ಒಂದಾದಲ್ಲಿ ಮಾತ್ರ ಸಮಾಜದ ಉಳಿವು

Team Udayavani, Sep 23, 2018, 5:15 PM IST

ದಾವಣಗೆರೆ: ವೀರಶೈವರು ಹಾಗೂ ಲಿಂಗಾಯಿತರು ಒಂದೇ ಎಂಬ ಭಾವನೆಯಿಂದ ಒಗ್ಗಟ್ಟು ಪ್ರದರ್ಶಿಸಿದರೆ ಮಾತ್ರ ಸಮಾಜದ ಉಳಿವು. ಇಲ್ಲದ್ದಿದರೆ ಅಳಿವು ಎಂದು ಅಖೀಲ ಭಾರತ  ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ
ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಶನಿವಾರ, ಶ್ರೀಶೈಲ ಮಠದಲ್ಲಿ ಶ್ರೀ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 32ನೇ, ಶ್ರೀ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 7ನೇ ವರ್ಷದ ಸ್ಮರಣೋತ್ಸವ ಹಾಗೂ ಜನ ಜಾಗೃತಿ ಧರ್ಮ ಸಮ್ಮೇಳನ ಉದ್ಘಾಟಿಸಿ, ಮಾತನಾಡಿದ ಅವರು, ಲಿಂ. ವಾಗೀಶ ಪಂಡಿರಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಲಿಂ. ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಈ ಹಿಂದೆಯೇ ಸಮಾಜದ ಜನರನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡಿದ್ದಾರೆ.

ವೀರಶೈವ ಲಿಂಗಾಯತರನ್ನು ಒಟ್ಟುಗೂಡಿಸುವ ಮೂಲಕ ಎಲ್ಲರಲ್ಲೂ ನಾವೆಲ್ಲ ಒಂದೇ ಭಾವನೆ ಬಿತ್ತಿದ್ದಾರೆ. ಹಾಗಾಗಿ ಶ್ರೀಗಳು ಹಾಕಿಕೊಟ್ಟ ಆದರ್ಶ ಮಾರ್ಗದಲ್ಲಿ ನಾವಿಂದು ಮುನ್ನಡೆಯಬೇಕು. ಆಗ ಮಾತ್ರ ಸಮಾಜ ಭದ್ರವಾಗಿರಲು ಸಾಧ್ಯ ಎಂದರು. 

ಸಮಾಜದಲ್ಲಿ ಯಾವುದೇ ಒಡಕು ಬೇಡ. ವೀರಶೈವ, ಲಿಂಗಾಯತ ಎಂಬ ಒಳಪಂಗಡ ಮರೆತು ಎಲ್ಲರೂ ಒಂದೇ ಎಂಬ ಒಗ್ಗಟ್ಟು ಪ್ರದರ್ಶಿಸೋಣ ಎಂದು ಹೇಳಿದರು. 12ನೇ ಶತಮಾನದಲ್ಲಿಯೇ ಬಸವಣ್ಣನವರು ಸರ್ಕಾರಕ್ಕೆ ಯಾವ ಮಾರ್ಗದಲ್ಲಿ ಆದಾಯ ಬರಬೇಕು ಎಂಬುದನ್ನು ತಿಳಿಸಿಕೊಟ್ಟವರು. ಅನುಭವ ಮಂಟಪದ ಮೂಲಕ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯಾ, ಕಾಯಕದ ಮಹತ್ವವನ್ನು ಸಾರಿದವರು. ಅವರ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದರು.

ಇಂದಿನ ಶ್ರೀಶೈಲ ಗುರುಗಳು ಎಲ್ಲೆಡೆ ಸಮಾಜದ ಜನರನ್ನು ಸಂಪರ್ಕಿಸುವ ಮೂಲಕ ಸಮಾಜದ ಜನರ ಐಕ್ಯತೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು. ಸಾನ್ನಿಧ್ಯ ವಹಿಸಿದ್ದ ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಮನುಷ್ಯ ಇಂದಿನ ಆಧುನಿಕತೆ ಭರಾಟೆಗೆ ಸಿಲುಕಿ ವೈಚಾರಿಕತೆ ಹೆಸರಿನ ಮೇಲೆ ಭೌತಿಕವಾಗಿ ಎಷ್ಟೇ ವೇಗವಾಗಿ ಸಾಗುತ್ತಿದ್ದರೂ ಕೂಡ ಪೂರ್ವಜರು, ನಾಡಿನ ಸಂತರು,
ಶರಣರ ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.

ಮನುಷ್ಯ ಧಾರ್ಮಿಕ ನಂಬಿಕೆಗಳನ್ನು ಎಂದಿಗೂ ಕಳೆದುಕೊಳ್ಳಬಾರದು. ವೀರಶೈವ ಧರ್ಮದ ಪ್ರತಿಯೊಂದು ಆಚರಣೆಯ ನಂಬಿಕೆ ಹಿಂದೆ ಒಂದೊಂದು ವೈಜ್ಞಾನಿಕ ಕಾರಣವಿದೆ. ಅದನ್ನು ತಜ್ಞರಿಂದ ತಿಳಿದುಕೊಳ್ಳಬೇಕೆ ವಿನಃ ಆಚರಣೆಗಳನ್ನು ಅನುಮಾನಸ್ಪದವಾಗಿ ಅವಲೋಕಿಸಬಾರದು ಎಂದು ಹೇಳಿದರು.

ಭಗವ್ದಗೀತೆಯ ಉಕ್ತಿಯಂತೆ ಯಾವಾಗಲೂ ಎಲ್ಲವನ್ನೂ ಸಂಶಯದಿಂದ ನೋಡುವ ವ್ಯಕ್ತಿ ವಿನಾಶ ಆಗುತ್ತಾನೆ. ಹಾಗಾಗಿ ಯಾವುದೇ ವಿಷಯದ ಬಗ್ಗೆ ಆಗಲಿ ವೈಜ್ಞಾನಿಕವಾಗಿ ವಿಮರ್ಶೆ ಮಾಡಿಕೊಂಡು ವೀರಶೈವ ಆಚರಣೆಗಳ ಮಹತ್ವ ಅರಿತು ಪೂರ್ವಜರು ಹಾಕಿಕೊಟ್ಟ ಆದರ್ಶ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಹೇಳಿದರು. 

ಸ್ಮರಣೊತ್ಸವಗಳು ಕೇವಲ ಪೂರ್ವಜರ ವೈಭವೀಕರಣಕ್ಕೆ ಸೀಮಿತವಾಗದೇ ಸಮಾಜದ ಸರ್ವತೋಮುಖ ವಿಕಾಸಕ್ಕೆ ಪ್ರೇರಣೆ ಆಗಬೇಕು ಎಂಬ ಉದ್ದೇಶದಿಂದ ಇಂತಹ ಜನಜಾಗೃತಿ ಸಮ್ಮೇಳನ ಆಯೋಜಿಸಿದ್ದು. ಇದರ ಸದುಪಯೋಗವನ್ನು ಸರ್ವರೂ ಪಡೆದುಕೊಳ್ಳಬೇಕು ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ವಿವಿಧ ಗಣ್ಯರಿಗೆ ಗುರು ರಕ್ಷೆ ನೀಡಲಾಯಿತು. ಬಿದರೆಕೆರೆ ಗುರುಸಿದ್ದೇಶ್ವರ ಮಠದ ಶ್ರೀ
ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಜಡೇಸಿದ್ದ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ, ಬೇಬಿಮಠದ ಡಾ| ತ್ರಿನೇತ್ರ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಕೋಣಂದೂರು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಅಂಬಿಕಾನಗರದ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದಲ್ಲಿದ್ದರು. 

ನ್ಯಾಯವಾದಿ ರೇವಣ್ಣ ಬಳ್ಳಾರಿ ಉಪನ್ಯಾಸ ನೀಡಿದರು. ದಾವಣಗೆರೆ ಹರಿಹರ ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಎನ್‌.ಎಂ. ಮುರುಗೇಶ್‌, ದಾವಣಗೆರೆ ವಿವಿ ಪ್ರಾಧ್ಯಾಪಕ ವೀರಭದ್ರಪ್ಪ, ವಕೀಲ ತ್ಯಾವಣಿಗೆ ಮಲ್ಲಿಕಾರ್ಜುನಪ್ಪ ಉಪಸ್ಥಿತರಿದ್ದರು.
ಎಸ್‌.ಜಿ. ವಾಗೀಶ್ವರಯ್ಯ ಸ್ವಾಗತಿಸಿದರು. ಸೌಭಾಗ್ಯ ಎಸ್‌. ಹಿರೇಮಠ್… ನಿರೂಪಿಸಿದರು. ಅಜ್ಜಂಪುರಶೆಟ್ರಾ ಮೃತ್ಯುಂಜಯ್ಯ ವಂದಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹೊನ್ನಾಳಿ: ಪಟ್ಟಣದಲ್ಲಿ ಹಲಸಿನ ಹಣ್ಣಿನ ವ್ಯಾಪಾರ ಜೋರಾಗಿ ನಡೆಯುತ್ತಿದ್ದು ಬುಧವಾರ ಪಟ್ಟಣದ ವಾರದ ಸಂತೆಯಾದ ಪ್ರಯುಕ್ತ ಹಲಸಿನ ಹಣ್ಣಿನ ವ್ಯಾಪಾರ ಭರ್ಜರಿಯಾಗಿ...

  • ರಾ.ರವಿಬಾಬು ದಾವಣಗೆರೆ: ಮಂಗಳವಾರ ಗುರುಪೂರ್ಣಿಮೆಯಂದು ಸಂಭವಿಸಿದ ಪಾರ್ಶ್ವ ಚಂದ್ರ ಗ್ರಹಣದ ನೇರ ಪರಿಣಾಮ ಸಿಜೇರಿಯಿನ್‌ ಶಸ್ತ್ರಚಿಕಿತ್ಸೆ ಮೇಲೆ ಉಂಟಾಗಿದೆ!. ಅರೆ...

  • ಹೊನ್ನಾಳಿ: ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಯುಕ್ತಾಶ್ರಯದಲ್ಲಿ ಪ.ಪಂ ಸಭಾಂಗಣದಲ್ಲಿ ಮಂಗಳವಾರ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವ...

  • ದಾವಣಗೆರೆ: ಜಯದೇವ ವೃತ್ತ, ಜಗಳೂರು ಬಸ್‌ ನಿಲ್ದಾಣ, ಹಳೆ ಬಸ್‌ ನಿಲ್ದಾಣ...ದಲ್ಲಿ ಪೊಲೀಸರು ಮಂಗಳವಾರ 42 ಆಪೆ ಆಟೋ ವಶಕ್ಕೆ ತೆಗೆದುಕೊಂಡಿದ್ದಾರೆ. ನಗರ ಪೊಲೀಸ್‌...

  • ದಾವಣಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮರ್ಪಕವಾಗಿ ಬರ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷ(ಸಿಪಿಐ) ಮುಖಂಡರು, ಕಾರ್ಯಕರ್ತರು...

ಹೊಸ ಸೇರ್ಪಡೆ