ಜಗಳೂರಿನ ಜಲಬಾಧೆ ನೀಗಿಸಿದ ಹಿಂಗಾರು!

ಈ ಬಾರಿ ಕುಡಿವ ನೀರಿನ ಸಮಸ್ಯೆ ಉಲ್ಬಣ ಸಾಧ್ಯತೆ ಕಡಿಮೆಸಮಸ್ಯೆ ಎದುರಾಗಬಹುದಾದ 50 ಗ್ರಾಮ ಗುರುತು

Team Udayavani, Mar 11, 2020, 11:35 AM IST

11-March-4

ಜಗಳೂರು: ಕಳೆದ ಬಾರಿ ಸುರಿದ ಉತ್ತಮ ಮಳೆಯಿಂದ ತಾಲೂಕಿನಲ್ಲಿ ಈ ಬಾರಿ ನೀರಿನ ಬವಣೆ ಎದುರಾಗುವ ಸಾಧ್ಯತೆ ಕಡಿಮೆ ಇದೆ. ಕಳೆದ ಮೂರು ವರ್ಷಗಳಿಂದ ತಾಲೂಕಿನ ಕೆಲವೆಡೆ ಮಳೆಗಾಲದಲ್ಲಿಯೇ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವ ಪರಿಸ್ಥಿತಿ ಇತ್ತು. ಆದರೆ ಕಳೆದ ಬಾರಿ ಹಿಂಗಾರು ಮಳೆ ಉತ್ತಮವಾಗಿ ಸುರಿದ ಪರಿಣಾಮ ಈ ವರ್ಷದ ಬೇಸಿಗೆಯಲ್ಲಿ ಸಹ ಕುಡಿಯುವ ನೀರಿನ ಸಮಸ್ಯೆ ಜನರನ್ನು ಅಷ್ಟಾಗಿ ಕಾಡದು ಎನ್ನಲಾಗುತ್ತಿದೆ.

ಬರದ ನಾಡು ಮತ್ತು ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ತಾಲೂಕಿನ ಕೃಷಿ ಮತ್ತು ಕುಡಿಯುವ ನೀರಿಗೆ ಮಳೆಯೇ ಆಧಾರ. ತಾಲೂಕಿನಲ್ಲಿ ಯಾವುದೇ ನದಿ ಮೂಲಗಳಿಲ್ಲ. ಹೀಗಾಗಿ ಮಳೆ ಬಂದರೆ ಮಾತ್ರ ನೀರು ಎನ್ನುವಂತಹ ಸ್ಥಿತಿ ಇದೆ. ಕಳೆದ ಮೂರು ವರ್ಷ ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ನೀರಿನ ಟ್ಯಾಂಕರ್‌ ಗಳು ಸದ್ದು ಮಾಡುತ್ತಿದ್ದವು. 120 ಗ್ರಾಮಗಳಿಗೆ ಟ್ಯಾಂಕರ್‌ ಮತ್ತು ಖಾಸಗಿ ಬೋರ್‌ವೆಲ್‌ ಮೂಲಕ ನೀರು ಪೂರೈಸಲಾಗುತ್ತಿತ್ತು. ಈ ಬಾರಿ ಹಿಂಗಾರು ಮಳೆಯಿಂದಾಗಿ ತಾಲೂಕಿನ ಬಹುತೇಕ ಕೆರೆಗಳಿಗೆ 3 ರಿಂದ 8 ಅಡಿವರೆಗೆ ನೀರು ಹರಿದು ಬಂದಿದ್ದು, ಅಂತರ್ಜಲ ಮಟ್ಟ ಹೆಚ್ಚಾಗಿ ಬೋರ್‌ ವೆಲ್‌ಗ‌ಳಲ್ಲಿನ ನೀರು ಬತ್ತುವ ಸಾಧ್ಯತೆಗಳು ಕಡಿಮೆ. ಕಾನನಕಟ್ಟೆ ಗ್ರಾಮದಲ್ಲಿ ನೀರು ಕೊರತೆ ಕಾಣಿಸಿದ್ದು, 15 ದಿನಗಳಿಂದ ಖಾಸಗಿ ಬೋರ್‌ವೆಲ್‌ ಮೂಲಕ ನೀರು ಕೊಡಲಾಗುತ್ತಿದೆ. ತಾಲೂಕಿನಲ್ಲಿ ಸಮಸ್ಯೆ ಉದ್ಭವಿಸಬಹುದಾದ 50 ಹಳ್ಳಿಗಳನ್ನು ಗುರುತಿಸಲಾಗಿದ್ದು, ಕುಡಿವ ನೀರಿನ ಕೊರತೆ ಕಂಡು ಬಂದರೆ ಖಾಸಗಿ ಬೋರ್‌ವೆಲ್‌ ಮೂಲಕ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಲಾಗಿದೆ.

ಟ್ಯಾಂಕರ್‌ ಲಾಬಿಗೆ ಬಿಳಲಿದೆ ಕಡಿವಾಣ: ಗ್ರಾಮಸ್ಥರಿಗೆ ನೀರಿನ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ತಾಲೂಕು ಆಡಳಿತದಿಂದ ಪ್ರತಿಯೊಂದು ಗ್ರಾಮಗಳಿಗೆ ಟ್ಯಾಂಕರ್‌ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ ನೀರು ಪೂರೈಕೆಯಲ್ಲಿ ಗೋಲ್‌ಮಾಲ್‌ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಒಂದು ಗ್ರಾಮಕ್ಕೆ ಎರಡು ಟ್ಯಾಂಕರ್‌ ಸರಬರಾಜು ಮಾಡಿ 6 ಬಾರಿ ಪೂರೈಸಿದ್ದೇವೆ ಎಂದು ಲೆಕ್ಕ ನೀಡುತ್ತಿದ್ದು, ಇದರಿಂದಾಗಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿದ ಬಿಲ್‌ ಪರಿಶೀಲನೆ ಇನ್ನೂ ಸಹ ನಡೆಯುತ್ತಲೇ ಇದೆ. 10 ಕೋಟಿಗೂ ಅಧಿಕ ಬಿಲ್‌: ಕಳೆದ ಮೂರು ವರ್ಷಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿದ ಬಿಲ್‌ 10 ಕೋಟಿ ದಾಟಲಿದೆ. ತಾಲೂಕು ಪಂಚಾಯಿತಿಯಿಂದ 2.50 ಕೋಟಿಗೂ ಅಧಿಕ ಹಣ ಪಾವತಿಸಲಾಗಿದೆ. ತಹಶೀಲ್ದಾರ್‌ ವ್ಯಾಪ್ತಿಗೆ ಬಂದಾಗ ಜಿಪಿಎಸ್‌ ಮಾಡಿರುವ ಟ್ಯಾಂಕರ್‌ಗೆ ಇಲ್ಲಿಯವರೆಗೆ 4 ಕೋಟಿ 50 ಲಕ್ಷ ರೂ. ಬಿಲ್‌ ನೀಡಲಾಗಿದೆ. ಜಿಪಿಎಸ್‌ ಇಲ್ಲದೇ ನೀರು ಸರಬರಾಜು ಮಾಡಲಾಗಿದೆ ಎನ್ನುವ 3 ಕೋಟಿ ರೂ. ಮೊತ್ತದ ಬಿಲ್‌ಗ‌ಳು ತಹಶೀಲ್ದಾರ್‌ ಸಹಿಗಾಗಿ ಕಾಯುತ್ತಿದ್ದು, ಜಿಪಿಎಸ್‌ ಇಲ್ಲದವುಗಳ ಬಿಲ್‌ ಹಣ ಪಾವತಿ ಮಾಡಲಿಕ್ಕೆ ಬರುವುದಿಲ್ಲ ಎಂದು ತಹಶೀಲ್ದಾರ್‌ ತಡೆ ಹಿಡಿದ್ದಾರೆ.

ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಆದರೆ ಇದುವರೆಗೂ ನೀರಿನ ಸಮಸ್ಯೆ ಉಲ್ಬಣಗೊಂಡಿಲ್ಲ. ಸಮಸ್ಯೆ ಉದ್ಭವಿಸಬಹುದಾದ 50 ಹಳ್ಳಿಗಳನ್ನು ಇಲಾಖೆಯಿಂದ ಗುರುತಿಸಲಾಗಿದ್ದು, ಅಲ್ಲಿಯೂ ಸಹ ಇನ್ನೂ ಸಮಸ್ಯೆ ಕಂಡು ಬಂದಿಲ್ಲ. ಸಮಸ್ಯೆಯಾದರೆ ಖಾಸಗಿ ಬೋರ್‌ ವೆಲ್‌ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುವುದು. ಹುಲ್ಲುಮನಿ ತಿಮ್ಮಣ್ಣ,
ತಹಶೀಲ್ದಾರ್‌

ಕಳೆದ ವರ್ಷದಿಂದ ಚಿಕ್ಕಮಲ್ಲನಹೊಳೆ ಗ್ರಾಮಕ್ಕೆ ಖಾಸಗಿ ಕೊಳವೆಬಾವಿಯಿಂದ ನೀರು ಸರಬರಾಜು ಮಾಡಲಾಗಿತ್ತು. 15 ದಿನಗಳಿಂದ ಕಾನನಕಟ್ಟೆ ಗ್ರಾಮಕ್ಕೆ ಖಾಸಗಿ ಬೋರ್‌ವೆಲ್‌ ಮೂಲಕ ನೀರು ಕೊಡಲಾಗುತ್ತಿದೆ. ಬೇರೆ ಯಾವ ಗ್ರಾಮದಲ್ಲಿಯೂ ಇಷ್ಟೊಂದು ಸಮಸ್ಯೆ ಇಲ್ಲ.
ಹೇಮಾಜಿ ನಾಯ್ಕ,
ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

ನೀರಿನ ಪ್ರಮಾಣ ಕಡಿಮೆಯಾದ ಮಾಹಿತಿ ಬಂದಿದ್ದರೂ ಸಮಸ್ಯೆ ಇನ್ನೂ ಕಂಡು ಬಂದಿಲ್ಲ. ಸ್ಥಳ ಪರಿಶೀಲನೆ ಮಾಡಿದ ನಂತರ ವ್ಯವಸ್ಥೆ ಮಾಡಲಾಗುವುದು.
ಮಲ್ಲಾ ನಾಯ್ಕ,
ತಾಪಂ ಇಒ

„ರವಿಕುಮಾರ ಜೆ.ಓ. ತಾಳಿಕೆರೆ

ಟಾಪ್ ನ್ಯೂಸ್

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಜಿಗಿತ; ಜ.28ರಂದು ಹೆಚ್ಚು ಲಾಭ ಗಳಿಸಿದ ಷೇರುಗಳು ಯಾವುದು

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಜಿಗಿತ; ಜ.28ರಂದು ಹೆಚ್ಚು ಲಾಭ ಗಳಿಸಿದ ಷೇರುಗಳು ಯಾವುದು

1-fdsd

ಬಿಎಸ್ ವೈ ಮೊಮ್ಮಗಳ ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣ?

ravi shastri

ರಣಜಿ ಟ್ರೋಫಿ ಭಾರತೀಯ ಕ್ರಿಕೆಟ್ ನ ಬೆನ್ನುಮೂಳೆಯಂತೆ,ಅದನ್ನು ನಿರ್ಲಕ್ಷಿಸಬೇಡಿ:ರವಿ ಶಾಸ್ತ್ರಿ

bsy

ಬಿ.ಎಸ್ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣು!

16arrest

ಉಡುಪಿ: ಹೈಟೆಕ್ ವೇಶ್ಯಾವಾಟಿಕೆ; ನಾಲ್ವರು ಆರೋಪಿಗಳ ಬಂಧನ

1-aff

ನಾನು ಸರಕಾರ ನಡೆಸುತ್ತಿರುವ ಟೀಮಿನ ಒಬ್ಬ ಸದಸ್ಯ: ಬಸವರಾಜ್ ಬೊಮ್ಮಾಯಿ

ಮುಂಗಡ ಮುನ್ನೋಟ: ಮನೆ ಖರೀದಿದಾರರಿಗೆ ಸಿಗುವುದೇ ಸಿಹಿಸುದ್ದಿ?

ಮುಂಗಡ ಮುನ್ನೋಟ: ಮನೆ ಖರೀದಿದಾರರಿಗೆ ಸಿಗುವುದೇ ಸಿಹಿಸುದ್ದಿ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

davanagere news

ಗುಣಮುಖರ ಪ್ರಮಾಣ ಹೆಚ್ಚಳ

davanagere news

ಕ್ಯಾಂಪಸ್‌ ಸಂದರ್ಶನದಲ್ಲಿ ವಿದ್ಯಾರ್ಥಿಗಳ ಆಯ್ಕೆ

davanagere news

ದುಗ್ಗಮ್ಮ ಜಾತ್ರೆಗೆ ಮುಹೂರ್ತ ಫಿಕ್ಸ್‌

ballari news

ಪ್ರಜಾಪ್ರಭುತ್ವದಲ್ಲಿ ಪ್ರತಿ ಮತ ಅಮೂಲ್ಯ

davanagere news

ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಜಿಗಿತ; ಜ.28ರಂದು ಹೆಚ್ಚು ಲಾಭ ಗಳಿಸಿದ ಷೇರುಗಳು ಯಾವುದು

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಜಿಗಿತ; ಜ.28ರಂದು ಹೆಚ್ಚು ಲಾಭ ಗಳಿಸಿದ ಷೇರುಗಳು ಯಾವುದು

1-fdsd

ಬಿಎಸ್ ವೈ ಮೊಮ್ಮಗಳ ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣ?

ravi shastri

ರಣಜಿ ಟ್ರೋಫಿ ಭಾರತೀಯ ಕ್ರಿಕೆಟ್ ನ ಬೆನ್ನುಮೂಳೆಯಂತೆ,ಅದನ್ನು ನಿರ್ಲಕ್ಷಿಸಬೇಡಿ:ರವಿ ಶಾಸ್ತ್ರಿ

17job

ಉದ್ಯೋಗ ಸೃಜನೆಗೆ ಕೈಗಾರಿಕೆ ನೀತಿ ಪೂರಕ

bsy

ಬಿ.ಎಸ್ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.