Udayavni Special

ಹಾಲು ಅಪವ್ಯಯ ಮಾಡದೇ ಮಕ್ಕಳಿಗೆ ನೀಡಿ

Team Udayavani, Aug 11, 2018, 5:11 PM IST

11-agust-18.jpg

ದಾವಣಗೆರೆ: ನಾಗರ ಪಂಚಮಿ ಹೆಸರಿನಲ್ಲಿ ಹಾಲನ್ನು ಅಪವ್ಯಯ ಮಾಡದೆ ಅದನ್ನು ಮಕ್ಕಳಿಗೆ ನೀಡುವ ಹಬ್ಬವನ್ನಾಗಿಸಬೇಕು ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಶುಕ್ರವಾರ ಕೊಂಡಜ್ಜಿ ರಸ್ತೆಯಲ್ಲಿರುವ ಪಿಎಲ್‌ಇ ಟ್ರಸ್ಟ್‌ನ ಬಿಜೆಎಂ ಸ್ಕೂಲ್‌, ಜಿಎನ್‌ಬಿ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ನಾಗರ ಪಂಚಮಿ ಪ್ರಯುಕ್ತ 21ನೇ ವರ್ಷದ ಕಲ್ಲ ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು… ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಗರ ಪಂಚಮಿ ಹೆಸರಿನಲ್ಲಿ ಪೌಷ್ಟಿಕಾಂಶಯುಕ್ತ ಹಾಲನ್ನು ಕಲ್ಲ ನಾಗರಕ್ಕೆ, ಹುತ್ತಕ್ಕೆ, ಬೆಳ್ಳಿ ನಾಗಪ್ಪನಿಗೆ ಎಂದು ಎರೆಯದೆ ಬಡ ಮಕ್ಕಳಿಗೆ, ರೋಗಿಗಳಿಗೆ, ಅನಾಥರಿಗೆ ನೀಡುವುದರಿಂದ ಉಪಯೋಗವಾಗುತ್ತದೆ. ಜಾತಿ, ಧರ್ಮ, ಬೇಧಭಾವವಿಲ್ಲದೇ ಎಲ್ಲ ಮಕ್ಕಳೂ ಒಟ್ಟಾಗಿ ಸೇರಿ ಕುಡಿಯುತ್ತಾರೆ. ಎಲ್ಲ ಮಕ್ಕಳೂ ಒಂದೇ ತಾಯಿಯ ಮಕ್ಕಳಂತೆ ಬಾಳುತ್ತಾರೆ ಎಂದರು.

ಪೌಷ್ಟಿಕಾಂಶಯುಕ್ತ ತಾಯಿಯ ಹಾಲು ಉತ್ತಮ, ಆಕಳ ಹಾಲು ಪವಿತ್ರ. ಅಂತಹ ಹಾಲನ್ನು ಅಪವ್ಯಯ ಮಾಡದೆ ಹಸಿದವರಿಗೆ ನೀಡಿ. ಅದರಿಂದ ದೇವರು ಮೆಚ್ಚುತ್ತಾನೆ. ಕಲ್ಲಿಗೆ, ಹುತ್ತಕ್ಕೆ ಹಾಕಿದರೆ ದೇವರು ಖಂಡಿತಾ ಮೆಚ್ಚುವುದಿಲ್ಲ. ನಿಜವಾದ ಹಾವು ಕಂಡರೆ ಕೊಲ್ಲು ಎನ್ನುವ ಜನರು ಕಲ್ಲ ನಾಗರಕ್ಕೆ ಹಾಲನ್ನು ಎರೆಯುವ ಮೌಡ್ಯತೆಗೆ ಕಡಿವಾಣ ಹಾಕುವ ಕೆಲಸವನ್ನು ಬಸವಣ್ಣನವರು ಮಾಡಿದರು ಎಂದು ಸ್ಮರಿಸಿದರು.

ತಾವು ಕಳೆದ 20 ವರ್ಷದಿಂದ ನಾಗರ ಪಂಚಮಿ ಪ್ರಯುಕ್ತ ಕಲ್ಲ ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು… ಸಪ್ತಾಹ ನಡೆಸಿಕೊಂಡು ಬರುತ್ತಿದ್ದು, ದಾವಣಗೆರೆಯಲ್ಲಿ ಪ್ರಾರಂಭಿಸಲಾದ ಸಪ್ತಾಹ ಕಾರ್ಯಕ್ರಮವನ್ನು ಬೆಳಗಾವಿ ಇತರೆಡೆಯೂ ನಡೆಸುತ್ತಿರುವುದಾಗಿ ತಿಳಿಸಿದರು. ರಾಜ್ಯ ಸರ್ಕಾರ ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಹಾಲು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಎಲ್ಲರೂ ಮೆಚ್ಚುವ ಕಾರ್ಯ. ಲಕ್ಷಾಂತರ ಮಕ್ಕಳ ಆರೋಗ್ಯ ಸುಧಾರಿಸುವುದಲ್ಲದೆ, ಆರೋಗ್ಯವಂತರಾಗಿ ಬಾಳುತ್ತಾರೆ. ಬುದ್ಧಿಶಕ್ತಿಯೂ ಕೂಡಾ ಬೆಳೆಯುತ್ತದೆ ಎಂದು ಹೇಳಿದರು. 

ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಟಿ.ಜೆ. ಉದೇಶ್‌ ಮಾತನಾಡಿ, ಬಹಳ ವರ್ಷಗಳಿಂದಲೂ ಜನರು ಮೂಢನಂಬಿಕೆ, ವ್ರತ ಆಚರಿಸುತ್ತಾ ಬಂದಿದ್ದಾರೆ. ಭಕ್ತಿಯ ಹೆಸರಲ್ಲಿ ಪೌಷ್ಟಿಕಾಂಶಯುಕ್ತ ಹಾಲನ್ನು ಕಲ್ಲು ನಾಗರಕ್ಕೆ, ಹುತ್ತಕ್ಕೆ ಹಾಕುವ ಮೂಲಕ ಅಪವ್ಯಯ ಮಾಡುತ್ತಿದ್ದಾರೆ. ಹಾವು ಎಂದಿಗೂ ಹಾಲು ಕುಡಿಯುವುದಿಲ್ಲ. ಹುಳ ಹುಪ್ಪಟೆ ಮಾತ್ರ ತಿನ್ನುತ್ತದೆ. ಇಂತಹ ಮೂಢನಂಬಿಕೆಗಳು ದೂರವಾಗಬೇಕು. ಜನರಲ್ಲಿ ಜಾಗೃತಿ ಮೂಡಬೇಕು ಎಂದರು.

ಅಭಿಯೋಗ ಇಲಾಖೆ ಉಪ ನಿರ್ದೇಶಕ ಎಸ್‌ .ವಿ. ಪಾಟೀಲ್‌ ಮಾತನಾಡಿ, ಕಲ್ಲ ನಾಗರಕ್ಕೆ, ಹುತ್ತಕ್ಕೆ ಹಾಲನ್ನು ಹಾಕಿ ಅಪವ್ಯಯ ಮಾಡುವ ಇಂತಹ ಗೊಡ್ಡು ಸಂಪ್ರದಾಯಗಳನ್ನು ದೂರಮಾಡುವ, ಜಾಗೃತಿ ಮೂಡಿಸುವ ಕಾರ್ಯಕ್ರಮ ಎಂದು ಸಂತಸ ವ್ಯಕ್ತಪಡಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌, ಶಾಲಾ ಕಾರ್ಯದರ್ಶಿ ಕೆ.ಎಸ್‌. ಮಂಜುನಾಥ ಅಗಡಿ, ಪರಿಸರ ಸಂರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಗಿರೀಶ್‌ ದೇವರಮನಿ ಇತರರು ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

news-tdy-2

24 ಗಂಟೆಯೊಳಗೆ21 ಮಿಲಿಯನ್ ವೀಕ್ಷಣೆ ಪಡೆದ ಅಕ್ಷಯ್ ಕುಮಾರ್ “ಲಕ್ಷ್ಮೀ ಬಾಂಬ್” ಮೋಷನ್ ಪಿಚ್ಚರ್

ಕೋವಿಡ್ 19: ಸೆ.18ರಿಂದ ಅಕ್ಟೋಬರ್ 2ರವರೆಗೆ ದುಬೈಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾರಾಟ ಬಂದ್

ಕೋವಿಡ್ 19: ಸೆ.18ರಿಂದ ಅಕ್ಟೋಬರ್ 2ರವರೆಗೆ ದುಬೈಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾರಾಟ ಬಂದ್

paytm

ಅಚ್ಚರಿಯ ಬೆಳವಣಿಗೆ: ಗೂಗಲ್ ಪ್ಲೇಸ್ಟೋರ್ ನಿಂದ Paytm App ರಿಮೂವ್

ಸಕಲ ಸರ್ಕಾರಿ ಗೌರವ, ಕೋವಿಡ್ 19 ನಿಯಮಾನುಸಾರ ಅಶೋಕ್ ಗಸ್ತಿ ಅಂತ್ಯಕ್ರಿಯೆ

ಸಕಲ ಸರ್ಕಾರಿ ಗೌರವ, ಕೋವಿಡ್ 19 ನಿಯಮಾನುಸಾರ ಅಶೋಕ್ ಗಸ್ತಿ ಅಂತ್ಯಕ್ರಿಯೆ

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ

ಕೋವಿಡ್ ಪಾಸಿಟಿವ್ ಎಂದು ಪತ್ನಿಗೆ ಹೇಳಿ ನಾಪತ್ತೆಯಾಗಿದ್ದ ಪತಿಯ ಅಸಲಿ ಗುಟ್ಟು ಬಯಲು!

ಕೋವಿಡ್ ಪಾಸಿಟಿವ್ ಎಂದು ಪತ್ನಿಗೆ ಹೇಳಿ ನಾಪತ್ತೆಯಾಗಿದ್ದ ಪತಿಯ ಅಸಲಿ ಗುಟ್ಟು ಬಯಲು!

vಲಾಕ್ ಡೌನ್ ಕಾರಣದಿಂದ ರಾಜ್ಯ ಸಾರಿಗೆ ಸಂಸ್ಥೆಗೆ 1500 ಕೋಟಿ ರೂ. ನಷ್ಟ

ಲಾಕ್ ಡೌನ್ ಕಾರಣದಿಂದ ರಾಜ್ಯ ಸಾರಿಗೆ ಸಂಸ್ಥೆಗೆ 1500 ಕೋಟಿ ರೂ. ನಷ್ಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vಲಾಕ್ ಡೌನ್ ಕಾರಣದಿಂದ ರಾಜ್ಯ ಸಾರಿಗೆ ಸಂಸ್ಥೆಗೆ 1500 ಕೋಟಿ ರೂ. ನಷ್ಟ

ಲಾಕ್ ಡೌನ್ ಕಾರಣದಿಂದ ರಾಜ್ಯ ಸಾರಿಗೆ ಸಂಸ್ಥೆಗೆ 1500 ಕೋಟಿ ರೂ. ನಷ್ಟ

ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸುವುದು ಕನಸಿನ ಮಾತು: ಎಂ. ಚಂದ್ರಪ್ಪ

ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸುವುದು ಕನಸಿನ ಮಾತು: ಎಂ. ಚಂದ್ರಪ್ಪ

ಮೂಲ ಸೌಕರ್ಯ ಅಭಿವೃದ್ಧಿ  ಕಾಮಗಾರಿಗೆ ಚಾಲನೆ

ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ದಾವಣಗೆರೆ ಕೋವಿಡ್ ಸೋಂಕಿಗೆ ಓರ್ವ ಸಾವು! 405 ಮಂದಿಯಲ್ಲಿ ಸೋಂಕು ದೃಢ

ದಾವಣಗೆರೆ ಕೋವಿಡ್ ಸೋಂಕಿಗೆ ಓರ್ವ ಸಾವು! 405 ಮಂದಿಯಲ್ಲಿ ಸೋಂಕು ದೃಢ

dg-tdy-2

ಬಿಜೆಪಿ ನಾಯಕರ ವಿರುದ್ಧದ ಕ್ರಿಮಿನಲ್‌ ಪ್ರಕರಣ ವಾಪಸ್‌ ಪಡೆದಿದ್ದೇಕೆ?

MUST WATCH

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆ

udayavani youtube

ಕೃಷಿ ಮಾಡಲು ಹಠ – ಚಟ ಎರಡೂ ಇರಬೇಕು ಎಂದ ಕೃಷಿಕ | Success story of BV Poojary

udayavani youtube

ಮಂಗಳೂರಿನಲ್ಲಿರುವ ಆದಾಯ ತೆರಿಗೆ ಕಚೇರಿ ಗೋವಾಕ್ಕೆ ಸ್ಥಳಾಂತರ ಇಲ್ಲ: ಶಾಸಕ ಕಾಮತ್ ಸ್ಪಷ್ಟನೆಹೊಸ ಸೇರ್ಪಡೆ

news-tdy-2

24 ಗಂಟೆಯೊಳಗೆ21 ಮಿಲಿಯನ್ ವೀಕ್ಷಣೆ ಪಡೆದ ಅಕ್ಷಯ್ ಕುಮಾರ್ “ಲಕ್ಷ್ಮೀ ಬಾಂಬ್” ಮೋಷನ್ ಪಿಚ್ಚರ್

ಕೋವಿಡ್ 19: ಸೆ.18ರಿಂದ ಅಕ್ಟೋಬರ್ 2ರವರೆಗೆ ದುಬೈಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾರಾಟ ಬಂದ್

ಕೋವಿಡ್ 19: ಸೆ.18ರಿಂದ ಅಕ್ಟೋಬರ್ 2ರವರೆಗೆ ದುಬೈಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾರಾಟ ಬಂದ್

paytm

ಅಚ್ಚರಿಯ ಬೆಳವಣಿಗೆ: ಗೂಗಲ್ ಪ್ಲೇಸ್ಟೋರ್ ನಿಂದ Paytm App ರಿಮೂವ್

ಯುವ ಮೋರ್ಚಾದಿಂದ ರಕ್ತ ದಾನ ಶಿಬಿರ

ಯುವ ಮೋರ್ಚಾದಿಂದ ರಕ್ತದಾನ ಶಿಬಿರ

ಸಕಲ ಸರ್ಕಾರಿ ಗೌರವ, ಕೋವಿಡ್ 19 ನಿಯಮಾನುಸಾರ ಅಶೋಕ್ ಗಸ್ತಿ ಅಂತ್ಯಕ್ರಿಯೆ

ಸಕಲ ಸರ್ಕಾರಿ ಗೌರವ, ಕೋವಿಡ್ 19 ನಿಯಮಾನುಸಾರ ಅಶೋಕ್ ಗಸ್ತಿ ಅಂತ್ಯಕ್ರಿಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.