ಸಾಹಿತ್ಯ ಲೋಕ ಜಾತಿ-ಧರ್ಮದಿಂದ ಮುಕ್ತವಾಗಲಿ

ಇತ್ತೀಚಿನ ದಿನಗಳಲ್ಲಿ ವೇದಿಕೆ ಮತ್ತು ಆಪ್ತತೆ ಕಳೆದು ಹೋಗುತ್ತಿದೆ.

Team Udayavani, Jul 19, 2022, 2:43 PM IST

ಸಾಹಿತ್ಯ ಲೋಕ ಜಾತಿ-ಧರ್ಮದಿಂದ ಮುಕ್ತವಾಗಲಿ

ದಾವಣಗೆರೆ: ಸಾಹಿತಿ, ಕವಿಗಳನ್ನು ಒಂದು ಧರ್ಮ, ಜಾತಿ, ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದು ಸಾಹಿತಿ ಡಾ| ಆನಂದ ಋಗ್ವೇದಿ ಹೇಳಿದರು.ನಗರದ ನಿರ್ವರ್ಣ ಸಭಾಂಗಣದಲ್ಲಿ ನಡೆದ ಸಂತೆಬೆನ್ನೂರು ಫೈಜಟ್ರಾಜ್‌ ಅವರ ಸಾಹಿತ್ಯ ಕೃತಿಗಳ ಅವಲೋಕನ ಮತ್ತು ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಈಚೆಗೆ ಕೃತಿಕಾರರು, ಪ್ರಸಿದ್ಧ ಸಾಹಿತಿ, ಕವಿಗಳನ್ನು ಒಂದು ಜಾತಿ, ಸಮುದಾಯ, ಧರ್ಮಕ್ಕೆ ಸೀಮಿತಗೊಳಿಸುವುದು ಕಂಡು ಬರುತ್ತಿದೆ. ಸಾಹಿತಿಗಳನ್ನು ನಮ್ಮವರು ನಮ್ಮ ಧರ್ಮ, ಸಮುದಾಯದವರು ಎಂದು ಹೇಳಿಕೊಳ್ಳುವಂತಹ ಸಂಘರ್ಷಮಯ ವಾತಾವರಣ ಕಂಡು ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕವಿ, ಸಾಹಿತಿ, ಕಾದಂಬರಿಕಾರರು ಜಾತಿ, ಮತ, ಧರ್ಮ, ಸಮುದಾಯ ಮೀರಿದವರು. ಅವರಿಗೆ ಯಾವುದೇ ಗಡಿಯ ಎಲ್ಲೆ ಇಲ್ಲ. ಈಚೆಗೆ ಪ್ರಸಿದ್ಧ ಸಾಹಿತಿಯೊಬ್ಬರನ್ನು ನಮ್ಮ ಸಮುದಾಯದವರು ಎಂಬು ಬಹು ದೊಡ್ಡದಾಗಿ ಬಿಂಬಿಸುವ ಪ್ರಯತ್ನ ನಡೆಯಿತು. ತಾತ್ವಿಕತೆಯ ಕತೃìಗಳನ್ನು ಜಾತಿ,
ಸಮುದಾಯ, ಧರ್ಮಕ್ಕೆ ಸೀಮಿತಗೊಳಿಸುವ ಕ್ರಿಯೆ ಸರಿಯಲ್ಲ. ಸಾಮಾಜಿಕ ಸ್ಥಿತಿಗತಿ, ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುವ ಕವಿ, ಸಾಹಿತಿ ತಾವು ಹುಟ್ಟಿ ಬಂದ ಜಾತಿಗೆ ಜವಾಬ್ದಾರಲ್ಲ. ಯಾರೂ ಸಹ ಇದೇ ಜಾತಿ, ಧರ್ಮ, ಸಮುದಾಯದಲ್ಲಿ ಜನಿಸಬೇಕು ಎಂದು ಅರ್ಜಿ ಹಾಕಿರುವುದಿಲ್ಲ ಎಂದರು.

ಸಂತೆಬೆನ್ನೂರು ಫೈಜಟ್ರಾಜ್‌ ಸಹ ನಾಲ್ಕು ದಶಕಗಳಲ್ಲಿ ಅನೇಕ ಸಂಕಷ್ಟ ಮತ್ತು ಸಂಘರ್ಷ ದಾಟಿ ಬಂದಿ ಕನ್ನಡ ಸಾಹಿತ್ಯ ಲೋಕಕ್ಕೆ ಒಂಭತ್ತು ಕೃತಿಗಳ ನೀಡಿದ್ದಾರೆ. ಸಂತೆಬೆನ್ನೂರು ಫೈಜಟ್ರಾಜ್‌ ಅವರ “ಕೇಳದೆ ನಿಮಗಾಗಿ’ ಕವನ ಸಂಕಲನಕ್ಕೆ ಮುಸ್ಲಿಂ ಸಾಹಿತ್ಯ ಪರಿಷತ್ತು ಪ್ರಶಸ್ತಿಯನ್ನು ನೀಡಿದೆ. ಅದಕ್ಕೆ ಮುಜುಗರ ಪಡುವಂಥದ್ದಲ್ಲ. ಸಾಹಿತಿ, ಕವಿತೆಗೆ ಪ್ರಶಸ್ತಿ ಬರುವುದು ಅವರಿಗೆ ಆತ್ಮಬಲ ನೀಡುತ್ತದೆ. ಸಮಾಜ, ಕವಿಹೃಹದಯಗಳು ನಿಮ್ಮೊಟ್ಟಿಗೆ ಇರಲಿವೆ ಎಂದು
ಬೆಂಬಲಿಸುವ ಪ್ರತೀಕ ಎಂದು ತಿಳಿಸಿದರು.

ಪ್ರಾಸ್ತಾವಿಕ ನುಡಿಗಳಾಡಿದ ಸನಾವುಲ್ಲಾ ನವಿಲೇಹಾಳ್‌, ಸಂತೆಬೆನ್ನೂರು ಫೈಜಟ್ರಾಜ್‌ ಬದುಕಿನ ಅನುಭವವನ್ನು ಕವಿತೆ, ಕಥೆಗಳ ಮೂಲಕ ಅಚ್ಚುಕಟ್ಟಾಗಿ ಕಟ್ಟಿಕೊಡುತ್ತಿದ್ದಾರೆ. “ನಾವಾಗುವುದು ಒಲವಂತೆ’ ಎನ್ನುವ ಮೂಲಕ ಒಲಿವಿನ ಪರಿಚಯ ಮಾಡಿಕೊಟ್ಟಿದ್ದಾರೆ. “ಕೇಳದೆ ನಿಮಗಾಗಿ’ ಕವನ ಸಂಕಲನಕ್ಕೆ ರಾಜ್ಯ ಮಟ್ಟದ ಮುಸ್ಲಿಂ ಸಾಹಿತ್ಯ ಪರಿಷತ್ತಿನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ ಅಧ್ಯಕ್ಷತೆ ವಹಿಸಿದ್ದರು. ಡಾ| ಜಿ. ಕಾವ್ಯಶ್ರೀ, ಜಿ.ಮುದ್ದುವೀರಸ್ವಾಮಿ ಇತರರು ಇದ್ದರು. ಟಿ.ಎಸ್‌. ರಾಜೇಂದ್ರ ಪ್ರಸಾದ್‌ ಸ್ವಾಗತಿಸಿದರು. ಕೃಷ್ಣ ನಾಯ್ಕ ವಂದಿಸಿದರು.

ಪ್ರೀತಿಯೆಂಬುದು ಬದುಕಿನ ಆಕ್ಸಿಜನ್‌
ಇತ್ತೀಚಿನ ದಿನಗಳಲ್ಲಿ ವೇದಿಕೆ ಮತ್ತು ಆಪ್ತತೆ ಕಳೆದು ಹೋಗುತ್ತಿದೆ. ಆತ್ಮರತಿ, ಗುಂಪುಗಾರಿಕೆಯ ವಾತಾವರಣದ ನಡುವೆ ಆಪ್ತತೆಯ ವಲಯ ಸ್ಥಾಪನೆ ಮಾಡಕೊಳ್ಳಬೇಕಾಗಿದೆ. ಮನುಷ್ಯರಾಗಿ ಬಾಳಲು, ಬದುಕಲು ಪ್ರೀತಿ ಅಗತ್ಯ. ಪ್ರತಿಯೊಬ್ಬರ ಬದುಕಿನಲ್ಲಿ ಪ್ರೀತಿ, ಆಪ್ಯಾಯತೆ ಬೇಕೇ ಬೇಕು. ಪ್ರೀತಿ ಎಂಬುದು ಜೀವನದ ಆಮ್ಲಜನಕ. ಆದರೆ ಅದೇ ಪ್ರೀತಿಯನ್ನು ಮಡಿವಂತಿಕೆ ನೆಪದಲ್ಲಿ ಸಾಮಾಜಿಕವಾಗಿ ನಿಷೇಧಿ ತ ಕ್ರಿಯೆ ಎಂದು ಬ್ರ್ಯಾಂಡ್‌ ಮಾಡಲಾಗುತ್ತಿದೆ ಎಂದು ಸಾಹಿತಿ ಮಲ್ಲಿಕಾರ್ಜುನ ತೂಲಹಳ್ಳಿ ವಿಷಾದಿಸಿದರು.

ಟಾಪ್ ನ್ಯೂಸ್

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ

ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ

ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮದ್ ಅಮಾನತು

ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮ್ಮದ್ ಅಮಾನತು

1-dvg

Election Campaign: ಮೋದಿಯವರಿಂದ ಮಹಿಳಾ ಶಕ್ತಿಗೆ ಮುನ್ನುಡಿ

Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ

Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ

Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ

Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.