರಿಕ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಪದ್ಮಾ ಬಸವಂತಪ್ಪ, ಜಿಲ್ಲಾ ಕೋವಿಡ್‌ ನೋಡಲ್‌ ಅಧಿಕಾರಿ ಪ್ರಮೋದ್‌ ನಾಯಕ್‌, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ|ನಾಗರಾಜ್‌, ಡಾ| ನಟರಾಜ್‌, ಡಾ| ಯತೀಶ್‌ ಇತರರು ಇದ್ದರು.

ಟಾಪ್ ನ್ಯೂಸ್

covidಮಾಸಾಂತ್ಯ ಸೋಂಕು ಇಳಿಕೆ? ರಾಜ್ಯದಲ್ಲಿ ಜ. 25ರ ವೇಳೆ ಪ್ರಕರಣ ಇಳಿಮುಖ ಸಾಧ್ಯತೆ

ಮಾಸಾಂತ್ಯ ಸೋಂಕು ಇಳಿಕೆ? ರಾಜ್ಯದಲ್ಲಿ ಜ. 25ರ ವೇಳೆ ಪ್ರಕರಣ ಇಳಿಮುಖ ಸಾಧ್ಯತೆ

501ನೇ ವರ್ಷಕ್ಕೆ ಉಡುಪಿ ಪರ್ಯಾಯ ಪೂಜಾಪದ್ಧತಿ

501ನೇ ವರ್ಷಕ್ಕೆ ಉಡುಪಿ ಪರ್ಯಾಯ ಪೂಜಾಪದ್ಧತಿ

ಕೇರಳ ಬ್ಯಾಂಕ್‌ಗಳಲ್ಲಿ ಕರಗುತ್ತಿದೆ ಅನಿವಾಸಿ ಠೇವಣಿ ಪ್ರಮಾಣ!

ಕೇರಳ ಬ್ಯಾಂಕ್‌ಗಳಲ್ಲಿ ಕರಗುತ್ತಿದೆ ಅನಿವಾಸಿ ಠೇವಣಿ ಪ್ರಮಾಣ!

ಎಂಡೋ ಸಂತ್ರಸ್ತರಿಗೆ ಅಗತ್ಯ ಸೌಕರ್ಯ: ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ.

ಎಂಡೋ ಸಂತ್ರಸ್ತರಿಗೆ ಅಗತ್ಯ ಸೌಕರ್ಯ: ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ.

ತಾ.ಪಂ., ಜಿ.ಪಂ. ಕ್ಷೇತ್ರಗಳ ಗಡಿ ನಿಗದಿ ಪ್ರಕ್ರಿಯೆ “ತ್ರಿಶಂಕು’ ಸ್ಥಿತಿಯಲ್ಲಿ

ತಾ.ಪಂ., ಜಿ.ಪಂ. ಕ್ಷೇತ್ರಗಳ ಗಡಿ ನಿಗದಿ ಪ್ರಕ್ರಿಯೆ “ತ್ರಿಶಂಕು’ ಸ್ಥಿತಿಯಲ್ಲಿ

ನಾಲ್ಕರಲ್ಲಿ ಬಿಜೆಪಿಗೆ ಅಧಿಕಾರ; ರಿಪಬ್ಲಿಕ್‌ ಟಿವಿ ಪೂರ್ವ ಸಮೀಕ್ಷೆಯಲ್ಲಿ ಉಲ್ಲೇಖ

ನಾಲ್ಕರಲ್ಲಿ ಬಿಜೆಪಿಗೆ ಅಧಿಕಾರ; ರಿಪಬ್ಲಿಕ್‌ ಟಿವಿ ಪೂರ್ವ ಸಮೀಕ್ಷೆಯಲ್ಲಿ ಉಲ್ಲೇಖ

ವಿರಾಟ್‌ ಕೊಹ್ಲಿಗೆ ಪರ್ಯಾಯ ಟೆಸ್ಟ್‌ ಕ್ಯಾಪ್ಟನ್‌ ಯಾರು?

ವಿರಾಟ್‌ ಕೊಹ್ಲಿಗೆ ಪರ್ಯಾಯ ಟೆಸ್ಟ್‌ ಕ್ಯಾಪ್ಟನ್‌ ಯಾರು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagaluru

ಕರ್ಫ್ಯೂ ನಡುವೆಯೂ ಜಗಳೂರು ಶಾಸಕನ ಜನ್ಮದಿನಾಚರಣೆ : ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗಿ

ಸದ್ಗಹಜಕಜಹಗ್ದಸಅ

ಸಂಕ್ರಾಂತಿ ನೆನೆಸಿಕೊಳ್ಳೋಕೇ ಭಯ

shivamogga news

ಲಿಂಗತ್ವ ಅಲ್ಪಸಂಖ್ಯಾತರಿಗೆ ಸೌಲಭ್ಯ ಒದಗಿಸಿ

davanagere news

ತಿಂಗಳಾಂತ್ಯದವರೆಗೆ ವಾರಾಂತ್ಯ ಕರ್ಫ್ಯೂ ವಿಸ್ತರಣೆ

davanagere news

ಕೊರೊನಾ ನಿಯಂತ್ರಣದಲ್ಲಿ ನಿರ್ಲಕ್ಷ್ಯ ಸಹಿಸಲ್ಲ

MUST WATCH

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

udayavani youtube

ಅಬುಧಾಬಿಯಲ್ಲಿ ಡ್ರೋನ್ ದಾಳಿ : ಇಬ್ಬರು ಭಾರತೀಯರು ಸೇರಿ ಮೂವರು ಸಾವು

udayavani youtube

ಕೃಷ್ಣಾಪುರ ಸ್ವಾಮೀಜಿಗಳ ಹಿನ್ನೆಲೆ

udayavani youtube

ವಾಹನ ನಿಲುಗಡೆ ಜಗಳ ತರಕಾರಿ ಮಾರುತ್ತಿದ್ದ ಮಹಿಳೆಗೆ ‘ ಡಾಕ್ಟರ್’ ನಿಂದ ಥಳಿತ

udayavani youtube

ಜನರ ಕಲ್ಯಾಣವಾಗಬೇಕು, ಉಪದ್ರವವಾಗಬಾರದು :ಕೃಷ್ಣಾಪುರ ಮಠದ ಶ್ರೀಪಾದರ ಸಂದೇಶ

ಹೊಸ ಸೇರ್ಪಡೆ

covidಮಾಸಾಂತ್ಯ ಸೋಂಕು ಇಳಿಕೆ? ರಾಜ್ಯದಲ್ಲಿ ಜ. 25ರ ವೇಳೆ ಪ್ರಕರಣ ಇಳಿಮುಖ ಸಾಧ್ಯತೆ

ಮಾಸಾಂತ್ಯ ಸೋಂಕು ಇಳಿಕೆ? ರಾಜ್ಯದಲ್ಲಿ ಜ. 25ರ ವೇಳೆ ಪ್ರಕರಣ ಇಳಿಮುಖ ಸಾಧ್ಯತೆ

501ನೇ ವರ್ಷಕ್ಕೆ ಉಡುಪಿ ಪರ್ಯಾಯ ಪೂಜಾಪದ್ಧತಿ

501ನೇ ವರ್ಷಕ್ಕೆ ಉಡುಪಿ ಪರ್ಯಾಯ ಪೂಜಾಪದ್ಧತಿ

ಕೇರಳ ಬ್ಯಾಂಕ್‌ಗಳಲ್ಲಿ ಕರಗುತ್ತಿದೆ ಅನಿವಾಸಿ ಠೇವಣಿ ಪ್ರಮಾಣ!

ಕೇರಳ ಬ್ಯಾಂಕ್‌ಗಳಲ್ಲಿ ಕರಗುತ್ತಿದೆ ಅನಿವಾಸಿ ಠೇವಣಿ ಪ್ರಮಾಣ!

ಎಂಡೋ ಸಂತ್ರಸ್ತರಿಗೆ ಅಗತ್ಯ ಸೌಕರ್ಯ: ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ.

ಎಂಡೋ ಸಂತ್ರಸ್ತರಿಗೆ ಅಗತ್ಯ ಸೌಕರ್ಯ: ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ.

ತಾ.ಪಂ., ಜಿ.ಪಂ. ಕ್ಷೇತ್ರಗಳ ಗಡಿ ನಿಗದಿ ಪ್ರಕ್ರಿಯೆ “ತ್ರಿಶಂಕು’ ಸ್ಥಿತಿಯಲ್ಲಿ

ತಾ.ಪಂ., ಜಿ.ಪಂ. ಕ್ಷೇತ್ರಗಳ ಗಡಿ ನಿಗದಿ ಪ್ರಕ್ರಿಯೆ “ತ್ರಿಶಂಕು’ ಸ್ಥಿತಿಯಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.