ಕೋವಿಡ್ ನೆಪ ಹೇಳದೆ ಕೆಲಸ ಮಾಡಿ


Team Udayavani, Aug 18, 2020, 5:57 PM IST

ಕೋವಿಡ್ ನೆಪ ಹೇಳದೆ ಕೆಲಸ ಮಾಡಿ

ಜಗಳೂರು: ಅಧಿಕಾರಿಗಳು ಕೋವಿಡ್  ನೆಪ ಹೇಳದೆ ಕಚೇರಿಯಲ್ಲಿದ್ದು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ಮಾಡಿಕೊಡಬೇಕು ಎಂದು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್‌.ವಿ. ರಾಮಚಂದ್ರ ಸೂಚಿಸಿದರು.

ಸೋಮವಾರ ಪಟ್ಟಣದ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ನಡೆದ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ಕೋವಿಡ್ ಪಾಡಿಗೆ ತಾನಿರುತ್ತದೆ. ಕಚೇರಿಗಳಿಗೆ ಬರುವ ರೈತರನ್ನು ಮತ್ತು ಸಾರ್ವಜನಿಕರನ್ನು ಅಲೆದಾಡಿಸಬಾರದು. ತಾಲೂಕಿಗೆ ಎಷ್ಟು ಗೊಬ್ಬರದ ಬೇಡಿಕೆ ಇದೆ ಎಂಬುದರ ಬಗ್ಗೆ ಮಾಹಿತಿ ನೀಡಿ. ಗೊಬ್ಬರ ಸರಬರಾಜು ವ್ಯವಸ್ಥೆ ಮಾಡಲಾಗವುದು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸಲು ಮಾತನಾಡಿ, ತಾಲೂಕಿನಲ್ಲಿ 54 ಸಾವಿರ ಹೆಕ್ಟೇರ್‌ ಬಿತ್ತನೆ ಪ್ರದೇಶವಿದ್ದು, 51 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಬೆಳೆಗಳು ನಳ ನಳಿಸುತ್ತಿವೆ. ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಯೂರಿಯಾ ಗೊಬ್ಬರ ಬಳಕೆ ಕಡಿಮೆ ಮಾಡಿ ಎಂದು ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ತಾಲೂಕಿನಲ್ಲಿ 1020 ಮೆಟ್ರಿಕ್‌ ಟನ್‌ ಗೊಬ್ಬರ ವಿತರಿಸಲಾಗಿದ್ದು, ಮತ್ತಷ್ಟು ಗೊಬ್ಬರ ಬರಲಿದೆ ಎಂದರು. ತಾಪಂ ಇಒ ಮಲ್ಲಾ ನಾಯ್ಕ, ತಾಲೂಕು ಆರೋಗ್ಯಾಧಿಕಾರಿ ಪರವಾಗಿ ವರದಿ ಮಂಡಿಸಿದರು.

ತಾಲೂಕಿನಲ್ಲಿ ಇದುವರೆಗೆ 222 ಕೋವಿಡ್  ಪಾಸಿಟಿವ್‌ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 194 ಜನರು ಗುಣಮುಖರಾಗಿದ್ದಾರೆ. 71 ಸಕ್ರಿಯ ಪ್ರಕರಣಗಳಿವೆ. ಮುಗ್ಗಿದ ರಾಗಿಹಳ್ಳಿ ಗ್ರಾಮದ ಕೊವಿಡ್‌ ಸೆಂಟರ್‌ನಲ್ಲಿ 44, ತಾಲೂಕು ಆಸ್ಪತ್ರೆಯಲ್ಲಿ 16, ಜಿಲ್ಲಾಸ್ಪತ್ರೆಯಲ್ಲಿ 14, ಹೋಂ ಕ್ವಾರಂಟೈನ್‌ನಲ್ಲಿ 20 ಜನರು ಇದ್ದಾರೆ. 65 ಕಂಟೈನ್ಮೆಂಟ್‌ ಝೋನ್‌ಗಳಿದ್ದು, 35 ಡಿ ನೋಟಿಫಿಕೆಷನ್‌ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ಜಿ.ಪಂ ಸದಸ್ಯರಾದ ಸವಿತಾ, ಎಸ್‌.ಕೆ. ಮಂಜುನಾಥ್‌, ಉಮಾ, ಶಾಂತಕುಮಾರಿ, ತಾ.ಪಂ ಸದಸ್ಯರಾದ ಬಸವರಾಜು, ಶಂಕರ್‌ ನಾಯ್ಕ, ತಹಶಿಲ್ದಾರ್‌ ನಾಗವೇಣಿ , ಇ .ಓ. ಮಲ್ಲಾನಾಯ್ಕ, ಸಿಪಿಐ ದುರುಗಪ್ಪ ,ಲೋಕೋಪಯೋಗಿ ಇಲಾಖೆಯ ಎಇಇ ರುದ್ರಪ್ಪ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು

ಟಾಪ್ ನ್ಯೂಸ್

ಮೊದಲ ಡೋಸ್ ವ್ಯಾಕ್ಸಿನೇಷನ್ ನಲ್ಲಿ ಕರ್ನಾಟಕ ನಂ. 1 ಸ್ಥಾನಕ್ಕೆ: ಸಚಿವ ಸುಧಾಕರ್

ಮೊದಲ ಡೋಸ್ ವ್ಯಾಕ್ಸಿನೇಷನ್ ನಲ್ಲಿ ಕರ್ನಾಟಕ ನಂ. 1 ಸ್ಥಾನಕ್ಕೆ: ಸಚಿವ ಸುಧಾಕರ್

bommai

ನೈಟ್ ಕರ್ಫ್ಯೂ ಬಗ್ಗೆ ಸದ್ಯದಲ್ಲೇ ನಿರ್ಧಾರ: ಸಿಎಂ ಬೊಮ್ಮಾಯಿ

ಆರ್ ಆರ್ ಆರ್ ಟ್ರೈಲರ್ ನಲ್ಲಿ ಅಬ್ಬರಿಸಿದ ಜ್ಯೂ.ಎನ್ ಟಿಆರ್, ರಾಮ್ ಚರಣ್: ಇಲ್ಲಿದೆ ವಿಡಿಯೋ

ಆರ್ ಆರ್ ಆರ್ ಟ್ರೈಲರ್ ನಲ್ಲಿ ಅಬ್ಬರಿಸಿದ ಜ್ಯೂ.ಎನ್ ಟಿಆರ್, ರಾಮ್ ಚರಣ್: ಇಲ್ಲಿದೆ ವಿಡಿಯೋ

17accident

ಉಪ್ಪಿನಂಗಡಿ: ಸರಣಿ ಅಪಘಾತ, ತಪ್ಪಿದ ಭಾರಿ ದುರಂತ

ಚುನಾವಣೆ : ನಾಳೆ 228 ಮತಗಟೆಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ನಡೆಯಲಿದೆ ಮತದಾನ

ಪರಿಷತ್ ಚುನಾವಣೆ : ನಾಳೆ 228 ಮತಗಟೆಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ನಡೆಯಲಿದೆ ಮತದಾನ

ಬೆಂಗಳೂರಿನ ವಿಮಾನ ನಿಲ್ದಾಣದಿಂದ ಕೋವಿಡ್ ಸೋಂಕಿತ ಪರಾರಿ :ಸೋಂಕಿತ ನಾಪತ್ತೆಯಿಂದ ಆತಂಕ ಸೃಷ್ಟಿ

ಜರ್ಮನಿಯಿಂದ ಬೆಂಗಳೂರಿಗೆ ಬಂದ ಕೋವಿಡ್ ಸೋಂಕಿತ ಪರಾರಿ : ಸೋಂಕಿತ ನಾಪತ್ತೆಯಿಂದ ಆತಂಕ ಸೃಷ್ಟಿ

ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಆತ್ಮನಿರ್ಭರ್ ಆಗಬೇಕೆಂಬ ಬಿಪಿನ್ ರಾವತ್ ಹಂಬಲಿಸಿದ್ದರು: ಸಿಎಂ

ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಆತ್ಮನಿರ್ಭರ್ ಆಗಬೇಕೆಂಬ ಬಿಪಿನ್ ರಾವತ್ ಹಂಬಲಿಸಿದ್ದರು: ಸಿಎಂ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

davanagere news

ವಿದ್ಯಾರ್ಥಿಗಳು ನೇತ್ರದಾನಕ್ಕೆ ಮುಂದಾಗಲಿ

ಎಂಎಲ್ಸಿ ಚುನಾವಣೆ  ಹಿನ್ನೆಲೆ : ಟೆಂಡರ್ ಹರಾಜು ಪ್ರಕ್ರಿಯೆಗೆ ತಡೆ

ಎಂಎಲ್ಸಿ ಚುನಾವಣೆ ಹಿನ್ನೆಲೆ : ಟೆಂಡರ್ ಹರಾಜು ಪ್ರಕ್ರಿಯೆಗೆ ತಡೆ

davanagere news

ತಪ್ಪಿತಸ್ಥರ ಬಂಧನಕ್ಕೆ ಶಿವಕುಮಾರ್‌ ಆಗ್ರಹ

davanagere news

ಅನುಮಾನಾಸ್ಪದ ಸಾವು ಪ್ರಕರಣ ಸಿಬಿಐಗೆ ವಹಿಸಿ

davanagere news

ಮಾದಿಗ ದಂಡೋರ ಮಹಾಸಭೆಗೆ ಜಿಲ್ಲೆಯಿಂದ 100 ಜನ

MUST WATCH

udayavani youtube

ಅಕಾಲಿಕ ಮಳೆಯ ಆತಂಕ.. ಯಂತ್ರದ ಮೂಲಕ ಭತ್ತದ ಒಕ್ಕಲು

udayavani youtube

ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

udayavani youtube

ಮಲ್ಲಿಗೆ ಕೃಷಿಯಲ್ಲಿ ಯಶಸ್ಸನ್ನು ಕಂಡ ಕರಂಬಳ್ಳಿಯ ಕೃಷಿಕ

udayavani youtube

ಶಿರಸಿ : ಪೂಜೆಗೆಂದು ಕೊರಳಿಗೆ ಹಾಕಿದ ಬಂಗಾರದ ಸರವನ್ನೇ‌ ನುಂಗಿದ ಆಕಳು

udayavani youtube

ಕುಮಾರಸ್ವಾಮಿಯನ್ನ ಸಿಎಂ ಸ್ಥಾನದಲ್ಲಿ ಕೂರಿಸಿ ಕಾಲೆಳೆದದ್ದು ಕಾಂಗ್ರೆಸ್ ನವರೆ : ಸಿಟಿ ರವಿ

ಹೊಸ ಸೇರ್ಪಡೆ

ಎರಡು ವರ್ಷದಿಂದ ಕುಂಟುತಲೇ ಸಾಗಿದ ಮೇಲ್ಸೇತುವೆ ಕಾಮಗಾರಿ

ಎರಡು ವರ್ಷದಿಂದ ಕುಂಟುತಲೇ ಸಾಗಿದ ಮೇಲ್ಸೇತುವೆ ಕಾಮಗಾರಿ

ಕರ್ತವ್ಯಕ್ಕೆ ಅನಧಿಕೃತ ಗೈರು : ಶಿಕಕ, ಅಂಗನವಾಡಿ ಕಾರ್ಯಕರ್ತೆಗೆ ನೋಟಿಸ್‌

ಕರ್ತವ್ಯಕ್ಕೆ ಅನಧಿಕೃತ ಗೈರು : ಶಿಕಕ, ಅಂಗನವಾಡಿ ಕಾರ್ಯಕರ್ತೆಗೆ ಅಧಿಕಾರಿಗಳಿಂದ ನೋಟಿಸ್‌

20knowledge

ಜ್ಞಾನಾಭಿವೃದ್ದಿಗೆ ವಿದ್ಯಾಸೇತು ಕೈಪಿಡಿ ಪೂರಕ

ಬಹಿರಂಗ ಚರ್ಚೆಗೆ ಬರಲು ಬೊಮಾಯಿಗೆ ಧಮ್ಮಿಲ್ಲ : ಆಡಳಿತ ಪಕ್ಷದ ವಿರುದ್ಧ ಗುಡುಗಿದ ಸಿದ್ದು

ಬಹಿರಂಗ ಚರ್ಚೆಗೆ ಬರಲು ಬೊಮಾಯಿಗೆ ಧಮ್ಮಿಲ್ಲ : ಆಡಳಿತ ಪಕ್ಷದ ವಿರುದ್ಧ ಗುಡುಗಿದ ಸಿದ್ದು

19vote

ತಪ್ಪದೇ ಮತ ಚಲಾಯಿಸಿ: ಸುರೇಶ ವರ್ಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.