ದುಡಿಮೆಯನ್ನೇ ಕಿತ್ತುಕೊಂಡ ಮಹಾಮಾರಿ ಕೋವಿಡ್

Team Udayavani, Oct 7, 2020, 5:05 PM IST

dg-tdy-1

ದಾವಣಗೆರೆ: ಹೋಟೆಲ್‌ ನಡೆಸುತ್ತಿರುವ ಅರ್ಪಿತಾ ಯಲಗಚ್‌.

ದಾವಣಗೆರೆ: ಮಹಾಮಾರಿ ಕೋವಿಡ್ ಹಲವರ ದುಡಿಮೆಯನ್ನೇ ಅಕ್ಷರಶಃ ಕಿತ್ತುಕೊಂಡು ಜೀವನಮುಂದ್ಹೇಗೆ ಎಂದು ಕ್ಷಣ ಕ್ಷಣಕ್ಕೂ ಚಿಂತೆಗೀಡು ಮಾಡಿದೆ!.

ಫೆಬ್ರವರಿ ಮಾಹೆಯಲ್ಲಿ ಕಾಣಿಸಿಕೊಂಡ ಮಹಾಮಾರಿ ಕೋವಿಡ್ ವೈರಸ್‌ ಹಾವಳಿ ತಡೆಗಟ್ಟಲು ಸರ್ಕಾರ ಜಾರಿ ಮಾಡಿದ್ದಂತಹ ಲಾಕ್‌ಡೌನ್‌ ಹಲವಾರು ಕುಟುಂಬಗಳ ಜೀವನ ನಿರ್ವಹಣೆಯ ಹಾದಿಯನ್ನೇ ಲಾಕ್‌… ಮಾಡಿದೆ. ಕೋವಿಡ್ ಬರೋದಕ್ಕಿಂತಲೂ ಮುಂಚೆ ಕೊಡಗಿನಲ್ಲಿ ಕಟ್ಟಡ ಕಟ್ಟೋ ಕೆಲಸಕ್ಕೆ 10-15 ಜನರ ಕರೆದುಕೊಂಡು ಹೋಗ್ತಾ ಇದ್ದೆವು. ಪ್ರತಿಯೊಬ್ಬರಿಗೆ ದಿನಕ್ಕೆ 600 ರೂಪಾಯಿ ಕೂಲಿ ಕೊಡುವ ಜೊತೆಗೆ ಊಟ-ತಿಂಡಿಯನ್ನೂ ಕೊಡ್ತಾ ಇದ್ದರು. ಅಲ್ಲದೆ ಅಲ್ಲೇ ಲೈನ್‌ ಮನೆಗಳಲ್ಲೇ ಉಳಿದುಕೊಳ್ಳಲಿಕ್ಕೂ ಅವಕಾಶವೂ ಇತ್ತು. ಸೀಸನ್‌ ಮುಗಿಯೋ ಹೊತ್ತಿಗೆ ಎಲ್ಲಾ ಖರ್ಚು ತೆಗೆದು, ಮನೆ ಖರ್ಚಿಗೆ ಹಣ ಕಳಿಸಿ, 10-20 ಸಾವಿರ ಕೈಯಲ್ಲಿ ಇರೋದು. ಜೀವನಕ್ಕೆ ಯಾವುದೇ ತೊಂದರೆ ಇರ್ತಾ ಇರಲಿಲ್ಲ. ಆದರೆ, ಯಾವಾಗ ಕೊರೊನಾ, ಲಾಕ್‌ಡೌನ್‌ ಆಂತ ಬಂತೋ ನಮಗೆ ಕೆಲಸ ಇಲ್ಲದಂಗೆ ಆಯಿತು. ಅನಿವಾರ್ಯುವಾಗಿ ದಾವಣಗೆರೆಗೆ ಬರುವಂತಾಯಿತು. ಈಗ ಕೆಲಸವೇ ಇಲ್ಲ. ಜೀವನ ಬಹಳ ಕಷ್ಟ ಆಗ್ತಾ ಇದೆ ಎನ್ನುತ್ತಾರೆ ದಾವಣಗೆರೆಯ ವಿನೋಬ ನಗರದ ನಿವಾಸಿ ಮಂಜುನಾಥ್‌ ಇತರರು.

ಕೋವಿಡ್ ಬಂದ ಮೇಲೆ ಎಲ್ಲಾ ಕೆಲಸ ನಿಂತಂತೆ ಕಟ್ಟಡ ಕೆಲಸಾನೂ ನಿಂತಿತ್ತು. ಈಗೇನೋ ಕೆಲಸ ಮಾಡೋಕೆ ಪರ್ಮಿಷನ್‌ ಕೊಡಲಾಗಿದೆ. ಆದರೆ, ಕಟ್ಟಡ ಕಟ್ಟಿಸೋದು ಕಡಿಮೆ ಆಗಿದೆ. ಹಾಗಾಗಿ ಹಿಂದಿನಂತೆ ದಿನಾ ಕೆಲಸವೇ ಇಲ್ಲ. ವಾರದಲ್ಲಿ 2 ಇಲ್ಲ ಅಂದರೆ 3 ದಿನ ಕೆಲಸ ಇದ್ದರೆ ಅದೇ ನಮ್‌ ಪುಣ್ಯ ಅನ್ನುವಂತಾಗಿದೆ. ಕೆಲಸ ಸಿಕ್ಕಾಗ ಕೈಯಲ್ಲಿ ಒಂದಿಷ್ಟು ಹಣ ಬರೋದರಲ್ಲೇಜೀವನ ನಡೆಸಬೇಕಾಗಿದೆ. ಮಕ್ಳು, ಮರಿ, ಆಸ್ಪತ್ರೆ, ಅಕ್ಕಿ, ಬೇಳೆ, ಬೆಲ್ಲ… ಹಿಂಗೆ ಪ್ರತಿಯೊಂದನ್ನು ಸರಿದೂಗಿಸಿಕೊಂಡು ಹೋಗೋದು ಬಹಳ ಕಷ್ಟ ಆಗುತ್ತಿದೆ. ಕೋವಿಡ್ ಬಂದು ನಮ್‌ ದುಡಿಮೆನೇ ಕಿತ್ತುಕೊಂಡಿದೆ ಎಂದು ಹೇಳುತ್ತಾರೆ ಮಂಜುನಾಥ್‌. ಕಟ್ಟಡ ಕೆಲಸಗಾರರ ಕಥೆ ಒಂದು ಕಡೆಯಾದರೆ. ಹೋಟೆಲ್‌ ಉದ್ಯಮಿಗಳ ಪಾಡು ಸಹ ಅದೇ ರೀತಿಯದ್ದಾಗಿದೆ.

ದಾವಣಗೆರೆಯ ಮಾಮಾಸ್‌ ಜಾಯಿಂಟ್‌ ರಸ್ತೆಯಲ್ಲಿ ಕಳೆದ ಕೆಲ ತಿಂಗಳನಿಂದ ಹೋಟೆಲ್‌ ಅರೋಹ…ನಡೆಸುತ್ತಿ ರುವ ಬಿಬಿಂ ಪದವೀಧರೆಅರ್ಪಿತಾ ಯಲಗಚ್‌ ಹೇಳುವಂತೆ, ಲಾಕ್‌  ಡೌನ್‌ ತೆರವಿನ ನಂತರವೂ ಹೋಟೆಲ್‌ ಗಳಲ್ಲಿ ವ್ಯಾಪಾರ-ವಹಿವಾಟು ಬಹಳ ಕಡಿಮೆ ಆಗಿದೆ. ಕೋವಿಡ್ ಭಯದಿಂದ ಜನರು ಹೋಟೆಲ್‌ಗ‌ಳಿಗೆ ಬರುವುದೇ ಇಲ್ಲ. ಬಹಳ ಕಡಿಮೆ ಸಂಖ್ಯೆಯಲ್ಲಿಬರುವುದರಿಂದ ವ್ಯಾಪಾರ ಅಷ್ಟಕಷ್ಟೇ. 7 ಲಕ್ಷ ರೂಪಾಯಿ ಇನ್‌ವೆಸ್ಟ್‌ ಮಾಡಲಾಗಿದೆ. 5-6 ಜನರು ಕೆಲಸಕ್ಕಿದ್ದಾರೆ. ವಹಿವಾಟು ಚೆನ್ನಾಗಿ ನಡೆದರೆ ಏನೂ ಸಮಸ್ಯೆಯೇ ಇಲ್ಲ. ವ್ಯಾಪಾರವಾಗದೇ ಹೋದರೆ ಎಲ್ಲವೂ ಕಷ್ಟ ಆಗುತ್ತದೆ ಎಂದು ಅರ್ಪಿತಾ ಹೇಳುತ್ತಾರೆ.

ದಾವಣಗೆರೆಯ ಎಂಸಿಸಿ ಬಿ ಬ್ಲಾಕ್‌ ಪ್ರಮುಖ ರಸ್ತೆಯಲ್ಲಿನ ಬ್ಯೂಟಿಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯದ್ದು ಅದೇ ವ್ಯಥೆ. ಕೋವಿಡ್ ಕಾರಣಕ್ಕೆ ನಾವು ಎಷ್ಟೇ ಮುಂಜಾಗ್ರತಾ ಕ್ರಮ ತೆಗೆದುಕೊಂಡರೂ ಬಹಳಷ್ಟು ಜನರು ಬ್ಯೂಟಿಪಾರ್ಲರ್‌ಗಳಿಗೆ ಬರುವುದಕ್ಕೇ ಹೆದರುತ್ತಾರೆ. ಒಂದೊಂದು ದಿನ ಸುಮ್ಮನೆ ಬಾಗಿಲು ತೆರೆದುಕೊಂಡು ಕಾಯುವಂತಾಗುತ್ತದೆ. ಕೆಲಸಗಾರರಿಗೆ ಸಂಬಳ, ಬಾಡಿಗೆ, ಮನೆ ಖರ್ಚು, ಮಕ್ಕಳ ಓದು, ಮೆಡಿಕಲ್‌ ಖರ್ಚು…. ಎಲ್ಲವನ್ನೂ ನಿಭಾಯಿಸಲಿಕ್ಕೆ ಆಗುತ್ತಲೇ ಇಲ್ಲ. ಮುಂದೆ ಒಳ್ಳೆಯದಾಗಬಹುದು ಎಂಬ ಏಕೈಕ ಕಾರಣಕ್ಕೆ ಸಾಲ-ಸೋಲ ಮಾಡಿ, ಬ್ಯೂಟಿಪಾರ್ಲರ್‌ ನಡೆಸಿಕೊಂಡು ಹೋಗುತ್ತಿದ್ದೇವೆ. ಇದೇ ಪರಿಸ್ಥಿತಿ ಏನಾದರೂ ಮುಂದುವರೆದರೆ ದೇವರೇ ಗತಿ… ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಕೋವಿಡ್ ಪರಿಣಾಮ ಸಾಕಷ್ಟು ಜನರು ಕೈಯಲ್ಲಿದ್ದ ಕೆಲಸ ಕಳೆದುಕೊಂಡು ತರಕಾರಿ ಇತರೆ ಮಾರಾಟಕ್ಕೆ ಇಳಿದಿದ್ದರೂ ವ್ಯಾಪಾರ ಅನ್ನುವುದು ಅಷ್ಟಕಷ್ಟೇ ಎನ್ನುವಂತಾಗಿದೆ. ಒಟ್ಟಾರೆ ಕೋವಿಡ್ ಅನೇಕರ ದುಡಿಮೆಯನ್ನೇ ಆಪೋಶನ ಮಾಡಿದೆ. ದಿನದಿಂದ ದಿನಕ್ಕೆ ಜೀವನ ದುಸ್ತರವಾಗಿಸುತ್ತಿದೆ.

-ರಾ. ರವಿಬಾಬು

ಟಾಪ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.