Udayavni Special

ಕಾಂಗ್ರೆಸ್‌ ಮುಖಂಡರ ಟೀಕೆ ಅರ್ಥಹೀನ: ಜೆ.ಕೆ. ಸುರೇಶ್‌

Team Udayavani, Jun 22, 2021, 9:32 AM IST

ಕಾಂಗ್ರೆಸ್‌ ಮುಖಂಡರ ಟೀಕೆ  ಅರ್ಥಹೀನ: ಜೆ.ಕೆ. ಸುರೇಶ್‌

ಹೊನ್ನಾಳಿ: ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಜನಪರ ಕೆಲಸ ಮಾಡುತ್ತಿರುವುದನ್ನು ಹಾಗೂ ಕೋವಿಡ್ ಸಮಯದಲ್ಲಿ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿರುವುದನ್ನು ಕಾಂಗ್ರೆಸ್‌ ಮುಖಂಡರಿಗೆ ಸಹಿಸಲಾಗುತ್ತಿಲ್ಲ. ಭ್ರಮ ನಿರಸನಗೊಂಡು ಅಸೂಯೆಯಿಂದ ಇಲ್ಲ ಸಲ್ಲದ ಆರೋಪಗಳನ್ನು ಶಾಸಕರ ವಿರುದ್ಧ ಮಾಡುತ್ತಿದ್ದಾರೆ. ಇದು ಖಂಡನೀಯ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ. ಸುರೇಶ್‌ ಹೇಳಿದರು.

ಸೋಮವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಳಿ ತಾಲೂಕಿನ ಕೋವಿಡ್ ಸೋಂಕಿತರಿಗೆ ಎಲ್ಲಾ ಸಹಕಾರ-ಸಹಾಯವನ್ನು ಶಾಸಕರು ನೀಡುತ್ತಿದ್ದಾರೆ. ಅವರ ಅದ್ಭುತ ಕೆಲಸಕ್ಕೆ ರಾಜ್ಯ, ದೇಶ, ವಿದೇಶಗಳಿಂದ ಶಹಬ್ಟಾಶ್‌ಗಿರಿ ಹಾಗೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಇಂತಹ ಸಮಯದಲ್ಲಿ ಇಂಧನಗಳ ಬೆಲೆ ಏರಿಕೆ ಪ್ರತಿಭಟನೆ ನೆಪದಲ್ಲಿ ಕಾಂಗ್ರೆಸ್‌ ಮುಖಂಡರು ಬೆಲೆ ಏರಿಕೆ ಬಗ್ಗೆ ಮಾತನಾಡದೆ ಶಾಸಕ ಎಂ.ಪಿ. ರೇಣುಕಾಚಾರ್ಯರ ಬಗ್ಗೆ ಏಕವಚನದಲ್ಲಿ ಟೀಕಿಸುತ್ತಿದ್ದಾರೆ. ಇದನ್ನು ತಾಲೂಕಿನ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.

ಕಳೆದ ವರ್ಷ ಕೊರೊನಾದ ಮೊದಲನೇ ಅಲೆಯಲ್ಲಿ ರೇಣುಕಾಚಾರ್ಯ ಅವರು ತಾಲೂಕಿನ ಎಲ್ಲಾ ಹಳ್ಳಿಗಳಿಗೆ ತೆರಳಿ ಮಾಸ್ಕ್, ಉಪಹಾರ, ಊಟ, ಔಷಧವಿತರಿಸಿ ಸಾಂತ್ವನ ಹೇಳಿದ್ದರು. ಈಗ ಎರಡನೇ ಅಲೆಯಲ್ಲೂ ಅವರ ಸೇವೆ ಅವಿಸ್ಮರಣೀಯವಾಗಿರುವುದನ್ನು ಕಾಂಗ್ರೆಸ್‌ ಮುಖಂಡರಿಗೆ ಸಹಿಸಲಾಗುತ್ತಿಲ್ಲ ಎಂದು ಕುಟುಕಿದರು.

ಜಿಪಂ ಮಾಜಿ ಸದಸ್ಯ ಎಂ.ಆರ್‌. ಮಹೇಶ್‌ ಮಾತನಾಡಿ, ಪ್ರತಿಭಟನೆ ಹೆಸರಿನಲ್ಲಿ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮತ್ತು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಬಿ. ಮಂಜಪ್ಪ ಅವರಿಗೆ ಮಾತನಾಡಲು ಬೇರೆ ವಿಷಯವೇ ಇಲ್ಲ. ಶಾಸಕರ ಬಗ್ಗೆ ಕೀಳಾಗಿ ಮಾತನಾಡುತ್ತಿರುವುದನ್ನೇ ಅಜೆಂಡಾ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅರಕೆರೆ ನಾಗರಾಜ್‌, ಪುರಸಭಾಧ್ಯಕ್ಷ ಕೆ.ವಿ. ಶ್ರೀಧರ್‌, ಜಿಪಂ ಮಾಜಿ ಉಪಾಧ್ಯಕ್ಷ ಸುರೇಂದ್ರ ನಾಯ್ಕ, ಇತರರು ಇದ್ದರು.

ಟಾಪ್ ನ್ಯೂಸ್

ಶ್ರೀರಂಗಪಟ್ಟಣ : ರಂಗನಾಥ ಹಾಗೂ ನಿಮಿಷಾಂಭ ದೇಗುಲಕ್ಕೆ ಭಕ್ತರ ನಿರ್ಬಂಧ

ಶ್ರೀರಂಗಪಟ್ಟಣ : ರಂಗನಾಥ ಹಾಗೂ ನಿಮಿಷಾಂಭ ದೇಗುಲಕ್ಕೆ ಭಕ್ತರ ನಿರ್ಬಂಧ

ಮಾದನಾಯಕನಹಳ್ಳಿ ಪೊಲೀಸರ ಭರ್ಜರಿ ಕಾರ್ಯಚರಣೆ : 46 ಬೈಕ್ ಸಹಿತ ಐವರು ಕಳ್ಳರ ಬಂಧನ

ಮಾದನಾಯಕನಹಳ್ಳಿ ಪೊಲೀಸರ ಭರ್ಜರಿ ಕಾರ್ಯಚರಣೆ : 46 ಬೈಕ್ ಸಹಿತ ಐವರು ಕಳ್ಳರ ಬಂಧನ

ಕೃಷ್ಣಾ ನದಿಯಲ್ಲಿ ತಗ್ಗಿದ ನೀರಿನ ಪ್ರಮಾಣ : ಸಂತ್ರಸ್ತರು ನಿರಾಳ

ಕೃಷ್ಣಾ ನದಿಯಲ್ಲಿ ತಗ್ಗಿದ ನೀರಿನ ಪ್ರಮಾಣ : ಸಂತ್ರಸ್ತರು ನಿರಾಳ

fgdrty

ಸಚಿವ ಸ್ಥಾನಕ್ಕಾಗಿ ಆರಂಭವಾದ ಕಸರತ್ತು

ಬಂಡೀಪುರಕ್ಕೆ “ಹುಲಿ ಸಂರಕ್ಷಣೆ ಮೆಚ್ಚುಗೆ’ : ದೇಶದ 14 ಹುಲಿ ಅಭಯಾರಣ್ಯಗಳಿಗೆ ಈ ಮಾನ್ಯತೆ

ಕರ್ನಾಟಕದ ಬಂಡೀಪುರ ಸೇರಿ ದೇಶದ 14 ಹುಲಿ ಅಭಯಾರಣ್ಯಗಳಿಗೆ CATS ಮಾನ್ಯತೆ

ft44

ರಾಜ್ಯದಲ್ಲಿ ಕೋವಿಡ್ ಕೊಂಚ ಇಳಿಕೆ: ಇಂದು 1890 ಹೊಸ ಪ್ರಕರಣ ಪತ್ತೆ

Why is there a COVID-19 spike in Kerala?

ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವಲ್ಲಿ ಮಾದರಿಯಾಗಿದ್ದ ಕೇರಳ ಈಗೇಕೆ ಹೀಗೆ..?!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಾವಣಗೆರೆ: ಸಹೋದರಿಯರ ಜೋಡಿ ಕೊಲೆ, ಕೆಟ್ಟ ವಾಸನೆ ಬಂದಾಗಲೇ ತಿಳಿಯಿತು ವಿಚಾರ!

ದಾವಣಗೆರೆ: ಸಹೋದರಿಯರ ಜೋಡಿ ಕೊಲೆ, ಕೆಟ್ಟ ವಾಸನೆ ಬಂದಾಗಲೇ ತಿಳಿಯಿತು ವಿಚಾರ!

Davanagere Bhadra Dam

ಭದ್ರಾ ಜಲಾಶಯ ಭರ್ತಿ: ಕಾಡಾ ಅಧ್ಯಕ್ಷೆ ಸಂತಸ

Chithradurga

ಪ್ರಕೃತಿ ವಿಕೋಪದಿಂದ ನೊಂದವರ ನೆರವಿಗೆ ಧಾವಿಸಿ

Davanagere News, Udayavani

ಹೊಸ ಸರ್ಕಾರದ ಮೇಲೆ ಬೆಟ್ಟದಷ್ಟು ನಿರೀಕ್ಷೆ

28-10

ಭಾರೀ ವಾಹನ ಪ್ರವೇಶ ನಿಷೇಧಕ್ಕೆ ಚಿಂತನೆ

MUST WATCH

udayavani youtube

ನಿರ್ಬಂಧವಿದ್ದರೂ ಲಂಚ ಪಡೆದು ವಾಹನ ಸಂಚಾರಕ್ಕೆ ಅವಕಾಶ

udayavani youtube

ನನಗೆ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಲು ಬಿಎಸ್‍ ವೈ ಕಾರಣ : ಯತ್ನಾಳ್

udayavani youtube

ನಂಗೋಸ್ಕರ foreignಇಂದ ಚಾಕಲೇಟ್ ಬರ್ತಿದೆ ..!

udayavani youtube

ಪೂರ್ವಜನ್ಮದಲ್ಲಿ ನಾನು ಕನ್ನಡಿಗನಾಗಿ ಹುಟ್ಟಿದ್ದೆ ಅನ್ಸುತ್ತೆ

udayavani youtube

ನಾನು ಹಾಕುವ ಬಟ್ಟೆ ಬರೆಗಳು ಅತೀ ಹೆಚ್ಚು ಹೆಂಗಸ್ರು ಹಾಕುವ ಬಣ್ಣಗಳು !

ಹೊಸ ಸೇರ್ಪಡೆ

ಶ್ರೀರಂಗಪಟ್ಟಣ : ರಂಗನಾಥ ಹಾಗೂ ನಿಮಿಷಾಂಭ ದೇಗುಲಕ್ಕೆ ಭಕ್ತರ ನಿರ್ಬಂಧ

ಶ್ರೀರಂಗಪಟ್ಟಣ : ರಂಗನಾಥ ಹಾಗೂ ನಿಮಿಷಾಂಭ ದೇಗುಲಕ್ಕೆ ಭಕ್ತರ ನಿರ್ಬಂಧ

ತನ್ನ ಜಮೀನಿನಲ್ಲೇ ರೈತನ ಮೃತದೇಹ ಪತ್ತೆ :ಕಾಡು ಪ್ರಾಣಿಗಳ ದಾಳಿ ಶಂಕೆ?

ತನ್ನ ಜಮೀನಿನಲ್ಲೇ ರೈತನ ಮೃತದೇಹ ಪತ್ತೆ :ಕಾಡು ಪ್ರಾಣಿಗಳ ದಾಳಿ ಶಂಕೆ?

fgdfgetrtre

ಬಡ ಮಕ್ಕಳ ಕಲಿಕೆಗಾಗಿ ನಿಸ್ವಾರ್ಥ ಸೇವೆ

ಮಾದನಾಯಕನಹಳ್ಳಿ ಪೊಲೀಸರ ಭರ್ಜರಿ ಕಾರ್ಯಚರಣೆ : 46 ಬೈಕ್ ಸಹಿತ ಐವರು ಕಳ್ಳರ ಬಂಧನ

ಮಾದನಾಯಕನಹಳ್ಳಿ ಪೊಲೀಸರ ಭರ್ಜರಿ ಕಾರ್ಯಚರಣೆ : 46 ಬೈಕ್ ಸಹಿತ ಐವರು ಕಳ್ಳರ ಬಂಧನ

ಕೃಷ್ಣಾ ನದಿಯಲ್ಲಿ ತಗ್ಗಿದ ನೀರಿನ ಪ್ರಮಾಣ : ಸಂತ್ರಸ್ತರು ನಿರಾಳ

ಕೃಷ್ಣಾ ನದಿಯಲ್ಲಿ ತಗ್ಗಿದ ನೀರಿನ ಪ್ರಮಾಣ : ಸಂತ್ರಸ್ತರು ನಿರಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.